ಸಾಧನಗಳು ಹಾಗೂ ವಿಧಾನಗಳು
ಜಲ ನಿರ್ವಹಣೆಯು ವಿಸ್ತಾರವಾದ, ಕ್ಲಿಷ್ಟ ವಿಷಯ. ಅದರಲ್ಲಿ ಪಡೆದ ಜ್ಞಾನವನ್ನು ಸಮರ್ಪಕವಾಗಿ ನಿರ್ವಹಿಸಲು, ಆಚರಣೆಯ ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ. ದೀರ್ಘಾವಧಿಯ ಹಾಗೂ ಅಲ್ಪಾವಧಿಯ ನೀರಿನ ಸುಸ್ಥಿರ ಬಳಕೆಗೆ ಅತ್ಯವಶ್ಯಕವಾದ ಅತ್ಯುತ್ತಮ ನಿರ್ವಹಣಾ ಪದ್ಧತಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಪ್ರತಿಯೊಂದು ಪದ್ಧತಿಯ ಮಾದರಿ ಅಥವಾ ಪ್ರಸಂಗ ಅಧ್ಯಯನಗಳು, ಸ್ಲೈಡ್ ಶೋಗಳು, ಕೋರ್ಸುಗಳು ಹಾಗೂ ಚಲನಚಿತ್ರಗಳನ್ನು ನಾವು ಶೇಖರಿಸಿ, ದಾಖಲಿಸಿ, ಅಭಿವೃದ್ಧಿ ಪಡಿಸಿದ್ದೇವೆ. ಇದರೊಂದಿಗೆ, ಪ್ರತಿಯೊಂದು ಪದ್ಧತಿಗೂ ಅನ್ವಯಿಸುವ ನಿಯಮಾವಳಿಗಳು, ಅಧ್ಯಯನಗಳು ಹಾಗೂ ವರದಿಗಳನ್ನು ಒಗ್ಗೂಡಿಸುವ ಯತ್ನವೂ ನಡೆದಿದೆ.
ಮಳೆನೀರು ಸಂಗ್ರಹಣೆ

ನಂತರದ ಉಪಯುಕ್ತ ಬಳಕೆಗಾಗಿ ಮಳೆನೀರನ್ನು ಶೇಖರಿಸಿ, ಸಂಗ್ರಹಣೆ ಮಾಡುವುದನ್ನು ಮಳೆನೀರು ಸಂಗ್ರಹಣೆ ಅಥವಾ ಮಳೆಕೊಯ್ಲು ಎನ್ನುತ್ತಾರೆ. ಯಾವುದೇ ಮಳೆನೀರು ಸಂಗ್ರಹಣೆ ವ್ಯವಸ್ಥೆಯಾದರೂ, ಮೂರು ಆಂಶಗಳನ್ನು ಒಳಗೊಂಡಿರುತ್ತದೆ: ಆಯಕಟ್ಟು, ಸಾಗಣೆ ಹಾಗೂ ಶೇಖರಣೆ. ಯಶಸ್ವೀ ಮಳೆನೀರು ಸಂಗ್ರಹಣೆಯ ಸ್ಥಾಪನೆಗೆ, ಕೆಲವು ಆಂಶಗಳನ್ನು ಗಮನನದಲ್ಲಿಟ್ಟುಕೊಳ್ಳಬೇಕು. ಮಳೆನೀರಿನ ಯಶಸ್ವೀ ಸಂಗ್ರಹಣೆಯ ಮೂಲಭೂತ ಹಾಗೂ ಪ್ರಗತಿಪರ ಸೂಚನೆಗಳನ್ನು ಕಲಿಯಿರಿ. ಹಾಗೂ, ಯಶಸ್ವೀ ಮಳೆನೀರು ಸಂಗ್ರಹಣೆ ಪದ್ಧತಿಗಳ ಪ್ರಸಂಗ ಅಧ್ಯಯನಗಳನ್ನು ಓದಿರಿ.
ಮುಂದೆ ಓದಿ
ಕೃಷಿ

ಭಾರತದಲ್ಲಿ ಬಳಕೆಯಾಗುವ 80% ನೀರನ್ನು ಬಳಸುವ ಪ್ರಮುಖ ಕ್ಷೇತ್ರವೆಂದರೆ ಕೃಷಿ ಕ್ಷೇತ್ರ. ಕೃಷಿಯಲ್ಲಿ, ಸಕ್ಷಮ ಜಲನಿರ್ವಹಣೆಯು ನಮ್ಮ ಬೆಳೆ ಉತ್ಪಾದಕತೆಯನ್ನು ಸುಧಾರಿಸಿ, ಒಟ್ಟಾರೆ ಫಸಲು ಹೆಚ್ಚಿಸುವುದಕ್ಕೆ ಸಹಕಾರಿಯಾಗುತ್ತದೆ. ಕೃಷಿ ಜಲ ನಿರ್ವಹಣಾ ಪದ್ಧತಿಗಳಿಗೆ ಸಂಬಂಧಿಸಿದ ಪ್ರಸಂಗ ಅಧ್ಯಯನಗಳು, ಸ್ಲೈಡ್ ಷೋಗಳು, ಕೋರ್ಸುಗಳು ಹಾಗೂ ಚಲನಚಿತ್ರಗಳನ್ನು ಈ ವಿಭಾಗದಲ್ಲಿ ಕಾಣಬಹುದು.
ಅಂತರ್ಜಲ ಅಭಿವೃದ್ಧಿ

ಗ್ರಾಮೀಣ ಭಾರತದಲ್ಲಿ, ಗೃಹ ಬಳಕೆಯ ಸುಮಾರು 85% ನೀರನ್ನು ಅಂತರ್ಜಲವು ಪೂರೈಸಿದರೆ, ನೀರಾವರಿಗೆ 50% ದೊರಕುತ್ತದೆ. ಆದರೆ, ನೈಸರ್ಗಿಕ ಸಂಪನ್ಮೂಲ ಹಾಗೂ ಸಾಮಾಜಿಕ-ಆರ್ಥಿಕ ಚೌಕಟ್ಟಿನ ದೃಷ್ಟಿಯಿಂದ ನೋಡಿದಾಗ, ಅಂತರ್ಜಲ ವಹಿಸುವ ಪ್ರಮುಖ ಪಾತ್ರವನ್ನು ಈ ಅಂಕಿ-ಅಂಶಗಳು ಕಡೆಗಾಣಿಸುತ್ತವೆ.
ಅಂತರ್ಜಲದ ಮರುಪೂರಣ ಹಾಗೂ ಸುಸ್ಥಿರ ಬಳಕೆಗೆ ಸಂಬಂಧಿಸಿದ ಪ್ರಸಂಗ ಅಧ್ಯಯನಗಳು, ಸ್ಲೈಡ್ ಷೋಗಳು, ಕೋರ್ಸುಗಳು ಹಾಗೂ ಚಲನಚಿತ್ರಗಳನ್ನು ಈ ವಿಭಾಗದಲ್ಲಿ ಕಾಣಬಹುದು.
ಮುಂದೆ ಓದಿ
ಕುಡಿಯುವ ನೀರು ಹಾಗು ಗುಣಮಟ್ಟ

ಭಾರತದ ಬಹುಪಾಲು ಮೇಲ್ಮೈ ನೀರು ಹಾಗೂ ಅಂತರ್ಜಲದ ಸಂಪನ್ಮೂಲಗಳ ಮಾಲಿನ್ಯಕ್ಕೆ ನೀರಿನ ಕಳಪೆ ನಿರ್ವಹಣೆಯು ದಾರಿ ಮಾಡಿಕೊಟ್ಟಿದೆ. ಕುಡಿಯುವ ನೀರಿನ ಬಹುಪಾಲು ಮೂಲಗಳು, ರಾಸಾಯನಿಕ ಹಾಗೂ ಕೀಟಾಣುಗಳ / ಬ್ಯಾಕ್ಟೀರಿಯಾದ ಮಾಲಿನ್ಯದಿಂದ ಬಳಕೆಗೆ ಅಯೋಗ್ಯವಾಗಿದೆ. ಕೆಲವು ಸಂದರ್ಭಗಳಲ್ಲಿ, ಅಂತರ್ಜಲ ನೈಸರ್ಗಿಕವಾಗಿಯೇ ಅಧಿಕ ಮಟ್ಟದ ಖನಿಜಗಳನ್ನು ಹೊಂದಿರುವ ಕಾರಣ, ಅಂತಹ ನೀರಿನ ನಿಯಮಿತ ಬಳಕೆಯು ಹಾನಿಕಾರಕವಾಗಬಹುದು.
ಕುಡಿಯುವ ನೀರು ಮನುಷ್ಯನ ಮೂಲಭೂತ ಹಕ್ಕುಗಳಲ್ಲಿ ಒಂದು. ಆದರೆ, ಜಲ ಸಂಪನ್ಮೂಲಗಳ ಅಸಮರ್ಪಕ ನಿರ್ವಹಣೆಯಿಂದಾಗಿ, ದೇಶದ ಅನೇಕ ಭಾಗಗಳು ತೀವ್ರ ರೀತಿಯ ನೀರಿನ ಅಭಾವದಿಂದ ನರಳುತ್ತಿವೆ. ಜನರಿಗೆ ಕುಡಿಯುವ ನೀರನ್ನು ಒದಗಿಸುವ ವಿಷಯವನ್ನು ಒಳಗೊಂಡ ಪ್ರಸಂಗ ಅಧ್ಯಯನಗಳು, ಸ್ಲೈಡ್ ಷೋಗಳು, ಕೋರ್ಸುಗಳು ಹಾಗೂ ಚಲನಚಿತ್ರಗಳನ್ನು ಈ ವಿಭಾಗದಲ್ಲಿ ಕಾಣಬಹುದು.
ನಗರ ಜಲ ನಿರ್ವಹಣೆ

ನಗರ ಪ್ರದೇಶಗಳ ಜನಸಾಂದ್ರತೆ ಹೆಚ್ಚುತ್ತಿರುವ ಕಾರಣ, ನಗರ ವಾಸಿಗಳೆಲ್ಲರಿಗೂ ನಿಯಮಿತವಾದ ನೀರು ಪೂರೈಕೆಯನ್ನು ಮಾಡುವುದು ಅಧಿಕಾರಿಗಳಿಗೆ ಕಷ್ಟವಾಗುತ್ತಿದೆ.
ನಗರ ಜಲ ನಿರ್ವಹಣೆಯ ವಿಷಯವನ್ನು ಒಳಗೊಂಡ ಪ್ರಸಂಗ ಅಧ್ಯಯನಗಳು, ಸ್ಲೈಡ್ ಷೋಗಳು, ಕೋರ್ಸುಗಳು ಹಾಗೂ ಚಲನಚಿತ್ರಗಳನ್ನು ಈ ವಿಭಾಗದಲ್ಲಿ ಕಾಣಬಹುದು.
ಮುಂದೆ ಓದಿ
ಜಲ ಆಗರಗಳ ನವೀಕರಣ

ನೀರಿನ ಮುಂದಿನ ಬಳಕೆಗಾಗಿ, ಅದರ ಸಂಗ್ರಹಣೆ ಹಾಗೂ ಶೇಖರಣೆಯನ್ನು ಭಾರತದಲ್ಲಿ ಜನರು ಸಾಂಪ್ರದಾಯಿಕವಾಗಿ ಮಾಡುತ್ತಾ ಬಂದಿದ್ದಾರೆ. ಆದರೆ, ಮನೆ ಬಾಗಿಲಿಗೇ ನೀರು ಸರಬರಾಜು ಪ್ರಾರಂಭವಾದಾಗಿನಿಂದ, ಈ ಸಾಂಪ್ರದಾಯಿಕ ನೀರಿನ ಆಗರಗಳು ಉಪೇಕ್ಷೆಗೊಳಗಾಗಿ, ಅವನತಿ ಹೊಂದಿದೆ. ಸಾಂಪ್ರದಾಯಿಕ ನೀರಿನ ಆಗರಗಳ ನವೀಕರಣಕ್ಕೆ ಸಂಬಂಧಿಸಿದ ಪ್ರಸಂಗ ಅಧ್ಯಯನಗಳು, ಸ್ಲೈಡ್ ಷೋಗಳು, ಕೋರ್ಸುಗಳು ಹಾಗೂ ಚಲನಚಿತ್ರಗಳನ್ನು ಈ ವಿಭಾಗದಲ್ಲಿ ಕಾಣಬಹುದು.
ಒಂದು ನಿರ್ದಿಷ್ಟ ಜಲಾನಯನ ಪ್ರದೇಶದಲ್ಲಿ ದೊರೆಯುವ ಎಲ್ಲ ಸಂಪನ್ಮೂಲಗಳ – ಅಂದರೆ ನೈಸರ್ಗಿಕ (ನೆಲ, ಜಲ, ಗಿಡ, ಪ್ರಾಣಿ) ಹಾಗೂ ಮಾನವ ಸಂಪನ್ಮೂಲ – ಸಂರಕ್ಷಣೆ, ಪುನರುಜ್ಜೀವನ ಹಾಗೂ ವಿವೇಚನಯುಕ್ತ ಬಳಕೆಗೆ ಜಲಾನಯನ ಅಭಿವೃದ್ಧಿ ಎನ್ನುತ್ತಾರೆ. ಜಲಾನಯನ ಅಭಿವೃದ್ಧಿಗೆ ಸಂಬಂಧಿಸಿದ ಪ್ರಸಂಗ ಅಧ್ಯಯನಗಳು, ಸ್ಲೈಡ್ ಷೋಗಳು, ಕೋರ್ಸುಗಳು ಹಾಗೂ ಚಲನಚಿತ್ರಗಳನ್ನು ಈ ವಿಭಾಗದಲ್ಲಿ ಕಾಣಬಹುದು.
ಮುಂದೆ ಓದಿ
ನಿರ್ಮಲೀಕರಣ ಹಾಗೂ ತ್ಯಾಜ್ಯ ನೀರಿನ ನಿರ್ವಹಣೆ

ಆರೋಗ್ಯಕರ ಹಾಗೂ ಸುರಕ್ಷಿತ ರೀತಿಯಲ್ಲಿ ಮಲ-ಮೂತ್ರಗಳ ವಿಸರ್ಜನೆ, ಶೇಖರಣೆ, ಹಾಗೂ ಹೊರ ಹಾಕುವಿಕೆಯನ್ನು ನಿರ್ಮಲೀಕರಣ ಎನ್ನುತ್ತಾರೆ. ಇದರಿಂದ ವೈಯಕ್ತಿಕ ಹಾಗೂ ಸಮುದಾಯದ ಒಟ್ಟಾರೆ ಆರೋಗ್ಯವನ್ನು ಕಾಪಾಡಬಹುದು.
ನಿರ್ಮಲೀಕರಣದ ಪ್ರಸಂಗ ಅಧ್ಯಯನಗಳನ್ನು ಓದಿ. ಭಾರತದಲ್ಲಿರುವ ನಿರ್ಮಲೀಕರಣ ವ್ಯವಸ್ಥೆಯನ್ನು ಕುರಿತಾದ ಚಲನಚಿತ್ರಗಳನ್ನು ನೋಡಿ ಹಾಗೂ ಕೋರ್ಸುಗಳ ಬಗ್ಗೆ ತಿಳಿದುಕೊಳ್ಳಿ.
ಯಾವುದಾದರೂ ಕ್ರಿಯೆಗೆ ನೀರನ್ನು ಬಳಸಿ, ಅದು ಮತ್ತೆ ಬಳಸಲು ಸಾಧ್ಯವಾಗದೆ ಇದ್ದಾಗ, ಅದನ್ನು ತ್ಯಾಜ್ಯ ನೀರೆಂದು ಕರೆಯುತ್ತಾರೆ. ಹೊರಚೆಲ್ಲುವ ತ್ಯಾಜ್ಯ ನೀರಿನ ಪುನರಾವರ್ತನೆ, ಪುನರ್ಬಳಕೆ, ಹಾಗೂ ಕಡಿಮೆ ಬಳಕೆಯನ್ನು ರೂಢಿಸಿಕೊಳ್ಳುವುದು ಇಂದು ನಾವು ಎದುರಿಸುತ್ತಿರುವ ಸವಾಲುಗಳು.
ತ್ಯಾಜ್ಯ ನೀರನ್ನು ಕಡಿಮೆ ಮಾಡಿ, ಅದರ ಪುನರ್ಬಳಕೆಯನ್ನು ಮಾಡುವ ಬಗ್ಗೆ ಈ ವಿಭಾಗದಲ್ಲಿ ಹೆಚ್ಚಿಗೆ ತಿಳಿದುಕೊಳ್ಳಿ. ಚಲನಚಿತ್ರಗಳನ್ನು ನೋಡಿ, ಪ್ರಸಂಗ ಅಧ್ಯಯನಗಳನ್ನು ಓದಿ, ತ್ಯಾಜ್ಯ ನೀರಿಗೆ ಸಂಬಂಧಿಸಿದ ಸಂಶೋಧನಾ ಲೇಖನಗಳನ್ನು ಹಾಗೂ ವರದಿಗಳನ್ನು ನೋಡಿ.
ಶೀಘ್ರದಲ್ಲೇ ಬರಲಿದೆ
- 1205 reads
Email this page
Printer-friendly version









Recent comments
6 days 9 hours ago
6 days 19 hours ago
1 week 4 days ago
1 week 6 days ago
2 weeks 2 hours ago
2 weeks 5 hours ago
2 weeks 2 days ago
2 weeks 3 days ago
2 weeks 3 days ago
2 weeks 4 days ago