ಏಪ್ರಿಲ್ 30ರಂದು ಶಾರದ ಪ್ರಸಾದ್ ರವರು ಕೊಚ್ಚಿನ್ ನಿಂದ ಹೊರಟ ದಿನದ ಬಗ್ಗೆ ಬರೆದಿದ್ದಾರೆ. ಅದರ ತುಣುಕುಗಳನ್ನು ಇಲ್ಲಿ ನೋಡಿ:
ಏಪ್ರಿಲ್ 30ರಂದು ನಾವು ಕೊಚ್ಚಿನ್ ನಿಂದ ಹೊರೆಟೆವು. 30 ನಿಮಿಷಗಳಲ್ಲಿ NH-17 ಅನ್ನು (ರಾಷ್ಟ್ರೀಯ ಹೆದ್ದಾರಿ - 17) ತಲುಪಿದೆವು. NH-17 ಬಹಳ ಕಿರಿದಾದ ಹೆದ್ದಾರಿಯಾಗಿದ್ದು, ಅದರ ಇಕ್ಕೆಲೆಗಳಲ್ಲಿ ಹಲವಾರು ಪಟ್ಟಣಗಳು ಹಾಗೂ ನಗರಗಳನ್ನು ಕಾಣಬಹುದು. ಕೇರಳ ರಾಜ್ಯ ತಲಪುವ ವೇಳೆಗೆ, ಅದು ಜನರು ಹಾಗೂ ಬಸ್ಸುಗಳಿಂದ ಕಿಕ್ಕಿರಿದು ತುಂಬಿರುತ್ತದೆ. ಕ್ರಮಿಸುವ ದೂರ ಬಹಳಷ್ಟಲ್ಲದಿದ್ದರೂ, ಸುಮಾರು 40 ಕಿಲೋಮೀಟರ್ ನಷ್ಟು ದೂರ ಹೋದೆವು. ಕರ್ನಾಟಕದ
ಭಾಗದಲ್ಲಿ ಹೆದ್ದಾರಿಯು ಸ್ವಲ್ಪ ಅಗಲವಾಗಿದೆ, ಜನಸಂದಣಿಯೂ ಕಡಿಮೆ. ಗೋವೆಯ ಭಾಗದಲ್ಲಿ
ನಿಸರ್ಗ ಸೌಂದರ್ಯ ಕೇರಳ ರಾಜ್ಯದಲ್ಲಿ ಇರುವಷ್ಟೇ ಚೆನ್ನಾಗಿದೆ - ಅದು ಘಾಟಿಯ ದಾರಿ. ಮಹಾರಾಷ್ಟ್ರ ವಿಭಾಗವು ಅಷ್ಟು ಹಚ್ಚಹಸಿರಿನಿಂದ ತುಂಬಿರದಿದ್ದರೂ, ಕಣ್ಣಿಗೆ ತಂಪು ನೀಡುತ್ತದೆ. ರಾಷ್ಟ್ರೀಯ ಹೆದ್ದಾರಿ - 17ರ 65% ಭಾಗವು ಫಾಟಿಯಿಂದ ಕೂಡಿರುವಂತಹುದು. ಘಾಟಿಯಲ್ಲಿ ಪಯಣಿಸುವಾಗ ಸಹಜವಾಗಿಯೇ ವೇಗ ಕಡಿಮೆಯಾಗುತ್ತದೆ. ಆದ್ದರಿಂದ ಈ ಹಾದಿಯಲ್ಲಿ ಮಾರ್ಗಗಳನ್ನು ಯೋಜಿಸುವಾಗ ಇದನ್ನು ಗಣನೆಗೆ ತೆಗೆದುಕೊಳ್ಳಬೇಕು.
ಈ ಹೆದ್ದಾರಿಯಲ್ಲಿ ನಾವು ಸುಮಾರು 1,200 ಕಿಲೋಮೀಟರ್ ದೂರ ಹಾಗೂ ಮೂರು ದಿನಗಳನ್ನು ಕಳೆದೆವು. ಕೊನೆಗೂ ರಾಷ್ಟ್ರೀಯ ಹೆದ್ದಾರಿ 17ಕ್ಕೆ ವಿದಾಯ ಹೇಳಿ, ಮಹಾಬಲೇಶ್ವರದ ಮೂಲಕ ಹಾದು ಹೋಗುತ್ತ ರಾ.ಹೆ.4ಕ್ಕೆ ಬಂದು ಸೇರಿದೆವು.
ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ: http://www.indiawaterportal.org/k2k/2008/05/
- 1234 reads
Email this page
Printer-friendly version
ವಿಶೇಷ ಬರಹಗಳು
Recent blog posts
Poll
Recent comments
- ಎಲ್ಲಿರೋದು
3 hours 12 min ago - ಹರಿ, ನೀರು
6 days 14 hours ago - ಕುಡಿಯುವ
1 week 20 min ago - ಹಳ್ಳಿಗಳಿಂ
1 week 4 days ago - ನಿಮ್ಮ ಸಾಹಸ
1 week 6 days ago - Idu ondu athytammavaada
2 weeks 7 hours ago - Dear Mr. Mallikarjuna,
can
2 weeks 9 hours ago - neevu kalisiro salahe
2 weeks 3 days ago - ಧನ್ಯವಾದ
2 weeks 3 days ago - ಈ ಉಪಯುಕ್ತ
2 weeks 4 days ago









ಹೊಸ ಕಾಮೆಂಟ್ ಸೇರಿಸಿ