ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೩೯: ಕೆರೆಗಳ ಪರಿಸ್ಥಿತಿಯ ಕನ್ನಡಿ ನೋಟ-೩

ಕೆರೆಯನ್ನು ಹೊರಭಾಗದಲ್ಲಿ ಅಭಿವೃದ್ಧಿಗೊಳಿಸಿದ ಮೇಲೆ ಅದನ್ನು ಹೊರಭಾಗ ಅಥವಾ ಹೊರ ಅಂಗಳದಲ್ಲಿ ನಿಂತು ಸಂರಕ್ಷಿಸಬೇಕಾದ ಅರಣ್ಯ ಇಲಾಖೆ, ಕೇಂದ್ರ ಒಳಾಂಗಣದಲ್ಲೇ ಮನೆಗಳನ್ನು ನಿರ್ಮಿಸಿದೆ. ಸಿಬ್ಬಂದಿ ವಾಸ್ತವ್ಯಕ್ಕೆ ಅಣಿ ಮಾಡಿಕೊಡಲು ಇಂತಹ ಕಾರ‍್ಯವನ್ನು ಅರಣ್ಯ ಇಲಾಖೆ ಮಾಡಿರುವುದು ಆಕ್ಷೇಪಾರ್ಹ.

ಅಲ್ಲಾಳಸಂದ್ರ ಕೆರೆಯಲ್ಲಿರುವ ಇಂತಹ ಸ್ಥಿತಿಯನ್ನು ಹಾಗೂ ರಾಚೇನಹಳ್ಳಿಯಲ್ಲಿ ಕೆರೆಯಲ್ಲಿ ನಿರ್ಮಿಸಿಲಾಗಿರುವ ಜೌಗು ಪ್ರದೇಶಕ್ಕೆ ನೀರೇ ಹರಿಯುವುದಿಲ್ಲ. ಇಂತಹ ಎಂಜಿನಿಯರಿಂಗ್ ಕಾಮಗಾರಿಗಳನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ೨೦೧೫ನೇ (ಸಿಎಜಿ) ವರ್ಷದ ವರದಿಯಲ್ಲಿ ಪರೀಕ್ಷಾ-ತನಿಖೆ ನಡೆಸಿದ ಕೆರೆಗಳ ನಿರ್ದಿಷ್ಟ ಫಲಿತಾಂಶಗಳಲ್ಲಿ ನೀಡಲಾಗಿದೆ.

ಅಲ್ಲಾಳಸಂದ್ರ ಕೆರೆ

ಅಲ್ಲಾಳಸಂದ್ರ ಕೆರೆಯು ಯಲ್ಲಮಲ್ಲಪ್ಪಚೆಟ್ಟಿ ಕೆರೆ ಸರಣಿಯ ಒಂದು ಭಾಗವಾಗಿದೆ ಮತ್ತು ಪ್ರಸ್ತುತ ಬಿಬಿಎಂಪಿಯ ಅಭಿರಕ್ಷಣೆಯಲ್ಲಿದೆ.

  •  ಅರಣ್ಯ ಇಲಾಖೆಯ ಸಿಬ್ಬಂದಿ ವಸತಿಗೃಹಗಳನ್ನು ಕೆರೆ ಪ್ರದೇಶದ ಒಳಗೆ ಒದಗಿಸಲಾಗಿದೆ ಮತ್ತು ಕೆರೆಯ ಹೆಚ್ಚಿನ ಭಾಗವನ್ನು ಕೊಳೆಗೇರಿ ನಿವಾಸಿಗಳು ಆಕ್ರಮಿಸಿಕೊಂಡಿದ್ದಾರೆ.
  • ಕೈಗೆತ್ತಿಕೊಂಡ ಕೆರೆಯ ಜೀರ್ಣೋದ್ಧಾರದ ಕಾಮಗಾರಿಗಳ (೨೦೧೦-೧೩) ಮೇಲೆ ಭರಿಸಿದ ೭.೫೮ ಕೋಟಿ ವೆಚ್ಚವು, ಈ ಕೆಳಗೆ ವಿವರಿಸಿರುವಂತೆ, ಮುಖ್ಯವಾಗಿ ಪ್ರಮುಖವಲ್ಲದ ಕಾಮಗಾರಿಗಳ ಮೇಲಾಗಿತ್ತು.
  • ಕೆರೆಯ ಜೀರ್ಣೋದ್ಧಾರವನ್ನು ಮುಖ್ಯವಾಗಿ ಕೆರೆ ಏರಿಯನ್ನು ಸುಂದರಗೊಳಿಸುವುದು, ಮೊಗಸಾಲೆ ಮತ್ತು ವಿಶ್ರಾಂತಿ ಸ್ಥಳಗಳು ಮುಂತಾದ ಸುಂದರಗೊಳಿಸುವ ಕಾಮಗಾರಿಗಳ ಮೇಲೆ ಕೇಂದ್ರೀಕರಿಸಲಾಗಿತ್ತು.
  • ದೋಣಿ ಇಳಿಗಟ್ಟೆಯು ದೋಣಿಗಳಿಲ್ಲದೇ ಕಾರ್ಯ ನಿರ್ವಹಿಸುತ್ತಿರಲಿಲ್ಲ. ನಿರ್ಮಿಸಿದ ದ್ವೀಪದಲ್ಲಿ ಸಸ್ಯಗಳಿರಲಿಲ್ಲ.
  • ಕೆರೆ ಅಂಗಳದ ಆಟದ ಮೈದಾನದಲ್ಲಿ ಏಳು ಆಟದ ವಸ್ತುಗಳಿಗೆ ೩೬.೮೦ ಲಕ್ಷವನ್ನು ಪಾವತಿ ಮಾಡಲಾಗಿದ್ದರೂ ಸಹ ಕೇವಲ ನಾಲ್ಕು ಆಟದ ವಸ್ತುಗಳನ್ನು ಸ್ಥಾಪಿಸಲಾಗಿತ್ತು ಎಂಬುದನ್ನು ಜಂಟಿ ಭೌತಿಕ ಪರಿಶೀಲನೆಯಲ್ಲಿ ಗಮನಿಸಲಾಯಿತು. ಇದು ೧೫.೭೬ ಲಕ್ಷ ಅಧಿಕ ಪಾವತಿಯಲ್ಲಿ ಪರಿಣಮಿಸಿತು.

Allalasandra-kere39ಕೆರೆ ಪ್ರದೇಶದ ಒಳಗೆ ಅರಣ್ಯ ಇಲಾಖೆಯ ಸಿಬ್ಬಂದಿ ವಸತಿಗಳು, ಸಸ್ಯಗಳಿಲ್ಲದ ದ್ವೀಪ, ಕೆರೆ ಅಂಗಳದಲ್ಲಿ ಸ್ಥಾಪಿಸಿದ ಮಕ್ಕಳ ಆಟದ ಪ್ರದೇಶ ಅಲ್ಲಾಳಸಂದ್ರ ಕೆರೆಯ ವೈಶಿಷ್ಟ್ಯ.

ರಾಚೇನಹಳ್ಳಿ ಕೆರೆ

ರಾಚೇನಹಳ್ಳಿ ಕೆರೆಯು ಬಿಡಿಎಯ ಅಭಿರಕ್ಷಣೆಯಲ್ಲಿದೆ.  ಸುಮಾರು ೧೪ ಕೋಟಿ ವೆಚ್ಚವನ್ನು ಭರಿಸಿ ಕೆರೆಯ ಜೀರ್ಣೋದ್ಧಾರದ ಕಾಮಗಾರಿಗಳನ್ನು ಕೈಗೊಳ್ಳಲಾಯಿತು ಮತ್ತು ಆ ನಂತರ ಕೆರೆಯನ್ನು ನಿರ್ವಹಣೆ ಮಾಡಿರಲಿಲ್ಲ.Rachenahalli-Kere39

  •  ಒತ್ತುವರಿಗಳನ್ನು ತೆರವುಗೊಳಿಸದೇ ಜೀರ್ಣೋದ್ಧಾರದ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು.
  • ಕೆರೆ ಪ್ರದೇಶದಲ್ಲಿ ಬಿಡಿಎ ಒಂದು ವಸತಿ ಬಡಾವಣೆಯನ್ನು ರಚಿಸಿತ್ತು. ಜೀರ್ಣೋದ್ಧಾರದ ಕಾಮಗಾರಿಯ ಭಾಗವಾಗಿ ಅದು ನಿಯಮಗಳನ್ನು ಉಲ್ಲಂಘನೆ ಮಾಡಿ ಕೆರೆಯ ೧೧ ಎಕರೆಗಳನ್ನು ಉದ್ಯಾನವನದ ರಚನೆಗಾಗಿ ಅಕ್ರಮವಾಗಿ ಮಾರ್ಗಾಂತರಣ ಮಾಡಿತ್ತು.
  • ಬೇಲಿಯನ್ನು ಹಾಳು ಮಾಡಲಾಗಿತ್ತು ಮತ್ತು ಹತ್ತಿರದ ವಸತಿ ಪ್ರದೇಶಗಳಿಗೆ ರಸ್ತೆ ಕಲ್ಪಿಸಲು ಹಲವು ಕಡೆ ಬೇಲಿಗಳನ್ನು ತೆಗೆಯಲಾಗಿತ್ತು.
  • ಮಾಲಿನ್ಯದ ಮಟ್ಟವನ್ನು ಯಾವುದೇ ಸಂಸ್ಥೆಯೂ ನಿರ್ಧರಣೆ ಮಾಡಿರಲಿಲ್ಲ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಿಡಿಎನಿಂದ ಅನುಮೋದನೆ ಪಡೆದು ನೀರು ಹರಡಿರುವ ಪ್ರದೇಶಕ್ಕೆ ಬಹಳ ಹತ್ತಿರದಲ್ಲಿ ಒಳಚರಂಡಿ ಜಾಲವನ್ನು ಅಳವಡಿಸಿತ್ತು.
  • ಒಳಹರಿವನ್ನು ಕೊಳಚೆ ನೀರಿನ ಮಾರ್ಗಾಂತರಣ ಕಾಲುವೆಗಳಿಗೆ ಜೋಡಿಸಿದ್ದರಿಂದ, ಜಕ್ಕೂರಿನಿಂದ ಸಂಸ್ಕರಣೆಯಾದ ನೀರು ಕೆರೆಯನ್ನು ಪ್ರವೇಶಿಸುತ್ತಿರಲಿಲ್ಲ ಮತ್ತು ಜೌಗುಭೂಮಿಯು ಒಣಗಿಹೋಗಿತ್ತು.

ಬೆಂಗಳೂರು ನೀರು ಸರಬರಾಜು ಮತ್ತು ಯಾವುದೇ ಹರಿವಿಲ್ಲದ ಕೆಳಮಟ್ಟದಲ್ಲಿರುವ ಕೆರೆಕೋಡಿ, ನಿರ್ಮಿಸಿದ ಜೌಗುಭೂಮಿಯಲ್ಲಿ ನೀರಿಲ್ಲದಿರುವುದು ಈ ರಾಚೇನಹಳ್ಳಿ ಕೆರೆಯ ಪ್ರಮುಖಾಂಶ.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*