ಭಾನುವಾರ ಕೋಲಾರದಲ್ಲಿ 'ನೀರ ನಿಶ್ಚಿಂತೆ' ಕಾರ್ಯಕ್ರಮ
ಈ ಭಾನುವಾರ ಕೋಲಾರದ ಪತ್ರಕರ್ತರ ಭವನದಲ್ಲಿ 'ನೀರ ನಿಶ್ಚಿಂತೆ' ಕಾರ್ಯಕ್ರಮದ ಮತ್ತೊಂದು ಆವೃತ್ತಿ!
ಎಂದಿನಂತೆ,
ಅವಧಿ ೧: ಸ್ಥಳೀಯ ಸಮುದಾಯದ ಪರಿಚಯ
ಅವಧಿ ೨: ನೀರ ಕುರಿತು ಅರಿವು ಮೂಡಿಸಲು ತಂತ್ರಜ್ಞಾನ, ಇಂಟರ್ನೆಟ್ ಬಳಕೆ - ಹೇಗೆ?
ಅವಧಿ ೩: ಡಾಕ್ಯುಮೆಂಟರಿ
ಕೋಲಾರದ ಕನ್ನಡಿಗರೆಲ್ಲ, ಆಸಕ್ತರೆಲ್ಲ ಒಟ್ಟಾಗಿ ಬರ್ತೀರಲ್ವ?
'ನೀರ ನಿಶ್ಚಿಂತೆ' ಕಾರ್ಯಕ್ರಮ ಈ ಹಿಂದೆ ಧಾರವಾಡದಲ್ಲಿ, ಒಮ್ಮೆ ಮಂಗಳೂರಿನಲ್ಲಿ, ಮತ್ತೊಮ್ಮೆ ತುಮಕೂರಿನಲ್ಲಿ ನಡೆದಿತ್ತು.
ಈ
ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪರಿಚಿತರಾದ ಹಲವರು ಆನ್ಲೈನ್ ಸಮುದಾಯಗಳಲ್ಲಿ ಈಗ
ಸಕ್ರಿಯರಾಗಿದ್ದಾರೆ. ಕೃಷಿ, ನೀರು ಮುಂತಾದ ವಿಷಯಗಳ ಬಗ್ಗೆ ಬರೆಯುತ್ತ ನಮ್ಮೊಂದಿಗೆ
ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಬರುವ ಭಾನುವಾರ ಮತ್ತಷ್ಟು
ಆಸಕ್ತರು ಸಂವಾದದಲ್ಲಿ ಪಾಲ್ಗೊಳ್ಳುವುರಲ್ಲದೆ ಮುಂದೊಂದು ದಿನ ತಂತ್ರಜ್ಞಾನ,
ಅಂತರ್ಜಾಲ ಹಾಗು ಹೊರಗಿನ ಜಗತ್ತಿನ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವಲ್ಲಿ
ಸಕ್ರಿಯವಾಗಿ ಪಾಲ್ಗೊಳ್ಳುವರು, ತಂತ್ರಜ್ಞಾನದ ಜಗತ್ತು ತರುವ ಉಪಯೋಗಗಳನ್ನು
ಸದುಪಯೋಗಪಡಿಸಿಕೊಳ್ಳುವರು ಎಂಬ ದೂರದೃಷ್ಟಿಯ ಆಕಾಂಕ್ಷೆ ಹೊತ್ತ ಕಾರ್ಯಕ್ರಮ ಇದು.
ನಾವೆಲ್ಲ ಭಾನುವಾರ ಅಲ್ಲಿರುತ್ತೇವೆ. ನೀವೂ ಬನ್ನಿ, ಕೋಲಾರದ ನಿಮ್ಮ ಸ್ನೇಹಿತರಿಗೂ ತಿಳಿಸಿ!
ಸಮಯ:
1.30 PM to 5.30 PM
ಸ್ಥಳ:
ಪತ್ರಕರ್ತರ ಭವನ
ಅಂತರಗಂಗೆ ರಸ್ತೆ, LIC ಆಪೀಸ್ ಪಕ್ಕ,
ಕೋಲಾರ
ನಿಮ್ಮ ಗಮನಕ್ಕೆ:
೧) ಕಾರ್ಯಕ್ರಮಕ್ಕೆ ನಿಮ್ಮ ಸ್ನೇಹಿತರನ್ನೂ ಅಹ್ವಾನಿಸಬಹುದು.
೨) ಕಾರ್ಯಕ್ರಮ ಕಂಪ್ಯೂಟರ್ ಬಳಕೆಯ ಪ್ರಾಥಮಿಕ ಪರಿಚಯ ನೀಡುವುದಿಲ್ಲ, ಬದಲಿಗೆ ಮಾಹಿತಿ
ತಂತ್ರಜ್ಞಾನವನ್ನು ಜನರಿಗೆ ಉಪಯೋಗವಾಗಬಹುದಾದ ಮಾಹಿತಿ ಹಂಚಿಕೊಳ್ಳಲು ಉತ್ತಮವಾಗಿ
ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು. ಭಾಗವಹಿಸುವವರಿಗೆ ಕಂಪ್ಯೂಟರ್ ಬಳಕೆ ಪರಿಚಿತವಾಗಿದ್ದಲ್ಲಿ ಮಾತ್ರ ಕಾರ್ಯಕ್ರಮ ಉಪಯುಕ್ತವಾಗಬಹುದು.
೩) ಈ ಕಾರ್ಯಕ್ರಮ ಕಂಪ್ಯೂಟರ್ ಬಳಕೆಯ ಪರಿಚಯವಿರುವ ಪತ್ರಕರ್ತರಿಗೆ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬಹಳ
ಉಪಯುಕ್ತವಾಗಬಲ್ಲುದು. ಹೊಸ ಬ್ಲಾಗ್ ಪ್ರಾರಂಭಿಸಲು ಆಸಕ್ತಿ ಇಟ್ಟುಕೊಂಡವರಿಗೆ,
ಈಗಾಗಲೇ ಬ್ಲಾಗ್ ಒಂದರಲ್ಲಿ ಬರೆಯುತ್ತ ತಮ್ಮ ಬರಹಗಳನ್ನು ಹಂಚಿಕೊಳ್ಳುತ್ತಿರುವವರಿಗೆ
ಈ ಕಾರ್ಯಕ್ರಮ ಉಪಯುಕ್ತವಾಗುವುದು.
೪) ಕಾರ್ಯಕ್ರಮದ ನೋಂದಣಿಗೆ ಶುಲ್ಕವಿಲ್ಲ, ಆದರೆ ಊಟ/ಉಪಾಹಾರ ಹಾಗೂ ಸಾಂದರ್ಭಿಕ ಖರ್ಚುಗಳಿಗೆ ಸಿದ್ಧವಾಗಿರಿ.
- 802 reads
Email this page
Printer-friendly version
ಲೇಖಕರು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: This is very nice in
1 week 5 days ago - Re: ಇಲ್ಲಿ ‘ಕೊಳಚೆ ನೀರು ...
2 weeks 5 days ago - Re: ‘ಇರುವೆ’; ಅಂತರ್ಜಲ ...
11 weeks 3 days ago - Re: ನಮ್ಮ ಮನೆಯ ತಾರಸಿ ಮೇಲೆ ...
11 weeks 6 days ago - Re: ‘ಕುಡಿಯಲು ಬಿಲ್ಕುಲ್ ...
14 weeks 3 days ago - Re: ಧಾರವಾಡದ ನೆಲ ನುಂಗಿ; ...
15 weeks 5 days ago - Re: ದೇಸಿ ತಂತ್ರಜ್ಞಾನದಿಂದ ...
17 weeks 12 hours ago - Re: ದೇಸಿ ತಂತ್ರಜ್ಞಾನದಿಂದ ...
17 weeks 4 days ago - Re: ಧಾರವಾಡದ ಮೂಕಾಂಬಿಕಾ ...
22 weeks 8 hours ago - Re: ಮಳೆ ಎಂದರೆ ಬಾಲ್ಯದ ...
22 weeks 6 days ago
| Subscribe to IWP Kannada list |
| Visit this group |











Post new comment