ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ- ನೋಟ ೨೮: ಮಾಸ್ಟರ್ ಪ್ಲಾನ್‌ನಲ್ಲೇ ಕೆರೆಗಳ ಭೂಮಿ ಬದಲು!

ಕೆರೆಗಳ ಅವಸಾನಕ್ಕೆ ಭೂದಾಹಿಗಳಷ್ಟೇ ಕಾರಣವಲ್ಲ. ಸರ್ಕಾರದ ಪ್ರಾಧಿಕಾರಗಳಿಂದಲೇ ಕೆರೆಗಳ ಒತ್ತುವರಿ ಸಾಧ್ಯವಾಗಿದೆ. ಅದಕ್ಕೇ ನಗರದ ಅಭಿವೃದ್ಧಿಗೆ ಪೂರಕವಾಗಿರುವ ಅಧಿಕೃತದ ದಾಖಲೆ ಎನ್ನಲಾದ ಬಿಡಿಎ ಮಾಸ್ಟರ್ ಪ್ಲಾನ್‌ನಲ್ಲೇ ಕೆರೆಗಳ ಪ್ರದೇಶವನ್ನೇ ಬದಲು ಮಾಡಲಾಗಿದೆ. ಭೂಬಳಕೆಯಲ್ಲಿನ ಬದಲಾವಣೆಯು ಕೆರೆ ಪ್ರದೇಶಗಳ ಪರಿವರ್ತನೆಯೂ ಆಗಿದೆ.

ಕರ್ನಾಟಕ ಟೌನ್ ಮತ್ತು ಕಂಟ್ರಿ ಪ್ಲಾನಿಂಗ್ ಅಧಿನಿಯಮ, ೧೯೬೧ರ ನಿಬಂಧನೆಗಳ ಅನ್ವಯ, ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)/ಪರಿಷ್ಕೃತ ಮಾಸ್ಟರ್‌ಪ್ಲಾನ್ (ಆರ್‌ಎಂಪಿ)ನಲ್ಲಿ ಉದ್ಯಾನವನಗಳು, ಆಟದ ಮೈದಾನಗಳು ಮತ್ತು ಇತರೆ ಮನರಂಜನಾ ಬಳಕೆಗಳು, ಸಾರ್ವಜನಿಕ ತೆರೆದ ಜಾಗಗಳು, ಸಾರ್ವಜನಿಕ ಕಟ್ಟಡಗಳು ಮತ್ತು ಸಂಸ್ಥೆಗಳು ಹಾಗೂ ಅಂತಹ ಬೇರೆ ಉದ್ದೇಶಗಳಿಗೆ ಮೀಸಲಿಟ್ಟ ಪ್ರದೇಶಗಳು, ಮುಂತಾದವುಗಳನ್ನು ಒಳಗೊಂಡಿರಬೇಕು. ಅಧಿನಿಯಮವು ಸಮಗ್ರ ಅಭಿವೃದ್ಧಿ ಯೋಜನೆ/ಪರಿಷ್ಕೃತ ಮಾಸ್ಟರ್‌ಪ್ಲಾನ್‌ನಲ್ಲಿ ಕೆರೆಗಳು ಮತ್ತು ಸರೋವರಗಳಾಗಿ ಮೀಸಲಿಟ್ಟ ಪ್ರದೇಶಗಳನ್ನು ಸ್ಪಷ್ಟವಾಗಿ ವಿವರಿಸಿರಲಿಲ್ಲ. ಇದನ್ನು ಸಂಪೂರ್ಣ ತನಿಖೆ ನಡೆದಿ ನಂತರ ದಾಖಲೆ ಸಹಿತ “ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ೨೧  ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ” ವರದಿಯಲ್ಲಿ (ಸಿಎಜಿ ವರದಿ) ನೀಡಲಾಗಿದೆ.

LakeCDP2005RMPಬೆಂಗಳೂರಿನಲ್ಲಿ ಪರೀಕ್ಷಾ-ತನಿಖೆ ನಡೆಸಿದ ೩೪ ಕೆರೆಗಳಲ್ಲಿ ೨೭ ಕೆರೆಗಳ ಸಂಬಂಧವಾಗಿನ ಬಿಡಿಎಯ ಟೌನ್ ಪ್ಲಾನಿಂಗ್ ವಿಭಾಗವು ಸಲ್ಲಿಸಿದ ಮಾಹಿತಿ ಮತ್ತು ದಾಖಲೆಗಳ ಪರಿಶೀಲನೆಯು ಕೆರೆ ಪ್ರದೇಶಗಳನ್ನು ಕೆರೆಗಳು, ಉದ್ಯಾನವನಗಳು ಮತ್ತು ಕಣಿವೆಗಳೆಂದು ವಿವರಿಸಿದ್ದ ೨೦೦೫ರ ಸಿಡಿಪಿಗೆ ಹೋಲಿಸಿದರೆ, ಆರ್‌ಎಮ್‌ಪಿ ೨೦೧೫ರ ಅನ್ವಯ ಕೆರೆಯ ಸ್ಥಿತಿಗತಿಯಲ್ಲಿ ಬದಲಾವಣೆ ಆಗಿವೆ.  (ವಸತಿಗಳು, ರಸ್ತೆಗಳು, ಕೃಷಿ ಭೂಮಿ, ಮುಂತಾದವುಗಳು). ರಸ್ತೆಗಳು, ವಸತಿ ಬಡಾವಣೆಗಳು, ಮುಂತಾದವುಗಳ ನಿರ್ಮಾಣಕ್ಕಾಗಿ ೨೦೧೫ರ ಆರ್‌ಎಮ್‌ಪಿಯಲ್ಲಿ ಭೂಬಳಕೆ/ಕೆರೆ ಪ್ರದೇಶದ ಸ್ಥಿತಿಯಲ್ಲಿ ಬದಲಾವಣೆಯಾಗಿದೆ. ಹೀಗಾಗಿ ಕೆರೆ ಪ್ರದೇಶವು ಕಡಿಮೆಯಾಗಿದೆ. ೨೦೦೫ರ ಸಿಡಿಪಿ ಮತ್ತು ೨೦೧೫ರ ಆರ್‌ಎಮ್‌ಪಿ ಅನ್ವಯ ಹಾಗೂ ಜಂಟಿ ಭೌತಿಕ ಪರಿಶೀಲನೆಯಲ್ಲಿ ಲೆಕ್ಕಪರಿಶೋಧನೆಯು ಗಮನಿಸಿದಂತೆ ಭೂಬಳಕೆಯ ಮಾದರಿಯಲ್ಲಿನ ಬದಲಾವಣೆಯ ಪ್ರಕರಣಗಳನ್ನು ಕೋಷ್ಠಕ-೧ದಲ್ಲಿ ನೀಡಲಾಗಿದೆ. ಬಿಡಿಎಯೇ ನೀಡಿರುವ ಮಾಹಿತಿಯಂತೆ ಕೋಷ್ಠಕ ರಚಿಸಲಾಗಿದೆ. ಇದನ್ನು ಚಿತ್ರದಂತೆ ಈ ಲೇಖನದಲ್ಲಿ ನೀಡಲಾಗಿದೆ.

ಇದಲ್ಲದೆ ಚಿನ್ನಪ್ಪನಹಳ್ಳಿ, ಶಿವನಹಳ್ಳಿ, ಬಿ.ಚನ್ನಸಂದ್ರ, ಮೇಸ್ತ್ರಿಪಾಳ್ಯ, ಬಿ.ನಾರಾಯಣಪುರ, ಬೆಳ್ಳಂದೂರು ಮತ್ತು ಮಹದೇವಪುರ ಕೆರೆಗಳ ಪ್ರದೇಶಗಳನ್ನು ಆರ್‌ಎಮ್‌ಪಿ ೨೦೧೫ರಲ್ಲಿ ವಸತಿ, ರಸ್ತೆ, ರೈಲ್ವೇ ಹಳಿ ಮುಂತಾದವುಗಳನ್ನಾಗಿ ತೋರಿಸಲಾಗಿದೆ ಹಾಗೂ ತಯಾರಿಕೆಯಲ್ಲಿರುವ ಆರ್‌ಎಮ್‌ಪಿ ೨೦೩೫ರಲ್ಲಿ ಅದನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಪ್ಪಿಕೊಂಡಿದೆ (ಮಾರ್ಚ್ ೨೦೧೫).  ಆದರೆ ಸಿಎಜಿ ಈ ಉತ್ತರವನ್ನು ಒಪ್ಪಲಾಗುವುದಿಲ್ಲ ಎಂದಿದೆ. ಏಕೆಂದರೆ ಭೂಬಳಕೆಯನ್ನು ಬದಲಾಯಿಸುವ ಬಿಡಿಎಯಿಂದಾಗುವ ಅಚಾತುರ್ಯವು, ಕೆರೆ ಜಾಗವನ್ನು ಬೇರೆ ಉದ್ದೇಶಗಳಿಗಾಗಿ ಬಳಸುವುದಕ್ಕೆ ಅನುಕೂಲವಾಗಿಸಿದೆ. ಆದ್ದರಿಂದ ಪರಿಷ್ಕೃತ ಮಾಸ್ಟರ್ ಪ್ಲಾನ್‌ನಲ್ಲಿ ಕೆರೆ ಪ್ರದೇಶವು ಪರಿಷ್ಕರಣೆಯಾಗಿರುವ/ಕಡಿಮೆಯಾಗಿರುವ ಎಲ್ಲಾ ಪ್ರಕರಣಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆರ್‌ಎಮ್‌ಪಿ ೨೦೧೫ರ ಪೂರ್ವಸ್ಥಿತಿಗೆ ತರಬೇಕು ಎಂದು ಶಿಫಾರಸ್ಸು ಮಾಡಿದೆ.

Garvebavipalyaಕೆರೆ ಪ್ರದೇಶದ ಒತ್ತುವರಿಗಳು ಒತ್ತುವರಿಗೊಳಗಾದ ಪ್ರದೇಶಗಳನ್ನೊಳಗೊಂಡು ಕೆರೆಗಳ ದತ್ತಸಂಚಯವನ್ನು ಕಂದಾಯ ಇಲಾಖೆಯು ನಿರ್ವಹಿಸದಿರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಕೆರೆ ಪ್ರದೇಶದ ಒತ್ತುವರಿಯು ಸಂಗ್ರಹಣಾ ಕಾಲುವೆಗಳನ್ನು ತಡೆಯುವುದು, ನದಿತೀರ ಪ್ರದೇಶದ ಹಾಗೂ ಜೌಗುಭೂಮಿಯ ನಷ್ಟ ಇವುಗಳಿಗೆ ಕಾರಣವಾಗಿ ನೀರು ನಿಲ್ಲುವ ಪ್ರದೇಶ ಕಡಿಮೆಯಾಗುವುದರಲ್ಲಿ ಪರಿಣಮಿಸುತ್ತದೆ. ರಾಜ್ಯ ಸರ್ಕಾರವು ೧೯೮೮ರಿಂದ ಕೆರೆ ಪ್ರದೇಶದ ಒತ್ತುವರಿಗಳನ್ನು ತೆರವುಗೊಳಿಸುವ ಅಗತ್ಯತೆಯನ್ನು ಪದೇ ಪದೇ ತಿಳಿಸುತ್ತಿದ್ದರೂ ಸಹ ಒತ್ತುವರಿಗಳನ್ನು ತೆರವುಗೊಳಿಸುವುದು ಪೂರ್ಣಗೊಂಡಿರಲಿಲ್ಲ. ಜಂಟಿ ಭೌತಿಕ ಪರಿಶೀಲನೆಯಲ್ಲಿ ಮತ್ತು ಪರೀಕ್ಷಾ-ತನಿಖೆ ನಡೆಸಿದ ಕೆರೆಗಳ ದಾಖಲೆಗಳು ಪರಿಶೀಲನೆಯಲ್ಲಿ ಲೆಕ್ಕಪರಿಶೋಧನೆಯು ಒತ್ತುವರಿಗಳ ಪ್ರಕರಣಗಳನ್ನು ಗಮನಿಸಿದೆ. ಒತ್ತುವರಿಗಳನ್ನು ತೆರವುಗೊಳಿಸುವಂತೆ ಅಧಿಕಾರವ್ಯಾಪ್ತಿಯ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಹಾಗೂ ಸಮೀಕ್ಷೆಯು ಪೂರ್ಣಗೊಂಡನಂತರ ಎಲ್ಲ ಕೆರೆಗಳಿಗೆ ಬೇಲಿ ಹಾಕಲು ಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ತಿಳಿಸಿತು (ಮಾರ್ಚ್ ೨೦೧೫). ಜಿಪಿಎಸ್ ಮಾಪಕಗಳನ್ನು ದಾಖಲಿಸುವ ವಿಷಯವು ಸರ್ಕಾರದ ಪರಿಶೀಲನೆಯಲ್ಲಿದೆ ಎಂದೂ ಸಹ ತಿಳಿಸಿದೆ. ಆದರೆ, ಈವರೆಗೆ ಅಂತಹ ಕೆಲಸ ಆಗದಿರುವುದು ನಗರದ ಪರಿಸರಕ್ಕೆ ಮಾರಕ.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*