ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೪೩: ಹರಾಜಾಗಿದ್ದ ಬೈರಸಂದ್ರ ಕೆರೆ ಉಳಿದದ್ದೇ ರೋಚಕ ಕಥೆ?

ಕೆರೆಗಳ ಅಭಿವೃದ್ಧಿ ವಿಷಯವೇ ಹೆಚ್ಚಾಗಿ ಚರ್ಚೆ ಆಗುತ್ತಿರುವ ಸಂದರ್ಭದಲ್ಲಿ, ಹರಾಜಾದ ಕೆರೆಯನ್ನು ಉಳಿಸಿಕೊಳ್ಳಲು 20 ವರ್ಷಗಳ ಕಾನೂನು ಹೋರಾಟ ನಡೆಸಿ ಅದನ್ನು ಸಮಾಜಕ್ಕೆ ಉಳಿಸಿಕೊಟ್ಟ ಕಥೆಯೇ ರೋಚಕ.

ByrasandraHaraju-3ಜಯನಗರದಲ್ಲಿರುವ ಬೈರಸಂದ್ರ ಕೆರೆಯನ್ನು ತೋರಿಸಿ ಸಾಲ ತೆಗೆದುಕೊಂಡ ಮಹಾನುಭಾವ ಸಾಲ ಕಟ್ಟದೆ ಇದ್ದಾಗ, ಆ ಕೆರೆಯನ್ನು ಬ್ಯಾಂಕ್ ನವರು ಹರಾಜು ಹಾಕಿದರು. ಅದನ್ನು ಕೊಂಡುಕೊಳ್ಳುವವರೂ ಇದ್ದರು.. ಆದರೆ, ಅವರಿಗೆಲ್ಲ ಸೆಡ್ಡು ಹೊಡೆದು ಆ ಕೆರೆಯನ್ನು ಉಳಿಸಿಕೊಳ್ಳಲೇಬೇಕೆಂದು ಹೋರಾಡಿ, ಕಾನೂನು ಹೋರಾಟ ಮಾಡಿ ಗೆದ್ದವರು ರಿಸರ್ವ್ ಬ್ಯಾಂಕ್ ನ ನಿವೃತ್ತ ಅಧಿಕಾರಿ ಎಸ್. ವೆಂಕಟಸುಬ್ಬರಾವ್. ಇವರು ಜಯನಗರದಲ್ಲಿ ಆರ್.ಬಿ.ಐ ಬಡಾವಣೆಯ ನಿವಾಸಿಗಳು.

ಕೆರೆ ಇತ್ತು, ಕಟ್ಟಡಗಳ ಅವಶೇಷಗಳನ್ನು ಸುರಿದು ಕೆರೆಯಂಗಳ ಮಾಡಲಾಯಿತು. ಈ ಕೆರೆಯ ದಾಖಲೆ ತೋರಿಸಿ, ಅದನ್ನು ಬ್ಯಾಂಕ್ ನಲ್ಲಿ ಅಡವಿಟ್ಟು ಸಾಲ ಪಡೆದರು. ಸಾಲ ಕಟ್ಟಲಿಲ್ಲ, ಬ್ಯಾಂಕ್ ಕೆರೆಯನ್ನು ಹರಾಜು ಮಾಡಿತು. ಆರ್.ಬಿ.ಐ ಬಡಾವಣೆ ನಿವಾಸಿಗಳು ಕಾನೂನು ಹೋರಾಟ ಮಾಡಿ ಕೆರೆಯನ್ನು ಉಳಿಸಿದರು. ಪುನಶ್ಚೇತನಗೊಳ್ಳಲು ಇದೀಗ ಶ್ರಮಿಸುತ್ತಿದ್ದಾರೆ. ಇದು ಬೈರಸಂದ್ರ ಕೆರೆಯ ಸಂಕ್ಷಿಪ್ತ ಮಾಹಿತಿ. ಕೆರೆಯನ್ನು ಉಳಿಸಿದ ಬಗೆ, ಆಯಾ ಕಾಲಕ್ಕೆ ಅನುಗುಣವಾಗಿ ಏನೇನು ನಡೆಯಿತು ಎಂದು ವೆಂಕಟಸುಬ್ಬರಾವ್ ಅವರೇ ಒಂದು ಕೈಪಿಡಿಯನ್ನು ಹೊರತಂದಿದ್ದಾರೆ. ಅದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇನೆ.

ByrasandraHaraju-21976: ಬೈರಸಂದ್ರ ಕೆರೆ ಕೆರೆಯಾಗಿಯೇ ಇತ್ತು. ಕೆರೆ ತುಂಬಾ ನೀರಿತ್ತು. ಹಕ್ಕಿಗಳ ತಾಣವಾಗಿ, ಪರಿಸರದ ಸುಂದರತೆಯನ್ನು ಹೊರಸೂಸುತ್ತಿತ್ತು. ಸ್ಥಳೀಯರ ನೆಚ್ಚಿನ ತಾಣವೂ ಆಗಿತ್ತು.

1988: ಐಎಎಸ್ ನಿವೃತ್ತ ಅಧಿಕಾರಿ ಎಸ್. ಲಕ್ಷ್ಮಣರಾವ್ ಅಧ್ಯಕ್ಷತೆಯಲ್ಲಿ, ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿ ಇಲ್ಲಿಗೆ ಭೇಟಿಯನ್ನು ನೀಡಿ, ಈ ಕೆರೆಯ ಬಗ್ಗೆ ವರದಿ ನೀಡಿತ್ತ. ಬೈರಸಂದ್ರ ಕೆರೆಯಲ್ಲಿ ಭಾಗಶಃ ನೀರಿನ ಸಂಗ್ರಹ ಕಾಪಾಡಬೇಕು ಮತ್ತು ಕೆರೆಯ ಮುಂದಿನ ದಡವನ್ನು ಮರಗಳ ಉದ್ಯಾನವನ್ನಾಗಿ ಅಭಿವೃದ್ಧಿಗೊಳಿಸಬೇಕು. ಇದರ ನಿರ್ವಹಣೆ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಸಮಿತಿ ಶಿಫಾರಸು ಮಾಡಿತು. ಇದನ್ನು ರಾಜ್ಯ ಸರ್ಕಾರ ಒಪ್ಪಿಕೊಂಡು ಅಧಿಸೂಚನೆಯನ್ನೂ ಹೊರಡಿಸಿತು. ಅರಣ್ಯ ಇಲಾಖೆ 200 ಸಸಿಗಳನ್ನು ಈ ಕೆರೆ ಅಂಗಳದಲ್ಲಿ ನೆಟ್ಟಿತು. ಈ ಗಿಡಗಳು ಸುಂದರ ಮರಗಳಾಗಿ ಬೆಳೆದವು.

1992: ಬೆಂಗಳೂರು ಮಹಾನಗರ ಪಾಲಿಕೆ ಸಮೀಪದಲ್ಲಿದ್ದ ಕೊಳೆಗೇರಿಯನ್ನು ಸ್ಥಳಾಂತರಿಸುವ ಉದ್ದೇಶದಿಂದ, ಕಟ್ಟಡದ ಅವಶೇಷಗಳನ್ByrasandraHaraju-4ನು ಸುರಿದು ಕೆರೆಯನ್ನು ಒಂದು ಕಡೆಯಿಂದ ಮುಚ್ಚುವ ಕಾರ್ಯಕ್ಕೆ ಮುಂದಾಯಿತು. ನಾಲ್ಕು ವರ್ಷದಲ್ಲಿ ಸುಂದರವಾಗಿ ಬೆಳೆದಿದ್ದ ಮರಗಳು ಮಾಯವಾಗುತ್ತಾ ಸಾಗಿದವು. ಇಲ್ಲೇ ಮೊದಲು ಸ್ಥಳೀಯ ನಿವಾಸಿಗಳು ಕಾನೂನು ಹೋರಾಟ ಆರಂಭಿಸಿದ್ದು, ತಮ್ಮ ಮನವಿ ಹಾಗೂ ಕೆರೆಯನ್ನು ಉಳಿಸಿ ಎಂದು ಎಷ್ಟು ಕೋರಿಕೊಂಡರೂ, ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಿವಿಕೊಡಲೇ ಇಲ್ಲ. ಆಗ ಸ್ಥಳೀಯರು ಕೆರೆ ಮುಚ್ಚುವುದನ್ನು ವಿರೋಧಿಸಿ, ಇದನ್ನು ರಕ್ಷಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮೊರೆ ಹೋದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವೀಕರಿಸಿ, ಪರಿಸರ ಕಾಳಜಿ ಮೆಚ್ಚಿದ ಘನ ನ್ಯಾಯಾಲಯ ಕೆರೆಯನ್ನು ಮುಚ್ಚುವ ಕೆಲಸ ಕೂಡಲೇ ನಿಲ್ಲಿಸಬೇಕು. ಅಲ್ಲದೆ, ಕೆರೆಯಂಗಳದಲ್ಲಿ ಯಾವುದೇ ರೀತಿಯಲ್ಲಿ ಮಾನವ ವಸತಿಗೆ ಅವಕಾಶ ನೀಡಬಾರದು ಎಂದು ಆದೇಶವನ್ನೂ ನೀಡಿತು.

ByrasandraHaraju-5ಇದಾದ ನಂತರ, ಸಾಕಷ್ಟು ವರ್ಷ ಸುಮ್ಮನಿದ್ದ ಮಹಾನಗರ ಪಾಲಿಕೆ, 2004ರಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸುತ್ತೇವೆ ಎಂದು 120 ಲಕ್ಷ ರುಪಾಯಿ ವೆಚ್ಚ ಮಾಡಿತು. ಆದರೆ, ಇದು ಬರಿಗಣ್ಣಿಗೆ ಕಾಣಲಿಲ್ಲ. ದಿನವೂ ಅಲ್ಲೇ ಓಡಾಡುವ, ವಾಸಿಸುವ ಸ್ಥಳೀಕರಿಗೂ ಕಾಣಲಿಲ್ಲ. ಆದರೂ, ಅಬ್ಬಾ ಕೆರೆ ಉಳಿಯಿತು ಎಂದು ಎಲ್ಲರೂ ಅಲ್ಲ ಪರಿಸರ ಕಾಳಜಿ ಉಳಿದವರು ಸಮಾಧಾನಗೊಂಡರು. ಆದರೆ, ಈ ಸಮಾಧಾನಕ್ಕೆ ಭಾರಿ ಹೊಡೆತ ನೀಡುವಂತಹ ಬಂಡೆಯಂತಹ ಸಮಸ್ಯೆ 2005ರಲ್ಲಿ ಸ್ಥಳೀಯ ನಿವಾಸಿಗಳಿಗೆ ಬಂದೆರಗಿತು. ಅದೇ ಹರಾಜು. ಮುಂದೇನಾಯಿತು? ಮುಂದಿನ ನೋಟದಲ್ಲಿ………………

ಚಿತ್ರ-ಲೇಖನ: ಆರ್. ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*