ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಶ್ರಮದಾನ ಮೂಲಕವೇ ಕೆರೆ ಕಟ್ಟೆ ತುಂಬಿಸಿದ ರೈತರು

photo 4-1ಕೆರೆ ಕಟ್ಟೆ ಕುಂಟೆಗಳ ಸಂಖ್ಯೆ ಹಾಗೂ ಅವುಗಳ ಹಂಚಿಕೆ ನೋಡಿದರೆ ರಾಜ್ಯದಲ್ಲೇ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಯಾವಾಗಲೂ ಮುಂದು. ಇವುಗಳ ಸಂರಕ್ಷಣೆ ಮತ್ತು ನಿರ್ವಹಣೆ ನೋಡಿದಲ್ಲಿ, ಸಮುದಾಯದ ಪಾತ್ರ ದಿನದಿಂದ ದಿನಕ್ಕೆ ಕುಗ್ಗುತ್ತಿರುವುದು ಸಾಮಾನ್ಯವಾಗುತ್ತಿದೆ. ಇಂತಹ ದಿನಗಳಲ್ಲಿ ಬಾಗೇಪಲ್ಲಿ ತಾಲ್ಲೂಕಿನ ತೋಳಪಲ್ಲಿ, ಪಾತಪಾಳ್ಯ, ಸೋಮನಾಥಪುರ ಮತ್ತು ನಾರೇಮದ್ದೇಪಲ್ಲಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಡಿ ಬರುವ ಕೆಲವು ಗ್ರಾಮಗಳ ರೈತರ ಸಾಧನೆ ಒಂದು ಮಾದರಿಯೇ ಸರಿ. ಒಗ್ಗಟಿನಲ್ಲಿ ಬಲವಿದೆ, ಮನಸ್ಸು ಮಾಡಿದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಈ ಪಂಚಾಯಿತಿಗಳ ಗ್ರಾಮಗಳಲ್ಲಿ ಕಂಡುಬರುವ ಸುಮಾರು ೨೫ ಕುಂಟೆಗಳಲ್ಲಿನ ಹೂಳು ಎತ್ತುವ ಹಾಗೂ ಇತರೆ ಸಣ್ಣಪುಟ್ಟ ರಿಪೇರಿ ಕೆಲಸಗಳನ್ನು ಶ್ರಮದಾನದ ಮೂಲಕವೇ ಮಾಡಿ ತೋರಿಸಿ, ಆದರ್ಶ ರೈತರುಗಳಾಗಿ ಮೆರೆಯುತ್ತಿದ್ದಾರೆ. ಈ ೨೫ ಕುಂಟೆಗಳಲ್ಲಿ ಸುಮಾರು ನಾಲ್ಕುವರೆ ಸಾವಿರ ಘನ ಮೀಟರ್‌ನಷ್ಟು ಹೂಳು ಎತ್ತಿದ್ದಾರೆ. ಇದರಿಂದಾಗಿ, ಸುಮಾರು ೪೫ ಲಕ್ಷ ಲೀಟರ್‌ನಷ್ಟು ನೀರನ್ನು ಮೊದಲನೇ ಮಳೆಯಿಂzಲೇ ಸಂಗ್ರಹಿಸಿದ್ದಾರೆ. ಈ ಕುಂಟೆಗಳಲ್ಲಿ ತುಂಬಿರುವ ನೀರನ್ನು ನೋಡಿ, ರೈತರ
photo 3-1ಮುಖದಲ್ಲಿ ಕಂಡುಬರುತ್ತಿರು ಹಷ ಅಷ್ಟಿಷ್ಟಲ್ಲ. ಬಿಸಿಲ ಬೇಗೆಗೆ ಜಾನುವಾರುಗಳು ನೀರು ಅರಸುತ್ತ ದೂರ ದೂರಕ್ಕೆ ಹೋಗಬೇಕಾದ ಅನಿವಾರ್ಯತೆ ಈ ಎಲ್ಲ ಗ್ರಾಮಸ್ಥರಿಗಿತ್ತು. ಆದರೆ ಈಗ ಸಣ್ಣ ಸಣ್ಣ ಗೋಕುಂಟೆಗಳಲ್ಲಿ ನೀರು ತುಂಬಿರುವುದು ಈ ಸಮಸ್ಯೆಯನ್ನು ದೂರ ಮಾಡಿದೆ. ಶೀಗಲಪಲ್ಲಿ, ನಕ್ಕಲಪಲ್ಲಿ, ಬೈರೇಪಲ್ಲಿ, ರೇಶಿನಾಯಕನಪಲ್ಲಿ, ಕೊಂಡಿರೆಡ್ಡಿಪಲ್ಲಿ, ನಲ್ಲಸಾನಿಪಲ್ಲಿ, ಗುಜ್ಜೇಪಲಿ ಇತ್ಯಾದಿ ಹೀಗೆ ಈ ಎಲ್ಲಾ ಗ್ರಾಮಗಳಲ್ಲಿ ಗ್ರಾಮಸ್ಥರು ಸುಮಾರು ೪ ರಿಂದ ೫ ದಿನಗಳ ಶ್ರಮದಾನದ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಕೈಗೊಂಡಿರುವ ಕ್ರಮ ನಿಜಕ್ಕೂ ಶ್ಲಾಘನೀಯ. ಪೂರ್ಣಗೊಳಿಸಲಾದ ಕಾಮಗಾರಿಗಳ ಮೌಲ್ಯವನ್ನು ಲೆಕ್ಕಮಾಡಿದರೆ ಸುಮಾರು ಆರುವರೆ ಲಕ್ಷ ರೂಪಾಯಿಗಳ ಕೆಲಸವನ್ನು ಯಾವುದೇ ಹಣಕಾಸಿನ ಅಪೇಕ್ಷೆ ಇಲ್ಲದೆ ಶ್ರಮದಾನದ ಮೂಲಕವೇ ಸಾಧಿಸಿರುವುದು ನಿಜಕ್ಕೂ ಅಚ್ಚರಿಯಲ್ಲವೇ! ಇತರರಿಗೆ ಮಾದರಿ ಅಲ್ಲವೇ!

ಸಮುದಾಯ ಸಂಘಟನೆ ಮತ್ತು ಪ್ರೇರೇಪಣೆ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಅಭಿವೃದ್ಧಿ ಹಾಗೂ ನಿರ್ವಹಣೆಯತ್ತ ಮಾರ್ಗದರ್ಶನ ಮತ್ತು ಸಹಕಾರ ನೀಡುತ್ತಿರುವ ಫೌಂಡೇಶನ್ ಫಾರ್ ಎಕಾಲಾಜಿಕಲ್ ಸೆಕ್ಯೂರಿಟಿ ಸ್ವಯಂ ಸೇವಾ ಸಂಸ್ಥೆ, ಚಿಂತಾಮಣಿ ಇವರ ಕಾರ್ಯವೈಖರಿ ಬಗ್ಗೆ ರೈತರ ಹೊಗಳಿಕೆಗಳನ್ನು ಗಮನಿಸಿದರೆ, ಇಂತಹ ಸಂಸ್ಥೆಗಳ ಸೇವೆ ಸಮುದಾಯಕ್ಕೆ ಅಗತ್ಯವಿದೆ ಎಂಬುದು ಎದ್ದು ಕಾಣುತ್ತಿತು.

ಲೇಖನ: ಡಿ. ಆರ್ ಸುರೇಶ್ ಮತ್ತು ಶ್ರೀಕಾಂತ ಬಿ ಭಟ್

 ಛಾಯ ಚಿತ್ರಗಳು: ಶ್ರೀಕಾಂತ ಬಿ ಭಟ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*