ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆಗಳ ಆಯುಷ್ಯ ಮುಗಿಯದಿರಲಿ…!

ಪ್ರತಿ ಗ್ರಾಮಗಳಲ್ಲಿಯೂ ಕೆರೆಗಳಿವೆ, ಗೋಕಟ್ಟೆಗಳಿವೆ, ಕುಂಟೆ, ಕಲ್ಯಾಣಿ, ಬಾವಿಗಳು, ಹೊಂಡ, ಕೊಳವೆಗಳಿವೆ. ಜೊತೆಗೆ ವೈವಿಧ್ಯಮಯವಾದ, ವಿಶಿಷ್ಟವಾದ ಮದಕ, ತಲಪರಿಗೆ, ಬಾವಾಡಿಗಳು, ಸವಲಕಂಟ – ಹೀಗೆ ನೀರು ಸಂಗ್ರಹಣೆಗೋಸ್ಕರವೇp - 1 ನೂರಾರು ವಿಧಾನಗಳಿವೆ, ಶತಶತಮಾನಗಳಿಂದಲೂ ನೀರಿನ ನೆಮ್ಮದಿ ನೀಡಿದ್ದ ಈ ನೀರು ಸಂಗ್ರಹಣಾ ಆಸ್ತಿಗಳ ಆಯುಷ್ಯ ಮುಗಿಯುತ್ತಿದೆ.

ಮಳೆ ಬಂದಾಗ ಜಲಾಶಯಗಳು ತುಂಬಲಿ ಎಂದು ಆಶಿಸುವ ನಾವುಗಳು, ನಮ್ಮ ಗ್ರಾಮದಲ್ಲಿರುವ ಕೆರೆ, ಕಲ್ಯಾಣಿ, ಹೊಲಗಳಲ್ಲಿರುವ ಹೊಂಡಗಳು, ಬಾವಿಗಳನ್ನು ಸರಿಪಡಿಸಿಕೊಂಡು ನಮಗೆ ಅಗತ್ಯವಿರುವಷ್ಟು ನೀರನ್ನು ಸಂಗ್ರಹಿಸಿಕೊಳ್ಳುತ್ತಿಲ್ಲ. ಜಲಾಶಯಗಳ ನೀರಿಗಾಗಿ ಸದಾ ಹೋರಾಟಕ್ಕೆ ಸಿದ್ಧರಾಗುವ ನಾವು ನಮ್ಮೂರಿನ ಕೆರೆ ಹಾಗೂ ಇನ್ನಿತರೆ ನೀರು ಸಂಗ್ರಹಣಾ ಆಸ್ತಿಗಳಿಂದಲೇ ಆ ನೀರನ್ನು ಪಡೆದುಕೊಳ್ಳಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಈ ಹೋರಾಟಗಳಿಗೆ ತೋರಿಸುವ ಸ್ವಲ್ಪ ಮುತುವರ್ಜಿಯನ್ನು ಕೆರೆಗಳ ಸಂರಕ್ಷಣಿಗೆ, ಮಳೆನೀರು ಸಂಗ್ರಹಕ್ಕೆ ತೋರಿಸುತ್ತಿಲ್ಲ!

ಇಂದು ಕೆರೆಗಳು ಹಾಗೂ ಇನ್ನಿತರೇ ನೀರು ಸಂಗ್ರಹಣಾ ಆಗರಗಳು ಸರಿಯಾದ ನಿರ್ವಹಣೆ ಕಾಣದೆ ಶಿಥಿಲಾವಸ್ಥೆಗೆ ತಲುಪಿವೆ. ಜಲಾನಯನ ಪ್ರದೇಶಗಳಲ್ಲಿ ಆಗುತ್ತಿರುವ ಮಣ್ಣಿನ ಸವಕಳಿ, ಪೋಷಕ ಕಾಲುವೆಗಳ ಅತಿಕ್ರಮಣ, ಕೆರೆ ಅಂಗಗಳ ಒತ್ತುವರಿ, ಅಂಗಳದಲ್ಲಿ ತುಂಬಿರುವ ಹೂಳು, ಶಿಥಿಲಗೊಂಡಿರುವ ಏರಿ, ತೂಬು, ಕೋಡಿ, ನೀರಾವರಿ, ಕಾಲುವೆಗಳು, ಅವಸಾನಗೊಂಡಿರುವ ಸ್ಥಳೀಯ ನೀರು ನಿರ್ವಹಣಾ ಪದ್ಧತಿಗಳಿಂದಾಗಿ ಇಂದು ಆತಂಕ ಪಡುP- 4ವಂತಾಗಿದೆ.

ನಮ್ಮ ಪೂರ್ವಿಕರು ಹೇಳುತ್ತಿದ್ದ ಒಂದು ಕಥೆ ಇಲ್ಲಿ ನೆನಪಿಗೆ ಬರುತ್ತದೆ. ವಿಶಾಲವಾದ ಕೆರೆಯಲ್ಲಿ ಅರಸರ ಕಾಲದ ಚಿನ್ನದ ರಥವೊಂದು ಹೂಳಿನಲ್ಲಿ ಹೂತುಹೋಗಿದೆ. ಹೂಳನ್ನು ತೆಗೆದರೆ ಆ ಚಿನ್ನದ ರಥ ನಮಗೆ ದೊರಕುತ್ತದೆ. ಈ ರಥ ಪ್ರತಿ ಗ್ರಾಮದ ಕೆರೆ, ಕಟ್ಟೆ, ಕುಂಟೆ, ಕಲ್ಯಾಣಿ ಹಾಗೂ ತಲಪರಿಗೆಳಲ್ಲಿ ಹೂಳಿನ ರೂಪದಲ್ಲಿ ಹೂತುಹೋಗಿದ್ದು ಹೂಳನ್ನು ತೆಗೆದರೆ ಚಿನ್ನದ ರೂಪದಲ್ಲಿರುವ ಮಳೆನೀರು ಸಂಗ್ರಹಗೊಂಡು ನಮಗೆ ದೊರಕುತ್ತದೆ ಎನ್ನುತ್ತಿದ್ದರು.

ಜಲಾಶಯಗಳು, ಅಣೆಕಟ್ಟು, ಕೊಳವೆ ಬಾವಿಗಳೇ ಇಂದಿನ ಜನರಿಗೆ ನೀರಿಗೆ ಜೀವ ಸೆಲೆಗಳಾಗಿವೆ. ಕೆರೆಗಳು ಹಾಗೂ ಇನ್ನಿತರೇ ನೀರು ಸಂಗ್ರಹಣಾ ಆಗರಗಳಿಗೆ ಮಹತ್ವ ಇಲ್ಲವಾಗಿದೆ.  ಈ ಸಂದರ್ಭದಲ್ಲಿಯಾದರೂ, ಕೆರೆಗಳ ಮಹತ್ವವನ್ನು ಅರಿತು ಅವುಗಳನ್ನು ನಾವು ಉಳಿಸಿಕೊಳ್ಳಲೇಬೇಕಾಗಿದೆ.

ಕೆರೆಗಳು ಪ್ರತಿಗ್ರಾಮದ ಜಲಾಶಯಗಳಿದ್ದಂತೆP-9

ಸಮುದಾಯದ ಮಾಲೀಕತ್ವದಲ್ಲಿದ್ದ ಕೆರೆಗಳನ್ನು ಸರ್ಕಾರ ೧೯೬೨ನೇ ಇಸವಿಯಲ್ಲಿ ತನ್ನ ಸುಪರ್ದಿಗೆ ತೆಗೆದುಕೊಂಡಿತು. ಸಮುದಾಯದ ಮಡಿಲಿನಲ್ಲಿದ್ದ ಕೆರೆಗಳು ಸರ್ಕಾರದ ಸ್ವತ್ತಾದವು. ಅಂದಿನಿಂದ ಜನರಿಗೆ ಕೆರೆಗಳ ಬಗ್ಗೆ ಆಸಕ್ತಿ ಕಡಿಮೆಯಾಯಿತು. ಶತಮಾನಗಳ ಕಾಲ ನೀರಿನ ಭವಣೆಯನ್ನು ನೀಗಿಸಿ ಜಲ ಜಗಳವಿಲ್ಲದಂತೆ ನೀರ ನೆಮ್ಮದಿ ನೀಡಿದ್ದ ಈ ಕೆರೆಗಳು ಸರ್ಕಾರಕ್ಕೂ ಕೆರೆಗಳು ಬೇಡವಾದವು.

ಕೆರೆಯೇ ಚೆನ್ನ, ಕೆರೆಯಲ್ಲಿ ಚಿನ್ನ ಎಂದು ನಂಬಿದ್ದ ನಮ್ಮ ಪೂರ್ವಜರು ಅಗತ್ಯವೆನಿಸಿದಾಗ ಕೆರೆಗಳಲ್ಲಿ ಶ್ರಮದಾನ ಎರ್ಪಡಿಸುತ್ತಿದ್ದರು. ಶ್ರಮದಾನಕ್ಕೆ ಬಾರದಿದ್ದರೆ, ಕೆರೆ, ಪೋಷಕ ಕಾಲುವೆಗಳನ್ನು ಒತ್ತುವರಿ ಮಾಡಿದರೆ,  ಕೆರೆಯ ನೀರನ್ನು ಪೋಲು ಮಾಡಿದರೆ, ದಂಡ ವಿಧಿಸಿ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು. ಕೆರೆಗಳು ಹೀಗೆ ಅಭಿವೃದ್ದಿಗೊಳ್ಳುತ್ತಿದ್ದವು. ಹಾಗೂ ಕೆರೆ ನೀರನ್ನು ನಿಯಂತ್ರಿಸುವ ಸಲುವಾಗಿಯೇ ಅಪರೂಪದ ವ್ಯವಸ್ಥೆಗಳಿದ್ದವು.

P-10ಕೆರೆಯಲ್ಲಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಬೆಳೆಗಳನ್ನು ನಿರ್ಧಾರ ಮಾಡಲಾಗುತ್ತಿತ್ತು.  ಹೆಬ್ಬೆರಳು ತೇವಾಂಶ, ತೆಳು ಹರಡುವಿಕೆ, ವಾರಾವರ್ತಿ ಪದ್ಧತಿಗಳ ಮೂಲಕ ನೀರಿನ ಹತೋಟಿ ಮಾಡಲಾಗುತ್ತಿತ್ತು. ಇದಕ್ಕೆ ಎಲ್ಲರ ಒಪ್ಪಿಗೆಯೂ ಇರುತ್ತಿತ್ತು. ಅಚ್ಚುಕಟ್ಟು ಪ್ರದೇಶದ ಕೊನೆ ರೈತನಿಗೂ ನೀರು ದೊರಕಿಸಬೇಕೆಂಬ ಉದ್ದೇಶದಿಂದ ಹಾಗೂ ಕೆರೆಯ ನೀರನ್ನು ಸಮರ್ಪಕವಾಗಿ ಸರಿಸಮವಾಗಿ ಹಂಚುವ ಸಲುವಾಗಿ, ನೀರಗಂಟಿ ದಮಾಷ, ಯಜಮಾನ್ ಪಣಗಾರ್, ತುಕಡಿ ವ್ಯವಸ್ಥೆಗಳು ಸೇರಿದಂತೆ, ಇನ್ನೂ ಹಲವು ಪದ್ಧತಿಗಳು ಜಾರಿಯಲ್ಲಿದ್ದವು. ನಮ್ಮ ಹಿರಿಯರಿಗೆ ನೀರಿನ ಬಗ್ಗೆ ಇದ್ದ ಕಳಕಳಿಯನ್ನು ಈ ಪದ್ದತಿಗಳು ಎತ್ತಿತೋರಿಸುತ್ತವೆ.

ಪೂರ್ವಜರ ಕೆರೆಗಳ ನಿರ್ವಹಣೆ ಮತ್ತು ಅಚ್ಚಕಟ್ಟು ಪ್ರದೇಶಗಳ ನೀರು ನಿರ್ವಹಣೆಯ ತಂತ್ರಗಾರಿಕೆಯನ್ನು ಇಂದು ಅಳವಡಿಸಿಕೊಳ್ಳಲೇಬೇಕಿದೆ. ಗ್ರಾಮಕ್ಕೆ ಅವಶ್ಯಕತೆ ಇದ್ದ ನೀರನ್ನು ಕೆರೆಗಳ ಮೂಲಕವೇ ಪೂರೈಸಿಕೊಳ್ಳುತ್ತಿದ್ದರು ನಮ್ಮ ಹಿರಿಯರು. ಜಲಾಶಯದಿಂದ ನೀರು ಬಿಡುವ ದಿನಕ್ಕೆ ಕಾಯುತ್ತ ಕೂರದೆ, ಮಳೆಯ ನೀರನ್ನು ಕೆರೆಯಲ್ಲಿ ಶೇಖರಿಸಿಕೊಂಡು ಕೃಷಿಗೆ, ದಿನನಿತ್ಯದ ಚಟುವಟಿಕೆಗಳಿಗೆ, ಜನ ಜಾನುವಾರುಗಳಿಗೆ ಬಳಸಿಕೊಳ್ಳುತ್ತಿದ್ದರು. ಹೀಗಾಗಿ ನಮ್ಮ ಪೂರ್ವಜರಿಗೆ ಜಲಾಶಗಳ ಮೇಲಿನ ಅವಲಂಬನೆ ಕಡಿಮೆ ಇತ್ತು. ಕೆರೆಗಳೇ ಇವರಿಗೆ ಜಲಾಶಯಗಳಾಗಿದ್ದವು.

ಭೂರಹಿತರಿಗೆ ಜೀವದಾಯಿನಿ???????????????????????????????

ಗ್ರಾಮದಲ್ಲಿ ಭೂಮಿ ಇದ್ದವರು ಕೆರೆಯ ಮೂಲಕ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಭೂರಹಿತರು, ದುರ್ಬಲ ವರ್ಗದವರು ಕೆರೆಯನ್ನು ಅವಲಂಬಿಸಿ, ಮೀನುಗಾರಿಕೆ ಹಸು, ಕುರಿ, ಮೇಕೆ, ಹಂದಿ, ಕೋಳಿ, ಮೊಲಸಾಕಾಣಿಕೆ ಮಾಡುತ್ತಿದ್ದರು. ಜೊತೆಗೆ, ಕೆರೆಯ ದಡದಲ್ಲಿ ಬೆಳೆದಿರುವ ಬಿದಿರು ಜೊಂಡುಗಳಿಂದ ಬುಟ್ಟಿ, ಪೊರಕೆ, ಇಟ್ಟಿಗೆ, ಚಂದ್ರಿಕೆಗಳ ತಯಾರಿಕೆ ಮಾಡುವುದೂ ಸೇರಿದಂತೆ, ಇನ್ನಿತರೆ ಕುಲಕಸುಬುಗಳನ್ನು ಆದಾಯೋತ್ಪನ್ನ ಚಟುವಟಿಕೆಗಳನ್ನಾಗಿ ಮಾಡುತ್ತಿದ್ದರು. ಕೆರೆಗಳು ಅಚ್ಚುಕಟ್ಟು ಪ್ರದೇಶದ ರೈತರಿಗಷ್ಟೆ ಸೀಮಿತವಾಗಿರದೆ, ಭೂರಹಿತರು, ಮಹಿಳೆಯರು, ದುರ್ಬಲವರ್ಗದವರಿಗೂ ಬದುಕಲು ದಾರಿಯಾಗಿತ್ತು, ಜೀವದಾಯಿನಿಯಾಗಿತ್ತು.

ಜೀವವೈವಿಧ್ಯತೆಯ ಆಗರ

ಕೆರೆ ಎನ್ನುವುದು ಪ್ರಕೃತಿಯಲ್ಲಿರುವ ಜೀವದ ಸೆಲೆ, ಜೀವ ಬ್ರಹ್ಮಾಂಡ. ಜೀವ ಜಗತ್ತಿನ ಹಲವಾರು ಪಕ್ಷಿ, ಕೀಟ, ಪ್ರಾಣಿ, ವನ್ಯ ಜೀವಿಗಳು, ಹಲವಾರು ಜಲಚರಗಳಿಗೆ ಜೀವಧಾರೆ,.

???????????????????????????????ಕೆರೆ ನೀರಿನಲ್ಲಿ ಸಾವಿರಾರು ತರಹದ ಕಪ್ಪೆ, ಏಡೆ, ಮೀನು, ನೀರಹಾವು, ನಳ್ಳಿಯಂತಹ  ಜಲಚರಗಳಿರುತ್ತಿದ್ದವು. ಇಂಥ ಜಲಚರಗಳನ್ನು ತಿನ್ನೋಕ್ಕೆ ಅಂತ ಬಾತುಕೋಳಿ ನೀರುಕೋಳಿ, ನೀರುಕಾಗೆ, ಬೆಳ್ಳಕ್ಕಿ, ಮಿಂಚುಳ್ಳಿ, ಗೀಜಗದಂತಹ ಹತ್ತಾರು ಪಕ್ಷಿಗಳು ಬರುತ್ತಿದ್ದವು.  ಈ ಪಕ್ಷಿಗಳು ನಮ್ಮ ರೈತನಿಗೆ ಮಿತ್ರನಂತೆ ಸಹಾಯ ಮಾಡುತ್ತಿದ್ದವು. ಬೆಳೆಗಳಿಗೆ ಬೀಳೋ ಹುಳ-ಹುಪ್ಪಟೆಗಳನ್ನು ತಿನ್ನುತ್ತಿದ್ದವು. ಇದರಿಂದ ಬೆಳೆಗಳಿಗೆ ಯಾವುದೇ ಕೀಟಭಾಧೆ ಇರುತ್ತಿರಲಿಲ್ಲ. ಫಸಲು ಕೂಡ ಚೆನ್ನಾಗಿ ಬರುತ್ತಿತ್ತು. ಆದರೆ ನಾವುಗಳು ಕೆರೆಗಳನ್ನು ಹಾಳುಮಾಡಿಕೊಂಡ ಪರಿಣಾಮ, ಮಿತ್ರ ಪಕ್ಷಿಗಳು ಇಲ್ಲವಾಗಿದೆ. ಇದರಿಂದ ಬೆಳೆಗಳಿಗೆ ಕಾಂಡಕೊರಕ ಮತ್ತಿತರ ಕೀಟ ಬಾಧೆಗಳು ಹೆಚ್ಚಾಗಿ, ಬೆಳೆಯ ಪ್ರಮಾಣವು ಕುಂಠಿತವಾಗುತ್ತಿದೆ.

ಕೆರೆಗಳಲ್ಲಿ ನೂರಾರು ರೀತಿಯ ಸಸ್ಯಗಳು ಸಿಗುತ್ತಿದ್ದವು. ಅವುಗಳಲ್ಲಿ ಔಷಧೀಯ ಸಸ್ಯಗಳು ಅಪಾರ. ನಮ್ಮ ಪೂರ್ವಜರು ಆಸ್ಪತ್ರೆಗಳಿಗಿಂತ, ಕೆರೆಯಲ್ಲಿ ಸಿಗುವ ಔಷಧಿ ಸಸ್ಯಗಳ ಮೇಲೆ ಅವಲಂಬಿತರಾಗಿದ್ದರು. ನಾಟಿ ವೈದ್ಯ ಪದ್ಧತಿಗೂ ಈ ಸಸ್ಯಗಳೇ ಆಸರೆಯಾಗಿದ್ವು. ಕೆರೆ ಮತ್ತು ಅಡುಗೆ ಮನೆಗು ಅವಿನಾಭಾವ ಸಂಬಂಧವಿತ್ತು. ಅಡುಗೆಗೆ ಉಪಯೋಗಿಸುವ ಸೊಪ್ಪುಗಳು ಸಹ ಕೆರೆಗಳಲ್ಲಿ ಲಭ್ಯವಾಗುತ್ತಿದ್ದವು. ಆದರೆ ಈಗ ಇವುಗಳನ್ನು ದೊಡ್ಡದೊಡ್ಡ ಮಾಲ್‌ಗಳಿಗೆ ಹೋಗಿ ಖರೀದಿಸಬೇಕಾದುದು ದುರಂತದ ಸಂಗತಿ.

ಅಂತರ್ಜದ ಪೋಷಣೆ???????????????????????????????

ಕೆರೆಯಲ್ಲಿ ನೀರು ನಿಂತರೆ, ಅಂತರ್ಜಲ ಅಭಿವೃದ್ದಿಯಾಗುವುದರಲ್ಲಿ ಅನುಮಾನವೇ ಇಲ್ಲ. “ನಮ್ಮೂರಿನಲ್ಲಿ ೬೦ರಿಂದ ೭೦ ಕೊಳವೆ ಬಾವಿಗಳಿವೆ. ಬಹುತೇಕ ಈ ಕೊಳವೆಬಾವಿಗಳು ನೀರಿಲ್ಲದೆ ನೆಲಕಚ್ಚಿದ್ದವು. ಗ್ರಾಮದವರು ಬಳಸುವ ಕೆರೆಯ ಹೂಳುತೆಗೆದು ಅಭಿವೃದ್ಧಿಪಡಿಸಲಾಯಿತು. ಇದರಿಂದ ಕೆರೆಯಲ್ಲಿ ನೀರು ನಿಂತಿತು. ಈಗ ಈ ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿದೆ” ಎನ್ನುತ್ತಾರೆ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ತಲ್ಲೂರು ಗ್ರಾಮದ ಮಹದೇವಪ್ಪ ದೊಡ್ಡಮನಿ. “ಕೆರೆಗಳು ಜಲಪಾತ್ರೆಗಳಿದ್ದಂತೆ – ಗ್ರಾಮೀಣ ಜನರ ಬಡತನ ಮತ್ತು ಜೀವನ ಶೈಲಿಯನ್ನು ಉತ್ತಮ ಪಡಿಸಿಕೊಳ್ಳಲು ನಾವು ಕೆರೆಗಳನ್ನು ಉಳಿಸಿಕೊಳ್ಳಲೇಬೇಕು” ಎನ್ನುತ್ತಾರೆ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಮುದೇನೂರು  ಗ್ರಾಮದ ಪ್ರಗತಿಪರ ರೈತಮಹಿಳೆ ಯಲ್ಲಮ್ಮ.

ಅಂಬಾಡಿ ಮಾಧವ್, ಆಡಳಿತಾಧಿಕಾರಿಗಳು, ಭದ್ರ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ, ಶಿವಮೊಗ್ಗ: ಕೆರೆಗಳಿಗೆ ಮರುಜೀವ ನೀಡಬೇಕು; ಜೊತೆಗೆ ಜಲಾಶಯಗಳ ನೀರನ್ನು ಜತನದಿಂದ ಬಳಸಿಕೊಳ್ಳಬೇಕು. ಇದಕ್ಕಾಗಿ ಶಿವಮೊಗ್ಗದ ಭದ್ರ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರವು ತನ್ನ ವ್ಯಾಪ್ತಿಯಲ್ಲಿ ಬರುವ ಅಚ್ಚುಕಟ್ಟು ಪ್ರದೇಶದ ರೈತರುಗಳಿಗೆ ನೀರಿನ ಬಳಕೆ ಮತ್ತು ಕೆರೆಗಳನ್ನು ಉಳಿಸಿಕೊಳ್ಳವ ಕಾರ್ಯತಂತ್ರಗಳ ಬಗ್ಗೆ  ಅರಿವು ಕಾರ್ಯಕ್ರಮಗಳನ್ನು ಮಾಡುತ್ತಿದೆ. ಕೆರೆಗಳು ಬತ್ತಿರುವ ರೀತಿಯಲ್ಲಿ ಜಲಾಶಯಗಳು ಬರಿದಾಗುವ ಕಾಲ ಆರಂಭವಾಗಿದೆ. ಆದ್ದರಿಂದ, ನಮ್ಮ ನಮ್ಮ ಮನೆಗಳಲ್ಲಿ, ಗ್ರಾಮಗಳಲ್ಲಿ ನೀರು ಇಂಗಿಸಿಕೊಳ್ಳುವ ಕಾರ್ಯಕ್ಕೆ ಸನ್ನದ್ಧವಾಗಬೇಕಾಗಿದೆ.

 ಚಿತ್ರ-ಲೇಖನ: ಸೋ.ಸೋ. ಮೋಹನ್ ಕುಮಾರ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*