ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನಿಮಗೆ ಗೊತ್ತೆ ಮೂಲಿಕಾ ಪಾನೀಯ?

ಶುದ್ಧ ಕುಡಿಯುವ ನೀರು ಸಕಲ ಜೀವಿಗಳ ಮೂಲ ಅವಶ್ಯಕತೆ. ಅದಕ್ಕೆ, ಪಾನೀಯಂ ಪ್ರಾಣಿನಾಂ ಪ್ರಾಣ: ಎನ್ನುತ್ತಾರೆ. ಆದರೆ, ಇಂದು ಶುದ್ಧ ನೀರು ವಿರಳವಾಗಿದೆ. ಹೀಗಾಗಿ ಶುದ್ಧ ಕುಡಿಯುವ ನೀರು (ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್) ಶುದ್ಧತೆಯ ಭರವಸೆಯೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬಾಟಲಿಯ ಶುದ್ಧ ಕುಡಿಯುವ ನೀರಿನ ಇನ್ನೊಂದು ವಿಧ ಹರ್ಬಲ್ ಡ್ರಿಂಕ್ ಅಥವಾ ಮೂಲಿಕಾ ಪಾನೀಯ.

ನೀರು ಸಕಲ ಜೀವ ಜಂತುಗಳಿಗೂ ಬೇಕು. ಈ ನೀರು ಶುದ್ಧವಾಗಿರಬೇಕು. ಆದರೆ, ಇಂದು ನಾನಾ ಕಾರಣಗಳಿಂದ ಶುದ್ಧ ನೀರು ದುರ್ಲಭ. ಅಶುದ್ಧ ನೀರು ಸೇವನೆ ಹಲವು ರೋಗ ರುಜಿನಗಳಿಗೆ ಕಾರಣ. ಅಶುದ್ಧ ನೀರಿನ ಕಾರಣದಿಂದ ಸಾವು – ನೋವುಗಳೂ ಸಂಭವಿಸುತ್ತಿವೆ.  ಇಂಥ ಸನ್ನಿವೇಶದಲ್ಲಿ, ಬಾಟಲಿಯ ಖನಿಜಯುಕ್ತ ನೀರು ಶುದ್ಧತೆಯ ಬರವಸೆಂಂದಿಗೆ ನಮಗೆ ಪರಿಚಿತವಾಗಿದೆ. ಶುದ್ಧ ಕುಡಿಂವ ನೀರಿನ ಮೌಲ್ಯವರ್ಧಿತ ರೂಪ ಮೂಲಿಕಾ ಪಾನೀಯ ಅಥವಾ ಹರ್ಬಲ್  ಡ್ರಿಂಕ್.

WATERಹಲವು ಬಗೆಯ ಮೂಲಿಕೆಗಳನ್ನು ನೀರಿನೊಂದಿಗೆ ಮಿತ ಪ್ರಮಾಣದಲ್ಲಿ ಸೇರಿಸಲಾಗಿರುತ್ತದೆ. ಅವುಗಳೆಂದರೆ, ಲಾವಂಚ, ಭದ್ರಮುಷ್ಟಿ, ನೆಲ್ಲಿಕಾಯಿ, ಕೊತ್ತಂಬರಿ, ಶುಂಠಿ, ಲವಂಗ ಏಲಕ್ಕಿ ಇತ್ಯಾದಿ. ಶುದ್ಧ ನೀರಿನ ಜತೆ ಔಷಧೀಯ ಗುಣಗಳುಳ್ಳ ಮೂಲಿಕೆ ಸೇರಿಸಿ ತಯಾರಿಸಿದ್ದೇ ಮೂಲಿಕಾ ಪಾನೀಯ.

ಒಂದೊಂದು ಮೂಲಿಕೆಗೆ ಒಂದೊಂದು ರೀತಿಯ ಮಹತ್ವ, ವಿಶೇಷತೆಯಿದೆ. ಲಾವಂಚ ದಾಹ ಶಮನ ಮಾಡುತ್ತದೆ. ಅತೀ ಬೆವರುವಿಕೆಂನ್ನು ತಡೆಯುತ್ತದೆ. ಭದ್ರಮುಷ್ಟಿ ಜೀರ್ಣಕ್ರಿಯೆ ಚುರುಕುಗೊಳಿಸುತ್ತದೆ. ಕೊತ್ತಂಬರಿ ದೇಹವನ್ನು ತಂಪಾಗಿ ಇಡಲು ಪೂರಕ. ನೆಲ್ಲಿಕಾಯಿ ಹಸಿವಿನ ಶಕ್ತಿ ಹೆಚ್ಚಿಸುತ್ತದ. ಶುಂಠಿ ಮತ್ತು ಲವಂಗ ಅಜೀರ್ಣ ತಡೆಯುತ್ತದೆ. ಇದರ ಜೊತೆಗೆ, ಇನ್ನೂ ಹತ್ತು ಹಲವು ಉಪಯೋಗಳಿವೆ ಈ ಮೂಲಿಕೆಗಳಿಂದ. ಶುದ್ಧ ಕುಡಿಯುವ ನೀರಿನೊಂದಿಗೆ ಈ ಎಲ್ಲ ಮೂಲಿಕೆಗಳ ಔಷಧೀಯ ಗುಣ ನಮ್ಮ ದೇಹಕ್ಕೆ ಹೋಗುತ್ತದೆ. ಬೇಸಿಗೆ ಸಮಯದಲ್ಲಿ, ಪ್ರಯಾಣದ ವೇಳೆ ಸೇರಿದಂತೆ, ನಿತ್ಯ ಜೀವನದಲ್ಲಿ ಮೂಲಿಕಾ ಪಾನೀಯ ಹೆಚ್ಚು ಚೈತನ್ಯ ನೀಡುತ್ತದೆ. ನೀರಿಗೆ ಮೂಲಿಕೆಗಳನ್ನು ಸೇರಿಸುವುದರಿಂದ, ರುಚಿ ಕೊಂಚ ಬದಲಾಗುತ್ತದೆ. ಈ ರುಚಿಯು ಆಹ್ಲಾದಕರ.

ಮೂಲಿಕಾ ಪಾನೀಯಕ್ಕೂ ನೀರಿನ ಬಣ್ಣವೇ ಇರುತ್ತದೆ. ಇದು ಮಿನರಲ್ ವಾಟರ್ ಕೂಡ ಹೌದು. ಶುದ್ಧೀಕರಿಸಿ ನೀರಿಗೆ ವಿವಿಧ ರೀತಿಯ ಮೂಲಿಕೆಗಳನ್ನು ಮಾತ್ರ ಸೇರಿಸಲಾಗುತ್ತದೆ. ಆದರೆ, ನೀರಿನ ಹೆಚ್ಚುವರಿ ಮಿನರಲ್ ಸೇರಿಸುವುದಿಲ್ಲ ಎನ್ನುತ್ತಾರೆ ಸತ್ವಂ ಮೂಲಿಕಾ ಪಾನೀಯ ತಯಾರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಹಾರ್ದಿಕ್ ಹರ್ಬಲ್ಸ್ ಮಾಲೀಕ, ಮುರಳೀಧರ ಕೆ.

 ಚಿತ್ರ-ಲೇಖನ: ವಿಶ್ವಾಮಿತ್ರ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*