ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ-ನೋಟ ೨೯: ಕುಡಿಯುವ ‘ಯೋಗ್ಯತೆ’ಯಿಂದ ದೂರಾದ ಕೆರೆಗಳು!

ಕುಡಿಯುವ ನೀರಿನ ಮೂಲವಾಗಿದ್ದ ಕೆರೆಗಳು ಇಂದು ಆ ‘ಯೋಗ್ಯತೆ’ಯಿಂದ ದೂರಾಗಿವೆ. ರಾಜಧಾನಿ ಬೆಂಗಳೂರು ಅಷ್ಟೇ ಅಲ್ಲ, ರಾಜ್ಯದ ಬಹುತೇಕ ಕೆರೆಗಳು ಇಂದು ಸ್ನಾನ ಮಾಡಲೂ ಲಾಯಕ್ಕಿಲ್ಲದ ದುಸ್ಥಿತಿಗೆ ನೂಕಲ್ಪಟ್ಟಿವೆ. ಬಹುತೇಕ ಕೆರೆಗಳು ಮಾಲಿನ್ಯದ ಕೂಪವಾಗಿವೆ.

ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ೨೦೧೫ನೇ (ಸಿಎಜಿ) ವರ್ಷದ ವರದಿಯಲ್ಲಿ ಕೆರೆಗಳ ದುಸ್ಥಿತಿಯನ್ನು ವಿವರಿಸಲಾಗಿದೆ. ಈ ವರದಿಯಲ್ಲಿ ಕೆರೆಗಳ ಮಾಲಿನ್ಯವನ್ನೂ ವಿವರಿಸಲು ಕೆಲವು ಮಾನದಂಡಗಳನ್ನು ಅನುಸರಿಸಲಾಯಿತು. ಅದರಿಂದ ಹೊರಬಿದ್ದ ವಿವರಗಳು ಕೆರೆಯ ನೀರನ್ನು ಮುಟ್ಟಲೂ ಯೋಚಿಸಬೇಕಾದ ಶೋಚನೀಯ ಪರಿಸ್ಥಿತಿಗೆ ಉಂಟಾಗಿದೆ.

Sarakkiಕೆರೆಗಳ ನೀರಿನ ಗುಣಮಟ್ಟವನ್ನು ಪುನಶ್ಚೇತನಗೊಳಿಸುವ ಪ್ರಯತ್ನಗಳು ಮತ್ತು ಕ್ರಮಗಳನ್ನು ಸಿಎಜಿ ವರದಿ ಪರಿಶೀಲಿಸಿತು. ಜಲ ಅಧಿನಿಯಮ, (ಮಾಲಿನ್ಯ ತಡೆಗಟ್ಟುವುದು ಮತ್ತು ನಿಯಂತ್ರಣ) ೧೯೭೪ (ಅಧಿನಿಯಮದ ಅನುಚ್ಛೇದ ೨(ಇ))  ಮಾಲಿನ್ಯವನ್ನು  ನೀರು ಕಲುಷಿತಗೊಳ್ಳುವುದು ಅಥವಾ ನೀರಿನ ಭೌತಿಕ, ರಾಸಾಯನಿಕ ಅಥವಾ ಜೈವಿಕ ಗುಣಲಕ್ಷಣಗಳಲ್ಲಿನ ಬದಲಾವಣೆ ಅಥವಾ ಕೊಳಚೆ ನೀರು ಅಥವಾ ಕೈಗಾರಿಕಾ ತ್ಯಾಜ್ಯ ಅಥವಾ ಯಾವುದೇ ರೀತಿಯ ದ್ರವ, ಅನಿಲಗಳು ಅಥವಾ ಘನ ವಸ್ತುಗಳನ್ನು ನೀರಿಗೆ ಬಿಡುವುದು (ನೇರವಾಗಿ ಅಥವಾ ಪರೋಕ್ಷವಾಗಿ)  ಎಂದು ವ್ಯಾಖ್ಯಾನಿಸುತ್ತದೆ. ಅ ಕೆರೆಗಳಲ್ಲಿನ ಮಾಲಿನ್ಯವು ಇಟ್ರೋಫಿಕೇಶನ್ (ಅಂದರೆ, ನೀರಿನ ಸಂಪನ್ಮೂಲಗಳು ಸಸ್ಯ ಬೆಳವಣಿಗೆಯನ್ನು ಉತ್ತೇಜಿಸುವ ಅಧಿಕ ಪೋಷಕಾಂಶಗಳನ್ನು ಪಡೆಯುವ ಪ್ರಕ್ರಿಯೆ) ಮತ್ತು ಅಂರ್ತರ್ಜಲವು ಕಲುಷಿತವಾಗುವುದರಲ್ಲಿ ಪರಿಣಮಿಸಿ, ಆರೋಗ್ಯಕರ ಪರಿಸರ ಮತ್ತು ಪ್ರಾಣಿಗಳ ವಾಸಸ್ಥಾನಗಳ ನμಕ್ಕೆ ಕಾರಣವಾಗುತ್ತದೆ. ಕೆರೆಗಳ ಮಾಲಿನ್ಯ ಮಟ್ಟದ ಅಸಮರ್ಪಕ ನಿರ್ಧರಣೆ ಕೆರೆಗಳಲ್ಲಿ ಮಾಲಿನ್ಯದ ಮಟ್ಟವನ್ನು ನಿರ್ಣಯಿಸುವ ಮತ್ತು ನೀರಿನ ಗುಣಮಟ್ಟವನ್ನು ನಿರ್ಧರಣೆ ಮಾಡುವ ಜವಾಬ್ದಾರಿಯು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯದ್ದಾಗಿದೆ.  ಎನ್‌ಎಲ್‌ಸಿಪಿ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನ್ವಯ ನೀರಿನ ಗುಣಮಟ್ಟದ ಮಟ್ಟಗಳನ್ನು ನಿಗದಿಪಡಿಸಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಎನ್‌ಎಲ್‌ಸಿಪಿ ಮಾರ್ಗದರ್ಶಿ ಸೂತ್ರಗಳ ವರ್ಗೀಕರಣದ ಪ್ರಕಾರ,

ಎ ವರ್ಗ ಎಂದರೆ: ಸಾಂಪ್ರದಾಯಿಕ ಸಂಸ್ಕರಣೆಯಿಲ್ಲದ ಆದರೆ ಸೋಂಕು ನಿವಾರಣೆಯಾದ ಕುಡಿಯುವ ನೀರಿನ ಮೂಲ

ಬಿ ವರ್ಗ ಎಂದರೆ: ಹೊರಾಂಗಣ ಸ್ನಾನ (ಆಯೋಜಿತ)

ಸಿ ವರ್ಗ ಎಂದರೆ: ಸಾಂಪ್ರದಾಯಿಕವಾಗಿ ಸಂಸ್ಕರಣೆಯಾದ ಮತ್ತು ಸೋಂಕು ನಿವಾರಣೆಯಾದ ಕುಡಿಯುವ ನೀರಿನ ಮೂಲ

ಡಿ ವರ್ಗ ಎಂದರೆ: ವನ್ಯಜೀವಿ ಮತ್ತು ಮೀನುಗಾರಿಕೆಯ ಸಂತಾನೋತ್ಪತ್ತಿ

ಇ ವರ್ಗ ಎಂದರೆ: ನೀರಾವರಿ, ಕೈಗಾರಿಕೆಗಳಿಗೆ ತಂಪಾಗಿಸುವ ನೀರು, ನಿಯಂತ್ರಿತ ತ್ಯಾಜ್ಯ ವಿಲೇವಾರಿ

Somasundaranapalyaಕೆರೆಗಳ ನೀರಿನ ಗುಣಮಟ್ಟವು ‘ಬಿ’ ಪ್ರವರ್ಗವಾಗಿರುವುದು ಅತಿ ಮುಖ್ಯ. ಅಂದರೆ, ಹೊರಾಂಗಣ ಸ್ನಾನಕ್ಕೆ ಸೂಕ್ತವಾಗಿರುವುದು ಅಗತ್ಯವಾಗಿತ್ತು. ಪರೀಕ್ಷಾ-ತನಿಖೆ ನಡೆಸಿದ ೫೬ ಕೆರೆಗಳ ಪೈಕಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬೆಂಗಳೂರಿನ ಕೇವಲ ಆರು ಕೆರೆಗಳಲ್ಲಿ (ಡಿ ಪ್ರವರ್ಗ-ಜಕ್ಕೂರು-ಸಂಪಿಗೇಹಳ್ಳಿ, ಯಲಹಂಕ; ಇ ಪ್ರವರ್ಗ-ಚಿನ್ನಪ್ಪನಹಳ್ಳಿ, ದೊಡ್ಡಾನೆಕುಂದಿ, ಕೈಗೊಂಡನಹಳ್ಳಿ  ಮತ್ತು ಕಸವನಹಳ್ಳಿ)  ಮತ್ತು  ಇತರೆ ಸ್ಥಳೀಯ ಸಂಸ್ಥೆಗಳಲ್ಲಿ ಒಂಭತ್ತು  ಕೆರೆಗಳಲ್ಲಿ (ದಳವಾಯಿ, ಕೆಳಗೇರಿ, ಕೋಳಿಕೆರಿ, ಕೋಟೆಕೆರೆ, ನವಲೂರು, ನುಗ್ಗೀಕೇರಿ, ಸಾಧನಕೇರಿ, ಸೋಮೇಶ್ವರ ಮತ್ತು ಉಣಕಲ್ (ಮುಖ್ಯ) ಕೆರೆಗಳು) ಮಾತ್ರ ನೀರಿನ ಗುಣಮಟ್ಟದ ಪರೀಕ್ಷೆಯನ್ನು ನಡೆಸಿದ್ದಿತು.  ಈ ಎಲ್ಲ ಕೆರೆಗಳಲ್ಲಿ ನೀರಿನ ಗುಣಮಟ್ಟವನ್ನು ‘ಡಿ’ ಅಥವಾ ‘ಇ’ ಎಂದು ವರ್ಗೀಕರಿಸಲಾಗಿದ್ದಿತು. ಈ ಕೆರೆಗಳನ್ನು ಜೀರ್ಣೋದ್ಧಾರಗೊಳಿಸಿದ ಅನಷ್ಠಾನ ಸಂಸ್ಥೆಗಳೂ ಸಹ ಅವುಗಳಲ್ಲಿ ಮಾಲಿನ್ಯ ಮಟ್ಟವನ್ನು ನಿರ್ಣಯಿಸುವ ಯಾವುದೇ ಪ್ರಯತ್ನಗಳನ್ನು ಮಾಡಿರಲಿಲ್ಲ. ಹೀಗೆ, ‘ಬಿ’ ಪ್ರವರ್ಗ ಹೊರಾಂಗಣ ಸ್ನಾನದ ಮಟ್ಟವನ್ನು ಖಚಿತಪಡಿಸಿಕೊಳ್ಳುವ ಉದ್ದೇಶವನ್ನು ಸಾಧಿಸಲಿಲ್ಲ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜೊತೆಗೆ ಖಾಸಗಿ ಸಂಸ್ಥೆಗಳನ್ನು ಗುರುತಿಸಿ ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಮತ್ತು ಕೆರೆಗಳಲ್ಲಿ ಮಾಲಿನ್ಯದ ಮಟ್ಟವನ್ನು ಮೇಲ್ವಿಚಾರಣೆ ಮಾಡುವುದನ್ನು ವಹಿಸಲಾಗುವುದು ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ತಿಳಿಸಿತು (ಮಾರ್ಚ್ ೨೦೧೫). ಆದರೆ, ಮಾಲಿನ್ಯ ಉಂಟು ಮಾಡುವವರ ಮೇಲೆ ವಿಧಿಸಬೇಕಿದ್ದ ದಂಡದ ಉಪಬಂಧಗಳನ್ನು ನಿರ್ದಿಷ್ಠಪಡಿಸಲಿಲ್ಲ ಎಂದು ಸಿಎಜಿ ವರದಿ ವಿಷಾದ ವ್ಯಕ್ತಪಡಿಸಿದೆ. ಕೆರೆಗಳ ಮಾಲಿನ್ಯ ತಡೆಗೆ ಮೊದಲು ಮುಂದಾಗುವುದು ಅತ್ಯಗತ್ಯವಾಗಿದೆ.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*