ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಶೌಚಾಲಯದಿಂದ ಕೊಳಾಯಿಗೆ: ಕುಡಿಯುವ ನೀರಿನ ಭವಿಷ್ಯ ಇದೇ ಏನು?

ಸಿಂಗಾಪುರ್ ಅದನ್ನು ಮಾಡಿದೆ, ಅಮೇರಿಕಾದ ಆರೆಂಜ್ ಕೌಂಟಿಯಲ್ಲೂ ಕೂಡ ಆಗಿದೆ.  ಗಗನಯಾತ್ರಿಗಳೂ ಕೂಡ ಇದನ್ನೇ ಮಾಡಿದ್ದಾರೆ. ಅದೇನು ಗೊತ್ತೇ – ಮರುಸಂಸ್ಕರಣೆ ಮಾಡಿದ ತ್ಯಾಜ್ಯ ನೀರು! ಹಾಗಿದ್ದರೆ, ಭಾರತದಲ್ಲೂ ಇದು ವಾಸ್ತವವಾಗುತ್ತದೆಯೇ? (more…)

೨೦೧೬ ಸಾಲಿನ ಭಗೀರಥ್ ಪ್ರಯಾಸ್ ಸಮ್ಮಾನ್ (ಬಿಪಿಎಸ್) ಪ್ರಶಸ್ತಿ

ಇಂಡಿಯಾ ರಿವರ್ ವಾಟರ್ಸ್ (ಐ.ಆರ್.ಡಬ್ಲ್ಯು/IRW) ಆಯೋಜನಾ ಸಮಿತಿಯು, ನದಿ ಸಂರಕ್ಷಣೆಯನ್ನು ಕುರಿತಾಗಿ ದೇಶದಲ್ಲಿ ಕೈಗೊಳ್ಳಲಾದ ಅಭೂತಪೂರ್ವವಾದ, ಇನ್ನೂ ಬೆಳಕಿಗೆ ಬರದ ಯತ್ನಗಳನ್ನು ಗುರುತಿಸುವ ಸಲುವಾಗಿ, ಇನ್ಟಾಕ್ (INTACH), ಪೀಸ್ ಇನ್ಸ್ಟಿಟ್ಯೂಟ್ ಚ್ಯಾರಿಟೆಬಲ್ ಟ್ರಸ್ಟ್ (PEACE Institute Charitable Trust), ಟಾಕ್ಸಿಕ್ಸ್ ಲಿಂಕ್ (Toxics Link), ಎಸ್.ಎ.ಎನ್.ಡಿ.ಆರ್.ಪಿ (SANDRP) ಹಾಗೂ ಡಬ್ಲ್ಯು.ಡಬ್ಲ್ಯು.ಎಫ್ ಇಂಡಿಯಾದೊಂದಿಗೆ (WWF-India) ಜಂಟಿಯಾಗಿ ಭಗೀರಥ್ ಪ್ರಯಾಸ್ ಸಮ್ಮಾನ್ (ಬಿಪಿಎಸ್) ಪ್ರಶಸ್ತಿಯನ್ನು ೨೦೧೪ರಿಂದ ನೀಡುತ್ತ ಬಂದಿದೆ.  ಈ ವರ್ಷ ಆಯೋಜನಾ ಸಮಿತಿಯು ಇಂಡಿಯಾ ರಿವರ್ಸ್ ವೀಕ್ ಅನ್ನು ನವೆಂಬರ್ ೨೮-೩೦ರಂದು ನವದೆಹಲಿಯಲ್ಲಿ ನಡೆಸುವ ಯೋಜನೆಯನ್ನು ಹೊಂದಿದೆ

ಅದರ ಅಂಗವಾಗಿ, ಈ ವರ್ಷದ, ಅಂದರೆ ೨೦೧೬ರ ಪ್ರಶಸ್ತಿಗಾಗಿ ನಾಮ ನಿರ್ದೇಶನಗಳನ್ನು ಕಳುಹಿಸಲು ಕೊನೆಯ ದಿನಾಂಕ ಜುಲೈ ೧೫, ೨೦೧೬. ಅದನ್ನು ಕಳುಹಿಸಬೇಕಾದ ಈಮೇಲ್ ವಿಳಾಸ: suresh@wwfindia.net ಹಾಗೂ ಇದರ ಪ್ರತಿಯನ್ನು indiariversweek2014@gmail.com ಈ ಈಮೇಲ್ ವಿಳಾಸಕ್ಕೂ ಕಳುಹಿಸಬೇಕು.

ವಾಟರ್ ಲಾಸ್ (ನೀರಿನ ನಷ್ಟ) – ೨೦೧೬ ಅಂತರರಾಷ್ಟ್ರೀಯ ವಿಚಾರ ಸಂಕಿರಣ

ರಾಜ್ಯದ ರಾಜಧಾನಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನೀರಿನ ಸೋರಿಕೆ ತಡೆಗಟ್ಟುವ ಉದ್ದೇಶದಿಂದ ಆಯೋಜಿಸಿದ್ದ ವಾಟರ್ ಲಾಸ್-೨೦೧೬ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಸೋಮವಾರ ಉದ್ಘಾಟಿಸಲಾಯಿತು.  ಫ಼ೆಬ್ರವರಿ ೩ರವರೆಗೆ ನಡೆಯಲಿರುವ ಈ ಸಂಕಿರಣದಲ್ಲಿ, ದೇಶ ವಿದೇಶದ (more…)

ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್’ ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.

ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್’ ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.

ನಾಗರಿಕತೆಗಳು ಬೆಳೆದಂತೆ ಅರಣ್ಯಗಳು ಹಿಮ್ಮೆಟ್ಟುತ್ತವೆಮರಭೂಮಿಗಳು ಹಿಂಬಾಲಿಸುತ್ತವೆ.”
ಖ್ಯಾತ ಪರಿಸರವಾದಿ ಡಾಕೋಟ ಶಿವರಾಮ ಕಾರಂತರು ಒತ್ತು ಕೊಟ್ಟು  ಮಾತನ್ನು ಹೇಳುತ್ತಿದ್ದರು


ಇತ್ತೀಚಿನ
 ನಮ್ಮ `ನೀರ ಹೋರಾಟ’ ಅವಲೋಕಿಸಿದರೆ ಇಷ್ಟು ಬೇಗ ಆ ಮಾತನ್ನು ಅನುಭವಿಸುವ ಪಾಳಿ ನಮ್ಮದಾಗುತ್ತದೆ ಎಂದು ನಾವ್ಯಾರೂ ಭಾವಿಸಿರಲಿಲ್ಲ. ಅಣ್ಣಿಗೇರಿ ಬಳಿಯ ಹಳ್ಳಿಕೇರಿಯಲ್ಲಿ ಬಾವಿಯಿಂದ ಕುಡಿಯುವ ನೀರು ಸೇದುವ ಸಂಬಂಧ ಉಂಟಾದ ಮನಸ್ತಾಪ; ಕೊನೆಗೆ ಬಡಿದಾಟದಲ್ಲಿ ವ್ಯಕ್ತಿಯೋರ್ವ ಕಾಲುಜಾರಿ ಬಾವಿಗೆ ಬಿದ್ದು ಸಾವನ್ನಪ್ಪುವ ಮೂಲಕ ಪರ್ಯಾವಸಾನ ಗೊಂಡ ಘಟನೆ ನಿಮ್ಮ ಸ್ಮೃತಿಪಟಲದಲ್ಲಿರಬಹುದು. ಆ ಬಾವಿಗೆ ಅದು ಮೂರನೇ ಆಹುತಿ. ನೀರಿಗಾಗಿ ಕೊಲೆಗಳು ಸಹ ನಡೆದ ಘಟನೆಯನ್ನು ಇತ್ತೀಚೆಗೆ ಅಭ್ಯುದಯ ಬರಹಗಾರ ಹಾಗೂ ಅಂಕಣಕಾರ ಅಡ್ಡೂರು ಕೃಷ್ಣರಾಯರು
ಪ್ರಸ್ತಾಪಿಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.

ಸದ್ಯ ನಮಗೆ ಲಭ್ಯವಿರುವ ಒಟ್ಟು ಜಲರಾಶಿಯಲ್ಲಿ ಕೇವಲ ೩% ಮಾತ್ರ ಕುಡಿಯಲು ಯೋಗ್ಯವಾದ ನೀರು. ಉಳಿದ ೯೭% ನೀರು ಸಮುದ್ರದ ಉಪ್ಪು ನೀರು. ಕುಡಿಯಲು ಯೋಗ್ಯವಾದ ಪ್ರತಿಶತ ೩ ರಷ್ಟು ನೀರಿನಲ್ಲಿ ೧.೭೯% ಹಿಮಗಡ್ಡೆಗಳಿಂದ ಆವೃತವಾದ ಘನೀಭವಿತ ನೀರು. ೨೧% ಅಂತರ್ಜಲ ರೂಪದಲ್ಲಿ ಹರಿದು ಕೊಳವೆ ಬಾವಿಗಳ ಮೂಲಕ ನೀರು ನಮಗೆ ದೊರಕುತ್ತಿದೆ.  ಇನ್ನುಳಿದ ೧% ದಷ್ಟು ನೀರು ನಮಗೆ ಸುಲಭವಾಗಿ ಲಭ್ಯವಿರುವ ಕುಡಿಯುವ ನೀರು. ಜಗತ್ತಿನ ವಿಜ್ಞಾನಿಗಳು ಕಳೆದ ಒಂದು ಶತಮಾನದಲ್ಲಿ ಏನೆಲ್ಲ ಸಂಶೋಧನೆಗಳನ್ನು ಕೈಗೊಂಡು, ಅನ್ವೇಷಣೆಗಳನ್ನು ಹುಟ್ಟುಹಾಕಿ ನಮ್ಮ ಬದುಕಿನ ಮಟ್ಟ ಏರಿಸಿದ್ದರೂ ನೀರಿಗೆ ಪರ್ಯಾಯವಾಗಿ ಅಥವಾ ಕುಡಿಯುವ ನೀರನ್ನೇ ಉತ್ಪಾದಿಸುವ ಬಗೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಹಾಗಾಗಿ ನೀರು ಭೂಮಿಯ ಮೇಲಿನ ಜೀವಿವೈವಿಧ್ಯಕ್ಕೆ ನಿಸರ್ಗದತ್ತ ಜೀವಿ ದೃವ್ಯ.

ಅಮೂಲ್ಯವಾದ ಕುಡಿಯುವ ನೀರಿನ ಯೋಗ್ಯ ಬಳಕೆ ಹಾಗು ಯುಕ್ತ ಪ್ರಬಂಧನೆ ಇಂದು ನಮ್ಮ ಮುಂದಿರುವ ದೊಡ್ಡ ಸವಾಲು. ಮುನ್ಸಿಪಾಲಿಟಿ ನಲ್ಲಿ ನೀರನ್ನೇ ಸ್ನಾನಕ್ಕೆ, ಶೌಚಕ್ಕೆ, ಬಟ್ಟೆ-ಪಾತ್ರೆಗಳನ್ನು ತೊಳೆಯಲು, ಮನೆ ಮುಂದಿನ ಹೂವಿನ ಉದ್ಯಾನ ಅಥವಾ ಕಾಯಿಪಲ್ಲೆ ಮಡಿಗಳಿಗೆ ನೀರುಣಿಸಲು, ನಾವು ಬಳಸುವ ವಾಹನಗಳನ್ನು ಸ್ವಚ್ಛಗೊಳಿಸಲು, ಸಾಕಿರುವ ದನ-ಕರುಗಳ ಮೈ ತೊಳೆಯಲು ಬಳಸುತ್ತ ಹೋದರೆ ಹೊಲಸು ನೀರಿನ ಮಟ್ಟ ಏರುತ್ತ ಹೋಗುತ್ತದೆ.

11ನಮ್ಮ ದೇಶ ಸಂಪೂರ್ಣವಾಗಿ ಮಳೆ ನೀರನ್ನು ಅವಲಂಬಿಸಿದೆ ಎಂಬುದನ್ನು ನಾವು ಗಮನಿಸಬೇಕು. ಈ ಮಳೆ ನೀರನ್ನು ಶುದ್ಧೀಕರಿಸಿ ಮನೆ-ಮನೆಗಳಿಗೆ ತಲುಪಿಸುವಾಗ ಪ್ರತಿಶತ ೪೦ರಷ್ಟು ಪೋಲಾಗುತ್ತದೆ. ೧೦% ದಷ್ಟು ಅನ್ಯ ಕಾರಣಗಳಿಂದಾಗಿ ಮಲಿನವಾಗುತ್ತದೆ. ಕೊನೆಗೆ ೫೦%ದಷ್ಟು ಶುದ್ಧವಾದ ನೀರು ನಿಗದಿತ ಮನೆಗಳಿಗೆ ಪೂರೈಕೆಯಾಗುತ್ತದೆ! ಅರ್ಥಾತ್, ಕುಡಿಯುವ ನೀರಿನ ಪೂರೈಕೆ ಹಾಗು ತ್ಯಾಜ್ಯಯುಕ್ತ ಕೊಳಚೆ ನೀರು ಸಾಗಿಸುವ Public Health Engineeringನಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುವ ಅವಶ್ಯಕತೆ ಇದೆ.

ಕರ್ನಾಟಕದಲ್ಲಿ ಒಟ್ಟು ೨೦೮ ಸ್ಥಳೀಯ ಸಂಸ್ಥೆಗಳು ಆಡಳಿತ ನಡೆಸುತ್ತವೆ. ಅವುಗಳಲ್ಲಿ ೪೧ ಸ್ಥಳೀಯ ಸಂಸ್ಥೆಗಳು  ಪೂರ್ಣವಾಗಿ ಅಂತರ್ಜಲದ ಮೇಲೆ ಅವಲಂಬಿತ. ಧಾರವಾಡ-ಹುಬ್ಬಳ್ಳಿಗಳನ್ನೆ ಗಣನೆಗೆ ತೆಗೆದುಕೊಳ್ಳುವುದಾದರೆ, ನೂತನವಾಗಿ ೬೧ ಹೊರವಲಯಗಳು, ವಸತಿ ಸಂಕೀರ್ಣಗಳು ನಿರ್ಮಾಣಗೊಂಡಿವೆ. ಕುಡಿಯುವ ನೀರಿನ ಪೂರೈಕೆ
ಮೊದಲಿನಷ್ಟೇ ಇದೆ..ಆದರೆ ಬೇಡಿಕೆ ದಿನೇ ದಿನೇ ಗಗನ ಮುಟ್ಟುತ್ತಿದೆ. ೨೦೦೭ರಲ್ಲಿ ಅಂದಾಜಿಸಲಾದ ಅಂಕಿ-ಸಂಖ್ಯೆಗಳ ಪ್ರಕಾರ ಹುಬ್ಬಳ್ಳಿಯಲ್ಲಿ ೮,೯೬೭ ಕೊಳವೆ ಬಾವಿಗಳು ಧಾರವಾಡದಲ್ಲಿ ೨,೭೧೬ ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ೨೦೦೯ಕ್ಕೆ ಕೊಳವೆ ಬಾವಿಗಳ ಸಂಖ್ಯೆ ಸುಮಾರು ೨೫% ದಷ್ಟು ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಮೇಲಾಗಿ ನಗರದ ೨೫% ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆ ಇದೆ. ಇನ್ನುಳಿದ ೭೫% ಬಡಾವಣೆಗಳಲ್ಲಿ “ಸೆಪ್ಟಿಕ್ ಟ್ಯಾಂಕ್” ಬಳಸಿ ಶೌಚ ವಿಸರ್ಜನೆ ವ್ಯವಸ್ಥೆಗೊಳಿಸಲಾಗಿದೆ. ಅವಳಿನಗರದ ಅರ್ಧದಷ್ಟು ಬಡಾವಣೆಗಳಿಗೆ ಗಟಾರುಗಳ ವ್ಯವಸ್ಥೆ ಇಲ್ಲ. ಕೊಚ್ಚೆ ನೀರು ಹಾಗು ತ್ಯಾಜ್ಯಗಳ ವಿಲೇವಾರಿ ತೀರ ಅವೈಜ್ಞಾನಿಕವಾದದ್ದು.

ಈ ಪರಿಸ್ಥಿತಿ ಅವಲೋಕಿಸಿದ ಮೂವರು ಉದಯೋನ್ಮುಖ ಇಂಜಿನೀಯರಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸುವ ಜಿಜ್ಞಾಸೆ ಉಂಟಾಯಿತು. ಅತ್ಯಂತ ಕಡಿಮೆ ವೆಚ್ಚದಲ್ಲಿ ಹೊಲಸು ನೀರನ್ನು ಅಪ್ಪಟ ಕುಡಿಯುವ ನೀರನ್ನಾಗಿ ಪರಿವರ್ತಿಸುವ ತಂತ್ರಜ್ಞಾನ ಕಂಡುಹಿಡಿಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ನಾಡಿನ ಪ್ರತಿಷ್ಠಿತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ
ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ `ಕೆಮಿಕಲ್ ಇಂಜಿನೀಯರಿಂಗ್’ ವಿಭಾಗದ ೮ನೇ ಸೆಮ್ ವಿದ್ಯಾರ್ಥಿಗಳಾದ ಅಭಿಷೇಕ ವಿ. ಹುಕ್ಕೇರಿಕರ, ಅಬ್ದುಲ್ ರೆಹೆಮಾನ್ ಎಮ್. ಪಿಂಜಾರ ಹಾಗೂ ಉಮೇಶ ಪಿ. ನಾಯ್ಕರ್ ಅವರ ಕನಸಿನ ಯೋಜನೆ -‘PULSED PLATE WATER TREATMENT UNIT -A Novel process for conversion of sewage water to pure drinking water” ಅರ್ಥಾತ್ ಹೊಲಸು (ರಚ್ಚೆ) ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ನೀರು ಶುದ್ಧೀಕರಣ ಪಲ್ಸಡ್ ಪ್ಲೇಟ್ ಯಂತ್ರ ಅವರ ಅನ್ವೇಷಣೆ.

ಧಾರವಾಡದ ಮದಿಹಾಳ ಬಳಿ ಹರಿಯುವ ಕೊಚ್ಚೆ ಹರಿವಿನ ಝರಿಯಿಂದ ಸುಮಾರು ೨೦ ಕಡೆಗಳಲ್ಲಿ ವೈಜ್ಞಾನಿಕವಾಗಿ `ಸ್ಯಾಂಪಲ್’ ಈ ವಿದ್ಯಾರ್ಥಿಗಳು ಕಲೆ ಹಾಕಿದರು. ಅವುಗಳಲ್ಲಿ ಕ್ರಿಯಾಶೀಲವಾಗಿರುವ ಸೂಕ್ಷ್ಮಾಣು ಜೀವಿಗಳನ್ನು ಪತ್ತೆ ಮಾಡುವುದು ಮೊದಲ ಆದ್ಯತೆಯ ಕೆಲಸವಾಗಿತ್ತು. ಜಲವಾಹಿನಿ ಮ್ಯಾನೇಜಮೆಂಟ್ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಈ ಕೆಲಸ ನಿರ್ವಹಿಸಿತು. ಪಲ್ಸಡ್ ಪ್ಲೇಟ್ ತಂತ್ರಜ್ಞಾನ ಬಳಸಿ ಕೊಚ್ಚೆ ನೀರನ್ನು ಸಂಸ್ಕರಿಸುವ ವಿಧಾನ ವಿದ್ಯಾರ್ಥಿಗಳು ಕೈಗೆತ್ತಿಕೊಂಡರು. ಬಳಸಿ ಬಿಸಾಕಿದ ಆದರೆ ನೈಸರ್ಗಿಕವಾಗಿ ಕೊಳೆಯದ ಕಸ, ನೈಸರ್ಗಿಕವಾಗಿ ಕೊಳೆತು ಗೊಬ್ಬರವಾಗಿ ಪರಿವರ್ತಿತವಾಗಬಲ್ಲ
ವಸ್ತುಗಳು, ನೈಟ್ರೋಜನ್ ಹಾಗು ಫಾಸ್ಫರಸ್, ನಿರ್ವಹಿಲಾಗದ ತ್ಯಾಜ್ಯ ಹಾಗೂ ತೀರ ಘಾಟು ಹೊಲಸು ವಾಸನೆ ಯುಕ್ತ ನೀರನ್ನು ಯುಕ್ತವಾಗಿ ಸಂಸ್ಕರಿಸಲು ಸಿದ್ಧತೆಗಳು ನಡೆದವು.

ಮೊದಲ ಹಂತ ಕೊಚ್ಚೆ ನೀರಿನ ಸಂಸ್ಕರಣೆ ಅಥವಾ ಜಾಲಾಡುವಿಕೆ. ೩ ಮಿಲಿ ಮೀಟರ್ ನಿಂದ ೬ ಮಿಲಿ ಮೀಟರ್ ಗಾತ್ರದ ಪರದೆಗಳನ್ನು ಬಳಸಿ, ೧೦ ಮಿಲಿ ಮೀಟರ್ ನಿಂದ ೫೦ ಸೆಂ.ಮೀ. ವರೆಗಿನ ನಿಷ್ಕಾಸಿತ ತ್ಯಾಜ್ಯವನ್ನು ಆ ನೀರಿನಿಂದ ಬೇರ್ಪಡಿಸಲಾಯಿತು. ಎರಡನೇ ಹಂತದಲ್ಲಿ ಆ ನೀರಿನ ಹರಿವನ್ನು ಮಿತಿಗೊಳಿಸಿ ಕಾರ್ಬಾನಿಕ್ ಆಸಿಡ್ ವಾಯುವಿನ ಮೂಲಕ ಹಾಯಿಸಿ ನೀರನ್ನು ಸಮಾನವಾಗಿ ಕಲಕಲಾಯಿತು. ಈ ಪ್ರಯೋಗಕ್ಕೆ Equalisation ಹಾಗು Aeration ಎಂದು ಕರೆಯಲಾಗುತ್ತದೆ. ಮೂರನೇ ಹಂತದಲ್ಲಿ ಉಸುಕು, ಬೆಣಚು ಕಲ್ಲುಗಳನ್ನು ಬಳಸಿ ನಿರ್ಮಿಸಲಾದ ಫಿಲ್ಟರ್ ಬೆಡ್ ಮೂಲಕ ಆ ನೀರನ್ನು ಹಾಯಿಸಿ ಅದರೊಳಗಿನ ಘನರೂಪಿ ಸೂಕ್ಷ್ಮ ತ್ಯಾಜ್ಯಗಳನ್ನು ಬೇರ್ಪಡಿಸಲಾಯಿತು. ಅತ್ಯಂತ ಶ್ರಮವಹಿಸಿ ವಿದ್ಯಾರ್ಥಿಗಳು ಯೋಗ್ಯ ಪೋಷಕಾಂಶಗಳನ್ನು ಆ ನೀರಿನಲ್ಲಿ ಉಳಿಸಿಕೊಂಡು, ನೈಟ್ರೇಟ್ ಪ್ರಮಾಣ ಹಿತಮಿತ ಗೊಳಿಸುವ De-Nitrification (Pseudomonas Stutzeri ಹಾಗು Pulsed Plate Reactor ಬಳಸಿಕೊಂಡು) ಈ ನೂತನ ತಂತ್ರಜ್ಞಾನದ ಮೂಲಕ ಹೊಲಸು ನೀರನ್ನು ತಕ್ಕ ಮಟ್ಟಿಗೆ ಬಳಕೆಗೆ ಯೋಗ್ಯವಾಗುವಂತೆ ಮಾಡಿದರು.

ನಾಲ್ಕನೇ ಹಂತದಲ್ಲಿ ತೊಟ್ಟಿಯಲ್ಲಿ ಬಂದು ಬಿದ್ದ ನೀರನ್ನು ಪುನ: ಮತ್ತೊಮ್ಮ ಕಾರ್ಬಾನಿಕ್ ಆಸಿಡ್ ಗಾಳಿಯ ಮೂಲಕ (Ultratictraction ಮತ್ತು Reverse Osmosis) ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿ ನೀರಿನಲ್ಲಿ ಇನ್ನೂ ಬದುಕಿ ಉಳಿದಿರಬಹುದಾದ ರೋಗಕಾರಕಗಳನ್ನು (Pathogens) ನಿವಾರಿಸಲಾಯಿತು. ಪ್ರಯೋಗಕ್ಕೆ ಬಳಸಲಾದ ನೀರಿನ ಒಟ್ಟು ಪ್ರಮಾಣದಿಂದ ಪ್ರತಿಶತ ೪೦ ರಷ್ಟು ನೀರನ್ನು ಕುಡಿಯಲು ಹಾಗು ಶೇಕಡ ೬೦ ರಷ್ಟು ನೀರನ್ನು ಕೃಷಿಗಾಗಿಯೂ ಬಳಸಬಹುದಾಗಿದೆ. ಕೃಷಿಗಾಗಿ ವಿನಿಯೋಗಿಸಬಹುದಾದ ಪ್ರಯೋಗಕ್ಕೆ ಒಳಪಡಿಸಲಾದ ಶೇ. ೬೦ರಷ್ಟು ನೀರನ್ನು ಪುನ: ಸಂಸ್ಕರಿಸುವ ಮೂಲಕ ಮತ್ತೆ ೪೦% ದಷ್ಟು ನೀರನ್ನು ಕುಡಿಯಲು ಯೋಗ್ಯವಾಗುವಂತೆ ಪರಿವರ್ತಿತಸಬಹುದು.

ಈ ಪ್ರಯೋಗವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿರುವ ಮಹತ್ವಾಕಾಂಕ್ಷಿ ಯುವ ಇಂಜಿನೀಯರುಗಳಾದ ಅಭಿಷೇಕ್ ಹಾಗು ಅಬ್ದುಲ್ ರೆಹೆಮಾನ್ ಅಭಿಪ್ರಾಯಪಡುವಂತೆ- “ಸಾಮಾನ್ಯ ಸಂಸ್ಕರಣಾ ವಿಧಾನಕ್ಕೂ ಮತ್ತು ಪಲ್ಸಡ್ ಪ್ಲೇಟ್ ನಿರ್ವಹಣಾ ವಿಧಾನಕ್ಕೂ ಸಾಕಷ್ಟು ಭಿನ್ನತೆಗಳಿವೆ. ನಾವು ಅಳವಡಿಸಿಕೊಂಡಿರುವ ಪಲ್ಸಡ್ ಪ್ಲೇಟ್ ಸಂಸ್ಕರಣಾ ಘಟಕ ಸ್ಥಾಪಿಸಲು ಅತ್ಯಂತ ಕಡಿಮೆ ಜಾಗೆ ಸಾಕು. ಆದರೆ ಸಾಂಪ್ರದಾಯಿಕ ಪದ್ಧತಿಯ ಸಂಸ್ಕರಣೆಗೆ ಬಹು ದೊಡ್ಡ ಜಾಗೆ ಬೇಕು. ಕೊಚ್ಚೆ ನೀರಿನ ಸಂಸ್ಕರಣೆಗೆ ಇಲ್ಲಿ ಬೇಕಾಗುವ ಸಮಯ ೪ ರಿಂದ ೬  ಗಂಟೆಗಳಾದರೆ ಸಾಮಾನ್ಯ ಸಂಸ್ಕರಣೆಯಲ್ಲಿ ಕೊನೆಪಕ್ಷ ೮ ರಿಂದ ೧೦ ತಾಸುಗಳು ಬೇಕು. ಪಲ್ಸಡ್ ಪ್ಲೇಟ್ ವಿಧಾನಕ್ಕೆ ಸಾಂಪ್ರದಾಯಿಕವಾದ ಕ್ಲೋರಿನ್ ಬಳಕೆ ಬೇಕಿಲ್ಲ. ಆದರೆ ಸಾಮಾನ್ಯ ಸಂಸ್ಕರಣಾ ವಿಧಾನದಲ್ಲಿ ಕ್ಲೋರಿನ್ ಮಾತ್ರವಲ್ಲದೇ ಇನ್ನೂ ಅನೇಕ  ರಾಸಾಯನಿಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದು ಅನಿವಾರ್ಯ. ಹಾಗೆಯೇ ಸಾಮಾನ್ಯ ಸಂಸ್ಕರಣಾ ವಿಧಾನದಲ್ಲಿ ನದಿ ಅಥವಾ ಕೆರೆಯ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸಬಹುದು. ಆದರೆ ಪಲ್ಸಡ್ ಪ್ಲೇಟ್ ವಿಧಾನದಲ್ಲಿ ಕೊಳಚೆ ನೀರನ್ನು ಸಹ ಕುಡಿಯುವ ನೀರನ್ನಾಗಿ ಪರಿವರ್ತಿಸಬಹುದು. ಪಲ್ಸಡ್ ಪ್ಲೇಟ್ ವಿಧಾನದಲ್ಲಿ ತಗಲುವ ಕಾರ್ಮಿಕ ವೆಚ್ಚ ತೀರ ಕಡಿಮೆ ಇದ್ದು, ಸಾಂಪ್ರದಾಯಿಕ ಸಂಸ್ಕರಣಾ ವಿಧಾನಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ.
ಪ್ಲಾಂಟ್ ನಿರ್ವಹಣಾ ವೆಚ್ಚ ಕೂಡ ನಾವು ಸಂಶೋಧಿಸಿರುವ ವಿಧಾನಕ್ಕೆ ಅತ್ಯಂತ ಕಡಿಮೆ. ನಮ್ಮ ವಿಧಾನದಲ್ಲಿ ಅಳತೆ ಮಾಡುವುದು ಸಹ ಅತ್ಯಂತ ಸರಳ. ಆದರೆ ಸಾಂಪ್ರದಾಯಿಕ ವಿಧಾನದಲ್ಲಿ ಜಾಗೆ ದೊಡ್ಡದಿರುವುದರಿಂದ ಅಳತೆ ಮಾಡುವುದು ಬಹಳ ಸಮಯ ಒಳಗೊಳ್ಳುತ್ತದೆ ಹಾಗು ಕೈಹಿಡಿಯುತ್ತದೆ” ಎನ್ನುತ್ತಾರೆ.

ಹೊಲಸು (ರಚ್ಚೆ) ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ನೀರು ಶುದ್ಧೀಕರಣ ಪಲ್ಸಡ್ ಪ್ಲೇಟ್ ಯಂತ್ರದ ಯೋಜನೆಗೆ ಮಾರ್ಗದರ್ಶಕರಾದ ಕೆಮಿಕಲ್ ಇಂಜಿನೀಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೇಶವ ಜೋಷಿ ಹೇಳುವಂತೆ..”ಈ ಯೋಜನೆಗೆ ಕ್ರಮೇಣ ಮೌಲ್ಯವರ್ಧನೆಯ ಅವಶ್ಯಕತೆ ಇದೆ. ಹೆಚ್ಚಿನ ಪ್ರಮಾಣದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವಾಗ ಆ ಕೆಲಸ ನಮ್ಮಿಂದ ಸಾಧ್ಯವಿದೆ. ಈ ನೂತನ ಅನ್ವೇಷಣೆ ಅತ್ಯಂತ ಮುಂದುವರೆದ ವಿಧಾನವಾಗಿದ್ದು, ಕೌಶಲ್ಯಯುತ ಮಾನವ ಸಂಪನ್ಮೂಲ ಅನಿವಾರ್ಯ. ಹಾಗೆಯೇ ಹೊಲಸು ನೀರು ಹರಿಯುವ ಕಾಲುವೆಯ ವಿವಿಧ ಹಂತಗಳಲ್ಲಿ ಆ ನೀರಿನ ಒಳಾಣುಗಳ composition ಬದಲಾಗುತ್ತ ಹೋಗುತ್ತದೆ. ಹಾಗೆಯೇ ಜನ ಅಷ್ಟು ಸುಲಭವಾಗಿ ಈ ನೀರಿನ ಬಳಕೆಗೆ ಒಪ್ಪಲಾರರು. ಅವರ ಮನವೊಲಿಸುವ ದೊಡ್ಡ ಕೆಲಸವಾಗಬೇಕಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಆಸ್ಪತ್ರೆ ಹಾಗೂ ಮಹಾವಿದ್ಯಾಲಯದ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗು ಪ್ರಾಧ್ಯಾಪಕ ಪ್ರೊ.ಆರ್.ಡಿ.ಕುಲಕರ್ಣಿ ಅವರು ಅಭಿಪ್ರಾಯಪಡುವಂತೆ, ಪಲ್ಸಡ್ ಪ್ಲೇಟ್ ವಿಧಾನದಿಂದ ಸಂಸ್ಕರಿಸಿದ ಈ ನೀರಿನಿಂದ B.O.D; C.O.D; ಹಾಗು D.O. ಪ್ರಮಾಣಗಳನ್ನು ನಿಗದಿತ ಪ್ರಮಾಣಕ್ಕೆ ಅನುಗುಣವಾಗಿ ಪಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನೀರನ್ನು ನೈಟ್ರೇಟ್ ಮುಕ್ತ ಗೊಳಿಸುವಲ್ಲಿ ಸಹ ಯಶಸ್ವಿಯಾಗಿದ್ದೇವೆ. ಜೊತೆಗೆ ನೀರಿನ ಘಾಟು ಹೊಲಸು ವಾಸನೆ ಹಾಗು ಗಡಸುತನವನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಜೊತೆಗೆ ನಮ್ಮ ಮಾದರಿಗಳ ಪರೀಕ್ಷೆ ನಡೆಸಿದ ಜಲವಾಹಿನಿ ಮ್ಯಾನೇಜಮೆಂಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಅಂತಿಮ ಪರೀಕ್ಷೆ ನಡೆಸಿ Bacterological Test ನಲ್ಲಿ E coli MPN / 100 ml -`0′ ಎಂದು ಪ್ರಮಾಣೀಕರಿಸಿದೆ”ಎಂದು ಸಂತಸ ಹಂಚಿಕೊಂಡರು.

ಒಟ್ಟಾರೆ, ಯುವ ಇಂಜಿನೀಯರುಗಳ ಈ ಸಂಶೋಧನೆ ಮೊದಲ ಹಂತದಲ್ಲಿ ತುಸು ಖರ್ಚಿನ ಬಾಬತ್ತಾಗಿ ಕಂಡರೂ ದೊಡ್ಡ ಪ್ರಮಾಣದಲ್ಲಿ ಸ್ಥಳೀಯ ಆಡಳಿತಗಳು ಅನುಷ್ಠಾನಗೊಳಿಸಲು ಮುಂದಾದರೆ ಕೃಷಿಗೆ, ದಿನ ಬಳಕೆಗೆ ಹಾಗೂ ಸದ್ಯದ ಕುಡಿಯುವ ನೀರಿನ ಬವಣೆಗೆ ಮೌಲ್ಯವರ್ಧಿತ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಾಗೆಯೇ ಸದ್ಯದ ಕುಡಿಯುವ ನೀರಿನ ಪೂರೈಕೆಯ ಬವಣೆಗೆ ಪರ್ಯಾಯವಾಗಿ ಈ ಪ್ರಯೋಗ ಹಮ್ಮಿಕೊಳ್ಳಬಹುದು. ಒಂದು ಲೀಟರ್ ನೀರಿಗೆ ಅಂದಾಜು ೩ ರುಪಾಯಿ ವೆಚ್ಚ ತಗುಲಬಹುದು.

ಈ ಪ್ರಯೋಗಕ್ಕೆ ಎಸ್.ಡಿ.ಎಂ. ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರೊ. ಎಂ.ಎನ್. ಸುಧೀಂದ್ರರಾವ್, ಕೆಮಿಕಲ್ ಇಂಜಿನೀಯರಿಂಗ್ ವಿಭಾಗದ ಪ್ರಾಧ್ಯಾಪಕ ಹಾಗು ಮುಖ್ಯಸ್ಥ ಪ್ರೊ. ಶಿವಾನಂದ ಅದಗಂಟಿ, ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಸೂಕ್ಷ್ಮಾಣುಜೀವ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಆರ್.ಡಿ.ಕುಲಕರ್ಣಿ, ಜಲವಾಹಿನಿ ಮ್ಯಾನೇಜಮೆಂಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಕೃಷ್ಣ ಕುಲಕರ್ಣಿ ಹಾಗು ಕೆಮಿಕಲ್ ಇಂಜಿನೀಯರಿಂಗ್ ವಿಭಾಗದ ಸಿಬ್ಬಂದಿ ರವಿ ಕಲಾಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಸಹಕರಿಸಿದ್ದಾರೆ.


ಹರ್ಷವರ್ಧನ ವಿ. ಶೀಲವಂತ