ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ- ನೋಟ ೩೭: ಕೆರೆಗಳ ಪರಿಸ್ಥಿತಿಯ ಕನ್ನಡಿ ನೋಟ-೧

ಬೆಂಗಳೂರಿನ ಕೆರೆಗಳ ಪರಿಸ್ಥಿತಿ ಹೇಗಿದೆ ಎಂಬುದು ಪರಿಸರ ಪ್ರಿಯರಿಗೆ ಚೆನ್ನಾಗಿ ಗೊತ್ತಿದೆ. ಆದರೆ, ಅದನ್ನು ಅಧ್ಯಯನದ ಮೂಲಕ ಹೇಳುವುದು ಕಷ್ಟಸಾಧ್ಯ. ಈ ಕೆಲಸವನ್ನು ಸರ್ಕಾರಿ ಸಂಸ್ಥೆಯೇ ನಿರ್ದಿಷ್ಟ ದಾಖಲೆಗಳ ಮೂಲಕ ಸವಿವರವಾಗಿ ನೀಡಿದೆ. ಈ ಮೂಲಕ ಕೆಲವು ಕೆರೆಗಳ ಪರಿಸ್ಥಿತಿಯನ್ನು ನೀಡಲಾಗಿದೆ.Kere-Kannadi-1

ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ೨೦೧೫ನೇ (ಸಿಎಜಿ) ವರ್ಷದ ವರದಿಯಲ್ಲಿ ಪರೀಕ್ಷಾ-ತನಿಖೆ ನಡೆಸಿದ ಕೆರೆಗಳ ನಿರ್ದಿಷ್ಟ ಫಲಿತಾಂಶಗಳನ್ನು ನೀಡಲಾಗಿದೆ.  ಬೆಂಗಳೂರು ಮತ್ತು ಕರ್ನಾಟಕದ ಇತರೆ ನಗರಪಾಲಿಕೆಗಳಲ್ಲಿನ ಯೋಜಿತವಲ್ಲದ ಕ್ಷಿಪ್ರ ನಗರೀಕರಣವು ದೊಡ್ಡ ಪ್ರಮಾಣದಲ್ಲಿ ಕೆರೆಗಳ ಜಲಾನಯನ ಪ್ರದೇಶಗಳು ವಸತಿ ಮತ್ತು ವಾಣಿಜ್ಯ ಬಡಾವಣೆಗಳ ಪರಿವರ್ತನೆಗೆ ಸಾಕ್ಷಿಯಾಗಿದೆ. ಅದು ಜಲಪರಿಧಿಯನ್ನು ಬದಲಾಯಿಸಿ ಜಲಾನಯನ ಪ್ರದೇಶಗಳಲ್ಲಿ ಹೂಳು ತುಂಬುವುದನ್ನು ಅಧಿಕಗೊಳಿಸಿತು. ಈ ವಿಭಾಗದಲ್ಲಿ ಬೆಂಗಳೂರು ಮತ್ತು ಇತರೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲೆಕ್ಕಪರಿಶೋಧನೆಯಿಂದ ಪರೀಕ್ಷಾ-ತನಿಖೆ ನಡೆಸಿದ ಕೆರೆಗಳ ಸಾರಾಂಶವನ್ನು ಹಾಗೂ ಕೆರೆಗಳ ಇಂದಿನ ಸ್ಥಿತಿಯನ್ನು ನೀಡಲಾಗಿದೆ.

ಬೆಳ್ಳಂದೂರು ಕೆರೆ:Bellanduru-Kere37

 • ಬೆಳ್ಳಂದೂರು ಕೆರೆಯು ಬೆಂಗಳೂರಿನ ಆಗ್ನೇಯ ಭಾಗದಲ್ಲಿ ಕೋರಮಂಗಲ-ಚಳ್ಳಘಟ್ಟ ಕಣಿವೆಯಲ್ಲಿದೆ. ಅದು ಬೆಂಗಳೂರಿನ ಕೆರೆಗಳಲ್ಲಿ ಅತ್ಯಂತ ದೊಡ್ಡದಾದ ಕೆರೆಯಾಗಿದ್ದು (೯೧೯ ಎಕರೆಗಳು) ವರ್ತೂರು ಕೆರೆ ಸರಣಿಗಳಲ್ಲಿ ಒಂದಾಗಿದೆ. ಪ್ರಸ್ತುತ ಈ ಕೆರೆಯು ಬಿಡಿಎಯ ಅಭಿರಕ್ಷಣೆಯಲ್ಲಿದೆ. ಬೆಂಗಳೂರು ನಗರದ ಮೇಲೆ ಹೇಳಿದ ಕಣಿವೆಗಳಿಂದ ಉತ್ಪತ್ತಿಯಾಗುವ ಅಂದಾಜು ೪೦೦ ಎಮ್‌ಎಲ್‌ಡಿಯಷ್ಟು ಕೊಳಚೆ ನೀರನ್ನು ಬೆಳ್ಳಂದೂರು ಕೆರೆಗೆ ಬಿಡಲಾಗುತ್ತಿದೆ.
 • ಕೆಎಸ್‌ಆರ್‌ಎಸ್‌ಎಸಿಯ ಉಪಗ್ರಹ ನಕ್ಷೆಯ (೨೦೧೧) ಅನ್ವಯ, ಕೆರೆಯ ಪ್ರದೇಶವು ಕೇವಲ ೫೯೭ ಎಕರೆಗಳಾಗಿದ್ದಿತು. ಹೀಗಾಗಿ, ಕಂದಾಯ ಇಲಾಖೆಯ ದಾಖಲೆಗಳ ಅನ್ವಯ ಕೆರೆಯ ಪ್ರದೇಶವು ಕಡಿಮೆಯಾಗಿದ್ದಿತು.
 • ಒತ್ತುವರಿಗಳನ್ನು ತೆರವುಗೊಳಿಸದಿದ್ದುದರಿಂದ, ಕೆರೆ ಪ್ರದೇಶಕ್ಕೆ ೩.೩೧ ಕೋಟಿ ವೆಚ್ಚದಲ್ಲಿ ಅಂಶಿಕವಾಗಿ ಬೇಲಿ ಹಾಕಲಾಗಿತ್ತು.
 • ಕೆಂಪಾಪುರ ಗ್ರಾಮದ ಕಡೆಯಲ್ಲಿ ಮಳೆನೀರಿನ ಚರಂಡಿಯ ಪೈಪನ್ನು ಖಾಸಗಿ ವ್ಯಕ್ತಿಗಳು ಮಾರ್ಗಾಂತರಣ ಮಾಡಿರುವುದನ್ನು ಗಮನಿಸಲಾಯಿತು ಮತ್ತು ಅದು ಒತ್ತುವರಿಯಲ್ಲಿ ಹಾಗೂ ಕೆರೆ ಪ್ರದೇಶವು ಕಡಿಮೆಯಾಗುವುದರಲ್ಲಿ ಪರಿಣಮಿಸಿತು.
 • ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೆರೆಯಲ್ಲಿನ ನೀರಿನ ಗುಣಮಟ್ಟವನ್ನು ‘ಇ’ ಎಂದು ವರ್ಗೀಕರಿಸಿತ್ತು. ಕೆಟ್ಟ ವಾಸನೆಯ ಮತ್ತು ನೊರೆಯಿಂದ ಕೂಡಿದ ಮಲಿನವಾದ ನೀರು ಕೆರೆಕೋಡಿಯ ಭಾಗದಲ್ಲಿ ಹರಿಯುತ್ತಿರುವುದನ್ನು ಹಾಗೂ ಕೆರೆಯು ನೀರಿನ ಗಂಟೆಹೂಗಳಿಂದ ತುಂಬಿರುವುದನ್ನು ಗಮನಿಸಲಾಯಿತು ಹಾಗೂ ಇದು ನೀರು ಮಲಿನಗೊಳ್ಳುವುದರಲ್ಲಿ ಪರಿಣಮಿಸಿತ್ತು.

ಹೊರಮಾವು-ಅಗರ ಕೆರೆHoraMavu-Kere37

 • ಈ ಕೆರೆಯು ಬೆಂಗಳೂರಿನ ಪೂರ್ವಭಾಗದಲ್ಲಿದೆ ಮತ್ತು ಬಿಡಿಎಯ ಅಭಿರಕ್ಷಣೆಯಲ್ಲಿದೆ.
 • ೨೦೦೬ರ ಸಮೀಕ್ಷಾ ನಕ್ಷೆಯು ೫ ಎಕರೆ ೦.೨೫ ಗುಂಟೆಯು ಒತ್ತುವರಿಯಾಗಿದೆ ಎಂದು ೫೧ ಸೂಚಿಸಿತ್ತು.  ಕೆರೆಯ ಗಡಿ ಪ್ರದೇಶಗಳನ್ನು ಗುರುತಿಸಿರಲಿಲ್ಲ ಮತ್ತು ಕೆರೆಗೆ ಕೋಡಿಯಿರಲಿಲ್ಲ.
 • ಕೆರೆ ಅಂಗಳವು ನಿರ್ಮಾಣ ಅವಶೇಷಗಳಿಂದ ತುಂಬಿರುವುದನ್ನು ಮತ್ತು ಬೇಲಿಯನ್ನು ಹಾಳು ಮಾಡಿರುವುದನ್ನು ಜಂಟಿ ಭೌತಿಕ ಪರಿಶೀಲನೆಯಲ್ಲಿ ಗಮನಿಸಲಾಯಿತು.
 • ವಸತಿ ಸಮುಚ್ಚಯವೊಂದು ಮನೆಗಳಿಂದ ಉತ್ಪತ್ತಿಯಾದ ಕೊಳಚೆ ನೀರನ್ನು ಸಂಸ್ಕರಿಸದೇ ನೇರವಾಗಿ ಕೆರೆಗೆ ಬಿಟ್ಟು ಮಾಲಿನ್ಯವನ್ನು ಉಂಟು ಮಾಡುತ್ತಿತ್ತು.
 • ಕೆರೆ ಪ್ರದೇಶವನ್ನು ವಾಯುವ್ಯ ಒಳಹರಿವಿನ ಹತ್ತಿರ ಬಸ್ ನಿಲ್ದಾಣದ ನಿರ್ಮಾಣಕ್ಕಾಗಿ ಒತ್ತುವರಿ ಮಾಡಲಾಗಿತ್ತು. ಹಲವಾರು ಅಪಾರ್ಟ್‌ಮೆಂಟ್‌ಗಳು ಮತ್ತು ಇತರೆ ವಸತಿ ಮನೆಗಳು ಬಫರ್ ವಲಯವನ್ನು ಉಲ್ಲಂಘನೆ ಮಾಡಿದ್ದವು. ಅನುಷ್ಠಾನ ಸಂಸ್ಥೆಗಳು ಬಫರ್ ವಲಯವನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.
 • ಯಾವುದೇ ಸಂಸ್ಥೆಗಳು ಮಾಲಿನ್ಯದ ಮಟ್ಟದ ಮೇಲ್ವಿಚಾರಣೆ ಮಾಡಿರಲಿಲ್ಲ ಮತ್ತು ೨೦೦೯-೧೪ರ ಅವಧಿಯಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೊಂಡಿರಲಿಲ್ಲ.
 • ಓರ್ವ ಟ್ರಾಕ್ಟರ್ ಡ್ರೈವರ್ ಕೆರೆ ಏರಿಯನ್ನು ನಿರ್ಮಾಣ ಅವಶೇμಗಳಿಂದ ಭರ್ತಿ ಮಾಡುತ್ತಿರುವುದು ಅಧ್ಯಯನ ಸಂದರ್ಭದಲ್ಲಿ ಕಂಡುಬಂತು. ಅಪಾರ್ಟ್‌ಮೆಂಟ್ ಸಮುಚ್ಛಯವು ಸಂಸ್ಕರಿಸದ ಕೆರೆ ಕೊಳಚೆ ನೀರನ್ನು ಕೆರೆಗೆ ಬಿಡುತ್ತಿರುವುದು ಸಾಬೀತಾಯಿತು. ಪ್ರದೇಶದಲ್ಲಿ ಬಸ್ ನಿಲ್ದಾಣದ ನಿರ್ಮಾಣವಾಗುತ್ತಿತ್ತು.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*