ಇನ್ನಷ್ಟು

ಬಾವಿ ಒಣಗಿದಾಗ, ನಮಗೆ ನೀರಿನ ಮೌಲ್ಯದ ಅರಿವಾಗುವುದು - ಬೆಂಜಮಿನ್ ಫ಼್ರಾಂಕ್ಲಿನ್, ವಿಜ್ಞಾನಿ ನಿಮ್ಮ ಮನಸ್ಸನು ಬರಿದುಮಾಡಿಕೊಳ್ಳಿ - ನೀರಿನಂತೆ ನಿರಾಕಾರತೆಯನ್ನು ಹೊಂದಿ “ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ – ನೋಟ ೫೨: ಆದೇಶ ರಾಜ್ಯಪತ್ರದಲ್ಲಿ ಭದ್ರವಾಗಿ ಉಳಿದಿದೆ!

ಎನ್. ಲಕ್ಷ್ಮಣರಾವ್ ಸಮಿತಿ ನೀಡಿರುವ ವರದಿಯಂತೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೆರೆ ಅಂಗಳದಲ್ಲಿ ನಿರ್ಮಿಸುತ್ತಿರುವ ಬಡಾವಣೆಯನ್ನು ನಿಲ್ಲಿಸಿ, ಸಮಿತಿ ಶಿಫಾರಸ್ಸಿನಂತೆ ಅಲ್ಲಿ ಕೆರೆ ಸಂರಕ್ಷಿಸಬೇಕು (more…)

ನೀರಿನಾಸರೆ ನಿರ್ಮಿಸಿದ ಪುಣ್ಯಾತ್ಮರು

ಧೃತಿಗೆಟ್ಟು ಅನ್ಯರ ಬೇಡದ; ಮತಿಗೆಟ್ಟು ಪರರ ಹೊಗಳದ ಜೀವಿಗಳಿಗಾಗಿ

ಧಾರವಾಡ: “ಬೇಕಂದ್ರ ಚಹಾ ಕೊಡ್ತೀನಿ.. ಕುಡಿಯಾಕ ನೀರ ಕೇಳಬ್ಯಾಡ್ರಿ..!?” ಬಿರು ಬಿಸಿಲು. (more…)

ಬಸವನಕಟ್ಟೆ ಕೆರೆಯ ಹೂಳೆತ್ತಿದವರು

ಗುಲ್ಬರ್ಗಾ ಜಿಲ್ಲೆಯ ಆಳಂದ ತಾಲೂಕಿನ ರುದ್ರವಾಡಿ ಗ್ರಾಮಕ್ಕೆ ನೀರುಣಿಸುತ್ತಿದ್ದ ಬಸವನಕಟ್ಟೆ ಕೆರೆ ಬತ್ತಿಹೋಗಿ ಹಲವಾರು ವರ್ಷಗಳೇ ಕಳೆದಿದ್ದುವು. ಕೊಳವೆಬಾವಿ, ನಗರೀಕರಣ – ಹೀಗೆ ಹಲವಾರು ಕಾರಣಗಳಿಗಾಗಿ ಆರು ಎಕರೆ ವಿಸ್ತೀರ್ಣದ ಬಸವನಕಟ್ಟೆ ಕೆರೆ ದಿನ ಕಳೆದಂತೆ ಕಸದ ತೊಟ್ಟಿಯಾಗಿ (more…)

ಕೆರೆಗಳ ಆಯುಷ್ಯ ಮುಗಿಯದಿರಲಿ…!

ಪ್ರತಿ ಗ್ರಾಮಗಳಲ್ಲಿಯೂ ಕೆರೆಗಳಿವೆ, ಗೋಕಟ್ಟೆಗಳಿವೆ, ಕುಂಟೆ, ಕಲ್ಯಾಣಿ, ಬಾವಿಗಳು, ಹೊಂಡ, ಕೊಳವೆಗಳಿವೆ. ಜೊತೆಗೆ ವೈವಿಧ್ಯಮಯವಾದ, ವಿಶಿಷ್ಟವಾದ ಮದಕ, ತಲಪರಿಗೆ, ಬಾವಾಡಿಗಳು, ಸವಲಕಂಟ – ಹೀಗೆ ನೀರು ಸಂಗ್ರಹಣೆಗೋಸ್ಕರವೇ (more…)

‘ದೊಣೆ’ಗಳೆಂಬ ಪಾರಂಪರಿಕ ಜಲಮೂಲಗಳು

ತೆರೆದ ಬಾವಿ, ಸುರಂಗ, ಕಟ್ಟ, ಮದಕ, ಗುಂಡಾವರ್ತಿ, ಬಾವಡಿ, ಗೋಕಟ್ಟೆ, ಕಲ್ಯಾಣಿ, ಚಿಲುಮೆ, ತಲಪರಿಗೆ ಮುಂತಾದ ಹತ್ತಾರು ಪಾರಂಪರಿಕ ಜಲಮೂಲಗಳು ನಮ್ಮಲ್ಲಿವೆ. ‘ದೊಣೆ’ ಇವುಗಳ ಸಾಲಿಗೆ ಸೇರುವ ಮತ್ತೊಂದು ಪ್ರಮುಖ ಜಲಮೂಲ. (more…)

ಕೆರೆನೋಟ – ನೋಟ ೫೧: ಮಾಲಿನ್ಯ ರಹಿತ ಕೆರೆ- ಜಲಮಂಡಳಿ ಜವಾಬ್ದಾರಿ!!!

ಬೆಂಗಳೂರಿನಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಬಹಳಷ್ಟು ಕೆರೆಗಳಿವೆ. ಅದರಲ್ಲಿ ಕೆಲವು ಜೀವಂತವಾಗಿವೆ, ಇನ್ನು ಕೆಲವು ಒಣಗಿಹೋಗಿವೆ. ಎಲ್ಲ ಜಲ ಮೂಲಗಳನ್ನು ಸಂರಕ್ಷಿಸಲು, ಪುನರುಜ್ಜೀವನಗೊಳಿಸಲು, ಪರಿಸರವನ್ನು ಉಳಿಸಿ, ನಿರ್ವಹಣೆ ಮಾಡಲು, (more…)

ಹಾಲಕ್ಕಿ ಒಕ್ಕಲಗಿತ್ತಿಯರ ಹೊಂಡದ ನೀರಿನ ಪಾಠ

ಮಳೆಗಾಲದ ನಂತರ ಗೋಕರ್ಣದ ಸುತ್ತಲಿನ ಹಳ್ಳಿಗಳಿಗೆ ಹೋದರೆ, ಹಾಲಕ್ಕಿ ಮಹಿಳೆಯರು ಬಿಂದಿಗೆಯಲ್ಲಿ ತರಕಾರಿ ಗಿಡಗಳಿಗೆ ನೀರು ಹಾಕುವ ದೃಶ್ಯ ಸಾಮಾನ್ಯ.  ಫಸಲಿನ ಭಾರಕ್ಕೆ ಜಗ್ಗಿದ ಗಿಡಬಳ್ಳಿಗಳು ಹಾಲಕ್ಕಿ ಒಕ್ಕಲಗಿತ್ತಿಯರ ತರಕಾರಿ ಕೃಷಿ ಜಾಣ್ಮೆಯನ್ನು ಹೇಳುತ್ತವೆ.  (more…)

ಕೆರೆನೋಟ – ನೋಟ ೫೦: ಕೆರೆಗಳ ಬಗ್ಗೆ ಲಕ್ಷ್ಮಣರಾವ್ ವರದಿ ಹೇಳುವುದೇನು?

ಕೆರೆಗಳ ಅಭಿವೃದ್ಧಿ ವಿಷಯ ಅಥವಾ ಒತ್ತುವರಿ ವಿಷಯ ಬಂದಾಗೆಲ್ಲಾ ಲಕ್ಷ್ಮಣರಾವ್ ವರದಿ ಏನೇಳುತ್ತೇ ಗೊತ್ತೇ? ಅದರಲ್ಲಿರುವಂತೆ ಅಭಿವೃದ್ಧಿ ಮಾಡುತ್ತೇವೆ. ಅದನ್ನೇ ಪಾಲುಸುತ್ತೇವೆ ಎಂದು ಮುಖ್ಯಮಂತ್ರಿಯಾದಿಯಾಗಿ, ಕಟ್ಟಕಡೆಯ ಅಧಿಕಾರಿಯೂ ಹೇಳುತ್ತಾರೆ. ಆ ವರದಿಯಲ್ಲಿ ಏನಿದೆ ಗೊತ್ತೆ? ಅಸಲಿಗೆ ಲಕ್ಷ್ಮಣರಾವ್ ಅವರು  ನೀಡಿರುವುದು ಒಂದು ವರದಿಯಲ್ಲ, ಎರಡು ವರದಿ! (more…)

ಕೃಷಿಕರಿಗೆ ಮನಸ್ಸಿದ್ದರೆ ನೀರಮಾರ್ಗವಿದೆ: ಕುಮಾರ ಭಾಗವತ

ಧಾರವಾಡ (ಮಂಡ್ಯಾಳ): ಬತ್ತಿದ ತೆರೆದ ಬಾವಿ, ಕೊಳವೆ ಬಾವಿಗಳು ಮಳೆ ನೀರು ಕೊಯ್ಲಿನಿಂದ ಮತ್ತೆ ನೀರು ಕೊಡುವಂತೆ ಮಾಡಬಹುದೇ?; ನೀರಿಂಗಿಸುವುದರಿಂದ ಹೊಲದಲ್ಲಿನ ತೆರೆದ ಮತ್ತು ಕೊಳವೆ ಬಾವಿಗಳ ಜಲಮಟ್ಟ ಏರುತ್ತದೆಯೇ..? ಅಂತರ್ಜಲ ಮಟ್ಟ ಹೆಚ್ಚುತ್ತದೆಯೇ? ಇಂಗಿಸಿದ್ದು ಇಂಗಿಯೇ ಹೋದರೆ? (more…)

ಕೆರೆನೋಟ – ನೋಟ ೪೯: ಕೆರೆ ಅಭಿವೃದ್ಧಿ ಎಂದರೆ ಅಷ್ಟೇ ಸಾಕೇ?

ಕೆರೆ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಕೆರೆ ಅಭಿವೃದ್ಧಿ… ಈ ಮಾತನ್ನು ಬಹುತೇಕ ಎಲ್ಲ ದಿನಗಳಲ್ಲೂ ಒಬ್ಬರಲ್ಲ ಮತ್ತೊಬ್ಬರು ಹೇಳುತ್ತಲೇ ಇರುತ್ತಾರೆ. ಕೆರೆ ಅಭಿವೃದ್ಧಿ ಎಂದು ಹೇಳಿದರಷ್ಟೇ ಸಾಕೇ? ಹಾಗೆಂದರೇನು? ಏನು ಮಾಡುತ್ತೀರಿ? ಜನರಿಗೇನು ಉಪಯೋಗ? ಪ್ರಾಣಿ-ಪಕ್ಷಿಗಳಿಗೇನು ಉಪಯೋಗ? ಅಂತರ್ಜಲ (more…)