ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ವೇದಗಳಲ್ಲಿನ ಪರಿಸರ ವಿಜ್ಞಾನ

ನೀರು ಎಲ್ಲ ಜೀವರಾಶಿಗಳಿಗೂ ಅತ್ಯಗತ್ಯ. ಋಗ್ವೇದದ ಪ್ರಕಾರ, ಮಾನವ ಪರಿಸರದ ಭಾಗವಾಗಿ ನೀರು ಐದು ರೂಪಗಳಲ್ಲಿ ದೊರೆಯುತ್ತದೆ:

೧.        ಮಳೆ ನೀರು (ದಿವ್ಯಃ)

೨.         ನೈಸರ್ಗಿಕ ಚಿಲುಮೆ (ಶ್ರವಂತಿ)

೩.         ಬಾವಿಗಳು ಹಾಗೂ ನಾಲೆಗಳು (ಖನಿತ್ರಿಮಃ)

೪.        ಕೆರೆಗಳು (ಸ್ವಯಂಜ)

೫.        ನದಿಗಳು (ಸಮುದ್ರತಃ)

 ವೇದಗಳಲ್ಲಿನ ಪರಿಸರ ವಿಜ್ಞಾನದ ಮೂಲ ೧೬೩

ತೈತ್ತಿರೀಯ ಹಾಗೂ ಅರಣ್ಯಕ೩೦ ಉಪನಿಷತ್ತುಗಳಲ್ಲಿ, ಮತ್ತು, ಯಜುರ್ವೇದ೩೧ ಹಾಗೂ ಅಥರ್ವವೇದಗಳಲ್ಲೂ ಕುಡಿಯುವ ನೀರು, ಔಷಧೀಯ ನೀರು, ಲಾಳದ ನೀರು, ಇತ್ಯಾದಿಯಾಗಿ ನೀರನ್ನು ವಿಂಗಡಿಸಲಾಗಿದೆ. ನೀರಿನ ಗುಣಗಳ ಬಗ್ಗೆ ಛಾಂದ್ಯೋಗ್ಯ ಉಪನಿಷತ್ತಿನಲ್ಲಿ ವಿವರಿಸಲಾಗಿದೆ. ‘ನೀರು ಆನಂದದ ಹಾಗೂ ಆರೋಗ್ಯವಂತ ಜೀವನ ನಡೆಸುವ ಮೂಲ. ಗಿಡಗಂಟೆಗಳು, ಹುಳಹುಪ್ಪಟೆಗಳು, ಪಕ್ಷಿಗಳು, ಪ್ರಾಣೀಗಳು, ಮನುಷ್ಯರು, ಇತ್ಯಾದಿ ಎಲ್ಲ ಸಾವಯವ ಜೀವಿಗಳಿಗಳ ಅಸ್ತಿತ್ವಕ್ಕೂ ನೀರೇ ಕಾರಣ. ಬೆಟ್ಟಗಳು, ಭೂಮಿ, ವಾಯುಮಂಡಲ ಹಾಗೂ ಆಕಾಶಕಾಯಗಳಲ್ಲೂ ನೀರು ಮೂರ್ತ ರೂಪದಲ್ಲಿದೆ೩೩. ನೀರಿನ ಚಕ್ರವನ್ನು ವರ್ಣಿಸಲಾಗಿದೆ. ಸಾಗರದಿಂದ ನೀರು ಆಕಾಶಕ್ಕೆ ಹೋಗುತ್ತದೆ ಹಾಗೂ ಆಕಾಶದಿಂದ ಮರಳಿ ಭೂಮಿಗೆ ಬರುತ್ತದೆ೩೪. ಮಳೆನೀರನ್ನು ವೈಭವೀಕರಿಸಲಾಗಿದೆ. ಮಳೆಯ ಮೋಡವನ್ನು ಪರ್ಜನ್ಯ ದೇವರೆಂದು ಚಿತ್ರಿಸಲಾಗಿದೆ.

ಇಂದ್ರ ಹಾಗೂ ವೃತ್ರರ ನಡುವಣ ಕಾಳಗವು ಋಗ್ವೇದದಲ್ಲಿರುವ ಹೆಸರಾಂತ ಕಥೆಗಳಲ್ಲಿ ಒಂದು. ಅದನ್ನು ಅನೇಕ ರೀತಿಗಳಲ್ಲಿ ವಿವರಿಸಲಾಗಿದೆ. ಒಂದು ಅಭಿಪ್ರಾಯದ ಪ್ರಕಾರ, ಅದು ನೀರಿಗಾಗಿ ನಡೆದ ಕಾಳಗ. ಆಪ್ಸು-ಜಿತ್ ಅಥವಾ ನೀರನ್ನು ಗೆದ್ದವನೆಂದು ಇಂದ್ರನನ್ನು ಕರೆಯಲ್ಪಟ್ಟರೆ, ವೃತ್ರ ನೀರನ್ನು ಆವರಿಸಿಕೊಳ್ಳುತ್ತಾನೆ. ವೃತ್ರ ಮಳೆಯನ್ನು ಹಿಡಿದಿಟ್ಟು, ನೀರನ್ನು ಮುಚ್ಚಿ, ತಪ್ಪು ಮಾಡಿದ ಕಾರಣದಿಂದ, ತನ್ನ ಅಸ್ತ್ರವಾದ ವಜ್ರಾಯುಧ, ಅಂದರೆ, ಸಿಡಿಲಿನಿಂದ ಇಂದ್ರನು ವೃತ್ರನನ್ನು ಕೊಲ್ಲುತ್ತಾನೆ. ಆಕಾಶದಲ್ಲಿ ನಡೆಯುವ ನೈಸರ್ಗಿಕ ವಿದ್ಯಮಾನಗಳನ್ನು ಇಂದ್ರ-ವೃತ್ರರ ಕಾಳಗವು ಪ್ರತಿನಿಧಿಸುತ್ತದೆ. ಇಂದ್ರನ ಯತ್ನಗಳಿಂದ, ಎಲ್ಲ ಏಳು ನದಿಗಳೂ ಹರಿಯುತ್ತವೆ. ನೀರಿನ ಹರಿವು ನಿಲ್ಲಬಾರುದೆಂಬುದೇ ಮುನುಕುಲದ ಇಚ್ಛೆ. ನೀರಿನ ಮಹತ್ವವು ವೇದದ ಋಷಿಗಳಿಗೆ ತಿಳಿದಿತ್ತು. ನೀರನ್ನು ಅಮೃತವೆಂದು ಅವರು ಹೇಳಿದ್ದಾರೆ೩೫. ನೀರು ಎಲ್ಲ ಸಸ್ಯಸಂಕುಲದ ಮೂಲ ಹಾಗೂ ಉತ್ತಮ ಆರೋಗ್ಯವನ್ನು ನೀಡುತ್ತದೆ೩೬. ನೀರು ಎಲ್ಲ ರೀತಿಯ ರೋಗಗಳನ್ನೂ ನಿರ್ಮೂಲನೆ ಮಾಡುತ್ತದೆ೩೭. ನೀರಿನಿಂದ ಶುದ್ಧೀಕರಣವಾಗುತ್ತದೆ೩೮. ನಂತರ ಉಂಟಾದ ನದಿ-ದಡಗಳ ತೀರ್ಥಯಾತ್ರೆಯ ಸಾಂಸ್ಕೃತಿಕ ಸಂಪ್ರದಾಯವು ಈ ಪರಿಕಲ್ಪನೆಯ ಮೇಲೆ ಬೆಳೆಯಿತೆಂದು ತೋರುತ್ತದೆ. ನೀರನ್ನು ಜೀವಸೆಲೆಯೆಂದು ಅರಿತ ಪುರಾತನ ಭಾರತೀಯರು, ಅದನ್ನು ಎಲ್ಲ ರೀತಿಯ ಮಾಲಿನ್ಯದಿಂದ ಶುದ್ಧ ಹಾಗೂ ಸ್ವಚ್ಛವಾಗಿ ಕಾಪಾಡಿಕೊಳ್ಳಬೇಕೆನ್ನುವುದರ ಬಗ್ಗೆ ಬಹಳ ಒತ್ತು ನೀಡಿದರು. ನೀರನ್ನು ಶುದ್ಧವಾಗಿ ಇಡುವ ಅನೇಕ ಸಂದರ್ಭಗಳನ್ನು ಕುರಿತಾಗಿ ಮನುಸ್ಮೃತಿಯಲ್ಲಿ ಒತ್ತು ನೀಡಲಾಗಿದೆ೩೯. ಪದ್ಮಪುರಾಣದಲ್ಲಿ ನೀರಿನ ಮಾಲಿನ್ಯವನ್ನು ಬಲವಾದ ಶಬ್ದಗಳಲ್ಲಿ ಹೀಗೆ ಹೇಳಲಾಗಿದೆ, ‘ಕೊಳಗಳು, ಬಾವಿಗಳು ಅಥವಾ ಕೆರೆಗಳನ್ನು ಮಲಿನಗೊಳಿಸುವ ವ್ಯಕ್ತಿಯು ನರಕಕ್ಕೆ ಹೋಗುತ್ತಾನೆ.’೪೦

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*