ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೨೪: ಕೆರೆ ಅಭಿವೃದ್ಧಿಗೆ ಯೋಜನೆಯೂ ಇಲ್ಲ, ಹಣವೂ ಇಲ್ಲ

ರಾಜ್ಯದಲ್ಲಿರುವ ಕೆರೆಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಬಗ್ಗೆ ನಮ್ಮನ್ನಾಳುವ ಜನಪ್ರತಿನಿಧಿಗಳು ಹಾಗೂ ಅವರಿಗೆ ಮಾಹಿತಿ ನೀಡುವ ಅಧಿಕಾರಿಗಳ ಬಳಿ ವಾಸ್ತವದಲ್ಲಿ ಯೋಜನೆಯೇ ಇಲ್ಲ. ಅಭಿವೃದ್ಧಿ ಹಾಗೂ ನಿರ್ವಹಣೆಯ ಪಥವೇ ಗೊತ್ತಿರದೇ ಅದರಲ್ಲಿ ಸಾಗಿ ಅತ್ಯುನ್ನತವನ್ನು ತೋರುತ್ತೇವೆ ಎಂಬುದು ಬಾಯಿಮಾತೇ ಆಗಿದೆ. ಅಷ್ಟೇ ಅಲ್ಲ, ಕೆರೆಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಅಗತ್ಯವಾದ ಹಣವೂ ಯಾವ ಇಲಾಖೆಯಲ್ಲೂ ಇಲ್ಲ. ಕೇವಲ ಜನಪ್ರತಿನಿಧಿಗಳ ಮಾತಿಗಷ್ಟೇ ಸೀಮಿತವಾಗಿದೆ.

Lumbini-1ಕೆರೆ ಅಭಿವೃದ್ಧಿಗೆ ಯೋಜನೆಯಂತಹ ಯಾವುದೇ ನೀತಿನಿಯಮಗಳಿಲ್ಲ. ಜತೆಗೆ ಅದಕ್ಕೆ ಆಯವ್ಯಯ ಅಂದರೆ ಹಣವೂ ಇಲ್ಲ ಎಂದು ಸಿಎಜಿ ವರದಿ ‘ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ’ಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ ನೀಡಲಾಗಿದೆ. ಹಣಕಾಸು ನಿರ್ವಹಣೆ ಕೆರೆಗಳ ಸಂರಕ್ಷಣೆಗೆ ಜವಾಬ್ದಾರರಾಗಿರುವ ವಿವಿಧ ಸಂಸ್ಥೆಗಳು ತಮ್ಮದೇ ಆಯವ್ಯಯವನ್ನು ಹೊಂದಿರುತ್ತವೆ ಮತ್ತು ಕೆರೆ ಸಂರಕ್ಷರೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಆರ್ಥಿಕ ಕೊಡುಗೆಗಳನ್ನು ನೀಡುತ್ತವೆ. ಆದರೆ, ಸಂಬಂಧಪಟ್ಟ ಎಲ್ಲಾ ಸಂಸ್ಥೆಗಳಲ್ಲಿ, ಕೆರೆಯೊಂದಕ್ಕೆ ಒಟ್ಟಾರೆ ಯೋಜನೆ ಅಥವಾ ಆಯವ್ಯಯವಿಲ್ಲದೇ ಇರುವುದು ಆ ಸಂಸ್ಥೆಯು ವೆಚ್ಚ ಮಾಡಿದ ಹಣವು ಪರಸ್ಪರರಲ್ಲಿ ಸಮನ್ವಯವಿರದಿದ್ದರಿಂದಾಗಿ ಉದ್ದೇಶಿತ ಗುರಿಗಳನ್ನು ಸಾಧಿಸಿಲ್ಲ. ಅಲ್ಲದೇ, ಅಗತ್ಯವಿದ್ದ ಹಣಕಾಸಿನ ಸಂಪನ್ಮೂಲಗಳನ್ನು ನಿರ್ಧರಣೆ ಮಾಡಲಿಲ್ಲ ಹಾಗೂ ಲಭ್ಯವಿದ್ದ ಹಣಕಾಸಿನ ಸಂಪನ್ಮೂಲಗಳನ್ನೂ ಸಹ ಸಮರ್ಪಕವಾಗಿ ನಿರ್ವಹಿಸಿರಲಿಲ್ಲ. ಮಾರ್ಚ್ ೨೦೧೪ರಲ್ಲಿದ್ದಂತೆ, ಬಿಬಿಎಂಪಿ, ಬಿಡಿಎ, ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಎರಡು ನಗರಪಾಲಿಕೆಗಳು (ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ) ತಮ್ಮ ಅಧಿಕಾರವ್ಯಾಪ್ತಿಯಲ್ಲಿ ೫೫, ೧೨೩, ೨೮ ಮತ್ತು ೩೨ ಕೆರೆಗಳನ್ನು ಹೊಂದಿದ್ದವು ಮತ್ತು ಕ್ರಮವಾಗಿ ರು.೧೬೫.೮೩ ಕೋಟಿ, ೫೩.೧೯ ಕೋಟಿ,  ೧೪.೭೧ ಕೋಟಿ ಮತ್ತು ೧.೧೪ ಕೋಟಿ ವೆಚ್ಚವನ್ನು ಭರಿಸಿದ್ದವು. ಹಣಕಾಸು ನಿರ್ವಹಣೆಯನ್ನು ಬಲವರ್ಧನೆಗೊಳಿಸುವ ಅಗತ್ಯವಿದೆ ಎಂದು ಅನುμನ ಸಂಸ್ಥೆಗಳ ವೆಚ್ಚ ಮತ್ತು ಸ್ವೀಕೃತಿಗಳ ಪರಿಶೀಲನೆಯು ಸೂಚಿಸಿದೆ. ತಮ್ಮ ಅಧಿಕಾರವ್ಯಾಪ್ತಿಯಡಿ ಕಟ್ಟಡ ಮತ್ತು ಭೂಮಿಯ ಮಾಲೀಕರಿಗೆ ಕಟ್ಟಡ ಮತ್ತು ಭೂಮಿಯ ಅಭಿವೃದ್ಧಿಗಾಗಿ ಅನುಮೋದನೆಯನ್ನು ಮಂಜೂರು ಮಾಡುವಾಗ, ಕೆರೆಗಳ ಮತ್ತು ನೀರಿನ ಸಂಪನ್ಮೂಲಗಳ ಪುನಶ್ಚೇತನಕ್ಕಾಗಿ ಉಪಕರ/ಶುಲ್ಕವನ್ನು ಸಂಗ್ರಹಿಸಲು ಕರ್ನಾಟಕ ಟೌನ್ ಮತ್ತು ಕಂಟ್ರಿ ಪ್ಲಾನಿಂಗ್ ಅಧಿನಿಯಮ, ೧೯೬೧ ನಗರ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡುತ್ತದೆ. ಆದರೆ ಉಪಕರದ ಮೊತ್ತವನ್ನು ಬಳಕೆ ಮಾಡಲು ಯಾವುದೇ ನಿಯಮಗಳನ್ನು ರೂಪಿಸಿರಲಿಲ್ಲ.  ಬಿಡಿಎ ೨೦೦೯-೧೦ರಿಂದ ೨೦೧೩-೧೪ರ ಅವಧಿಯಲ್ಲಿ ೩೩.೦೯ ಕೋಟಿ ಮೊತ್ತದ ಉಪಕರವನ್ನು ಸಂಗ್ರಹಿಸಿರಲಿಲ್ಲ. ಕೆರೆಗಳ ಜೀರ್ಣೋದ್ಧಾರಕ್ಕಾಗಿ ಉಪಕರವನ್ನು ಈಗ ಸಂಗ್ರಹಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಉತ್ತರಿಸಿದೆ.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಗಳು  ೨೦೧೨-೧೪ರ ಅವಧಿಯಲ್ಲಿ ಅನುಕ್ರಮವಾಗಿ ೩೮.೭೯ ಲಕ್ಷ ಮತ್ತು ೩.೧೭ ಕೋಟಿ ಉಪಕರವನ್ನು ಸಂಗ್ರಹಿಸಿದ್ದವು. ಆದರೆ ಉಪಕರದ ಬಳಕೆಗೆ ನಿಯಮಗಳನ್ನು ರೂಪಿಸಿರಲಿಲ್ಲವಾದ್ದರಿಂದ ಆ ಮೊತ್ತವು ಬಳಕೆಯಾಗದೇ ಉಳಿದಿತ್ತು.  ಕೆರೆ ಅಭಿವೃದ್ಧಿ ಪ್ರಾಧಿಕಾರವು ಆಗಸ್ಟ್ ೨೦೧೪ರಲ್ಲಿದ್ದಂತೆ ನಾಲ್ಕು  ಕೆರೆಗಳ ಬಾಡಿಗೆದಾರರಿಂದ  ೧೨.೧೮ ಕೋಟಿಯನ್ನು ವಾರ್ಷಿಕ ಗುತ್ತಿಗೆ ಬಾಡಿಗೆಯನ್ನಾಗಿ ಸಂಗ್ರಹಿಸಿತ್ತು. ಆದರೆ ಆ ಮೊತ್ತವನ್ನು ಬಳಸದೇ ಉಳಿಸಿಕೊಳ್ಳಲಾಗಿತ್ತು. ಲಭ್ಯವಿರುವ ಹಣವನ್ನು ಉಪಯೋಗಿಸಲು ಕೆರೆ ಅಭಿವೃದ್ಧಿ ಪ್ರಾಧಿಕಾರವು ಒಪ್ಪಿಕೊಂಡಿದೆ (ಏಪ್ರಿಲ್ ೨೦೧೫).  ಕೆರೆ ಅಭಿವೃದ್ಧಿ ಪ್ರಾಧಿಕಾರವು ಬಡ್ಡಿಯನ್ನೊಳಗೊಂಡಂತೆ ೪೮.೬೪ ಲಕ್ಷ ಮೊತ್ತದ ವಾರ್ಷಿಕ ಬಾಡಿಗೆಯನ್ನು ಇಬ್ಬರು ಬಾಡಿಗೆದಾರರಿಂದ (ಮೆ.ಲುಂಬಿನಿ ಗಾರ್ಡನ್ಸ್ ಲಿಮಿಟೆಡ್ ಮತ್ತು ಮೆ.ಪಾರ್.ಸಿ) ಸಂಗ್ರಹ ಮಾಡಿರಲಿಲ್ಲ. ಲೆಕ್ಕಪರಿಶೋಧನೆಯು ಇದನ್ನು ಗಮನಕ್ಕೆ ತಂದಾಗ ಗುತ್ತಿಗೆದಾರರು ೨೬ ಲಕ್ಷವನ್ನು ಮೇ/ಜೂನ್ ೨೦೧೪ರಲ್ಲಿ ಜಮಾ ಮಾಡಿರುವುದಾಗಿ ಕೆರೆ ಅಭಿವೃದ್ಧಿ ಪ್ರಾಧಿಕಾರ ಉತ್ತರಿಸಿದೆ (ಆಗಸ್ಟ್ ೨೦೧೪). ಅಲ್ಲದೆ, ಹಣವನ್ನು ಜಮಾ ಮಾಡಲು ಗುತ್ತಿಗೆದಾರರಿಗೆ ನೋಟೀಸ್‌ಗಳನ್ನು ಜಾರಿ ಮಾಡಿರುವುದಾಗಿ ಕೆರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿದೆ (ಏಪ್ರಿಲ್ ೨೦೧೫).

Lumbini-2ಬೆಳಗಾವಿಯ ಜಿಲ್ಲಾಧಿಕಾರಿಯವರು ಬೆಳಗಾವಿಯ ಕೋಟೆಕೆರೆಯ ಸಂಬಂಧದ ೩೪.೩೮ ಲಕ್ಷ ಬಾಡಿಗೆಯನ್ನು ಸರ್ಕಾರದ ಲೆಕ್ಕಕ್ಕೆ ಜಮಾ ಮಾಡದೇ ಉಳಿತಾಯ ಖಾತೆಯಲ್ಲಿ ಉಳಿಸಿಕೊಂಡಿದ್ದರು.   ಎನ್‌ಎಲ್‌ಸಿಪಿ ಅಡಿಯಲ್ಲಿ ಭಾರತ ಸರ್ಕಾರವು ಬೆಂಗಳೂರಿನ ಕಾಮಾಕ್ಷಿಪಾಳ್ಯ ಕೆರೆಯ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ೪೪.೦೪ ಲಕ್ಷವನ್ನು ಅನುಮೋದಿಸಿ ಬಿಡುಗಡೆ ಮಾಡಿತು (ಫೆಬ್ರವರಿ ೨೦೦೨). ಕೆರೆ ಅಂಗಳದಲ್ಲಿ ಒತ್ತುವರಿಗಳಿದ್ದುದರಿಂದ ಜೀರ್ಣೋದ್ಧಾರದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಲಿಲ್ಲ. ತತ್ಪರಿಣಾಮವಾಗಿ ಪರ್ಯಾಯ ಕೆರೆಯೊಂದನ್ನು ಅಭಿವೃದ್ಧಿಪಡಿಸುವ ಬೇರೊಂದು ಪ್ರಸ್ತಾವನೆಯನ್ನು ಭಾರತ ಸರ್ಕಾರಕ್ಕೆ ಕಳುಹಿಸಲಾಯಿತು ಆದರೆ ಅದು ತಿರಸ್ಕೃತವಾಯಿತು. ಒತ್ತುವರಿಗಳನ್ನು ತಡೆಯುವಲ್ಲಿನ ರಾಜ್ಯ ಸರ್ಕಾರದ ವಿಫಲತೆಯಿಂದ ಭಾರತ ಸರ್ಕಾರವು ಬಿಡುಗಡೆ ಮಾಡಿದ ಹಣವನ್ನು ಹಿಂತಿರುಗಿಸಿ (ಏಪ್ರಿಲ್ ೨೦೧೪) ಕೆರೆಯ ಜೀರ್ಣೋದ್ಧಾರ ಕಾಮಗಾರಿಗೆ ಪಡೆದುಕೊಂಡಿದ್ದ ಅನುದಾನವನ್ನು ಕಳೆದುಕೊಂಡಂತಾಯಿತು.  ಕೆರೆ ಅಭಿವೃದ್ಧಿ ಪ್ರಾಧಿಕಾರವು ಎನ್‌ಎಲ್‌ಸಿಪಿ ಅನುದಾನದಡಿಯಲ್ಲಿ ಸ್ವೀಕರಿಸಿದ (೨೦೦೨ರಿಂದ ೨೦೧೨) ೬.೯೭ ಕೋಟಿ ಮೊತ್ತವು ಮಾರ್ಚ್ ೨೦೧೪ರಲ್ಲಿದ್ದಂತೆ ಬಳಕೆಯಾಗದೇ ಉಳಿದಿತ್ತು. ಲೆಕ್ಕಪರಿಶೋಧನೆಯು ಇದನ್ನು ತಿಳಿಸಿದಾಗ, ಅನುμನ ಸಂಸ್ಥೆಗಳಿಂದ ಬಳಕೆ ಪ್ರಮಾಣಪತ್ರಗಳನ್ನು ಪಡೆದು, ಬಳಕೆಮಾಡದೇ ಇರುವ ಹಣವೇನಾದರೂ ಇದ್ದಲ್ಲಿ, ಅದನ್ನು ಹಿಂತಿರುಗಿಸಲಾಗುವುದು ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿದೆ (ಏಪ್ರಿಲ್ ೨೦೧೫). ಅಗರ, ಹೆಬ್ಬಾಳ, ನಾಗಾವರ ಮತ್ತು ವೆಂಗಯ್ಯನಕೆರೆ ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ೧೫  ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ   ೨೦೧೫ನೇ ವμದ ವರದಿ ಸಂಖ್ಯೆ-೧ ಕೆರೆಗಳ ಜೀರ್ಣೋದ್ಧಾರಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹಣಕಾಸಿನ ಬೆಂಬಲವನ್ನು ಪಡೆಯುವಲ್ಲಿ ತೊಂದರೆಗಳಿರುವುದನ್ನು ಮುಕ್ತಾಯದ ಸಮಾವೇಶದಲ್ಲಿ ಬಿಬಿಎಂಪಿ ಮತ್ತು ಬಿಡಿಎಗಳ ಆಯುಕ್ತರು ವ್ಯಕ್ತಪಡಿಸಿದರು (ಫೆಬ್ರವರಿ ೨೦೧೫). ಆದರೆ, ಮೇಲಿನ ಪ್ರಕರಣಗಳು ಲಭ್ಯವಿದ್ದ ಸಂಪನ್ಮೂಲವನ್ನೂ ಸಹ ಬಳಸದಿರುವುದನ್ನು ಸೂಚಿಸುತ್ತವೆ.

ನೋಡಿ, ಇದೆಲ್ಲ ಮಾಹಿತಿಯನ್ನು ನೀಡಿರುವುದು ಸರ್ಕಾರದ ಇಲಾಖೆಯೇ. ಒಂದು ಸರ್ಕಾರ ಅಥವಾ ಇಲಾಖೆಗಳ ಲೆಕ್ಕಪರಿಶೀಲನೆ ಮಾಡಿದಾಗ ವಾಸ್ತವ ಅರಿವಿಗೆ ಬರುತ್ತದೆ. ಹಣವಿಲ್ಲದಿದ್ದರೂ ಆಕಾಶ ತೋರಿಸುವ ಅಭಿವೃದ್ಧಿಯ ಮಾತುಗಳೆಲ್ಲ ವಾಸ್ತವ ಅಲ್ಲ ಎಂಬುದು ಸಿಎಜಿ ವರದಿಗಳಿಂದಲೇ ಸಾಬೀತಾಗುತ್ತದೆ. ಆದರೂ ಈ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡೇ ಇಲ್ಲದಿರುವುದು ಬೇಸರದ ಸಂಗತಿ.

 

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*