ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೨೨: ಸಮನ್ವಯ ಕೊರತೆಯೇ ಕೆರೆ ಅಭಿವೃದ್ಧಿಗೆ ಮಾರಕ

ಕೆರೆಗಳನ್ನು ರಕ್ಷಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಗಲೀ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಲಿ ಸೂಕ್ತ ರಕ್ಷಣಾ ವ್ಯವಸ್ಥೆಯನ್ನೇ ಹೊಂದಿಲ್ಲ. ಅಲ್ಲದೆ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಕೆರೆಗಳ ಅಭಿವೃದ್ಧಿ ನಮ್ಮ ವ್ಯಾಪ್ತಿ ಎಂದು ಹೇಳಿಕೊಳ್ಳುವ ಸಂಸ್ಥೆಗಳ ನಡುವೆ ಸಮನ್ವಯತೆಯೇ ಇಲ್ಲ. ಹೀಗಾಗಿ ಬೆಂಗಳೂರಿನ ಕೆರೆಗಳು ಅವನತಿಯತ್ತ ಇಂದೂ ಸಾಗುತ್ತಿವೆ.

KereKaraguvaSamayaಈ ವಾಸ್ತವವನ್ನು ಸಿಎಜಿ ವರದಿ ‘ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ’ಯಲ್ಲಿ ವಿವರಿಸಲಾಗಿದೆ. ಕೆರೆಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ರಕ್ಷಿಸಲು ರಕ್ಷಣಾ ಕ್ರಮಗಳು ಸಾಕಷ್ಟಿಲ್ಲ. ಕೆರೆಗಳ ಜೀರ್ಣೋದ್ಧಾರದಲ್ಲಿ ತೊಡಗಿರುವ ಸಂಸ್ಥೆಗಳ ನಡುವೆ ಸಮನ್ವಯವಿಲ್ಲದಿರುವುದು ಕೆರೆಗಳ ಸಮಗ್ರ ಅಭಿವೃದ್ಧಿ ಮತ್ತು ಜೀರ್ಣೊದ್ಧಾರಕ್ಕೆ ಸಂಬಂಧಪಟ್ಟ ಇಲಾಖೆಗಳ/ಸಂಸ್ಥೆಗಳ ಜೊತೆ ಮಧ್ಯಸ್ಥಿಕೆ ಮತ್ತು ಒಟ್ಟಾರೆ ಕಾರ್ಯಾಚರಣೆಯನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರದ ಉಪನಿಯಮಗಳು ನಿಗದಿಪಡಿಸುತ್ತವೆ. ಆದರೆ ಕೆರೆಗಳ ಜೀರ್ಣೊದ್ಧಾರದಲ್ಲಿ ಸಂಸ್ಥೆಗಳ ನಡುವೆ ಸಮನ್ವಯವಿಲ್ಲರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಅನುμನ ಸಂಸ್ಥೆಗಳಿಂದ ಕೆರೆಗಳಲ್ಲಿ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಸಾಕμ ಆದ್ಯತೆ ಮತ್ತು ಪರಸ್ಪರರಲ್ಲಿ ಸಮನ್ವಯವಿಲ್ಲದೇ ತಾರ್ತ್ಪೂತಿಕವಾಗಿ ಕೈಗೆತ್ತಿಕೊಳ್ಳಲಾಗಿತ್ತು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಈಗಾಗಲೇ ಒಳಚರಂಡಿ ಪೈಪುಗಳನ್ನು ಹಾಕಿರುವ ಕಡೆ ಬಿಬಿಎಂಪಿ ಮತ್ತು ಬಿಡಿಎ ಕೊಳಚೆನೀರಿನ ಮಾರ್ಗಾಂತರ ನಾಲೆಗಳನ್ನು ನಿರ್ಮಿಸಿವೆ. ಕಂದಾಯ ಇಲಾಖೆ ಸಮೀಕ್ಷೆ, ಗಡಿ ಗುರುತಿಸುವುದು ಮತ್ತು ಒತ್ತುವರಿಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸದೆ ಇದ್ದರೂ ಬಿಬಿಎಂಪಿ ಮತ್ತು ಬಿಡಿಎಗಳು ಕೆರೆಗಳಿಗೆ ಬೇಲಿಹಾಕಿವೆ. ಮೀನುಗಾರಿಕೆ ಇಲಾಖೆ ಗುತ್ತಿಗೆ ನೀಡಿರುವ ವಿಚಾರವನ್ನು ಕೆರೆಗಳ ಮೇಲ್ವಿಚಾರಕರೊಂದಿಗೆ ಹಂಚಿಕೊಂಡಿಲ್ಲ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸಭೆಗಳು ಬೆಂಗಳೂರಿನಲ್ಲಿರುವ ಹೆಚ್ಚಿನ ಕೆರೆಗಳು ಬಿಬಿಎಂಪಿ ಮತ್ತು ಬಿಡಿಎಗಳ ಅಭಿರಕ್ಷಣೆಯಲ್ಲಿದ್ದವು. ಬೆಂಗಳೂರಿನಿಂದ ಹೊರಗಿರುವ ಸ್ಥಳೀಯ ಸಂಸ್ಥೆಗಳಲ್ಲಿರುವ (ನಗರಪಾಲಿಕೆಗಳು ಮತ್ತು ನಗರಸಭೆಗಳು) ಕೆರೆಗಳು ಸಂಬಂಧಿತ  ಜಿಲ್ಲಾಧಿಕಾರಿಗಳ ಅಭಿರಕ್ಷಣೆಯಲ್ಲಿರುತ್ತವೆ. ತಮ್ಮ ಅಧಿಕಾರವ್ಯಾಪ್ತಿಯಲ್ಲಿರುವ ಕೆರೆಗಳ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಜಿಲ್ಲಾಧಿಕಾರಿಗಳು ಹೊಣೆಗಾರರಾಗಿರುತ್ತಾರೆ. ಬಿಬಿಎಂಪಿಯು ಸಮರ್ಪಿತ ಪರಿಸರ ಕೋಶವೊಂದನ್ನು ಹೊಂದಿತ್ತು ಮತ್ತು ಕೆರೆಗಳ ಸಂರಕ್ಷಣೆ ಮತ್ತು ಜೀರ್ಣೋದ್ಧಾರದ ಕಾಮಗಾರಿಗಳನ್ನು ಕೆರೆಗಳ ಮುಖ್ಯ ಎಂಜಿನಿಯರ್‌ರವರು ಮೇಲ್ವಿಚಾರಣೆ ಮಾಡುತ್ತಿದ್ದರು. ಆದರೆ ಬಿಡಿಎನಲ್ಲಿ ಕೆರೆಗಳಿಗಾಗಿ ಸಮರ್ಪಿತ ಕೋಶವಿರಲಿಲ್ಲ ಮತ್ತು ನಾಲ್ಕು ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಂದ ನೆರವು ಪಡೆಯುತ್ತಿದ್ದ ಸದಸ್ಯ ಎಂಜಿನಿಯರ್‌ರವರು, ತಮ್ಮ ದಿನನಿತ್ಯದ ಕರ್ತವ್ಯದೊಂದಿಗೆ ಕೆರೆಗಳ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೂ ಹೊಣೆಗಾರರಾಗಿದ್ದರು.  ಪ್ರತಿನಿಯೋಜನೆಯ ಮೇಲಿರುವ ಅರಣ್ಯ ಅಧಿಕಾರಿಗಳ ಹತ್ತಿರದ ಉಸ್ತುವಾರಿಯೊಂದಿಗೆ ಕೆರೆಗಳ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರವು ನಿರ್ದೇಶಿಸಿತ್ತು (ಏಪ್ರಿಲ್ ೨೦೧೦). ಆದರೆ ಬಿಬಿಎಂಪಿ ಮತ್ತು ಬಿಡಿಎಗಳ ಕೆರೆಗಳ ಜೀರ್ಣೋದ್ಧಾರದ ಕಾಮಗಾರಿಗಳಲ್ಲಿ ಅನುಕ್ರಮವಾಗಿ ಕೇವಲ ಮೂರು ಮತ್ತು ಎರಡು ಅರಣ್ಯ ಅಧಿಕಾರಿಗಳನ್ನು ಮಾತ್ರ ತೊಡಗಿಸಿಕೊಳ್ಳಲಾಗಿತ್ತು (೨೦೧೧-೧೨ರವರೆಗೆ). ಅರಣ್ಯ ಇಲಾಖೆ ಸಿಬ್ಬಂದಿಯ ಕೊರತೆಯು ಕೆರೆಗಳ ಸಂರಕ್ಷಣೆ, ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗಾಗಿ ಅವಶ್ಯಕವಿದ್ದ ಪರಿಣಾಮಗಳ ಮೇಲೆ ಪ್ರಭಾವ ಬೀರಿತ್ತು.

Sarakki-1ಬಿಡಿಎ, ಬಿಬಿಎಂಪಿ ಅಥವಾ ಇತರೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಕೆರೆಗಳ ಪರಿಸರ ಜೀರ್ಣೋದ್ಧಾರಕ್ಕೆ ಸಂಬಂಧಿಸಿದ ಯಾವುದೇ ರೀತಿಯ ತರಬೇತಿ ನೀಡಿರಲಿಲ್ಲ. ಈ ಅನುμನ ಸಂಸ್ಥೆಗಳು ಕೈಗೆತ್ತಿಕೊಂಡ ಜೀರ್ಣೋದ್ಧಾರದ ಕಾಮಗಾರಿಗಳು ಎಂಜಿನಿಯರಿಂಗ್ ಕಾಮಗಾರಿಗಳ ಮೇಲೆ ಕೇಂದ್ರೀಕೃತವಾಗಿದ್ದವೇ ಹೊರತು ಪರಿಸರ ಕಾಮಗಾರಿಗಳ ಮೇಲಲ್ಲ. ಬೆಂಗಳೂರಿನಲ್ಲಿ ಆರು ಸರಣಿ ಕೆರೆಗಳಿದ್ದು, ಪ್ರತಿಯೊಂದು ಸರಣಿಯಲ್ಲಿಯೂ ಕೆರೆಗಳ ಸಮೂಹವಿದೆ. ಸರಣಿ ಕೆರೆಗಳ ಜೀರ್ಣೋದ್ಧಾರದ ಕಾಮಗಾರಿಗಳನ್ನು ಮೊದಲು ಮೇಲಿರುವ ಕೆರೆಯ ಜೀರ್ಣೋದ್ಧಾರದ ಕಾಮಗಾರಿಯನ್ನು ಪೂರ್ಣಗೊಳಿಸಿ ನಂತರ ಕೆಳಗಿರುವ ಕೆರೆಯ ಜೀರ್ಣೋದ್ಧಾರದ ಕಾಮಗಾರಿಯನ್ನು ಕೈಗೊಳ್ಳಬೇಕು. ಇದು, ಮೇಲಿನ ಕೆರೆಯಿಂದ ಕೆಳಗಿನ ಕೆರೆಗೆ ಹರಿಯುವ ನೀರು ಮಾಲಿನ್ಯದಿಂದ ಮುಕ್ತವಾಗಿರುವುದನ್ನು ಖಚಿತಪಡಿಸುತ್ತದೆ.  ಆದರೆ ಸರಣಿ ಕೆರೆಗಳನ್ನು ಹಂಚಿಕೆ ಮಾಡುವಾಗ ಮೇಲಿನ ಕೆರೆ ಮತ್ತು ಕೆಳಗಿನ ಕೆರೆಗಳನ್ನು ಎರಡು ಪ್ರತ್ಯೇಕ ಸಂಸ್ಥೆಗಳಿಗೆ (ಬಿಬಿಎಂಪಿ ಮತ್ತು ಬಿಡಿಎ) ನೀಡಿರುವುದನ್ನು ಗಮನಿಸಲಾಯಿತು. ಎರಡೂ ಸಂಸ್ಥೆಗಳ ನಡುವೆ ಯಾವುದೇ ಸಮನ್ವಯವಿಲ್ಲದೇ ಜೀರ್ಣೋದ್ಧಾರದ ಕಾಮಗಾರಿಗಳನ್ನು ಸ್ವತಂತ್ರವಾಗಿ ನಡೆಸಲಾಗಿತ್ತು.  ೨೦೧೦ರ ಆದೇಶದ ಅನ್ವಯ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ನಂತರ ಬಿಡಿಎ ತನ್ನ ಅಧಿಕಾರವ್ಯಾಪ್ತಿಯಲ್ಲಿರುವ ಕೆರೆಗಳನ್ನು ನಿರ್ವಹಣೆಗಾಗಿ ಬಿಬಿಎಂಪಿಗೆ ವರ್ಗಾಯಿಸಬೇಕಿತ್ತು. ಆದರೆ, ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿರುವುದನ್ನು ತಿಳಿಸಿದರೂ ಸಹ ಈವರೆಗೆ (ಫೆಬ್ರವರಿ ೨೦೧೫) ಬಿಬಿಎಂಪಿಯಲ್ಲಿ ಹಣಕಾಸಿನ ಕೊರತೆಯಿರುವುದನ್ನು ಉಲ್ಲೇಖಿಸಿ ವರ್ಗಾವಣೆ ೫ ಮಾಡಿರುವುದಿಲ್ಲ.

ಪರೀಕ್ಷಾ-ತನಿಖೆ ನಡೆಸಿದ ಕೆರೆಗಳಲ್ಲಿ ಬಿಡಿಎ ಮೂರು  ಕೆರೆಗಳಲ್ಲಿ ಅವುಗಳ ಜೀರ್ಣೋದ್ಧಾರದ ಮೇಲೆ ೩೦.೩೧ ಕೋಟಿ ವೆಚ್ಚ ಭರಿಸಿದೆ ಎಂದಿದೆ. ಆದರೆ, ಮೇಲಿನ ಆದೇಶದ ಅನ್ವಯ ಕೆರೆಗಳನ್ನು ಬಿಡಿಎಯಿಂದ ಬಿಬಿಎಂಪಿಗೆ ವರ್ಗಾವಣೆ ಮಾಡದಿದ್ದುದರಿಂದ ಕೆರೆಗಳ ನಿರ್ವಹಣೆಯು ಈ ಎರಡೂ ಸಂಸ್ಥೆಗಳಲ್ಲಿ ಯಾವುದರ ಅಧಿಕಾರವ್ಯಾಪ್ತಿಯಡಿಯೂ ಇರಲಿಲ್ಲವಾಗಿ ಅವುಗಳ ನಿರ್ವಹಣೆಯನ್ನು ನಿರ್ಲಕ್ಷ್ಯ ಮಾಡುವಲ್ಲಿ ಪರಿಣಮಿಸಿತು. ಬಿಬಿಎಂಪಿ ಎಲ್ಲ ಜೀರ್ಣೋದ್ಧಾರ ಮಾಡಲ್ಪಟ್ಟ ಕೆರೆಗಳಿಗೆ ಕಾವಲುಗಾರರನ್ನು ನೇಮಿಸಿರಲಿಲ್ಲ. ಬೇಲಿಯ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ಬಿಬಿಎಂಪಿ ಉತ್ತರಿಸಿದೆ. ಇಂತಹ ರಕ್ಷಣೆ ಯಾರಿಗೆ ಬೇಕು?

ಇದಿಷ್ಟೇ ವೈರುದ್ಧಗಳನ್ನು ಸಿಎಜಿ ವರದಿ ತೋರಿಸಲ್ಲ. ಬದಲಿಗೆ, ಶಿಫಾರಸುಗಳನ್ನೂ ನೀಡಿದೆ: ಕೆರೆಗಳಿಗೆ ಸಂಬಂಧಪಟ್ಟ ಅಭಿವೃದ್ಧಿ ಮತ್ತು ಜೀರ್ಣೋದ್ಧಾರದ ಕಾಮಗಾರಿಗಳನ್ನು ಮೇಲ್ವಿಚಾರಣೆ ಮಾಡಲು ಬಿಡಿಎನಲ್ಲಿ ಕೆರೆ ಜೀರ್ಣೋದ್ಧಾರದ ಕಾಮಗಾರಿಗಳಲ್ಲಿ ಪರಿಣಿತರಾಗಿರುವ ಹೆಚ್ಚಿನ ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಸಮರ್ಪಿತ ಕೋಶವೊಂದನ್ನು ಪ್ರಾರಂಭಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೆರೆಗಳ ಜೀರ್ಣೋದ್ಧಾರದ ಚಟುವಟಿಕೆಗಳಲ್ಲಿ ತೊಡಗಿರುವ ಸಿಬ್ಬಂದಿಯ ಸಾಮರ್ಥ್ಯ ಬಲವರ್ಧನೆಗೆ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸರ್ಕಾರವು ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳನ್ನು ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಂತಹ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವುದನ್ನು ಪರಿಶೀಲಿಸಬೇಕು ಎಂದು ಶಿಫಾರಸು  ಮಾಡಿದೆ. ಆದರೆ, ಕೆರೆ ಅಭಿವೃದ್ಧಿಗೆ ವೆಚ್ಚ ಮಾಡುವಾಗ ಕೋಟಿ ಕೋಟಿ ಹಣ ತೋರಿಸುವ ಬಿಬಿಎಂಪಿ ಹಾಗೂ ಬಿಡಿಎ, ಅದರ ರಕ್ಷಣೆ ಹಾಗೂ ನಿರ್ವಹಣೆ ಮಾಡುವಲ್ಲಿ ವಿಫಲವಾಗಿವೆ. ಹಣ ಖರ್ಚು ಮಾಡಲು ಮಾತ್ರ ಕೆರೆಗಳನ್ನು ಬಳಸಿಕೊಳ್ಳುತ್ತಿರುವುದು ಕೆರೆಗಳ ನಗರಿಯ ಜನರ ದೌರ್ಭಾಗ್ಯ.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*