ಸಾಂಸ್ಥಿಕ ಮಾಹಿತಿಪೀಠ

ಜಲಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹತ್ತಿರದ ಸಂಸ್ಥೆಯೊಂದನ್ನು ನೀವು ಹುಡುಕುತ್ತಿದ್ದೀರೆ? ಇದೋ, ನಿಮ್ಮ ಹುಡುಕಾಟ ಇಲ್ಲಿ ಮುಗಿದಂತೆ! ಜಲಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರೇತರ (N.G.O.s), ಖಾಸಗೀ ಹಾಗೂ ಸರ್ಕಾರಿ ಸಂಸ್ಥೆಗಳ ಕೈಪಿಡಿಗೆ, ನಿಮಗೆ ಸ್ವಾಗತ. ನಿಮ್ಮ ತಾಲ್ಲೂಕನ್ನು ಗುರುತಿಸಲು ನಕ್ಷೆಯನ್ನು ಬಳಸಿ ಅಥವಾ ತಾಲ್ಲೂಕಿನ ಹೆಸರನ್ನು ಟೈಪ್ ಮಾಡಿರಿ.

ಜಲಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಪಟ್ಟಿಗೆ ನಿಮ್ಮ ಸಂಸ್ಥೆಯ ಹೆಸರನ್ನು ಸೇರಿಸಬೇಕೆ? ಮತ್ತೊಮ್ಮೆ ಸುಸ್ವಾಗತ!

ಪರಿಚಯ

ಸಾಂಸ್ಥಿಕ ಮಾಹಿತಿಪೀಠವು (organization database) ಸರಳವಾದರೂ ಸಶಕ್ತವಾದ ಒಂದು ಸಾಧನ. ಈ ಮಾಹಿತಿಪೀಠವು, ಭಾರತದಾದ್ಯಂತ ಇರುವ ಸಂಸ್ಥೆಗಳು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸುತ್ತದೆ. ಜೊತೆಗೆ, ಭಾರತದ ನಕ್ಷೆಯ ಮೇಲೆ ತಮ್ಮ ಹೆಸರನ್ನು ಸೇರಿಸಲೂ ಕೂಡ ನೆರವು ನೀಡುತ್ತದೆ. ನಕ್ಷೆಯಲ್ಲಿ ಕಾಣುವ ಪ್ರತಿಯೊಂದು ಬಿಂದುವೂ ಜಲಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಸಂಸ್ಥೆಯನ್ನು ಪ್ರತಿನಿಧಿಸುತ್ತದೆ. ಅದು ಸಂಸ್ಥೆಯ ಬಗ್ಗೆ ಕೆಲವು ಮೂಲಭೂತ ಮಾಹಿತಿಗಳಾದ ಸಂಪರ್ಕ ಮಾಹಿತಿ, ಕಾರ್ಯಕ್ಷೇತ್ರ, ಇತ್ಯಾದಿಗಳನ್ನು ನೀಡುತ್ತದೆ. ನಕ್ಷೆಯಲ್ಲಿ ನಿಮ್ಮನ್ನು ಸೇರಿಸಿಕೊಳ್ಳುವುದರಿಂದ, ಸಾಂಸ್ಥಿಕವಾಗಿ ಹಾಗೂ ವೈಯಕ್ತಿಕವಾಗಿ ನಿಮ್ಮನ್ನು ಸಂಪರ್ಕಿಸಲು ಸುಲಭವಾಗುತ್ತದ್ದೆ. ನಿಮ್ಮ ಸಂಸ್ಥೆಯ ಸಾಧನೆಗಳು, ಯೋಜನೆಗಳು ಹಾಗೂ ಇನ್ನಿತರ ವಿವರಗಳನ್ನೂ ಸಹ ಹಂಚಿಕೊಳ್ಳಬಹುದು. ನಿರ್ದಿಷ್ಟ ವ್ಯಾಪ್ತಿಯಲ್ಲಿ, ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿರುವ ಸಂಸ್ಥೆಗಳನ್ನು ಹುಡುಕಲೂ ಸಹ ಈ ಸಾಧನವನ್ನು ಬಳಸಬಹುದು.


ಸಂಸ್ಥೆಯನ್ನು ಸೇರ್ಪಡೆ ಮಾಡಲು ಇಲ್ಲಿ ಕ್ಲಿಕ್ ಮಾಡಿ.


ಸಂಸ್ಥೆಗಳನ್ನು ಹುಡುಕುವ ಸಲುವಾಗಿ ಇಲ್ಲಿ ಕ್ಲಿಕ್ ಮಾಡಿ.

ಕರ್ನಾಟಕದ ಬಹುತೇಕ ಸಂಸ್ಥೆಗಳ ಮಾಹಿತಿಯು ಎಕ್ಸೆಲ್ ಕಡತದ (Excel document) ರೂಪದಲ್ಲಿ ಕೂಡಾ ಲಭ್ಯವಿದೆ. ಕಡತವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಮಾಹಿತಿಯ ಮೂಲಗಳು

ಈ ಸಾಧನದಲ್ಲಿ ಪಟ್ಟಿ ಮಾಡಿರುವ ಸಂಸ್ಥೆಗಳ ಮಾಹಿತಿಯನ್ನು ಪ್ರಾಥಮಿಕ ಹಾಗೂ ದ್ವಿತೀಯ ಮೂಲಗಳಿಂದ ಶೇಖರಿಸಲಾಗಿದೆ.

ಇಲ್ಲಿ ಕಾಣುವ ಮಾಹಿತಿಯ ಬಹುತೇಕ ಭಾಗವನ್ನು, ಅದರಲ್ಲೂ ಕಾವೇರಿ ತಪ್ಪಲಿನಲ್ಲಿರುವ ಸಂಸ್ಥೆಗಳ ಮಾಹಿತಿಯನ್ನು, ಅರ್ಘ್ಯಂ ನಡೆಸಿದ ಪ್ರಾಥಮಿಕ ಸಮೀಕ್ಷೆಯ ಮೂಲಕ ಸಂಗ್ರಹಿಸಲಾಯಿತು. ಪ್ರಾರಂಭವಾದ ಸಂಸ್ಥೆಗಳಿಗೆ ಭೇಟಿ ನೀಡಲು ತಂಡಗಳನ್ನು ರೂಪಿಸಿ, ಅವರಿಗೆ ದ್ವಿತೀಯ ಪಟ್ಟಿಯೊಂದನ್ನು (secondary list) ನೀಡುವುದರ ಮೂಲಕ, ಈ ಯೋಜನೆಯ ಪ್ರಾರಂಭವನ್ನು ಮಾಡಲಾಯಿತು . ಒಂದು ನಿಷ್ಕರ್ಷಿತ ವಿನ್ಯಾಸದಲ್ಲಿ, ಸಂಸ್ಥೆಗಳ ಪ್ರತಿನಿಧಿಗಳಿಂದ ಸರಿಯಾದ ಮಾಹಿತಿಯನ್ನು ಪಡೆಯಲಾಯಿತು. ಅರ್ಘ್ಯಂನ ತಂಡವೊಂದು ಕರ್ನಾಟಕದ ಎಂಟು ಜಿಲ್ಲೆಗಳಿಂದ ಮಾಹಿತಿಯನ್ನು ಸಂಗ್ರಹಿಸಿತು. ತಮಿಳುನಾಡಿನಲ್ಲಿ, ಭಾರತಿದಾಸನ್ ವಿಶ್ವವಿದ್ಯಾನಿಲಯ, ತಿರುಚಿರಾಪಲ್ಲಿಯಲ್ಲಿ ವ್ಯಾಸಂಗ ಮಾಡುತ್ತಿರುವ 18 ಮಂದಿ ಸ್ನಾತಕ್ಕೋತ್ತರ ಹಾಗೂ ಡಾಕ್ಟರೇಟ್ ವಿದ್ಯಾರ್ಥಿಗಳು, ಕಾವೇರಿ ತಪ್ಪಲಿಗೆ ಸೇರಿದ 11 ಜಿಲ್ಲೆಗಳಿಂದ ಮಾಹಿತಿಯನ್ನು ಸಂಗ್ರಹಿಸಿದರು. ನಮ್ಮ ಸಹಭಾಗಿ ಸಂಸ್ಥೆಗಳಾದ ಬರ್ಡ್-ಕೆ, ಡೆವೆಲಪ್ಮೆಂಟ್ ಆಲ್ಟರ್ನೇಟಿವ್ಸ್ ಹಾಗೂ ಎ.ಎಮ್.ಈ. ಪ್ರತಿಷ್ಠಾನವು, ಜಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅವರ ಸಹಭಾಗಿ ಸಂಸ್ಥೆಗಳ ಮಾಹಿತಿಯನ್ನು ಸಂಗ್ರಹಿಸಲು ನೆರವು ನೀಡಿದರು. ಈ ಮಾಹಿತಿಪೀಠದ ಸಂಗ್ರಹಣೆಯಲ್ಲಿ ಕಾಣುವ ಕೆಲವು ಸಂಸ್ಥೆಗಳನ್ನು, ಯೋಜನಾ ಆಯೋಗದ ಸರ್ಕಾರೇತರ ಸಂಸ್ಥೆಗಳ ಪಟ್ಟಿಯಿಂದಲೂ ಸಹ ತೆಗೆದುಕೊಳ್ಳಲಾಗಿದೆ.

ಕೃತಜ್ಞತೆಗಳು

ನಮ್ಮೆಲ್ಲ ಸಹಭಾಗಿ ಸಂಸ್ಥೆಗಳು, ಅದರಲ್ಲೂ ಬರ್ಡ್-ಕೆ, ಡೆವೆಲಪ್ಮೆಂಟ್ ಆಲ್ಟರ್ನೇಟಿವ್ಸ್ ಹಾಗೂ ಎ.ಎಮ್.ಈ. ಪ್ರತಿಷ್ಠಾನಗಳಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ತಮ್ಮ ಸರ್ಕಾರೇತರ ಸಂಸ್ಥೆಗಳ ಪಟ್ಟಿಯಿಂದ, ಸೂಕ್ತ ಸಂಸ್ಥೆಗಳ ಮಾಹಿತಿಯನ್ನು ನೀಡಿದ ಯೋಜನಾ ಆಯೋಗಕ್ಕೂ ಸಹ ನಮ್ಮ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಪ್ರಾಥಮಿಕ ಸಮೀಕ್ಷೆಯನ್ನು ನಡೆಸಿದ ಅರ್ಘ್ಯಂನ ಸಮಾಲೋಚಕರು ಹಾಗೂ ಭಾರತಿದಾಸನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಶ್ರಮವನ್ನು ಇಲ್ಲಿ ಗುರುತಿಸಲು ಇಚ್ಛಿಸುತ್ತೇವೆ.

ಸಂಸ್ಥೆಗಳ ನಕ್ಷೆಯನ್ನು ರಚಿಸಲು ಬಳಸಲಾದ ವಿನ್ಕೋಡ್ ಮಾಹಿತಿಯನ್ನು ಒದಗಿಸಿದ “ಸ್ಪಿನ್ ಫೋ”ಗೆ ನಮ್ಮ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇವೆ.

“ಭಾರತ ಜಲ ಪೋರ್ಟಲ್”ನ್ನು ಅನುಷ್ಥಾನಗೊಳಿಸಲು ನೆರವು ನೀಡಿದ ನಮ್ಮ ತಾಂತ್ರಿಕ ಸಹಭಾಗಿ ಸಂಸ್ಥೆಯಾದ “ಈ-ಗವರ್ನಮೆಂಟ್ ಪ್ರತಿಷ್ಠಾನ”ಕ್ಕೂ ನಮ್ಮ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ಸ್ಪಷ್ಟನೆ

ಈ ಸಾಧನದಲ್ಲಿ ಕಂಡುಬರುವ ಮಾಹಿತಿಯ ದೃಢೀಕರಣಕ್ಕಾಗಲಿ ಅಥವಾ ಇಲ್ಲಿ ಪ್ರತಿನಿಧಿಸಲಾದ ಸಂಸ್ಥೆಗಳ ವಿಶ್ವಾಸಾರ್ಹತೆಯ ಬಗೆಗಾಗಲಿ “ಭಾರತ ಜಲ ಪೋರ್ಟಲ್” ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಈ ಸಾಧನಕ್ಕೆ ಸೇರ್ಪಡೆಯಾಗಲು ಸಂಸ್ಥೆಗಳಿಗೆ ಅವಕಾಶ ನೀಡುವುದರ ಜೊತೆಗೆ, ಸಂಸ್ಥೆಯ ಹಿನ್ನಲೆ/ ವಿಶ್ವಾಸಾರ್ಹತೆಯ ಮೂಲಭೂತ ತಪಾಸಣೆಯನ್ನೂ ಸಹ ಮಾಡಲಾಗುತ್ತದೆ.

“ವಿಶ್ವಾಸಾರ್ಹತೆಯ ಒಕ್ಕೂಟ (Credibility Alliance)”ದ ಬಗ್ಗೆ ನಿಮಗೆ ತಿಳಿಸಲು ನಾವು ಬಯಸುತ್ತೇವೆ. ಒಳ್ಳೆಯ ಆಡಳಿತದ ನಿಯಮಾವಳಿಗಳ ಮೂಲಕ, ಸ್ವಯಂ ಸೇವಾ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವತ್ತ, ಸ್ವಯಂ ಸೇವಾ ಕ್ಷೇತ್ರದ ಸ್ವಪ್ರೇರಣೆಯ ಫಲವಾಗಿ ರಚಿಸಲಾದ ಇದು, ಒಂದು ಪ್ರಾರಂಭಿಕ ಯತ್ನ. http://www.credall.org.in ನಲ್ಲಿ “ವಿಶ್ವಾಸಾರ್ಹತೆಯ ಒಕ್ಕೂಟ (Credibility Alliance)”ದ ಹೆಚ್ಚಿನ ವಿವರಗಳನ್ನು ಪಡೆಯಬಹುದು.

ಈ ಸಾಧನದಲ್ಲಿ ಕಾಣುವ ಸಂಸ್ಥೆಗಳನ್ನು ಅವುಗಳ ಅತ್ಯಂತ ಸಮೀಪದ ಪಿನ್ ಕೋಡ್ ಗೆ ಅನ್ವಯಿಸುವಂತೆ ನಕ್ಷೆಯಲ್ಲಿ ಗುರುತಿಸಲಾಗಿದೆ. ಆದರೆ, ಸಧ್ಯಕ್ಕೆ ದೊರಕಿದ ಮಾಹಿತಿಯ ಇತಿಮಿತಿಗಳನ್ನು ಗಮನದಲ್ಲಿಟ್ಟುಕೊಂಡು, ಅದರ ಭೌಗೋಳಿಕ ನಿರ್ದೇಶಾಂಕಗಳಿಂದ (geographic coordinates) ಗರಿಷ್ಠ 12 ಕಿ.ಮೀ.ನೊಳಗೆ, ಸಂಸ್ಥೆಗಳನ್ನು ಕಂಡುಹಿಡಿಯಲು ಸಾಧ್ಯವಾಗಿದೆ.

ಸಂಸ್ಥೆಗಳ ಸರಿಯಾದ ವಿವರಗಳನ್ನು ನೀಡಲು ಸೂಕ್ತ ಎಚ್ಚರಿಕೆಯನ್ನು ವಹಿಸಿದ್ದರೂ, ನೀಡಿದ ಮಾಹಿತಿಯಲ್ಲಿ ಅಂತರ ಕಂಡುಬಂದಲ್ಲಿ, ದಯವಿಟ್ಟು portal@arghyam.org ಗೆ ಈ-ಮೇಲ್ ಕಳುಹಿಸಲು ಹಿಂಜರಿಯಬೇಡಿ. ಮಾಹಿತಿಯನ್ನು ಸೂಕ್ತ ಸೇರ್ಪಡೆಯೊಂದಿಗೆ ನವೀಕರಿಸಲು ನಾವು ಹೃನ್ಮಸ್ಸಿನಿಂದ ಸಿದ್ಧರಿರುತ್ತೇವೆ.