ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೨೫: ಕೆರೆಗಳ ಗಡಿಯ ಗುರುತಿಗೆ ಖಚಿತತೆಯೇ ಇಲ್ಲ!

ರಾಜ್ಯದಲ್ಲಿರುವ ಕೆರೆಗಳ ಅಭಿವೃದ್ಧಿಯ ಮಾತಿರಲಿ, ಕೆರೆಗಳ ಸಮೀಕ್ಷೆ ಮತ್ತು ಗಡಿ ಗುರುತಿಸುವಿಕೆ ಪರಿಣಾಮಕಾರಿ ಕಾರ್ಯವೇ ಆಗಿಲ್ಲ. ಕಂದಾಯ ಇಲಾಖೆಯ ದಾಖಲೆಯಂತೆ ಕೆರೆ ಗಡಿಯನ್ನು ಗುರುತಿಸಲು ಸರ್ಕಾರ ಈವರೆಗೂ ಸೂಕ್ತ ಕ್ರಮ ಕೈಗೊಂಡೇ ಇಲ್ಲ. ಬೆಂಗಳೂರು ಕೆರೆಗಳ ಉಳಿವಿಗೆ ವರದಿ ನೀಡಿದ್ದ ಲಕ್ಷ್ಮಣರಾವ್ ಸಮಿತಿಯ ಸಲಹೆಯನ್ನು ಸರ್ಕಾರ ಒಂದಿಷ್ಟೂ ಅನುಸರಿಸಿಲ್ಲ. ಹೀಗಾಗಿ ಕೆರೆಗಳ ಗಡಿ ಗುರುತು ಸ್ಪಷ್ಟವಾಗಿಲ್ಲ. ಹೀಗಾಗಿಯೇ ಒತ್ತುವರಿಯ ಕಾಟಕ್ಕೆ ತಡೆ ಇಲ್ಲದಂತಾಗಿದೆ. ಇದನ್ನೇ ಸಿಎಜಿ ವರದಿಯಲ್ಲೂ ಉಲ್ಲೇಖಿಸಲಾಗಿದೆ.

Dodda-Chikkka hejjajiಕೆರೆಗಳ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕೆ ಪ್ರಾಥಮಿಕ ಕೆಲಸವೆಂದರೆ ಸಮೀಕ್ಷೆ ಮತ್ತು ಕೆರೆ ಪ್ರದೇಶದ ಗಡಿ ಗುರುತಿಸುವಿಕೆ. ಕೆರೆ ಪ್ರದೇಶದಲ್ಲಿ ಂiiವುದೇ ಒತ್ತುವರಿಗಳು ಆಗದಿರುವುದನ್ನು ಖಚಿತಪಡಿಸಲು ಇದು ಅಗತ್ಯ. ಕೆರೆ ಪ್ರದೇಶದ ಅಕ್ರಮ ಮಂಜೂರು, ಕೆರೆಗಳ ಒತ್ತುವರಿ, ಕೆರೆ ಪ್ರದೇಶ ಕಡಿಮೆಯಾಗಿರುವುದು, ಮುಂತಾದವುಗಳ ಬಗೆಗಿನ ಸಿಎಜಿ ಕೂಲಂಕಷ ತನಿಖೆಗಳನ್ನು ನಡೆಸದಿದೆ. ಈ ಲೆಕ್ಕಪರಿಶೋಧನೆಯಲ್ಲಿ (ಸಿಎಜಿ) ಗಮನಿಸಿದ ಪರೀಕ್ಷಾ-ತನಿಖೆ ನಡೆಸಿದ ೫೬ ಕೆರೆಗಳ ೬ ಸಮೀಕ್ಷೆ, ಗಡಿ ಗುರುತಿಸುವಿಕೆ ಮತ್ತು ಒತ್ತುವರಿಗಳನ್ನು ವಿವರವನ್ನು ಕಲೆ ಹಾಕಿತು. ೫೬ ಕೆರೆಗಳ ಪೈಕಿ ಕಂದಾಯ ಇಲಾಖೆ ಕೇವಲ ೨೫ ಕೆರೆಗಳ ಸಮೀಕ್ಷೆಯನ್ನು ಮಾತ್ರ ನಡೆಸಿತ್ತು. ಅವುಗಳಲ್ಲಿ ಎರಡು ಕೆರೆಗಳ ಸಮೀಕ್ಷಾ ನಕ್ಷೆಗಳನ್ನು ಕಂದಾಯ ಇಲಾಖೆಯ ತಹಸೀಲ್ದಾರ್‌ರವರಿಂದ ಪ್ರಮಾಣೀಕರಿಸಿರಲಿಲ್ಲ. ಕೆರೆ ಪ್ರದೇಶದ ಗಡಿಗಳನ್ನು ಗುರುತಿಸದಿರುವುದು ಅಗತ್ಯವಾದಲ್ಲಿ ಕೆರೆಗಳ ಮುಂದಿನ ಮರುಸಮೀಕ್ಷೆಯಲ್ಲಿ ಕೆರೆ ಪ್ರದೇಶವನ್ನು ಸುಲಭವಾಗಿ ಗುರುತಿಸುವುದನ್ನು ಅನುಕೂಲಗೊಳಿಸಲು ಕೆರೆಗಳ ಮೂರರಿಂದ ನಾಲ್ಕು ಮೂಲೆಗಳಲ್ಲಿ ಕಾಂಕ್ರೀಟ್‌ನ ಗಡಿಕಲ್ಲುಗಳನ್ನು ಹಾಕುವುದು ಸಮೀಕ್ಷೆಯ ಒಂದು ಭಾಗವಾಗಿತ್ತು. ಹಾಗೆ ಹಾಕಿರುವ ಮೂಲೆ ಕಲ್ಲುಗಳ ಅಕ್ಷಾಂಶ ಮತ್ತು ರೇಖಾಂಶ ಮೌಲ್ಯಗಳನ್ನು ಜಿಪಿಎಸ್ ಉಪಯೋಗಿಸಿ ಸಮೀಕ್ಷೆಯು ದಾಖಲಿಸಬೇಕಿತ್ತು. ಪರೀಕ್ಷಾ-ತನಿಖೆ ನಡೆಸಿದ ಬೆಂಗಳೂರಿನ ೩೪ ಕೆರೆಗಳಲ್ಲಿ ಕೇವಲ ಮೂರು ಕೆರೆಗಳ ಗಡಿಗಳನ್ನು ೧೨ ಗುರುತಿಸಿರುವುದನ್ನು ಗಮನಿಸಲಾಯಿತು. ಕೇವಲ ಏಳು ಕೆರೆಗಳಲ್ಲಿ ಮಾತ್ರ ಅದರ ಪ್ರದೇಶವನ್ನು ಒಳಗೊಂಡಂತೆ ಕೆರೆಗಳ ವಿವರಗಳನ್ನು ಪ್ರದರ್ಶಿಸುವ ಸಂಕೇತ ಫಲಕಗಳನ್ನು ನೋಡಬಹುದಿತ್ತು. ವಿವಿಧ ದಾಖಲೆಗಳ ಅನ್ವಯ ಕೆರೆ ಪ್ರದೇಶದಲ್ಲಿ ವ್ಯತ್ಯಾಸಗಳು ನೀರು ಹರಡಿರುವ ಪ್ರದೇಶದಿಂದ ಮುಖ್ಯವಾಗಿ ಕೆರೆ ಪ್ರದೇಶವನ್ನು ನಿರ್ಧರಿಸಬಹುದು ಮತ್ತು ಇದು ಕೆರೆ ಕೋಡಿಯ (ಕೆರೆಯ ತುಂಬುಮಟ್ಟ) ಎತ್ತರದ ಜೊತೆಗೆ ನೇರ ಸಂಬಂಧ ಹೊಂದಿರುತ್ತದೆ. ಕೋಡಿಯ ಎತ್ತರದಲ್ಲಿ ಕಡಿಮೆಯಾಗುವುದು ಅಥವಾ ಉಲ್ಲಂಘನೆಯಾಗುವುದು ಕೆರೆಯ ನೀರು ಹರಡುವ ಪ್ರದೇಶವು ಕಡಿಮೆಯಾಗುವುದರಲ್ಲಿ ಪರಿಣಮಿಸುತ್ತದೆ.

Doddanekkundiರಾಚೇನಹಳ್ಳಿ ಕೆರೆಯ ಜೀರ್ಣೋದ್ಧಾರದ ಕಾಮಗಾರಿಗಳ ಅವಧಿಯಲ್ಲಿ ಕೋಡಿಗಳ ಎತ್ತರವನ್ನು ಕಡಿಮೆ ಮಾಡಿದ್ದರಿಂದ ಅಸ್ತಿತ್ವದಲ್ಲಿರುವ ಸಮುದ್ರ ಮಟ್ಟದಿಂದ ಮೇಲಿರುವ ಕೆರೆಯ ಪೂರ್ಣ ಮಟ್ಟವು ೮೮೪.೪೦ ಮೀಟರ್‌ಗಳಿಂದ (ಸವಿವರ ಯೋಜನಾ ವರದಿಯ ಅನ್ವಯ) ೮೮೩.೨೦ ಮೀಟರ್‌ಗಳಿಗೆ (ಅಂದಾಜು) ಕಡಿಮೆ ಆಗಿರುವುದನ್ನು ಜಂಟಿ ಭೌತಿಕ ಪರಿಶೀಲನೆಯಲ್ಲಿ ಲೆಕ್ಕಪರಿಶೋಧನೆಯು ಗಮನಿಸಿತು. ಇದು ಕೆರೆಯ ಪ್ರದೇಶವನ್ನು ೧೬೮ ಎಕರೆಗಳಿಂದ (ಸಮೀಕ್ಷಾ ನಕ್ಷೆಯ ಅನ್ವಯ) ೧೨೮ ಎಕರೆಗಳಿಗೆ (ಸವಿವರ ಯೋಜನಾ ವರದಿಯ ಅನ್ವಯ) ಕಡಿಮೆ ಮಾಡಿತು. ಮತ್ತೊಂದು ಕೆರೆಯಲ್ಲಿ (ದೊಡ್ಡನೆಕುಂದಿ) ಬದಿಯ ಎರಡೂ ಕಡೆಗಳಲ್ಲಿ ಅಸ್ತಿತ್ವದಲ್ಲಿದ್ದ ನೀರಿನ ಕೋಡಿಗಳು ಹಾಳಾಗಿದ್ದು, ನೀರು ಹೊರಹೋಗಲು ಅವಕಾಶ ಇರಲಿಲ್ಲ. ಕೆರೆಯ ಪ್ರದೇಶ ೨೪ ಎಕರೆಗಳμ ಕಡಿಮೆಯಾಗಿ ಹೀಗಾಗಿತ್ತು. ಅನುμನ ಸಂಸ್ಥೆಗಳು ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರ ವಾಸ್ತವಿಕ ಕೆರೆಗಳ ಪ್ರದೇಶವನ್ನು ನಿರ್ಧರಿಸುವಲ್ಲಿ ಉಪಗ್ರಹ ದತ್ತಾಂಶವನ್ನು ಬಳಸುತ್ತಿರಲಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಕಂದಾಯ ಇಲಾಖೆ, ಸಮೀಕ್ಷಾ ನಕ್ಷೆಗಳು, ಶ್ರೀ.ಎನ್.ಲಕ್ಷ್ಮಣ್‌ರಾವ್ ಸಮಿತಿ ವರದಿ, ಸವಿವರ ಯೋಜನಾ ವರದಿಗಳು, ನಗರಾಭಿವೃದ್ಧಿ ಇಲಾಖೆ ಮತ್ತು ಕೆಎಸ್‌ಆರ್‌ಎಸ್‌ಎಸಿ ಇವುಗಳ ಇತ್ತೀಚಿನ ವರದಿಗಳ ಪರೀಕ್ಷಾ-ತನಿಖೆ ನಡೆಸಿದ ಬೆಂಗಳೂರಿನ ೩೩ ಕೆರೆ ಪ್ರದೇಶಗಳ ತುಲನಾತ್ಮಕ ಅಧ್ಯಯನವು ವಿವಿಧ ದಾಖಲೆಗಳ ಅನ್ವಯ ಕೆರೆ ಪ್ರದೇಶಗಳಲ್ಲಿ ವ್ಯತ್ಯಾಸಗಳಿರುವುದನ್ನು ತೋರಿಸಿತು, ಮತ್ತು ತೀರ ಇತ್ತೀಚಿನ ದಾಖಲೆಗಳು ಹಲವಾರು ಪ್ರಕರಣಗಳಲ್ಲಿ ಕೆರೆ ಪ್ರದೇಶಗಳಲ್ಲಿ ಇಳಿಕೆಯಾಗಿರುವುದನ್ನು ತೋರಿಸಿತು. ರಸ್ತೆಗಳ ಮೂಲ ಸೌಕರ್ಯಗಳು ಹಾಗೂ ವಸತಿ ಬಡಾವಣೆಗಳ ನಿರ್ಮಾಣ ಹಾಗೂ ಭೂಬಳಕೆಯಲ್ಲಿ ಬದಲಾವಣೆಯು ಇದಕ್ಕೆ ಮುಖ್ಯ ಕಾರಣವಾಗಿದ್ದಿತು. ದಾಖಲೆಗಳ ಮತ್ತು ನಡೆಸಿದ ಸಮೀಕ್ಷೆಗಳಿಗೆ ಸಂಬಂಧಿಸಿದಂತೆ ಕೆರೆ ಪ್ರದೇಶಗಳಲ್ಲಿ ವ್ಯತ್ಯಾಸಗಳಿದ್ದವೆಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಪ್ಪಿಕೊಂಡಿತು (ಮಾರ್ಚ್ ೨೦೧೫). ಭೂದಾಖಲೆಗಳಿಗೆ ಮತ್ತು ಪ್ರಮಾಣೀಕೃತ ನಕ್ಷೆಗೆ ಸಂಬಂಧಪಟ್ಟಂತೆ ಕೆರೆಯ ವಿಸ್ತೀರ್ಣದಲ್ಲಿನ ವ್ಯತ್ಯಾಸವನ್ನು ಅವಶ್ಯಕ ಕ್ರಮಕ್ಕಾಗಿ ಅಧಿಕಾರ ವ್ಯಾಪ್ತಿಯ ಕಂದಾಯ ಅಧಿಕಾರಿಗಳಿಗೆ ತಿಳಿಸಲಾಗುವುದೆಂದೂ ಸಹ ಸರ್ಕಾರವು ತಿಳಿಸಿತು. ಕೆರೆಗಳ ವಾಸ್ತವಿಕ ಪ್ರದೇಶವನ್ನು ಅಳೆಯಲು ಐಎಸ್‌ಆರ್‌ಓದಿಂದ ಸಹಾಯವನ್ನು ಪಡೆಯುತ್ತಿರುವುದಾಗಿ ಕೆರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ಏಪ್ರಿಲ್ ೨೦೧೫). ಆದರೆ ಉತ್ತರವನ್ನು ದೃಢೀಕರಿಸಲು ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸಲಿಲ್ಲ.

ಕೆರೆಗಳನ್ನು ಅಭಿವೃದ್ಧಿ ಮಾಡುವ ಯಾವ ಕೆಲಸವನ್ನೂ ಮಾಡದಿದ್ದರೂ, ಅದರ ಗಡಿಯನ್ನು ಗುರುತಿಸಿ ಒಂದು ಬೇಲಿ ಹಾಕಿದರೆ ಕೆರೆ ಉಳಿಯುತ್ತದೆ. ಅಷ್ಟೇ ಅಲ್ಲ, ಯಾರೋ ಭೂದಾಹಿಗಳು ಒತ್ತುವರಿ ಮಾಡಿಕೊಂಡು ಲೇಔಟ್ ಸೃಷ್ಟಿಸುವುದು ತಪ್ಪುತ್ತದೆ. ಇದರಿಂದ ಹೊಟ್ಟೆ-ಬಟ್ಟೆ ಕಟ್ಟಿ ಸಣ್ಣದೊಂದು ಸೂರು ಮಾಡಿಕೊಂಡವರಿಗೆ ಆಗುತ್ತಿರುವ ಅನ್ಯಾಯ ಮುಂದಿನ ದಿನಗಳಲ್ಲಾದರೂ ಆಗದಂತೆ ಇನ್ನಾದರೂ ಕ್ರಮಕೈಗೊಳ್ಳಬಹುದು. ಇದಾಗಲಿ ಎಂಬುದಷ್ಟೇ ಆಶಯ.

ಸ್ನೇಹಿತರೇ, ಈ ನೋಟದ ಅಂಕಣದೊಂದಿಗೆ “ಕೆರೆ-ನೋಟ”ದ ಸರಣಿ ೨೫ಕ್ಕೆ ತಲುಪಿದೆ. ಕೆರೆಗಳ ಬಗ್ಗೆ ಒಂದಷ್ಟು ತನಿಖಾ ವಿವರಗಳನ್ನು ಹಂಚಿಕೊಳ್ಳಲು ನನಗೆ ಅನುವು ಮಾಡಿಕೊಟ್ಟ ಕನ್ನಡ ವಾಟರ್‌ಪೋರ್ಟಲ್‌ನ ಎಲ್ಲ ಸದಸ್ಯರಿಗೂ ಹಾಗೂ ಸಿಡಿಎಲ್‌ನ ಎಲ್ಲರಿಗೂ ನಾನು ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸುತ್ತೇನೆ. ಈ ಲೇಖನವನ್ನು ನೆರೆ ರಾಜ್ಯದ ಚೆನ್ನೈನಲ್ಲಿ ಕುಳಿತು ಬರೆದಿದ್ದೇನೆ. ದಕ್ಷಿಣ ಭಾರತ ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಮ್ಮೇಳನದಲ್ಲಿ ಭಾಗವಹಿಸಲು ಚೆನ್ನೈಗೆ ಬಂದಿದ್ದೇನೆ. ನಮ್ಮ ಎಲ್ಲರ ಪ್ರೋತ್ಸಾಹ ಹೀಗೆ ಇದ್ದರೆ, ಇನ್ನಷ್ಟು ಸಮೀಕ್ಷಾ ಹಾಗೂ ತನಿಖಾ ಲೇಖನಗಳನ್ನು ನಿಮ್ಮ ಮುಂದಿಡುತ್ತೇನೆ.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*