ನಿನ್ನೆ ಎರಡು ಕಾರಣಕ್ಕಾಗಿ ಮುಖ್ಯ ದಿನ. ಒಂದು ಅಂಧರ ಪಾಲಿಗೆ ಕಣ್ಣಾದ ಬ್ರೈಲ್ ಲಿಪಿ ನಿರ್ಮಾತೃ ಲೂಯಿ ಬ್ರೈಲ್ ನ ಜನ್ಮ ದ್ವಿಶತಮಾನೋತ್ಸವ. ಮತ್ತೊಂದು ಜಲಸಾಕ್ಷರತೆಯ ಬಗ್ಗೆ ಶ್ರೀ ಸಾಮಾನ್ಯರ ಕಣ್ಣು ತೆರೆಸುವ ನೀರ ನಿಶ್ಚಿಂತೆ ಕಾರ್ಯಕ್ರಮ ನಡೆದದ್ದು. ಕಾರ್ಯಕ್ರಮವು ಬೆಳಿಗ್ಗೆ ೧೦ ಗಂಟೆಗೆ ಮಂಗಳೂರಿನ ಕರ್ನಾಟಕ ಬ್ಯಾಂಕ್ ಉದ್ಯೋಗಿಗಳ ಸಂಘದ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಆಯೋಜಿಸಿ ಈ ಕಾರ್ಯಕ್ರಮದ ದಿಕ್ಸೂಚಿ ವಿಷಯಗಳನ್ನು ತಿಳಿಸಿಕೊಟ್ಟವರು ಶ್ರೀ ಅಡೂರು ಕೃಷ್ಣರಾವ್. ಮಂಗಳೂರು ಎಲ್ಲರೂ ಭಾವಿಸುವಂತೆ ಸಾಕಷ್ಟು ಮಳೆ ಬೀಳುವ ಪ್ರದೇಶ. ಆದರೆ ಸಮುದ್ರ ರಾಜನ ನೆಂಟು ಉಪ್ಪಿಗೆ ಬರ ಎಂಬಂತೆ ಬೇಸಿಗೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಳ್ಳೂತ್ತಿರುವ ನೀರಿನ ಅಭಾವದ ಕುರಿತು ಮಾತಾನಾಡಿದರು. ನೀರಿನ ಸರಿಯಾದ ಉಪಯೋಗದ ಕುರಿತು ಜನನಾಯಕರಿಗಿರುವ ನಿರ್ಲಕ್ಷ್ಯ, ನೀರನ್ನೇ ದಂಧೆ ಮಾಡಿಕೊಂಡಿರುವ ಹಲವಾರು ಹಿತಾಸಕ್ತಿಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಡರು.
ಅಡೂರ್ ಅವರು ಎತ್ತಿದ ಪ್ರಶ್ನೆಗಳ ಮೂಲಕ ಮಾತು ಆರಂಭಿಸಿದ ಖ್ಯಾತ ಅಂಕಣಕಾರ, ಜಲ ಸಾಕ್ಷರತಾ ಅರಿವು ಮೂಡಿಸುತ್ತಿರುವ ಶ್ರ್‍ಈ ಪಡ್ರೆಯವರು ಜನ ಸಾಮಾನ್ಯರು ತಮ್ಮ ತಮ್ಮ ನೆಲೆಗಳಲ್ಲಿ ಹೇಗೆ ಮಳೆ ನೀರನ್ನು ಬಳಸಿ ಜಲ ಮರುಪೂರಣದ ಮೂಲಕ ತಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು ಎಂಬುದನ್ನು ತಿಳಿಸಿದರು.
ಇಂತಹ ಜಲ ಸಂಬಂಧಿ ಸಮಸ್ಯೆಗಳನ್ನು ಜನರ, ಜನನಾಯಕರ ಮನಮುಟ್ಟಿಸಲು ಮಾಹಿತಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವ ಕುರಿತು ಮಾಹಿತಿ ನೀಡಿದವರು ಅರ್ಘ್ಯ ಸಂಸ್ಥೆಯ ಶಾರದಾ ಪ್ರಸಾದ್, ಸಂಪದದ ನಿರ್ವಾಹಕರಾದ ಹರಿಪ್ರಸಾದ್ ನಾಡಿಗ್ ಮತ್ತು ತಂತ್ರಜ್ಞ ವಸಂತ ಕಜೆ ಅವರು.
ಶಾರದ ಪ್ರಸಾದ್ ಅವರು ಅಂತರ್ಜಾಲದಲ್ಲಿರುವ ಕೆಲವು ಸಮುದಾಯ ವೆಬ್ ಸೈಟ್ ಗಳು ಸಂಕಷ್ಟದ ಸಮಯದಲ್ಲಿ ಹೇಗೆ ನೆರವಾಗಬಲುವು ಎಂಬುದನ್ನು ಮುಂಬೈ ಧಾಳಿಯ ಸಂದರ್ಭದ ಉದಾಹರಣೆಯೊಂದಿಗೆ ವಿವರಿಸಿದರು. ಅಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಿಂದ ನಮ್ಮ ಸಂಶೋಧನೆಗಳ ನಿಖರತೆ ಹೆಚ್ಚಲಿದೆ. ಅಲ್ಲದೇ ಕೆಲವು ವೇಳೆ ಒಳ್ಳೆಯ ಸ್ನೇಹಿತನಂತೆ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ಹರಿಪ್ರಸಾದ್ ಅವರು ಕನ್ನಡದಲ್ಲಿ ಮಾಹಿತಿ ವಿನಿಮಯ ಮತ್ತು ಅದಕ್ಕಿರುವ ತೊಡಕುಗಳ ಬಗ್ಗೆ ತಿಳಿಸುತ್ತಾ ಅಂತರ್ಜಾಲದಲ್ಲಿ ಕನ್ನಡ ಬಳಸುವುದನ್ನು ಪ್ರಾಯೋಗಿಕವಾಗಿ ಹೇಳಿಕೊಟ್ಟರು.
ಇಲ್ಲಿ ನೆರದಿದ್ದ ವಿವಿಧ ವಯೋಮಾನದ, ಬೌದ್ಧಿಕ ಸ್ತರದ ಎಲ್ಲರ ಮನಗೆದದ್ದು ಈ ಕಾರ್ಯಕ್ರಮದ ಮುಖ್ಯ ಅಂಶವಾಗಿತ್ತು. ಇನ್ನು ಮುಂದೆಯು ಕೂಡ ಇದೇ ರೀತಿಯ ಕಾರ್ಯಕ್ರಮವನ್ನು ಮತ್ತೊಮ್ಮೆ ಏರ್ಪಡಿಸುವ ಮೂಲಕ ಈಗ ಕಲಿತ ವಿಷಯಗಳಿಗೆ ಮತ್ತಷ್ಟು ಪೂರಕ ಮಾಹಿತಿ ಪಡೆದು ಕೊಳ್ಳುವುದೆಂದು ತೀರ್ಮಾನಿಸಲಾಯಿತು.
- 1586 reads
Email this page
Printer-friendly version
ಲೇಖಕರು
ಹೆಸರು
ಸಾತ್ವಿಕ್ ಎನ್.ವಿ.
ಪರಿಚಯ
ನಾನು ಕನ್ನಡ ಸಂಶೋಧನಾ ವಿದ್ಯಾರ್ಥಿ. ಮಾಧ್ಯಮ, ಸಮಕಾಲೀನ ವೈಚಾರಿಕ ಮತ್ತು ಸಾಮಾಜಿಕ ವಿಷಯಗಳ ಕುರಿತು ಅಸ್ಥೆ. ಸದ್ಯ ಆಕಾಶವಾಣಿ ಮ0ಗಳೂರು ಇಲ್ಲಿ ಕಾರ್ಯಕ್ರಮ ಉಧ್ಘೋಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: ಬ್ಯಾಂಕ್ ಅಧಿಕಾರಿ ...
3 weeks 8 hours ago - Re: ಬ್ಯಾಂಕ್ ಅಧಿಕಾರಿ ...
6 weeks 5 days ago - Re: ವೃಷಭಾವತಿ ಎಂಬ ನದಿ ...
6 weeks 5 days ago - Re: ಟಾಯ್ಲೆಟ್ಗೆ ಫ್ಲಶ್ ...
23 weeks 2 days ago - Re: ಅಕ್ಷಯನಗರ ಕೆರೆಗೆ ...
23 weeks 2 days ago - Re: ವೃಷಭಾವತಿ ಎಂಬ ನದಿ ...
38 weeks 3 days ago - Re: ವೃಷಭಾವತಿ ಎಂಬ ನದಿ ...
38 weeks 5 days ago - Re: ವೃಷಭಾವತಿ ಎಂಬ ನದಿ ...
38 weeks 6 days ago - Re: ವೃಷಭಾವತಿ ಎಂಬ ನದಿ ...
38 weeks 6 days ago - Re: ವೃಷಭಾವತಿ ಎಂಬ ನದಿ ...
39 weeks 12 hours ago
| Subscribe to IWP Kannada list |
| Visit this group |









saving water is our prior duty... every body must understand the nesessity of saving water and our earth as well. this feature write up is a small step taken in that direction i suppose...
Neevu mele varadi madida vishaya bahala chennagi bandide. Nanu sahu allidde.
21.02.2009
Post new comment