ಸಿನಿಮಾ ನಟಿಯರು ಮಳೆಯಲ್ಲೇ ನೆನೆಯಬೇಕಾ?

ಮಳೆಯಲ್ಲಿ ನೆನೆದರೇ ಸಿನಿಮಾ ಹಿಟ್‌

ಇದೊಂದು ಹುಚ್ಚು ಕಲ್ಪನೆ ಅನ್ನಿ, ಅಪಾರ ನಿರೀಕ್ಷೆ ಎಂದಾದರೂ ಅನ್ನಿ.

ನಮ್ಮ ಸಿನಿಮಾ ನಟಿಯರು ಮಳೆಯಲ್ಲೇ ನೆನೆಯುವುದೇಕೆ?

ಮತ್ತೆಲ್ಲಿ ನೆನೆಯಬೇಕು ಎಂಬ ಪ್ರಶ್ನೆಗೆ, ನನ್ನ ಮಳೆ ಸಂಗ್ರಹ ಒಲವಿನ ಮನಸ್ಸು ಹೇಳುವುದು: ಅವರು ಸುಂದರ ಕೆರೆಗಳಲ್ಲಿ ನೆನೆಯಲಿ ಅಂತ.

ಏಕೆ ಗೊತ್ತೆ? ಹಾಗಾದರೂ ಕೆರೆಗಳನ್ನು ಉಳಿಸುವ ಇಚ್ಛಾಶಕ್ತಿ ಸಿನಿಮಾ ನಟ-ನಟಿ ಪ್ರಿಯರಲ್ಲಿ ಮೂಡುವಂತಾಗಲಿ ಎಂಬ ಆಸೆ. ಸಿನಿಮಾ ನಟಿಯರು ಸುಂದರ ಕೆರೆಗಳಲ್ಲಿ, ಕಟ್ಟಗಳಲ್ಲಿ, ಅಚ್ಚುಕಟ್ಟಾದ ತೆರೆದ ಬಾವಿಗಳಲ್ಲಿ ನೆನೆಯುವಂತಾದರೆ, ಬಹುಶಃ ಮಳೆ ನೀರು ಸಂಗ್ರಹ ಇಚ್ಛೆ ಬೆಳೆಯಬಹುದೇನೋ. 

ನಿಮಗೇನನಿಸುತ್ತದೆ?

- ಚಾಮರಾಜ ಸವಡಿ

Post new comment

The content of this field is kept private and will not be shown publicly.