ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೨೭: ಕೆರೆ ಪ್ರದೇಶದಲ್ಲಿ ರಾಷ್ಟ್ರೀಯ ಜಲನೀತಿಯೇ ಉಲ್ಲಂಘನೆ!

ಕೆರೆಗಳ ಸಂರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಪ್ರಾಧಿಕಾರವೇ ಯೋಜನೆ ಎಂಬುದನ್ನು ರೂಪಿಸುವಾಗ ಕೆರೆ ಭೂಮಿ ಬಳಕೆಯನ್ನು ಬದಲಿಸಿದೆ. ಅಲ್ಲದೆ, ನಿಯಮಗಳನ್ನು ಉಲ್ಲಂಘಿಸಿ ಕೆರೆ ಭೂಮಿಯನ್ನು ಮಂಜೂರು ಮಾಡಿದೆ. ಸರ್ಕಾರಿ ಪ್ರಾಧಿಕಾರಗಳೇ ಇಂತಹ ಮಂಕುಬೂದಿಯನ್ನು ಎರಚಿ ನೈಸರ್ಗಿಕ ಸಂಪತ್ತುಗಳಿಗೆ ಹಾನಿ ಮಾಡಿವೆ. ಇದು ರಾಷ್ಟ್ರೀಯ ಜಲನೀತಿಯ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಕಾನೂನು ಕ್ರಮವೂ ಆಗಲೇಬೇಕಿದೆ.

‘ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ’ಯ ಸಿಎಜಿ ವರದಿದಯಲ್ಲಿ ಕೆರೆಯ ಪ್ರದೇಶವನ್ನು ಕಾನೂನು ಉಲ್ಲಂಘಿಸಿ ಹೇಗೆ ಪರಭಾರೆ ಮಾಡಲಾಗಿದೆ, ಭೂಮಿ ಬಳಕೆಯನ್ನು ಬದಲಾಯಿಸಲಾಗಿದೆ ಎಂಬುದನ್ನು ವಿವರಿಸಿ, ಅದನ್ನು ವಾಪಸ್ ಪಡೆದುಕೊಳ್ಳಲು ಶಿಫಾರಸು ಮಾಡಲಾಗಿದೆ.

Rachenahalliಸಾರ್ವಜನಿಕ ವಿಶ್ವಾಸದ ಸಿದ್ಧಾಂತವು ಪರಿಸರ ಕಾನೂನಿನ ಪ್ರಮುಖ ಶಾಸನವಾಗಿದ್ದು ಗಾಳಿ, ಸಮುದ್ರ, ನೀರು ಮತ್ತು ಅರಣ್ಯಗಳಂತಹ ಸಂಪನ್ಮೂಲಗಳು ಮಾನವನಿಗೆ ಅತ್ಯಂತ ಮಹತ್ವದ್ದಾಗಿದ್ದು ಅವುಗಳನ್ನು ಖಾಸಗಿ ಒಡೆತನಕ್ಕೆ ಒಳಪಡಿಸುವುದು ಸಮರ್ಥನೀಯವಲ್ಲ ಎಂಬ ತತ್ವದ ಮೇಲೆ ನಿಂತಿದೆ. ನೀರಿನ ಸಂಪನ್ಮೂಲಗಳ (ನದಿಗಳು, ಸರೋವರಗಳು, ಕೆರೆಗಳು, ಕೊಳಗಳು, ಮುಂತಾದವುಗಳು) ಮತ್ತು ಚರಂಡಿ ಕಾಲುವೆಗಳ (ನೀರಾವರಿ ಪ್ರದೇಶ ಮತ್ತು ನಗರ ಪ್ರದೇಶದ ಚರಂಡಿ) ಒತ್ತುವರಿ ಮತ್ತು ಮಾರ್ಗಾಂತರಣಗಳಿಗೆ ಆಸ್ಪದ ನೀಡಬಾರದು. ಎಲ್ಲೆಲ್ಲಿ ಅದು ಆಗಿದೆಯೋ, ಅಲ್ಲಿ ಅವುಗಳನ್ನು ಸಾಧ್ಯವಿದ್ದμರ ಮಟ್ಟಿಗೆ ಪೂರ್ವಸ್ಥಿತಿಗೆ ತರಬೇಕು ಮತ್ತು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ರಾಷ್ಟ್ರೀಯ ಜಲ ನೀತಿ, ೨೦೦೨ ಸಹ ತಿಳಿಸುತ್ತದೆ. ಕರ್ನಾಟಕ ಭೂಕಂದಾಯ ನಿಯಮಗಳ ಉಪಬಂಧಗಳು ಕೆರೆಗಳ/ಸರೋವರಗಳ/ನೀರಿನ ಸಂಪನ್ಮೂಲಗಳ ಪ್ರದೇಶಗಳನ್ನು ಯಾವುದೇ ವ್ಯಕ್ತಿಗೆ ಮಂಜೂರು ಮಾಡುವುದನ್ನು ನಿμಧಿಸುತ್ತವೆ. ಈ ಉಪಬಂಧಗಳ ಉಲ್ಲಂಘನೆ ಮಾಡಿ ಕೆರೆ ಭೂಮಿಯನ್ನು ಹಲವಾರು ಸರ್ಕಾರಿ ಸಂಸ್ಥೆಗಳಿಗೆ, ಖಾಸಗಿ ವ್ಯಕ್ತಿಗಳಿಗೆ ಮತ್ತು ಇತರರಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ. ಹೀಗಾಗಿ ಕೆರೆ ಪ್ರದೇಶವು ಕಡಿಮೆಯಾಗಿದೆ. ಇದರಲ್ಲಿ ಕೆಲವು ಪ್ರಕರಣಗಳು ಹೀಗಿವೆ:

ರಾಚೇನಹಳ್ಳಿ ಕೆರೆ: ಕರ್ನಾಟಕ ಭೂಕಂದಾಯ ನಿಯಮಗಳ ನಿಯಮ ೧೦೮-ಐ ಯನ್ನು ಉಲ್ಲಂಘಿಸಿ ಸರ್ವೆ ನಂಬರ್ ೮೨ರ ೭೬.೦೫ ಎಕರೆಗಳಲ್ಲಿ ೪೩.೧೭ ಎಕರೆಗಳಷ್ಟು (ಮಹಾತ್ಮಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆಗೆ ೨೦ ಎಕರೆಗಳು; ಮುಂದುವರೆದ ವೈಜ್ಞಾನಿಕ ಸಂಶೋಧನೆಗಾಗಿನ ಜವಹರಲಾಲ್ ನೆಹರೂ ಕೇಂದ್ರಕ್ಕೆ ೧೬.೫೪ ಎಕರೆಗಳು; ಎಮ್.ಕೆ.ಇಂದಿರ ಮತ್ತು ಇತರರಿಗೆ ಮೂರು ಎಕರೆಗಳು; ವಕ್ಫ್ ಮಂಡಳಿಗೆ ಮೂರು ಎಕರೆಗಳು; ರಸ್ತೆ ಮತ್ತು ಅನಿಲ ಮಾರ್ಗಕ್ಕಾಗಿ ಬಿಬಿಎಂಪಿಗೆ ೦.೬೩ ಎಕರೆ) ಕೆರೆಯ ಭೂಮಿಯನ್ನು ಸರ್ಕಾರಿ ಸಂಸ್ಥೆಗಳಿಗೆ ಮತ್ತು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲಾಗಿದೆ.

ಜಕ್ಕೂರು-ಸಂಪಿಗೆಹಳ್ಳಿ ಕೆರೆ: ಕಂದಾಯ ಇಲಾಖೆಯು ೪೧ ಎಕರೆಗಳμ ಕೆರೆ ಭೂಮಿಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಕೊಳಚೆ ನೀರು ಸಂಸ್ಕರಣಾ ಸ್ಥಾವರ (ಎಸ್‌ಟಿಪಿ) ಮತ್ತು ಸಿಬ್ಬಂದಿ ವಸತಿಗಳಿಗಾಗಿ ಮಂಜೂರು ಮಾಡಿದೆ. ಎಸ್‌ಟಿಪಿಯ ಸುಮಾರು ೧೦ ಎಕರೆ ಭೂಮಿಯನ್ನು ಹೊರತುಪಡಿಸಿ ಉಳಿದ ಭೂಮಿಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಅಭಿವೃದ್ಧಿಪಡಿಸದೇ ಕೇವಲ ಬೇಲಿ ಹಾಕಿಕೊಂಡಿದೆ. ನಿಯಮಗಳನ್ನು ಉಲ್ಲಂಘಿಸಿ ಸರ್ಕಾರವು ಮಂಜೂರು ಮಾಡಿದ್ದ ಕೆರೆ ಪ್ರದೇಶವನ್ನು ಹಿಂದಕ್ಕೆ ಪಡೆಯಲು ಕಂದಾಯ ಇಲಾಖೆಯು ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ.

Allalasandraಅಲ್ಲಾಳಸಂದ್ರ ಕೆರೆ: ಅಲ್ಲಾಳಸಂದ್ರ ಕೆರೆಯ (ಸರ್ವೆನಂಬರ್ ೧೫) ೧೪,೨೮೯.೩೬ ಚದರ ಅಡಿಗಳಷ್ಟು (೯೪(ಸಿ) – ೧೯೯೮ಕ್ಕೂ ಮುಂಚೆ ಅನಧಿಕೃತ ಅನುಭೋಗಿಗಳಿಗೆ ಸರ್ಕಾರೀ ಭೂಮಿಯ ಮಂಜೂರಾತಿ) ಕೆರೆ ಪ್ರದೇಶವನ್ನು ಕರ್ನಾಟಕ ಭೂಕಂದಾಯ ಅಧಿನಿಯಮ, ೧೯೬೪ರ ಅನುಚ್ಛೇದ ೯೪(ಸಿ)  ಅಡಿಯಲ್ಲಿ ಅನಧಿಕೃತ ಅನುಭೋಗಿಗಳಿಗೆ ಮಂಜೂರು ಮಾಡಲಾಗಿದೆ.  ಇದು ಕೆರೆ ಅಂಗಳದಲ್ಲಿನ ಅನಧಿಕೃತ ನಿರ್ಮಾಣಗಳನ್ನು ಸಕ್ರಮಗೊಳಿಸಬಾರದು ಎಂದು ನಿಗದಿಪಡಿಸುವ ಕರ್ನಾಟಕ ಭೂಕಂದಾಯ ನಿಯಮಗಳು, ೧೯೬೬ರ ನಿಯಮ ೧೦೮-ಐ ಹಾಗೂ ಕರ್ನಾಟಕ ನಗರ ಪ್ರದೇಶಗಳಲ್ಲಿ ಅನಧಿಕೃತ ಕಟ್ಟಡಗಳ ಸಕ್ರಮ ಅಧಿನಿಯಮ, ೧೯೯೧ರ ಅನುಚ್ಛೇದ ೪ಕ್ಕೆ ವಿರುದ್ಧವಾಗಿದೆ.

ಐದು  ಕೆರೆಗಳಲ್ಲಿ ೧೯೯೧ರಿಂದ ೨೦೧೦ರ ಅವಧಿಯಲ್ಲಿ ಕೆರೆ ಪ್ರದೇಶವನ್ನು ಭಾರತದ ರಾಷ್ಟ್ರೀಯ ೧೬ ಹೆದ್ದಾರಿ ಪ್ರಾಧಿಕಾರ, ಬಿಡಿಎ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಂತಾದ ಸಂಸ್ಥೆಗಳಿಗೆ ವಸತಿ ಬಡಾವಣೆಗಳು, ರಸ್ತೆಗಳು ಮುಂತಾದವುಗಳ ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿತ್ತು.  ಕೆರೆ ಭೂಮಿಯನ್ನು ಮಂಜೂರು ಮಾಡಿರುವ ಮೇಲಿನ ವಿಷಯಗಳು ಕಂದಾಯ ಇಲಾಖೆಯ ಜೊತೆ ಪರಿಶೀಲನೆಯಲ್ಲಿವೆ ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ತಿಳಿಸಿದೆ.

ಹೀಗಾಗಿ ೧೯೮೮ಕ್ಕೆ ಹಿಂದಿನ ಕೆರೆ ಪ್ರದೇಶದ ಮಂಜೂರಾತಿಯ ಎಲ್ಲ ಪ್ರಕರಣಗಳನ್ನು ರಾಜ್ಯ ಸರ್ಕಾರವು ಪರಿಶೀಲನೆ ಮಾಡಿ ಭೂಮಿಯನ್ನು ಹಿಂದಕ್ಕೆ ಪಡೆಯುವ ಅಗತ್ಯವಿದೆ ಎಂದು ಸಿಎಜಿ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*