ಸಮುದಾಯ ರೇಡಿಯೋ
ತುಮಕೂರಿನ ಸಮುದಾಯ ರೇಡಿಯೋ ಕಾರ್ಯಕ್ರಮ
ಪ್ರತಿ ಭಾನುವಾರ ಆಕಾಶವಾಣಿಯಲ್ಲಿ ರಾತ್ರಿ 8ರಿಂದ 8.30ರವರೆಗೆ ಪ್ರಸಾರವಾಗುವ ನೀರ ಅರಿವಿನ ಕಾರ್ಯಕ್ರಮ, ಸಂಭಾಷಣೆ, ಸಂದರ್ಶನ, ಹಾಡುಗಳು, ಮಕ್ಕಳಿಂದ ಕಿರು ನಾಟಕ, ನೀರ ಸಂರಕ್ಷಣೆಯಲ್ಲಿ ಯಶಸ್ಸು ಕಂಡವರ ಸ್ವಂತ ಅನುಭವಗಳ ಹದ ಮಿಶ್ರಣವಾದ ಈ ‘ಜಲಜಾಲ’ ಓದಲು ಬಾರದ ಜನರಿಗೆ, ವಿಶೇಷವಾಗಿ ಹಳ್ಳಿಗರಿಗೆ ಜಲ ಸಂರಕ್ಷಣೆಯ ಬಾನುಲಿ ಕೈಪಿಡಿಯಿದ್ದಂತೆ.
ಆಕಾಶವಾಣಿಯಲ್ಲಿ ಜಲಜಾಲ
ಶುದ್ಧ ಕುಡಿಯುವ ನೀರಿನ ಲಭ್ಯತೆ ಮರೀಚಿಕೆಯಾಗುತ್ತಿರುವ ಈ ದಿನಗಳಲ್ಲಿ ಎಲ್ಲರೂ ಈ ಕುರಿತು ಚಿಂತಿಸುವಂತೆ, ಜಲ ಸಂರಕ್ಷಣೆಗೆ ಮುಂದಾಗುವಂತೆ ಮಾಡುವ ಆಕಾಶವಾಣಿಯ “ಜಲಜಾಲ” ಕಾರ್ಯಕ್ರಮವನ್ನು ಪ್ರತಿ ಭಾನುವಾರ ರಾತ್ರಿ 8 ಗಂಟೆಗೆ ಆಕಾಶವಾಣಿಯ 612 ಕಿಲೋಹರ್ಟ್ಸ್ ತರಂಗಾಂತರಗಳಲ್ಲಿ ಕೇಳಬಹುದು.
ನೀರ ಸ್ವಾವಲಂಬನೆಯ ಚಿಕ್ಕಣ್ಣನಹಳ್ಳಿ ಶಾಲೆ
ಕೊರಟಗೆರೆ ತಾಲ್ಲೂಕು ತೋವಿನಕೆರೆ ಬಳಿಯ ಚಿಕ್ಕಣ್ನನಹಳ್ಳಿ ಪ್ರೈಮರಿ ಶಾಲೆಯ ಸುತ್ತ ತಂತಿ ಬೇಲಿ. ಕಬ್ಬಿಣದ ಗೇಟು. ಯಾವ ದಿಕ್ಕಿನಿಂದಲೂ ಒಳ ಹೋಗಲು ಸಾಧ್ಯವಿಲ್ಲದಂತಹ ರಕ್ಷಣೆ. ಅರೆ ಶಾಲೆಗೇಕೆ ಈ ಪರಿಯ ಭದ್ರತೆ ಎಂದುಕೊಂಡು ಗ್ರಾಮದ ನಾರಾಯಣಗೌಡರನ್ನು ಕೇಳಿದರೆ ಅವರು “ ಸ್ಕೂಲ್ ಗೆ ಮಳೆ ನೀರು ಸಂಗ್ರಹಣೆ ಮಾಡೈತೆ, ಮಕ್ಳು ಮರಿ ಹೋಗಿ ಗಲೀಜ್ ಮಾಡ್ದಂಗಿರ್ಲಿ ಮತ್ತೆ ಪೈಪುಗಳ್ನ ಹೊಡಿದಂಗಿರ್ಲಿ ಅಂತ ಬೇಲಿ ಹಾಕಿದಿವಿ” ಎಂದರು.
ತುಮಕೂರಿನ ಸಮುದಾಯ ರೇಡಿಯೋ ಎಲ್ಲಾ ಕಾರ್ಯಕ್ರಮಗಳನ್ನು ಇಲ್ಲಿ ಕೇಳಿ
ಅರ್ಘ್ಯಂ ಪ್ರಾಯೋಜಿತ “ಮಾಯದಂಥ ಮಳೆ” ಕಾರ್ಯಕ್ರಮ
ಅರ್ಘ್ಯಂ ಪ್ರಾಯೋಜಿತ “ಮಾಯದಂಥ ಮಳೆ” ಕಾರ್ಯಕ್ರಮವು ಕಳೆದ ವರ್ಷ, ಅಂದರೆ ಜುಲೈ 26, 2007ರಂದು ಚಿತ್ರದುರ್ಗ ಎಫ್.ಎಮ್ ರೇಡಿಯೋದಲ್ಲಿ 15 ಕಂತುಗಳಲ್ಲಿ ಪ್ರಸಾರವಾಯಿತು. ಪ್ರತಿ ಗುರುವಾರ, ಬೆಳಿಗ್ಗೆ 7.45ಕ್ಕೆ ಪ್ರಸಾರಗೊಂಡ ಇದು, ಮಳೆನೀರು ಸಂಗ್ರಹಣೆಯ ಅವಶ್ಯಕತೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ಒತ್ತು ನೀಡಿತು.
ಮಳೆಯನ್ನು ಕುರಿತಾದ ಹಾಡುಗಳು, ಗಾದೆಗಳು, ಕೇಳುಗರ ಉತ್ತರವನ್ನು ಆಹ್ವಾನಿಸಿದ ಒಗಟುಗಳು, ಮಳೆಯ ಸುತ್ತ ಹೆಣೆದ ನಂಬಿಕೆಗಳು ಹಾಗೂ ಚರ್ಚೆಗಳು ಕಾರ್ಯಕ್ರಮಕ್ಕೆ ಮೆರಗು ನೀಡಿತು. ಕೇಳುಗರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಪತ್ರದ ಮೂಲಕ ಹಂಚಿಕೊಳ್ಳುವ ವ್ಯವಸ್ಥೆಯನ್ನೂ ಕಾರ್ಯಕ್ರಮವು ಹೊಂದಿತ್ತು. ಜೊತೆಗೆ, ಅರ್ಘ್ಯಂ ಸಂಸ್ಥೆಯ ವ್ಯವಸ್ಥಾಪಕರು, ಮಳೆನೀರು ಕೊಯ್ಲಿನ ತಜ್ಞರು, ಹಾಗೂ ಮಳೆನೀರು ಕೊಯ್ಲು ಮಾಡಿಸಿದ ನಾಗರೀಕರ ಸಂದರ್ಶನಗಳು ಕಾರ್ಯಕ್ರಮದ ಉಪಯುಕ್ತತೆಯನ್ನು ಹೆಚ್ಚಿಸುವುದರ ಜೊತೆಗೆ, ಅದಕ್ಕೆ ಪರಿಪೂರ್ಣತೆಯನ್ನು ನೀಡಿತು.
- 1324 reads
Email this page
Printer-friendly version









Recent comments
1 hour 15 min ago
6 days 12 hours ago
6 days 22 hours ago
1 week 4 days ago
1 week 6 days ago
2 weeks 5 hours ago
2 weeks 7 hours ago
2 weeks 2 days ago
2 weeks 3 days ago
2 weeks 3 days ago