ವಿದ್ಯುತ್ ಉಚಿತ... ಷಾಕ್ ಖಚಿತ!

ಲೇಖನ: - ಸುಗ್ಗಿ
ವ್ಯಂಗ್ಯ ಚಿತ್ರ: ಹರಿ ಪ್ರಸಾದ್ ನಾಡಿಗ್
“ಒಲೆಗೆ ಉರುವಲು ಇಲ್ಲ ಎಂದು ಕಲ್ಪವೃಕ್ಷವನ್ನು ಕಡಿವರುಂಟೆ...?”
ಇಂಥದೊಂದು ಉದಾಹರಣೆ ಆ ಆಧುನಿಕ ಸಂದರ್ಭ ಕಾಣಬೇಕು ಎಂದರೆ ಕರ್ನಾಟಕಕ್ಕೆ ಬನ್ನಿ. ಬಜೆಟ್ ನೋಡಿ.
ರೈತರ ಅಧಿನಾಯಕನೆಂದೇ ಕರೆಸಿಕೊಳ್ಳಲು ಖುಷಿ ಪಡುವ, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ರೈತರಿಗೆ ಬಹುದೊಡ್ಡ ಬಳುವಳಿ ನೀಡಿದ ನೆಮ್ಮದಿಯಲ್ಲಿದ್ದಾರೆ. ಆದರೆ, ಅವರ ಈ ಆಶಯ ದೂರದೃಷ್ಟಿಯುಳ್ಳದ್ದೇ ಎಂಬುದು ನಿಜಕ್ಕೂ ವಿಚಾರ ಮಾಡಬೇಕಾದ ವಿಷಯ.

ನಿಜ, ರೈತರು ಕಷ್ಟದಲ್ಲಿದ್ದಾರೆ. ರೈತರಿಗೆ ನೆರವು ನೀಡಲೇಬೇಕು. ಮುಖ್ಯಮಂತ್ರಿಗಳ ಈ ಯೋಜನೆ ರೈತರ ಪರ ನಿಲುವೇನೋ ಸರಿ. ಆದರೆ, ಇದರ ದೂರಗಾಮಿ ಪರಿಣಾಮ ಜೀವ ವಿರೋಧಿಯೂ ಆಗಿರುವುದು ದುರಂತ. ಇಂದಿನ ಬವಣೆ ನೀಗಿಸಿಕೊಳ್ಳುವ ಭರದಲ್ಲಿ ಭವಿಷ್ಯದ ಬೊಕ್ಕಸಕ್ಕೆ ಬೊಕ್ಕೆ ಹಾಕುವುದು ಸರಿಯೇ? ಮುಖ್ಯಮಂತ್ರಿಗಳ ಈ ಕ್ರಮ ಭವಿಷ್ಯದ ರೈತಾಪಿ ಕುಲಕ್ಕೆ ಕಂಟಕವಾಗುವುದರಲ್ಲಿ ಸಂದೇಹವಿಲ್ಲ.

ಇಷ್ಟೆಲ್ಲಾ ಹೇಳಬೇಕಾಗಿ ಬಂದಿದ್ದು ರೈತರಿಗೆ ಉಚಿತ ವಿದ್ಯುತ್ತು ನೀಡಲು ಸರ್ಕಾರ ಮುಂದೆ ಬಂದಿದ್ದರಿಂದ.

ಈ ಯೋಜನೆ ಕಾರ್ಯಸಾಧುವಲ್ಲ, ಎಂಬುದು ಈಗಾಗಲೇ ಹಲವಾರು ಬಾರಿ, ಹಲವಾರು ರಾಜ್ಯಗಳಲ್ಲಿ –ನಮ್ಮ ರಾಜ್ಯವೂ ಸೇರಿದಂತೆ, ಸಾಬೀತಾಗಿದೆ. ಈ ಯೋಜನೆಯನ್ನು ವಿರೋಧಿಸುತ್ತಿರುವವರೂ, ವಿದ್ಯುತ್ ಸಮಸ್ಯೆ, ಬೊಕ್ಕಸಕ್ಕೆ ಭಾರ ಎಂದೆಲ್ಲಾ ಕಾರಣ ಕೊಡುತ್ತಿದ್ದಾರೆ. ಅದು ನಿಜವೂ ಇರಬಹುದು. ಆದರೆ, ಬಹುಮುಖ್ಯ ಮೂಲ ಕಾರಣವೊಂದು ಹಿನ್ನೆಲೆಯಲ್ಲೇ ಉಳಿದು ಬಿಟ್ಟಿದೆ. ಅದು ಅಂತರ್ಜಲ.

ಉಚಿತ ವಿದ್ಯುತ್ತಿನ ಉದ್ದೇಶ ನೆಲದ ಒಡಲಿನಿಂದ ಜಲವನ್ನು ಹೀರುವುದು. ಈ ಯೋಜನೆಯ ಮೊದಲ ಸಂದೇಶ ಎಂದರೆ, ಅಂತರ್ಜಲವನ್ನು ಬಯಲಿಗೆಳೆಯಲು ಮುಕ್ತ ಪರವಾನಗಿ. ಯಾರು ಎಷ್ಟು ಬೇಕಾದರೂ ಉಚಿತವಾಗಿ ಬಳಸಬಹುದು.
ಹೌದು, ಸ್ವಾಮಿ ದೇಶದಲ್ಲಿ ಪ್ರತಿಯೊಂದಕ್ಕೂ ಕಡಿವಾಣ ಇದೆ. ನೀರೂ ಸೇರಿದಂತೆ ಪ್ರಕೃತಿಯ ಪ್ರತಿಯೊಂದು ಸಂಪನ್ಮೂಲವನ್ನು ವಿವೇಚನೆಯಿಂದ ಬಳಸಲೇಬೇಕಾದ ಕಾಲ ಬಂದಿದೆ. ಹಾಗಿದ್ದಾಗ, ರೈತರನ್ನು ಬದುಕಿಸುವ ಹೆಸರಿನಲ್ಲಿ, ರೈತರ ಭೂಮಿಯನ್ನು ಬಂಜರು ಮಾಡುವ, ಅವರ ನೆಲದಲ್ಲಿ ಅವರನ್ನೇ ಹೆರವಾಗಿಸುವ ಪ್ರಯತ್ನ ಏಕೆ.
ಭಾಗಶಃ, ವಚನ ಪಾಲನೆಯ ಒತ್ತಡದಲ್ಲಿ ಮುಖ್ಯಮಂತ್ರಿಗಳು ಈ ನಿರ್ಧಾರವನ್ನು ಕೈಗೊಂಡಂತಿದೆ. ವಿದ್ಯುತ್ತನ್ನು ಹೇಗೋ ಹೊಂದಿಸಿ, ಖರೀದಿಸಿ ಕೊಡಬಹುದು –ಅದೋ ನಾಲ್ಕೋ ಐದೋ ತಾಸು. ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗಬಹುದು. ಆದರೆ, ಭೂಮಿಯ ಬೊಕ್ಕಸವೇ ಬರಿದಾದರೆ, ತುಂಬುವವರು ಯಾರು.

ಈಗಾಗಲೇ ಅಂತರ್ಜಲ ಅಂತರ್ಧಾನವಾಗುತ್ತಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಅದು ಪಾತಾಳ ಕಂಡಿದೆ. ಒಂದು ಅಂದಾಜಿನ ಪ್ರಕಾರ, ರಾಜ್ಯದ ಕೆಲ ಬರಪ್ರದೇಶಗಳಲ್ಲಿ ಪ್ರತಿ ವರ್ಷ ಅಂತರ್ಜಲದ ಮಟ್ಟ ಸರಾಸರಿ 2 ಮೀಟರ್ ಗಳಷ್ಟು ಕುಸಿತ ಕಾಣುತ್ತಿವೆ. ಇನ್ನು ಚಿತ್ರದುರ್ಗ, ದಾವಣಗೆರೆ, ಕೋಲಾರಗಳಂಥ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಈಗಾಗಲೇ 800 ಅಡಿಗಳಾಚೆ ಹೋಗಿ ಬಿಟ್ಟಿದೆ.

ಹೀಗಾದರೂ ನೀರು ಸಿಗುತ್ತದಲ್ಲಿ, ರೈತರು ಬಳಸಿಕೊಳ್ಳಲಿ ಬಿಡಿ, ಚಿಂತೆಯಿಲ್ಲ ಎಂದೂ ಸುಮ್ಮನಾಗುವಂತಿಲ್ಲ. ಏಕೆಂದರೆ, ಆಳದಿಂದ ನೀರು ತೆಗೆದಂತೆಲ್ಲಾ ನೀರಿನಲ್ಲಿ ಖನಿಜ, ಲವಣಾಂಶಗಳು ವಿಪರೀತವಾಗಿ ಹೆಚ್ಚುತ್ತವೆ. ಅದು ಬಳಕೆಗೆ ಯೋಗ್ಯವಾಗುವುದು ಕಷ್ಟ. ಅದನ್ನೇ ಬಳಸಿ, ಬೆಳೆ ಬೆಳೆದರೆ, ಆ ಉತ್ಪನ್ನಗಳೂ ಖನಿಜ-ಲವಣಾಂಶಗಳು ಹೊಂದಿರುವವೇ ಆಗುತ್ತದೆ. ಅಲ್ಲದೇ, ಯಾವ ಭಾಗದ ನೀರಿನಲ್ಲಿ ಯಾವ ಬಗೆಯ ಲವಣಾಂಶಗಳಿವೆಯೋ, ಅವುಗಳಿಂದ ಬಿತ್ತನೆಯ ಯಾವ ಪರಿಣಾಮವಾಗುವುದೋ ಬಲ್ಲವರಾರು?

ರೈತರಿಗೆ ಬರೀ ಉಚಿತ ವಿದ್ಯುತ್ತು ನೀಡಿದರೆ ಸಾಲದು ಸ್ವಾಮಿ, ಗುಣಮಟ್ಟದ ವಿದ್ಯುತ್ತೂ ಕೊಡಿ ಎಂದು ಹೇಳುವ ಜನ, ನೀರಿನ ಗುಣಮಟ್ಟದ ಬಗ್ಗೆ ಯಾಕೆ ದನಿಯೆತ್ತುವುದಿಲ್ಲ. ಉಚಿತ ವಿದ್ಯುತ್ತಿನ ಬಗ್ಗೆ ಏನೆಲ್ಲಾ ಸರ್ಕಸ್ಸುಗಳು ನಡೆಯುವ ಸಂದರ್ಭದಲ್ಲಿ ಜವಾಬ್ದಾರಿಯುತ ಸರ್ಕಾರವಾಗಲೀ, ಅದರ ಪ್ರತಿನಿಧಿಗಳಾಗಲೀ, ರೈತರ ಸಂಘಟನೆಗಳಾಗಲಿ, ರೈತನಾಯಕರುಗಳಾಗಲಿ, ಕೊನೇ ಪಕ್ಷ ರೈತರ ಕೆಲವು ಗುಂಪುಗಳಾಗಲೀ, ಅಂತರ್ಜಲ ಅಂತರ್ಧಾನವಾಗುತ್ತಿರುವ ಬಗ್ಗೆ ಚಕಾರ ಎತ್ತಿಲ್ಲದಿರುವುದೇ ಸೋಜಿಗ.

ಅಲ್ಲದೇ, ಈ ಉಚಿತ ವಿದ್ಯುತ್ತೂ ರೈತರ ಬದುಕನ್ನು ಹಸನಾಗಿಸೀತು ಎಂಬ ಬಗ್ಗೆ ಯಾವುದೇ ಗ್ಯಾರಂಟಿಯಿಲ್ಲ. ಇದರ ಬದಲಿಗೆ ಅಂತರ್ಜಲವನ್ನು ಜತನದಿಂದ ಹೇಗೆ ಬಳಸಬೇಕು, ನೀರಿನ ಮಿತ ಬಳಕೆಯಿಂದ ಎಂಥೆಂಥ ಬೆಳೆಗಳನ್ನು ಹೇಗೆ ಹೇಗೆ ಬೆಳೆಯಲು ಸಾಧ್ಯ ಎಂಬುದನ್ನು ರೈತರಿಗೆ ಕಲಿಸಬೇಕು.
ರಾಜ್ಯದ ಬಹುತೇಕ ರೈತರು ಉಚಿತ ವಿದ್ಯುತ್ತಿನ ಬೇಡಿಕೆಯನ್ನೇ ಮುಂದಿಟ್ಟಿರಲಿಲ್ಲ ಎಂಬುದು ವಿಶೇಷ. ಏಕೆಂದರೆ, ರಾಜ್ಯದ ವಿದ್ಯುತ್ತಿನ ಹಾಗೂ ಅಂತರ್ಜಲದ ಸ್ಥಿತಿಯ ಕುರಿತು ಅವರಿಗೆ ಅರಿವಿದೆ. ಆದರೆ, ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆ ಈ ಪ್ರಕಟಣೆಯಲ್ಲಿ ಪರ್ಯಾವಸಾನವಾಯಿತು.
ಈ ಮಹತ್ವದ ನಿರ್ಧಾರದ ಪರಿಣಾಮಗಳನ್ನು ಅರಿಯಲಾದರೂ ಒಂದು ವ್ಯವಸ್ಥಿತವಾದ ಯತ್ನ ನಡೆಯುತ್ತಿದ್ದೆಯಾ ಅಂದರೆ ಅದೂ ಇಲ್ಲ. ಈ ಯೋಜನೆಯ ಪ್ರಯೋಜನವನ್ನು ಪಡೆಯುವ ಮುನ್ನ ಪೂರ್ವಾರ್ಹತೆಯಾಗಿ, ಅಂತರ್ಜಲ ಬಳಕೆಯ ಕುರಿತು ಜವಾಬ್ದಾರಿಗಳನ್ನು ಮನವರಿಕೆ ಮಾಡಿಕೊಡುವ ಜರೂರು ಇದೆ. ಈ ಯೋಜನೆಯ ಅಡ್ಡ ಪರಿಣಾಮಗಳನ್ನು ಅಂದಾಜಿಸುವ ಹಾಗೂ ಅದನ್ನು ಸಮರ್ಥವಾಗಿ ನಿಭಾಯಿಸುವ ಪ್ರಯತ್ನಗಳು ಬೇಕಿವೆ. ಈ ಯೋಜನೆ ಜಾರಿಯಾದ ಬಳಿಕ ಅಂತರ್ಜಲ ಪ್ರಮಾಣ ಎಷ್ಟು ಬಳಕೆಯಾಯಿತು, ಎಷ್ಟಕ್ಕೆ ಕುಸಿಯಿತು, ಎಷ್ಟು ನೀರು ಪೋಲಾಯಿತು, ಎಂಥ ನೀರು ಬಂತು ಎಂಬೆಲ್ಲ ಅಂಶಗಳತ್ತ ಕೂಡಲೇ ಗಮನ ಹರಿಸಬೇಕಿದೆ. ಜೊತೆಗೆ ಯಾರು ಎಷ್ಟು ನೀರೆತ್ತಿದ್ದರು, ಎಷ್ಟು ಮರುಪೂರಣ ಮಾಡಲಾಯಿತು ಎಂಬ ಮಾಹಿತಿಗಳನ್ನೂ ಸಾಕಷ್ಟು ನಿಖರವಾಗಿಯೇ ಕಲೆ ಹಾಕಬೇಕಿದೆ. ಇದರ ಪರಿಣಾಮಗಳೇನು, ಪರಿಹಾರಗಳೇನು ಎಂಬುದನ್ನು ವೈಜ್ಞಾನಿಕವಾಗಿ ಅಭ್ಯಸಿಸಬೇಕಿದೆ.
ಅಂತರ್ಜಲ ಬತ್ತಿದೆಡೆ ಭೂಮಿಯ ಫಲವತ್ತತೆ ನಾಶವಾಗುತ್ತದೆ. ಮರಳುಗಾಡು ಬೆಳೆಯುತ್ತದೆ. ಅಂಥ ಸಂದರ್ಭದಲ್ಲಿ ನಮ್ಮ ಸರ್ಕಾರಗಳು ನಿರಾಳವಾಗಿರಬಹುದು ಏಕೆಂದರೆ, ಬೀಜ,ಗೊಬ್ಬರ, ಸಬ್ಸಿಡಿ, ಬೆಲೆ ಕುಸಿತ, ಬೆಂಬಲ ಬೆಲೆ, ಇತ್ಯಾದಿ ಯಾವ ಗೊಡವೆಯೂ ಇರುವುದಿಲ್ಲ. ರೈತರಿಗೂ ಯಾವುದೇ ಸಮಸ್ಯೆಯಿರುವುದಿಲ್ಲ. ಏಕೆಂದರೆ, ಆತ್ಮಹತ್ಯೆ ಮಾಡಿಕೊಳ್ಳಲೂ ರೈತರಿರುವುದಿಲ್ಲ. ರೈತಾಪಿ ವರ್ಗವೇ ನಾಶವಾಗಿ ಹೋಗಿರುತ್ತದೆ. ಅಂದಹಾಗೆ, ಮರಳುಗಾಡಿನಲ್ಲಿಯೂ ಒಂದು ಬಗೆಯ ಹುಲ್ಲು ಬೆಳೆಯುತ್ತದೆ, ಅದಕ್ಕೆ ವಿಪರೀತ ಬೇಡಿಕೆಯಂತೆ. ಅದು ಇಲ್ಲಿಯೂ ಬೆಳೆಯುತ್ತದೋ ಹೇಗೆ, ಅದನ್ನು ಮಾರಾಟ ಮಾಡುವ ತಂತ್ರ ಯಾವುದು, ಬಳಕೆ ಸಾಧ್ಯತೆಯೇನು ಎಂಬಿತ್ಯಾದಿಗಳ ಬಗ್ಗೆ ಎಗ್ಗಿಲ್ಲದೇ ಚರ್ಚಿಸಬಹುದು, ಯೋಜನೆಗಳನ್ನು ಹೆಣೆಯಬಹುದು.
ಹೌದು, ವಿದ್ಯುತ್ತಿಗೆ ಬೆಲೆ ನಿಗದಿ ಪಡಿಸುವ ಹಕ್ಕು, ಬಿಟ್ಟಿಯಾಗಿ ಕೊಡುವ ಹಕ್ಕು, ಬೇಕಾಬಿಟ್ಟಿಯಾಗಿ ಬಳಸುವ ಹಕ್ಕು, ಎಲ್ಲವೂ ಮುಖ್ಯಮಂತ್ರಿಗಳಿಗಿದೆ ಎಂದೇ ಇಟ್ಟುಕೊಳ್ಳೋಣ. ಆದರೆ, ನೀರು...? ಇದು ಎಲ್ಲರ ಹಕ್ಕು. ನೀರು ರಕ್ಷಿಸುವುದು ಹುಟ್ಟಿದವರ ಜವಬ್ದಾರಿ, ಹುಟ್ಟಲಿರುವವರ ಹಕ್ಕು. ಇದನ್ನು ತಿಳಿ ಹೇಳುವವರಾರು?
ಬರಿದಾದ ಭೂಮಿಯ ಮಡಿಲಿಗೆ ಮರುಪೂರಣ ಮಾಡುವ ಜವಬ್ದಾರಿ ನಿಗದಿ ಪಡಿಸದೇ, ಇಂಥ ಯೋಜನೆ ಹೆಣೆಯುವುದು ಕುಡಿದ ಕುದುರೆಗೆ ಕಡಿವಾಣ ಕಳಚಿ ಸವಾರಿ ಮಾಡಿದಂತೆ ಎಂಬುದನ್ನು!

beMgaLUru
22, July 2008

snEhita/snEhiteyare,

pakkadamane hudugi hELuttALe : naanaadarU 2 dinakkomme snaana maadutteeni miss, namma classalli vaarakkomme snaana maadi baruva makkalannu teacher hindina benchalli kullirisuttaare. A makkaLa placenalli omme nintu yochisi prajnavanta prajegalu neerina balake, mitavyayavannu alavadisidare eshtu chenna endanisuttide. bengaloorina nalligaligella cap haakisuvudarinda eshtoo makkalu snaana maadalu neeru sigabahudu.

Excellent rendering of the problems and issues, reflecting all along great concern for human existence. Congratulations and special appreciation to the author.
M.S.Thimmappa.

ನೀವು ಬರೆದದ್ದು ನೂರಕ್ಕೆ ನೂರರಷ್ಟು ನಿಜ ...

ನಾನು ಬೇರೆ ದೇಶದಲ್ಲಿದ್ದಾಗ ನಮ್ಮವರೇ ಆದ ಕೆಲವು ಭೂ ವಿಜ್ಞಾನಿಗಳ ಜೊತೆ ಮಾತಾಡುವಾಗ ಈ ಬಗ್ಗೆ ವಿಚಾರ ವಿನಿಮಯ ನಡೆದಿತ್ತು ... ಅವರು ಹೇಳುವಂತೆ ನಮ್ಮಲ್ಲಿಯಷ್ಟು ಸಲೀಸಾಗಿ ಭೂಮಿಯಲ್ಲಿನ ನೀರನ್ನು ಬಳಸಲು ಎಲ್ಲಿಯೂ ಸಾಧ್ಯವಿಲ್ಲ (ಲಂಚ, ಭ್ರಷ್ಟಾಚಾರ). ಇದರಿಂದ ನಮ್ಮಲ್ಲಿಯ ಅಂತರ್ಜಲದ ಮಟ್ಟ ವಿಪರೀತ ಕುಸಿದಿದ್ದು ಅವರ ಕಳವಳಕ್ಕೆ ಕಾರಣವಾಗಿತ್ತು. ವಿದ್ಯುತ್ತು ಉಚಿತ ಕೊಡಿ ಆದರೆ ಕೊಳವೆ ಬಾವಿಗಳ ಆಳವನ್ನು ನಿಗದಿಪಡಿಸಿದರೆ ಇದರ ಸದುಪಯೋಗವಾಗುವುದು ಎಂದು ನನ್ನ ಅನಿಸಿಕೆ ... ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಆಳದಲ್ಲಿ ಯಾರಾದರೂ ಕೊಳವೆ ಬಾವಿ ತೋಡಿದರೆ ಅದನ್ನು ಮುಚ್ಚಿಸಿಬಿಡಬೇಕು. ಆದರೆ ಇದನ್ನು ಕಾರ್ಯರೂಪಕ್ಕೆ ತರಲು ಲೋಕಾಯುಕ್ತದಂಥ ಒಂದು ವಿಭಾಗವೇ ಬೇಕಾಗಬಹುದು ...

thanks for good suggesation we accept more storys on this

its necessary for refilling the water

Excellent article. Please send this to Hon'ble CM and his members. They wanted to live only for 5 years. They are doing all this circus for this. By this process entire generation will be deprived of water one day. With Petrol costing Rs. 50+ we are unable to walk in any road of Bangalore, we do not know what this Rs. 0/- current is going to do!!!!!!!!!!!!!!!!!!!! Anybody in India will recognise the importance of such resources only if he or she has to pay. India is sovereign democratic country..any body can do anything for any one anytime once if they get power!

All are not aware of this fact like deterioration of water quality at deep level due to excess utility or misutility which is indirectly supported by Government and artificial famine

ನಿಮ್ಮ ವ್ಯಂಗ್ಯಚಿತ್ರ ತುಂಬಾ ಚೆನ್ನಾಗಿದೆ.
ರೈತರಿಗೆ ಉಚಿತ ವಿದ್ಯುತ್ ಪೂರೈಸುವದು ತಪ್ಪಾಗಿರಬಹುದು. ಆದರೆ, ರೈತರಿಗೆ ಸಕಾಲದಲ್ಲಿ, ಸರಿಯಾದ ಬೆಲೆಯಲ್ಲಿ ಬೀಜ, ಗೊಬ್ಬರ ದೊರೆಯುತ್ತಿದೆಯೆ? ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರೆಯುತ್ತಿದೆಯೆ?
ಉಚಿತ ವಿದ್ಯುತ್ ಪೂರೈಸಲು ಮುಂದಾಗುವ ಸರಕಾರ, ರಸಗೊಬ್ಬರ ಕೊಳ್ಳುವಾಗ ನೇರವಾಗಿ ರೈತರಿಗೇ ಸಬ್ಸಿಡಿ ಕೊಡಬಹುದು. ಆದರೆ ಸಬ್ಸಿಡಿಯನ್ನು ರಸಗೊಬ್ಬರ ಕಾರಖಾನೆಗಳಿಗೆ ಕೊಡುತ್ತದೆ. ಏಕೆಂದರೆ, ಈ ಕಾರಖಾನೆಗಳು ತಮಗೆ ದೊರೆಯುವ ಸಬ್ಸಿಡಿಯ ಮೇಲೆ ಕಮಿಶನ್ ಕೊಡುತ್ತವೆ. ರೈತನಾದರೆ ಕೊಡಲಾರ. ಆದುದರಿಂದ ಉಚಿತ ವಿದ್ಯುತ್ ಸಹ ಒಂದು ರೀತಿಯ ಸಬ್ಸಿಡಿ ಎಂದು ಏಕೆ ಭಾವಿಸಬಾರದು?

ಉತ್ತಮ ಲೇಖನ.ಉಚಿತ ವಿದ್ಯುತ್ತಿನ ಹಿಂದೆ ಇರುವ ಗಂಭೀರ ಸಮಸ್ಯೆಯನ್ನು ಮನ ಮುಟ್ಟುವಂತೆ ನಿರೂಪಿಸಿದ್ದೀರಿ.ಆದರೆ ನಮ್ಮನ್ನಾಳುವವರಿಗೆ ಇದು ಎಷ್ಟರಮಟ್ಟಿಗೆ ಮುಟ್ಟೀತು?. ಒಬ್ಬರು ರೈತೋದ್ಧಾರಕ್ಕೆ ಉಚಿತ ವಿದ್ಯುತ್ ಕೊಟ್ಟರೆ ಇನ್ನೊಬ್ಬರು ಸಾಲಮನ್ನಾ ಎಂದು ರೈತರನ್ನು ವಂಚಿಸಲು ಪ್ರಯತ್ನಿಸುತ್ತಾರೆ.ಕಡಿಮೆ ಬಡ್ಡಿಯ ಸಾಲ, ಕಡಿಮೆ ಕ್ರಯದ ಗುಣಮಟ್ಟದ ವಿದ್ಯುತ್, ರೈತರಿಗೆ ಬೇಕಾದ ಬೆಳೆಮಾಹಿತಿ,ಉತ್ತಮ ಮಾರುಕಟ್ಟೆ ವ್ಯವಸ್ಥೆ, ಅಗತ್ಯ ಸಂದರ್ಭದಲ್ಲಿ ಬೆಂಬಲ ಬೆಲೆಯ ಮೂಲಕ ರೈತರ ಸಮಸ್ಯೆಗಳಿಗೆ ಸ್ಪಂದನ ಇದನ್ನೆಲ್ಲಾ ಒದಗಿಸಿದರೆ ರೈತರ ಸಮಸ್ಯೆ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗ ಬಹುದು.ಆದರೆ ರಾಜಕಾರಣಿಗಳಿಗೆ ಓಟು ಬರುತ್ತದೆಯೇ?

Sir,

Red your article on free issue of electricity, as u informed nobody(particularlypolotical leaders) will care for ground water level. As I see at Sirsi, grame panchayat had allotted funds for digging pits at several places in forest area. This scheme had gone well in the first year then it will go earth. But funds are still utilised in that name. Instead of giving un-realistic assurance to public by political leaders, let them contol founds allotted for saving ground water. If control put on towards utilisation of funds in several schemes, there will be no need for issue of free issueof electricity.

by ; Ramachendir

ಉತ್ತಮ ಲೇಖನ.

Exelnt article. can our "ratitha sanga"educate our farmers about this.also govt agencies must guide about crops to be grown and water conservation

ಉತ್ತಮ ಲೇಖನ. ಆದರೆ ನನಗೆ ಒಂದು ವಿಷಯ ಅರ್ಥವಾಗುತ್ತಿಲ್ಲ. ಕೇವಲ ಒಂದು ತುದಿಯಲ್ಲಿ ನಿಂತು ನಾವು ಈ ಸಮಸ್ಯೆಯನ್ನು ನೋಡುತ್ತಿದ್ದೇವೆ. ಇದರ ಇನ್ನೊಂದು ಬದಿಯಲ್ಲಿ ರೈತರಿದ್ದಾರೆ. ಅವರ ತಿಳಿಗೇಡಿತನದ ಬಗ್ಗೆ ಮಾತನಾಡುವ ನಾವು, ಅವರನ್ನು ಸರಿಪಡಿಸಲು ಏನು ಮಾಡುತ್ತಿದ್ದೇವೆ? ಅವರಿಗೆ ತಾವು ಏನು ಮಾಡುತ್ತಿದ್ದೇವೆ ಎಂಬ ಅರಿವು ಇದ್ದಿದ್ದರೆ ಈ ತೊಂದರೆಯೇ ಬರುತ್ತಿರಲಿಲ್ಲ. ಹಾಗಾದರೆ ಇದನ್ನು ತಿಳಿಸಿ ಹೇಳುವವರಾರು?

ಮತ್ತೆ ಇದೆಲ್ಲವನ್ನು ಸರ್ಕರದ ಮೇಲೆ ಎತ್ತಿ ಹಾಕಲು ನಾನು ತಯಾರಿಲ್ಲ. ನಮಗೆ ಗೊತ್ತಿದೆ - "ಸರ್ಕಾರ ಭ್ರಷ್ಟವಾಗಿದೆ. ಅದು ಯಾವ ಬಡವನ ಸಮಸ್ಯೆಗೂ ಸ್ಪಂದಿಸುವದಿಲ್ಲ" ಎಂದು. ಹಾಗಿದ್ದು, ನಾವು ಮತ್ತೆ ಸರ್ಕಾರವನ್ನು ಬೈದು ನಮ್ಮ ಸಮಯ ಹಾಳು ಮಾದಿಕೊಳ್ಳುತ್ತೇವೆ. ಅದರ ಬದಲು, ರೈತರಿಗೆ alternate ನೀರಿನ ಮೂಲಗಳನ್ನು ಪರಿಚಯಿಸಿ. ಒಂದು ಸತ್ಯವನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕು- ರೈತರು ನಮ್ಮಂತೆ ಸುರಕ್ಷಿತ ಬದುಕು ನಡೆಸುತ್ತಿಲ್ಲ. ದಿನನಿತ್ಯ ಅವರಿಗೆ ಭವಿಷ್ಯದ ಸಮಸ್ಯೆ ಕಾಡುತ್ತಿರುತ್ತದೆ. ಯಾರೂ ಅವರಿಗೆ ಪ್ರಾವಿಡೆಂಡ್ ಫ್ಂಡ್, ನಿವೃತ್ತಿ ವೇತನ ಕೊಡುವುದಿಲ್ಲ. ಅವರ ಬದುಕಿಗೆ ಏನು ಬೇಕೋ ಅದನ್ನು ಅವರೇ ಹೇಗಾದರೂ ಮಾಡಿ ದುಡಿದುಕೊಳ್ಳಬೇಕು. ಅದಕ್ಕೆ ನೀರು ಬೇಕು. ಇದು ಅನಿವಾರ್ಯ ಪರಿಸ್ಥಿತಿ. ಇದನ್ನರಿತುಕೊಂಡು ನಾವು, ಪರಿಹಾರಗಳನ್ನು ಸೂಚಿಸಬೇಕೆ ಹೊರತು, ಸಮಸ್ಯೆಯ ಹೊರಗೆ ನಿಂತು ಮಾತನಾಡಿದರೆ ಏನು ಲಾಭ?

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.