ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬೀದರಿನ ನೀರಿನ ಸಮಸ್ಯೆಯನ್ನು ನೀಗಿಸಲು ಹಳೆಯ ಬಾವಿಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ

ಜಲಧರಗಳನ್ನು ಮೇಲಕ್ಕೆ ತರಲು ಹಾಗೂ ನೀರ ನಿರ್ವಹಣೆಯ ಪುರಾತನ ಸಂಪ್ರದಾಯದ ರಕ್ಷಣೆಗಾಗಿ, ಸಾರ್ವಜನಿಕ ಸ್ಥಳಗಳಲ್ಲಿರುವ ತೆರೆದ ಬಾವಿಗಳನ್ನು ಸಂರಕ್ಷಿಸುವ ಯೋಜನೆಯನ್ನು ಜಿಲ್ಲಾಡಳಿತವು ಪ್ರಾರಂಭಿಸಿದೆ.

bidar ashtur wellಈ ವರ್ಷದ ತೀವ್ರ ಬರಗಾಲದ ಪರಿಸ್ಥಿಗಳನ್ನು ಎದುರಿಸುವ ಸಲುವಾಗಿ, ಇನ್ನೂ ಅಸ್ತಿತ್ವದಲ್ಲಿರುವ ಸುಮಾರು ೫೦೦ ವರ್ಷಗಳಷ್ಟು ಪುರಾತನವಾದ ಬಾವಿಗಳನ್ನು ಸ್ವಚ್ಛಗೊಳಿಸುವ ಯೋಜನೆಯನ್ನು ಅಧಿಕಾರಿಗಳು ಪ್ರಾರಂಭಿಸುವಂತೆ ಮಾಡಿದೆ. ವರ್ಷಾಂತರಗಳಲ್ಲಿ ಅವು ಒಣಗಿ, ಅವುಗಳಲ್ಲಿ ಅನೇಕ ಬಾವಿಗಳನ್ನು ಕಸ ಸುರಿಯುವ ತಾಣಗಳಾಗಿ ಮಾರ್ಪಾಡಾಗಿವೆ.

ನಗರ ಪರಂಪರಾ ನಿರ್ವಹಣಾ ವರದಿಯ ಪ್ರಕಾರ, ಕೆಲವು ದಶಕಗಳ ಹಿಂದೆ ಇಡೀ ನಗರದ ಅಂತರ್ಜಲಕ್ಕೆ ಈ ತೆರೆದ ಬಾವಿಗಳಿಂದ ನೀರು ಪೂರೈಕೆ ಆಗುತ್ತಿತ್ತು.  ಇದಕ್ಕೆ ಕಾರಣ, ೭೦-ಅಡಿ ಎತ್ತರದ ವ್ಯಾಪನವಾಗುವ ಜಂಬಿಟ್ಟಿಗೆಯ (ಪರ್ಮಿಯೆಬಲ್ ಲ್ಯಾಟರೈಟ್) ಶಿಲೆಯ ಮೇಲಿನ ಬ್ಯಾಸಾಲ್ಟ್ (ಅಗ್ನಿಪರ್ವತ ಮೂಲದ ಅಗ್ನಿಶಿಲೆ) ಶಿಲೆಯ ಪದರದ ಮೇಲೆ ನಗರ ನಿಂತಿರುವುದು.  ಈ ಶಿಲಾ ಪದರಗಳ ನಡುವಣ ಅಂತರಗಳಲ್ಲಿ ನೀರನ್ನು ಹೊರುವ ಅಸಂಖ್ಯಾತ ಲೈನಾಮೆಂಟ್ಸ್‌ನ ಹಂದರಗಳು ಇವೆ.

ಉಪಾಯುಕ್ತರಾದ ಅನುರಾಗ್ ತಿವಾರಿ ಹೇಳುವಂತೆ, “ದೀರ್ಘಾವಧಿಯಲ್ಲಿ, ಪಾರಂಪರಿಕ ನೀರಿನ ವ್ಯವಸ್ಥೆಗಳನ್ನು ಬಳಸುವುದು ಸುಸ್ಥಿರ ವಿಧಾನವಾಗಿ ಸಾಬೀತಾಗುವುದು. ಪಾರಂಪರಿಕ ವಿಧಾನಗಳನ್ನು ಸಚೇತನಗೊಳಿಸುವ ಮೂಲಕ, ಅಂತರ್ಜಲ ಮಟ್ಟವನ್ನು ಮರುಪೂರಣಗೊಳಿಸಿದಂತೆ ಆಗುತ್ತದೆ.  ೭೦ ಅಡಿಯಲ್ಲಿ ನೀರು ಲಭ್ಯವಿದೆಯೆಂದು ಜನರಿಗೆ ಅರಿವು ಮೂಡಿಸುವ ಮೂಲಕ, ಕೊಳವೆಬಾವಿಗಳನ್ನು ತೋಡುವ ಜನರ ಪರಿಪಾಠವನ್ನು ತಪ್ಪಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.”

ಸರ್ಕಾರೇತರ ಸಂಸ್ಥೆಯಾದ ‘ಟೀಮ್ ಯುವಾ’ದ ಸಹಯೋಗದೊಂದಿಗೆ, ಈ ಯೋಜನೆಯನ್ನು ಕೈಗೆತ್ತಿಕೊಂಡ ನಿರ್ಮಿತ ಕೆಂದ್ರವು, ನಗರದಲ್ಲಿ ಗುರುತಿಸಲಾದ ೧೭೦ ಸಾರ್ವಜನಿಕ ಬಾವಿಗಳ ಪೈಕಿ, ೭೦ರ ಸ್ವಚ್ಛತೆ ಹಾಗೂ ಹೂಳೆತ್ತುವ ಕಾರ್ಯವನ್ನು ಮಾಡುವಲ್ಲಿ ಯಶಸ್ವಿಯಾಗಿದೆ.  ಅವುಗಳ ಪೈಕಿ, ಕನಿಷ್ಠ ಅರ್ಧದಷ್ಟು ಬಾವಿಗಳಲ್ಲಾದರೂ ನೀರು ಬರುತ್ತಿದೆ.

ನಿರ್ಮಿತಿ ಕೇಂದ್ರದ ಅಭಿಯಂತರರಾದ ಮೊಹಮ್ಮದ್ ಒಮರ್, “ಬಹುತೇಕ ಬಾವಿಗಳು ನೆಲದ ಮಟ್ಟದಲ್ಲಿತ್ತು.  ಹಾಗಾಗಿ, ಅದರ ಸುತ್ತ ದಿಡ್ಡಿ ಗೋಡೆಗಳನ್ನು ನಿರ್ಮಿಸಿ, ಅವುಗಳನ್ನು ದಪ್ಪನೆಯ ಕಂಬಿ ಮೆಷ್‌ನಿಂದ ಮುಚ್ಚಿಸುತ್ತಿದ್ದೇವೆ.  ಒಳಗೆ ತ್ಯಾಜ್ಯವನ್ನು ಜನರು ಎಸೆಯಬಾರದೆಂಬ ಫಲಕಗಳನ್ನು ನಾವು ಹಾಕಿದ್ದೇವೆ,” ಎನ್ನುತ್ತಾರೆ.

“ನೀರಿರುವ ಪ್ರತಿ ಬಾವಿಯನ್ನೂ ಕಿರು ನೀರು ಸರಬರಾಜು ಯೋಜನೆಯಾಗಿ ಪರಿಗಣಿಸುತ್ತಿದ್ದೇವೆ.  ಅದರ ಪಕ್ಕದಲ್ಲಿ ಒಂದು ನೀರು ತೊಟ್ಟಿ ಅಥವಾ ಟ್ಯಾಂಕ್‌ನ್ನು ಹಾಕಿ, ಬಾವಿಯೊಳಗೆ ಸಬ್ಮರ್ಸಿಬಲ್ ಪಂಪನ್ನು ಇಳಿಸಲಾಗುತ್ತಿದೆ.  ಪ್ರತಿ ಎರಡು ದಿನಗಳಿಗೊಮ್ಮೆ ನೀರು ತೊಟ್ಟಿಯನ್ನು ತುಂಬಲಾಗುತ್ತದೆ ಹಾಗೂ ಅದರಿಂದ ಸುತ್ತಮುತ್ತಲಿರುವ ಕುಟುಂಬಗಳು ನೀರನ್ನು ಶೇಖರಣೆ ಮಾಡಿಕೊಳ್ಳಬಹುದು,” ಎಂದು ನಗರ ಪುರಸಭಾ ಮಂಡಳಿಯ (ಸಿಎಮ್‌ಸಿ) ಆಯುಕ್ತರಾದ ಬಿ. ಬಸಪ್ಪ ‘ದ ಹಿಂದು’ಗೆ ಹೇಳಿದರು.

“ಅಂತರ್ಜಲವನ್ನು ಪಡೆಯಲು ಅಗೆದ ಪ್ರತಿ ಒಂದು ಕ್ಯೂಬಿಕ್ ಮೀಟರ್‌ಗೂ, ೯೦೧ ಲೀಟರ್‌ಗಳಷ್ಟು ನೀರು ದೊರೆಯುತ್ತಿದೆ ಎಂದು ಜಲತಜ್ಞರು ತಿಳಿಸಿದ್ದಾರೆ.  ಹಾಗಾಗಿ, ಪುರಾತನ ಬಾವಿಗಳ ಪುನರುಜ್ಜೀವನವು ಇಲ್ಲಿಯವರೆಗೂ ಸುಮಾರು ನಾಲ್ಕು ಲಕ್ಶ ಲೀಟರ್ ನೀರನ್ನು ನೀಡಿದೆ,” ಎಂದು ಟೀಮ್ ಯುವಾದ ಸಂಚಾಲಕರಾದ ವಿನಯ್ ಮಾಲ್ಗೆ ತಿಳಿಸುತ್ತಾರೆ.  “ಅವುಗಳ ಪೈಕಿ ಕನಿಷ್ಠ ೨೦ ಬಾವಿಗಳಲ್ಲಾದರೂ ಎಷ್ಟು ನೀರಿದೆ ಎಂದರೆ, ಸುಮಾರು ಪ್ರತಿ ಗಂಟೆಗೊಮ್ಮೆ ೨೦,೦೦೦ ಲೀಟರ್ ನೀರನ್ನು ಹೆವಿ ಡ್ಯೂಟಿ ಪಂಪ್‌ಗಳಿಂದ ನೀರನ್ನು ಹೊರತೆಗೆಯಲಾಗುತ್ತಿದೆ.  ಇದೇ ನೀರನ್ನು ಕಿರು ನೀರು ಸರಬರಾಜು ಯೋಜನೆಗಳು ಅಥವಾ ಪೈಪ್‌ಲೈನುಗಳ ಮೂಲಕ ಮನೆಗಳಿಗೆ ಸರಬರಾಜು ಆಗುತ್ತಿದೆ,” ಎಂದರು.

ನಗರದಲ್ಲಿ ಇರುವ ಬಾವಿಗಳ ನಿಖರ ಸಂಖ್ಯೆಯ ಮಾಹಿತಿಯು ಸಿ.ಎಮ್.ಸಿ. ಬಳಿ ಇಲ್ಲ.  ಕೊಳಾಯಿ ನೀರನ್ನು ಬಳಸುವ ಕುಟುಂಬಗಳ ಸಂಖ್ಯೆಯ ಆಧಾರದ ಮೇಲೆ, ಸುಮಾರು ೨೨,೦೦೦ ವಸತಿ ಘಟಕಗಳಿರುವ, ಹಾಗೂ, ೫,೦೦೦ ಖಾಸಗಿ ಬಾವಿಗಳು ಮತ್ತು ೩೦೦ ಸಾರ್ವಜನಿಕ ಬಾವಿಗಳು ನಗರದಲ್ಲಿ ಇವೆಯೆಂದು ಅಂದಾಜು ಮಾಡಿದ್ದಾರೆ.  ಹಳೆಯ ನಗರ ಪ್ರದೇಶದಲ್ಲಿ ಹೆಚ್ಚು ಹಳೆಯ ಬಾವಿಗಳಿವೆ.  ನಗರದ ಎರಡೂ ಭಾಗಗಳಲ್ಲಿ ಸಾರ್ವಜನಿಕ ಬಾವಿಗಳ ಪುನರುಜ್ಜೀವನ ಮಾಡಲಾಗುವುದು,” ಎಂದು ಶ್ರೀ. ತಿವಾರಿ ಅವರು ತಿಳಿಸಿದ್ದಾರೆ.

ಮೂಲ ಲೇಖನ: ಋಷಿಕೇಶ್ ಬಹಾದ್ದೂರ್ ದೇಸಾಯಿ

ಮೂಲ ಲೇಖನ ಕೃಪೆ:

 http://m.thehindu.com/news/national/karnataka/old-wells-being-rejuvenated-to-meet-water-crisis-in-bidar/article8456901.ece

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*