ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೩೫: ಕೆರೆ ಅಭಿವೃದ್ಧಿ ಏನೋ ಆಯಿತು, ನೀರು ಎಲ್ಲಿಂದ ಬಂದೀತು!

ಕೆರೆಗಳ ಅಭಿವೃದ್ಧಿಗೆ ನೂರಾರು ಕೋಟಿ ರುಪಾಯಿಗಳನ್ನು ನೀರಿನಂತೆ ಸರಕಾರ ಖರ್ಚು ಮಾಡಿದೆ. ಆದರೆ, ಆ ಅಂದವಾದ ಕೆರೆಗೆ ನೀರು ಬರುವುದು ಎಲ್ಲಿಂದ? ನೀರು ಬರುವ ಹರಿವುಗಳನ್ನೇ ನುಂಗಿ ಹಾಕಿದರೆ ಅದು ಕೆರೆಯಾಗಿ ಉಳಿಯುವುದು ಹೇಗೆ?

CAG-Jeevaಕೆರೆಗಳಲ್ಲಿ ನೀರನ್ನು ಜೀರ್ಣೋದ್ಧಾರಗೊಳಿಸಲು ಮತ್ತು ಅಧಿಕ ನೀರು ಹೊರಹೋಗಲು ಸಂಬಂಧಿತ ಸಂಸ್ಥೆಗಳೊಡನೆ ಸಮನ್ವಯದಿಂದ ಎಲ್ಲ ಕೆರೆಗಳಲ್ಲಿ ಒಳಹರಿವುಗಳು ಮತ್ತು ಹೊರಹರಿವುಗಳು ಪರ್ಯಾಪ್ತವಾಗಿವೆ ಎಂದು ಅನುμನ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು. ಹೀಗೆಂದು ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ೨೦೧೫ನೇ (ಸಿಎಜಿ) ವμದ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಕೆರೆಗಳು ವಿವಿಧ ಬಗೆಯ ಸಸ್ಯ, ಪ್ರಾಣಿ ಮತ್ತು ಇತರೆ ಜಲಚರವಾಸಿಗಳಿಗೆ ವಾಸಸ್ಥಾನಗಳಾಗಿವೆ. ಅವುಗಳು ಜಲಧಾರಿಗಳನ್ನು (ಜಲಧಾರಿ ಎಂದರೆ ನೀರನ್ನು ಹೊಂದಿರುವ ಪ್ರವೇಶಸಾಧ್ಯ ಕಲ್ಲಿನ ಭೂಮಿಯೊಳಗಿನ ಪದರ ಅಥವಾ ನೀರಿನ ಬಾವಿಯನ್ನು ಉಪಯೋಗಿಸಿ ಅಂತರ್ಜಲವನ್ನು ತೆಗೆಯಬಹುದಾದ ಅಸಂಯೋಜಿತ ವಸ್ತುಗಳು (ಜಲ್ಲಿ ಅಥವಾ ಮರಳು) ಹಾಗೂ ಜಲ ವೈಜ್ಞಾನಿಕ ವಿಧಾನಗಳಿಗೆ ಪುನರ್‌ಶಕ್ತಿ ತುಂಬುವ ಮೂಲಕ ಜೀವಾಧಾರಕ ವ್ಯವಸ್ಥೆಗಳಾಗಿ ಸಹ ವರ್ತಿಸುತ್ತವೆ. ಜೌಗುಭೂಮಿಗಳು ಭೂಮಿಯ ಹಾಗೂ ಜಲಜೀವಿ ಪರಿಸರ ವ್ಯವಸ್ಥೆಗಳ ನಡುವಿನ ಪರಿವರ್ತನೀಯ ಭೂಮಿಗಳಾಗಿದ್ದು ಭೂಮಿಯ ಮೇಲಿನ ಅಥವಾ ಸುತ್ತಮುತ್ತಲಿನ ನೀರು ಆಳವಲ್ಲದ ನೀರಿನಿಂದ ಆವೃತವಾಗಿರುತ್ತದೆ. ಸಸ್ಯ ಮತ್ತು ಪ್ರಾಣಿಗಳ ವಿವಿಧ ಜಾತಿಗಳ ಜೀವನಾಧಾರಕ್ಕೆ ಜೌಗುಭೂಮಿಯನ್ನು ಸಂರಕ್ಷಿಸುವುದು ಬಹಳ ಮುಖ್ಯವಾಗಿದೆ. ಅನುμನ ಸಂಸ್ಥೆಗಳು ಕೆರೆಯ ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸಲು ಮತ್ತು ಜೀರ್ಣೋದ್ಧಾರಗೊಳಿಸಲು ನಡೆಸಿದ ಪ್ರಯತ್ನಗಳನ್ನು ಸಿಎಜಿ ಪರಿಶೀಲಿಸುತ್ತದೆ. ನೈಸರ್ಗಿಕ ಜೌಗು ಭೂಮಿಗಳನ್ನು ಮತ್ತು ತೀರಗಳನ್ನು ನಯವಾದ ಇಳಿಜಾರುಗಳಿಂದ ಸಂರಕ್ಷಿಸುವ, ಹೊರವಲಯದ ಬಫರ್ ವಲಯವನ್ನು ಹಾಗೂ ಮಾನವಜನ್ಯ ಅಡಚಣೆಗಳು ಇತ್ಯಾದಿಗಳಿಂದ ರಕ್ಷಿಸುವ ಸ್ಥಳೀಯ ಮರಗಳಿಂದ ಸಂರಕ್ಷಿಸುವ ಮೂಲಕ ಕೆರೆಗೆ ಜೀರ್ಣೋದ್ಧಾರವನ್ನು ಒದಗಿಸುವ ಯೋಜನೆಯನ್ನು ಈ ಪ್ರಯತ್ನಗಳು ಒಳಗೊಂಡಿರುತ್ತವೆ.

ನ್ಯಾಷನಲ್ ಲೇಕ್ ಕನ್ಸರ್ವೇಷನ್ ಪ್ಲಾನ್ (ಎನ್‌ಎಲ್‌ಸಿಪಿ) ಮಾರ್ಗದರ್ಶಿಸೂತ್ರಗಳ ಅನ್ವಯ, ತೀರ ಪ್ರದೇಶಗಳ ನಯವಾದ ಇಳಿಜಾರುಗಳನ್ನು ಸಂರಕ್ಷಿಸುವ ಮೂಲಕ ಕೆರೆಗಳ ಜೀರ್ಣೋದ್ಧಾರವನ್ನು ಕೈಗೊಳ್ಳಬೇಕು. ಕೈ ಸಾಧ್ಯವಿದ್ದಷ್ಟು ಮಟ್ಟಿಗೆ ಸೂಕ್ತ ಜಾತಿಯ ಸಸ್ಯವರ್ಗದಿಂದ (ಮೈಕ್ರೋಫೈಟ್) ಇಳಿಜಾರುಗಳನ್ನು ನೈಸರ್ಗಿಕವಾಗಿಸಬೇಕು. ತೀರ ಪ್ರದೇಶವನ್ನು ನೈಸರ್ಗಿಕ ಇಳಿಜಾರುಗಳಿಂದ ಸಂರಕ್ಷಿಸುವ ಅಗತ್ಯತೆಯನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಅನುμನ ಸಂಸ್ಥೆಗಳಿಗೆ ಅರಣ್ಯ ಇಲಾಖೆಯು ಆದೇಶಿಸಿತ್ತು (ಮಾರ್ಚ್ ೨೦೦೮).  ಆದರೆ, ತೀರ ಪ್ರದೇಶದಲ್ಲಿ ನೈಸರ್ಗಿಕ ಇಳಿಜಾರುಗಳನ್ನು ಸಂರಕ್ಷಿಸುವ ಬದಲು ಪರೀಕ್ಷಾ-ತನಿಖೆ ನಡೆಸಿದ ೨೦ (ಅಲ್ಲಾಳಸಂದ್ರ, ಅಂಬ್ಲೀಪುರ ಮೇಲಿನಕೆರೆ, ಅಟ್ಟೂರು, ಬಿ.ನಾರಾಯಣಪುರ, ಚಿನ್ನಪ್ಪನಹಳ್ಳಿ, ಚೊಕ್ಕನಹಳ್ಳಿ, ದಾಸರಹಳ್ಳಿ, ದೊಡ್ಡಾನೆಕುಂದಿ, ಗಂಗಾಶೆಟ್ಟಿ, ಜಕ್ಕೂರು-ಸಂಪಿಗೇಹಳ್ಳಿ, ಕೈಗೊಂಡನಹಳ್ಳಿ, ಕಸವನಹಳ್ಳಿ, ಕೋಗಿಲು, ಕೌದೇನಹಳ್ಳಿ, ಮೇಸ್ತ್ರಿಪಾಳ್ಯ, ರಾಚೇನಹಳ್ಳಿ, ತಿರುಮೇನಹಳ್ಳಿ, ವೆಂಕಟೇಶಪುರ, ವಿಭೂತಿಪುರ ಮತ್ತು ಯಲಹಂಕ)  ಕೆರೆಗಳ ಅಂದಾಜುಗಳು ಮತ್ತು ಸವಿವರ ಯೋಜನಾ ವರದಿಗಳೂ ಸಹ ಆಳವಾಗಿ ಕತ್ತರಿಸುವ ಮತ್ತು  ಎತ್ತರದ ಕಲ್ಲಿನ ಮೇಲ್ಪದರದ ಉಂಗುರಾಕಾರದ ಏರಿಯ ರಚನೆಯನ್ನು ಒದಗಿಸಿದ್ದವು ಎಂಬುದನ್ನು ಲೆಕ್ಕ ಪರಿಶೋಧನೆಯು ಗಮನಿಸಿತು. ಇದನ್ನು ಜಂಟಿ ಭೌತಿಕ ಪರಿಶೀಲನೆಯ ಸಮಯದಲ್ಲಿಯೂ ಸಹಾ ಗಮನಿಸಲಾಯಿತು. ಎತ್ತರದ ಉಂಗುರಾಕಾರದ ಏರಿಯನ್ನು ಕೆರೆಯ ಪ್ರದೇಶದಲ್ಲಿ ರಚಿಸಲು, ತೋಡಿದ ಮಣ್ಣನ್ನು ಬಳಸುವ ಸಲುವಾಗಿ ಕೆರೆ ಪ್ರದೇಶದಲ್ಲಿ ಆಳವಾಗಿ ಗುಂಡಿ ತೆಗೆಯಲಾಗಿತ್ತು. ಆದ್ದರಿಂದ ಪರೀಕ್ಷಾ-ತನಿಖೆ ನಡೆಸಿದ ಕೆರೆಗಳಲ್ಲಿ ಈ ಕಾಮಗಾರಿಗಳನ್ನು ಕಾರ್ಯಗತಗೊಳಿಸಿದ್ದು ತೀರ ಪ್ರದೇಶದ ನಯವಾದ ಇಳಿಜಾರುಗಳಿಗೆ ಮತ್ತು ಕೆರೆಯ ಪ್ರವೇಶದ್ವಾರದ ಆಳಕ್ಕೆ ತೊಂದರೆ ಮಾಡಿತು; ಹಾಗಾಗಿ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಬೆಂಬಲವಾಗಿರಲಿಲ್ಲ. ಚೊಕ್ಕನಹಳ್ಳಿ ಕೆರೆ ಮತ್ತು ಬಿ.ನಾರಾಯಣಪುರ ಕೆರೆಗಳಲ್ಲಿ ಅಂತಹ ಏರಿ ಕಾಮಗಾರಿಗಳನ್ನು ಛಾಯಾಚಿತ್ರಗಳ ಮೂಲಕ ಉದಾಹರಿಸಲಾಗಿದೆ.

 

ChokkanahalliLake-narayanaನಗರೀಕರಣದಿಂದ ತೀರ ಪ್ರದೇಶವನ್ನು ನಿರ್ವಹಿಸಲು ಹೆಚ್ಚು ಪ್ರದೇಶ ಲಭ್ಯವಿರಲಿಲ್ಲ ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಉತ್ತರಿಸಿತು (ಮಾರ್ಚ್ ೨೦೧೫). ಅದರೆ ಉತ್ತರವನ್ನು ಒಪ್ಪಲಾಗುವುದಿಲ್ಲ, ಏಕೆಂದರೆ ಸೂಚನೆಗೆ ವಿರುದ್ಧವಾಗಿ ಎತ್ತರದ ಉಂಗುರಾಕಾರದ ಏರಿಯನ್ನು ರಚಿಸಲು ಲಭ್ಯವಿದ್ದ ತೀರ ಪ್ರದೇಶವನ್ನು ಹಾಳು ಮಾಡಲಾಗಿತ್ತು – ಹಾಗಾಗಿ ಸಸ್ಯ, ಪ್ರಾಣಿ ಮತ್ತು ಜಲಚರ ಜೀವನವನ್ನು ಬೆಂಬಲಿಸುತ್ತಿರಲಿಲ್ಲ. ಕೆರೆಗಳ ಒಳಹರಿವುಗಳ ಮತ್ತು ಹೊರಹರಿವುಗಳ ಕೊರತೆ ಮಳೆನೀರಿನ ಚರಂಡಿಗಳು (ರಾಜಕಾಲುವೆಗಳು) ಕೆರೆಗಳಿಗೆ ಒಳಹರಿವು ಮತ್ತು ಹೊರ ಹರಿವುಗಳಾಗಿವೆ. ಕೆರೆಗಳ ಉಳಿವಿಗೆ ಅವುಗಳು ಜೀವಸಾಧಕಗಳಾಗಿವೆ ಹಾಗೂ ಜೈವಿಕ ವೈವಿಧ್ಯತೆಯ ಸಂರಕ್ಷಣೆಗೆ ಅಪಾರ ಸಾಮರ್ಥ್ಯವನ್ನು ಹೊಂದಿವೆ. ಐದು (ಬಿ.ಚನ್ನಸಂದ್ರ, ಚಿಕ್ಕಬೆಳ್ಳಂದೂರು, ಹೆಗ್ಗೇರಿ, ಮಹಾದೇವಪುರ ಮತ್ತು ವೆಂಕಟೇಶಪುರ)  ಕೆರೆಗಳು ಒಳಹರಿವುಗಳನ್ನು ಹೊಂದಿರಲಿಲ್ಲ, ಎರಡು (ಅಂಬ್ಲೀಪುರ  ಮೇಲಿನಕೆರೆ ಮತ್ತು ತಿರುಮೇನಹಳ್ಳಿ)  ಕೆರೆಗಳ ಒಳಹರಿವುಗಳನ್ನು ಒತ್ತುವರಿ ಮಾಡಲಾಗಿತ್ತು, ಮತ್ತು ಎಂಟು (ಅಂಬ್ಲೀಪುರ ಮೇಲಿನಕೆರೆ, ಬಿ.ನಾರಾಯಣಪುರ, ಚೊಕ್ಕನಹಳ್ಳಿ, ಹೊರಮಾವು-ಅಗರ, ಮಹಾದೇವಪುರ, ಮೇಸ್ತ್ರಿಪಾಳ್ಯ, ರಾಚೇನಹಳ್ಳಿ ಮತ್ತು ವಿಭೂತಿಪುರ) ಕೆರೆಗಳಲ್ಲಿ ಹೊರಹರಿವುಗಳು ಇರಲಿಲ್ಲ ಎಂಬುದನ್ನು ಕೆರೆಗಳ ಜಂಟಿ ಭೌತಿಕ ಪರಿಶೀಲನೆಯ ಸಮಯದಲ್ಲಿ ಗಮನಿಸಲಾಯಿತು. ಪರೀಕ್ಷಾ-ತನಿಖೆ ನಡೆಸಿದ ಬೆಂಗಳೂರಿನ ೧೪  ಕೆರೆಗಳಲ್ಲಿ (ಅಟ್ಟೂರು, ಬಿ.ನಾರಾಯಣಪುರ, ಬೆಳ್ಳಂದೂರು, ಚೊಕ್ಕನಹಳ್ಳಿ, ಗಂಗಾಶೆಟ್ಟಿ, ಹೊರಮಾವು-ಅಗರ, ಜಕ್ಕೂರು- ಸಂಪಿಗೇನಹಳ್ಳಿ, ಕೈಗೊಂಡನಹಳ್ಳಿ, ಕಲ್ಕೆರೆ-ರಾಂಪುರ, ಕಸವನಹಳ್ಳಿ, ಕೋಗಿಲು, ಕೌದೇನಹಳ್ಳಿ, ವರ್ತೂರು ಮತ್ತು ಯಲಹಂಕ), ಕೆರೆಗಳಿಗೆ ಹೋಗುತ್ತಿದ್ದ ಮಳೆ ನೀರಿನ ಚರಂಡಿಗಳು ಒತ್ತುವರಿಯಾಗಿದ್ದವು / ಮಾರ್ಗಾಂತರಣಗೊಂಡಿದ್ದವು ಎಂದು ದಾಖಲೆಗಳಿಂದ ಲೆಕ್ಕಪರಿಶೋಧನೆಯು ಗಮನಿಸಿತು.  ಆದ್ದರಿಂದ ರಾಜ ಕಾಲುವೆಗಳಿಂದ ಅಡೆತಡೆಯಿಲ್ಲದ ಒಳಹರಿವು ಇರಲಿಲ್ಲ ಮತ್ತು ಮಳೆ ನೀರಿನ ಚರಂಡಿಗಳ ಮೂಲಕ ಹೊರಹರಿವೂ ಇರಲಿಲ್ಲ. ಪರೀಕ್ಷಾ-ತನಿಖೆ ನಡೆಸಿದ ೫೬ ಕೆರೆಗಳ ಪೈಕಿ, ೧೬  ಕೆರೆಗಳಲ್ಲಿ (ಅಂಬ್ಲೀಪುರ ಮೇಲಿನಕೆರೆ, ಬಿ.ನಾರಾಯಣಪುರ, ಬಿ.ಚನ್ನಸಂದ್ರ, ಚಿಕ್ಕ ಬೆಳ್ಳಂದೂರು, ಚೊಕ್ಕನಹಳ್ಳಿ, ದೊಡ್ಡಾನೆಕುಂದಿ, ಗಂಗಾಶೆಟ್ಟಿ, ಹೆಗ್ಗೇರಿ, ಹೊರಮಾವು-ಅಗರ, ಕೋಗಿಲು, ಮಹಾದೇವಪುರ, ಮೇಸ್ತ್ರಿಪಾಳ್ಯ, ಶಿವನಹಳ್ಳಿ, ತಿರುಮೇನಹಳ್ಳಿ, ವೆಂಕಟೇಶಪುರ ಮತ್ತು ವಿಭೂತಿಪುರ) ಒಳಹರಿವುಗಳನ್ನು ಒತ್ತುವರಿ ಮಾಡಿದ್ದರಿಂದ ಅಥವಾ ಮಾರ್ಗಾಂತರಣ ಮಾಡಿದ್ದರಿಂದ, ಅವುಗಳು ಗಣನೀಯವಾಗಿ ಕುಗ್ಗಿವೆ ಅಥವಾ ಒಣಗಿ ಹೋಗಿವೆ. ಒಳಹರಿವು ಮತ್ತು ಹೊರಹರಿವುಗಳನ್ನು ತಾಂತ್ರಿಕವಾಗಿ ವಿನ್ಯಾಸ ಮಾಡಿ ನಿರ್ಮಿಸಲಾಗಿದೆ ಮತ್ತು ಬಿಬಿಎಂಪಿ ಅಭಿವೃದ್ಧಿಪಡಿಸಿದ ಕೆರೆಗಳ ಸುತ್ತಮುತ್ತಲು ಮುಳುಗಡೆಯಾದ ಯಾವುದೇ ಘಟನೆ ಇರಲಿಲ್ಲ ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ತಿಳಿಸಿತು (ಮಾರ್ಚ್ ೨೦೧೫).  ಕಂದಾಯ ಇಲಾಖೆಯ ಸಮೀಕ್ಷೆಯ ನಂತರ ಪರೀಕ್ಷಾ-ತನಿಖೆ ನಡೆಸಿದ ೧೪ ಕೆರೆಗಳಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಲಾಗಿತ್ತು ಅಥವಾ ಮಾರ್ಗಾಂತರಣ ಮಾಡಲಾಗಿತ್ತು ಎಂಬ ವಾಸ್ತವಾಂಶಕ್ಕೆ ಉತ್ತರವು ವಿರುದ್ಧವಾಗಿತ್ತು. ಕೆರೆಗಳ ಅಭಿವೃದ್ಧಿಗೆ ನೀಡಲಾಗಿರುವ ಒತ್ತು ಅದರ ಜೀವಾಳವಾಗಿರುವ ಹರಿವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಈ ವರದಿ ಸಾಬೀತುಪಡಿಸುತ್ತದೆ.

 ಚಿತ್ರ-ಲೇಖನ: ಕೆರೆ ಮಂಜುನಾಥ್

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*