(ಪುಟ ೨): "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"
ಈ ಹಳ್ಳಿಯ ಜನ ಸದಾ ಒಂದಿಲ್ಲೊಂದು ಜಲಜನ್ಯ ಕಾಯಿಲೆಗಳಿಂದ ನರಳುತ್ತಲೇ ಇರುತ್ತಾರೆ. ವಾಂತಿ-ಬೇಧಿ, ಖೆಮ್ಮು, ಆಮಶಂಕೆ ಇಲ್ಲಿ ಎಲ್ಲರಿಗೂ ಖಾಯಂ. ಮಕ್ಕಳು, ಹೆಣ್ಣು ಮಕ್ಕಳು, ವಯೋವೃದ್ಧರು ಅತಿಸಾರ, ಅನಿಮೀಯಾ, ಅಶಕ್ತತೆ, ಮೂತ್ರಕೋಶದ ಹರಳು ಹಾಗು ಉದರ ಸಂಬಂಧಿ ರೋಗಗಳಿಂದ ನಿತ್ಯ ಪರಿತಪಿಸುತ್ತಿದ್ದಾರೆ. ಆಹೆಟ್ಟಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ಸುಲಭ ಶೌಚಾಲಯ ವ್ಯವಸ್ಥೆ ಕೇಳುವಂತಿಲ್ಲ. ಕೇವಲ ಸರಕಾರಿ ಕಡತಗಳಲ್ಲಿ ಮಾಹಿತಿ ನೀಡಿದ್ದು, ಅಂಕಿ-ಅಂಶ ದಾಖಲಿಸಿದ್ದು ಮಾತ್ರ ಹೌದು. ಮಾಹಿತಿ ನೀಡುವುದಕ್ಕೂ, ತಿಳಿವಳಿಕೆ ಮೂಡಿಸಿ ಯೋಜನೆಗಳು ಹಾಗು ಹಕ್ಕಿನ ಪ್ರತಿ ಅರಿವು ಮೂಡಿಸುವುದು ಬೇರೆ! ಇಲ್ಲಿ ಆ ಪ್ರಮೇಯ ಸರಳವಾಗಿ ಸಾಧಿಸಬಹುದಾಗಿದೆ?
ಆಹೆಟ್ಟಿ ಗ್ರಾಮದ ಹಿರಿಯರಾದ ನಿಂಗಪ್ಪ ನಿಂಗಪ್ಪ ದೊಡ್ಮನಿ ಹಾಗು ಮಲಕಾಜಪ್ಪ ಮಹಾದೇವಪ್ಪ ಜಗದಣ್ಣವರ್ ಅವರು ಅಭಿಪ್ರಾಯ ಬೇರೆಯೇ ಇದೆ. ಇಲ್ಲಿನ ಗ್ರಾಮ ಪಂಚಾಯ್ತಿಗೆ ಪರಿಹಾರಗಳು ಬೇಕಿಲ್ಲವಂತೆ. (ಪಂಚಾಯತ್ ರಾಜ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ? ಎಷ್ಟು ಸ್ಥಳೀಯ ರಾಜಕಾರಣದಲ್ಲಿ ನರಳುತ್ತಿದೆ? ಎಂಬುದಕ್ಕೆ ತಾಜಾ ಉದಾಹರಣೆ!) ಇಲ್ಲಿನ ಸದಸ್ಯರಿಗೆ ತಾಳ-ಮೇಳ ಇಲ್ಲ. ಸಣ್ಣ ಹಾಗು ಮಧ್ಯಮ ಹಿಡುವಳಿ ಕಮತದವರಿಗೆ (೫ ಎಕರೆಗಿಂತ ಕಡಿಮೆ ಹೊಲ) ತಿಂಗಳಿಗೆ ೩೦/- ರುಪಾಯಿ ಹಾಗು ಹೆಚ್ಚು ಹಿಡುವಳಿ (೫ ಎಕರೆ ಮೇಲ್ಪಟ್ಟು) ತಿಂಗಳಿಗೆ ೬೦/- ರುಪಾಯಿ ನಳದ ಬಿಲ್ ಆಕರಿಸಲಾಗುತ್ತದೆ. ಆದರೆ ಬಹುತೇಕರು ಸಾವಿರಾರು ರುಪಾಯಿ ಬಾಕಿ ಉಳಿಸಿಕೊಂಡಿದ್ದಾರೆ. ಈ ಬಾರಿಯ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ (ನವಲಗುಂದ ವಿಧಾನ ಸಭಾಕ್ಷೇತ್ರದಿಂದ ಸ್ಪರ್ಧಿಸಿ, ಆಯ್ಕೆಯಾಗಿದ್ದಾರೆ.) ಶಾಸಕ ಶಂಕರ ಪಾಟೀಲ್ ಮನೇನಕೊಪ್ಪ ಗ್ರಾಮಕ್ಕೆ ೧೦ ಸಾವಿರ ರುಪಾಯಿ ವಯುಕ್ತಿಕ ಧನ ಸಹಾಯ ಮಾಡಿ ಒಂದು ತಿಂಗಳ ಅವಧಿಗೆ ಕುಡಿಯುವ ನೀರು ಒದಗಿಸಿದ್ದರು! ಮತ್ತೆ ಯಥಾ ಸ್ಥಿತಿ. ಹೆಣ್ಣು ಮಕ್ಕಳ ಕರ್ಮ.
ಶಿರಕೋಳದ ಶಂಕರಗೌಡ ಪಾಟೀಲ ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದರು. ಸದ್ಯ ಕಾಂಗ್ರೆಸ್ ಪಕ್ಷದ ಜಿ.ಬಿ.ಗುಡೆಣ್ಣವರ್ ಸದಸ್ಯರಾಗಿ ‘ಇದ್ದಾರೆ’. ಶಿರೂರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಗನಗೌಡ ಪಾಟೀಲ್ ಅವರು ಹೇಳುವಂತೆ.."ಆಹೆಟ್ಟಿ ಗ್ರಾಮದವರು ನೀರಿನ ಬಾಕಿ ಪಾವತಿಸಿದರೆ ಮಾತ್ರ ವಾಲ್ ಚಾಲೂ ಮಾಡಲಾಗುತ್ತದೆ. ಇಲ್ಲದಿದ್ದರೆ ಮಾನವೀಯತೆಯ ಆಧಾರದ ಮೇಲೆ ನಾವು ಬಿಡುತ್ತಿರುವ ನೀರು ಆಹೆಟ್ಟಿ ಜನರು ಕುಡಿಯಬೇಕು ಅಷ್ಟೆ. ಏಕೆಂದರೆ ನಮ್ಮ ಶಿರೂರ್ ಗ್ರಾಮದಲ್ಲಿ ೪ ಬೋರ್ ಇದ್ದು, ಪ್ರತಿ ಮನೆಗೂ ನಳದ ಜೋಡಣೆ ಮಾಡಿಸಿ ಕೊಡಲಾಗಿದೆ. ಶಿರೂರಿನಲ್ಲಿ ಎಲ್ಲರೂ ಕಡ್ಡಾಯವಾಗಿ ಬಿಲ್ ಪಾವತಿಸುತ್ತಾರೆ. ತಪ್ಪಿದರೆ ಅವರ ಮನೆಗಳಿಗೂ ಆಹೆಟ್ಟಿಯಾವರಂತೆ ನೀರು ಬಿಲ್ ಕುಲ್ ಇಲ್ಲ. ಆದರೆ ಅಲ್ಲಿಯವರಿಗೆ ನೀರು ಬೇಕು. ಬಾಕಿ ಇರುವ ೭೦ ಸಾವಿರ ರುಪಾಯಿ ಬಿಲ್ ಪಾವತಿಸುವುದು ಬೇಡ. ಪುಗಸೆಟ್ಟಿ ನೀರು ಬೇಕಿದೆ ಅಷ್ಟೇ?" ಎಂದರು.
ಇತ್ತೀಚೆಗೆ ಸಚಿವೆ ಶೋಭಾ ಕರಂದ್ಲಾಜೇ ಧಾರವಾಡಕ್ಕೆ ಭೇಟಿ ನೀಡಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ಆಘಾತಕಾರಿ ಮಾಹಿತಿ (ಬಹುಶ: ಬಾಯಿ ತಪ್ಪಿ) ನೀಡಿದರು- "ಕರ್ನಾಟಕ ರಾಜ್ಯದಲ್ಲಿ ಕೊನೆ ಪಕ್ಷ ೧೫ ಸಾವಿರ ಜನಸಂಖ್ಯೆ ಇರುವ ಒಟ್ಟು ೫೬ ಸಾವಿರ ಹಳ್ಳಿಗಳಿಗೆ ಇಂದಿಗೂ ಸ್ವಚ್ಛ ಕುಡಿಯುವ ನೀರು ಒದಗಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ!" ಇನ್ನು ನಮ್ಮ ಆಹೆಟ್ಟಿ ಜನಸಂಖ್ಯೆ ೩ ಸಾವಿರ! ಸರಕಾರದ ಲೆಕ್ಕದಲ್ಲಿಯೇ ಇರದ ಹಳ್ಳಿ.
ಎಲ್ಲ ಹಳ್ಳಿಗಳಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡುವುದು, ಸೂಕ್ತ ಯೋಜನೆಗಳನ್ನು (ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ!) ರೂಪಿಸುವುದು, ಅನುಷ್ಠಾನ ಹಂತದಲ್ಲಿಯೇ ಪೂರ್ಣಗೊಳಿಸಿಬಿಡುವುದು..ಯೋಗ್ಯ ಅಂಕಿ-ಅಂಶ ಕಡತಗಳಲ್ಲಿ ದಾಖಲಿಸಿ ಮಾಧ್ಯಮಗಳಿಗೆ ಹೇಳಿ ಬಿಡುವುದು.. ಅದನ್ನೇ ಉರು ಹೊಡೆದಂತೆ ಪರಿಶೀಲಿಸದೇ ಸರಕಾರದ ಆಪ್ತಸಹಾಯಕನಂತೆ ಪತ್ರಕರ್ತರು ಪ್ರಕಟಿಸಿ, ಕೈ ತೊಳೆದು ಕೊಳ್ಳುವುದು.. ಇಂತಹ ಪವಾಡಗಳಿಗೆ ನಮ್ಮಲ್ಲಿ ಕೊರತೆ ಇಲ್ಲ!
ಉಚಿತ ವಿದ್ಯುತ್, ಉಚಿತ ಕುಡಿಯುವ ನೀರು, ರಸ್ತೆ, ಶಾಲೆಗಳು, ಗ್ರಂಥಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳು..ಎಲ್ಲವನ್ನೂ ರಾಷ್ಟ್ರ ಮಟ್ಟದಲ್ಲಿ ಘೋಷಿಸಿ ‘ಬಿಲ್ ಕೊಡದಿದ್ದರೆ ಸೌಕರ್ಯ, ಸೌಲಭ್ಯಗಳ ಪೂರೈಕೆ ಇಲ್ಲ’ ಎಂದು ಆಯಾ ಗ್ರಾಮ ಪಂಚಾಯ್ತಿಗೆ ತಿಳಿಸಿ ಬಿಡುವುದು ಸರಕಾರದ ಆಡಳಿತ ನಿರ್ವಹಿಸುವ ಹೊಸ ರೀತಿ ಇರಬೇಕು! ಜಾಹಿರಾತಿನಲ್ಲಿ ಕಾಣದಂತೆ (*) ಚಿನ್ಹೆ ಹಾಕಿ..‘ಷರತ್ತುಗಳು ಅನ್ವಯಿಸುತ್ತವೆ’ ಎಂದು ನಮೂದಿಸಿದಂತೆ! ಇಲ್ಲಿ ಸಾರ್ವಜನಿಕ ಹಿತಾಸಕ್ತಿಯ ವಿಷಯ ಎಲ್ಲಿದೆ ಹೇಳಿ?
ಪ್ರಯಾಸದ ಪ್ರವಾಸ ಮುಗಿಸಿಕೊಂಡು ಬರುವಾಗ ಆಹೆಟ್ಟಿಯ ಯಲಿಗಾರ ಹನುಮಂತಪ್ಪ ಎಂಬ ಹಿರಿಯರು ಭೆಟ್ಟಿಯಾದರು. ನಾವು ಬಂದ ಉದ್ದೇಶ ಕೇಳಿದರು. ಹೀಗೆ ನಮ್ಮನ್ನು ಝಾಡಿಸಿದರು- "ನಿಮ್ಮಂಥವರು ನಮ್ಮ ಊರಿಗೆ ಭಾಳ ಮಂದಿ ಬಂದ ಹೋಗ್ಯಾರ. ನಾವು ಟ್ರ್ಯಾಕ್ಟರ್ ಗಟ್ಟಲೇ ಮಂದಿನ ಗುಳೇ ಹೂಡಿಕೊಂಡು ಧಾರವಾಡ ಜಿಲ್ಲಾಧಿಕಾರಿ ಮುಂದ ಪ್ರತಿಭಟನಾ ಮಾಡೀವಿ. ಯಾರು ನಮಗ ಪರಿಹಾರ ಕೊಡಿಸಿಲ್ಲ. ಈ ಸಮಸ್ಯಾ ಅಷ್ಟು ಸರಳ ಬಗಿ ಹರಿಯುವ್ಹಾಂಗ ಕಾಣುದುಲ್ಲ. ನಿಮಗೂ ಪರಿಹಾರ ಕೊಡಸಲಿಕ್ಕೆ ಅಗೂದುಲ್ಲ ಅನ್ನೋದು ನನಗ ಗೊತ್ತೈತಿ. ಎನೋ ನಿಮ್ಮ ಹೊಟ್ಟಿ ಪಾಡಿಗೆ ಈ ಕಾಯಕಾ ಮಾಡಾಕ ಬಂದೀರಿ.. ಮಾಡಿಕೊಂಡ ನಿಮ್ಮೂರ ದಾರಿ ಹಿಡೀರಿ.."
ಆಹೆಟ್ಟಿಯ ನಾಳಿನ ಪ್ರಜೆಗಳು.. ಮಕ್ಕಳು, ಅಲ್ಲಿನ ಹೆಣ್ಣು ಮಕ್ಕಳು ಹಾಗು ವಯೋವೃದ್ಧರಿಗೆ ಸ್ವಚ್ಛ ನೀರು ಕುಡಿಯುವ ಭಾಗ್ಯ ಇಲ್ಲವೇ? ಅಥವಾ ಈ ಕೀಳು ಮಟ್ಟದ ರಾಜಕಾರಣದಲ್ಲಿ ಹಳ್ಳಿಯೊಂದು (ಇಲ್ಲಿ ಪ್ರಾತಿನಿಧಿಕವಾಗಿ ಆಹೆಟ್ಟಿ..ಇಂತಹ ಸಾವಿರಾರು ಹಳ್ಳಿಗಳಿವೆ) ನಲುಗುತ್ತಿದ್ದರೂ ಅಧಿಕಾರಶಾಹಿ ಕೈಕಟ್ಟಿ ಕುಳಿತುಕೊಂಡಿರುವುದು ಕ್ಷಮ್ಯವೇ?
ಚಿತ್ರಗಳು: ಕೇದಾರನಾಥ್, ಜೆ ಜಿ ರಾಜ್
- 302 reads
Email this page
Printer-friendly version
ವಿಶೇಷ ಬರಹಗಳು
Recent blog posts
Poll
Recent comments
- ಎಲ್ಲಿರೋದು
1 hour 27 min ago - ಹರಿ, ನೀರು
6 days 12 hours ago - ಕುಡಿಯುವ
6 days 22 hours ago - ಹಳ್ಳಿಗಳಿಂ
1 week 4 days ago - ನಿಮ್ಮ ಸಾಹಸ
1 week 6 days ago - Idu ondu athytammavaada
2 weeks 5 hours ago - Dear Mr. Mallikarjuna,
can
2 weeks 8 hours ago - neevu kalisiro salahe
2 weeks 2 days ago - ಧನ್ಯವಾದ
2 weeks 3 days ago - ಈ ಉಪಯುಕ್ತ
2 weeks 3 days ago









A very touching article, I hope the situation improves for them.
By looking at the background & surroundings in all photos i can see the green plants...It looks like they get decent rainfall. Can't they preserve that in the way which was described in the last article @ sampada ?
ಆತ್ಮೀಯ ಹರ್ಷ,
ನಿಮ್ಮ ಅಭಿಪ್ರಾಯ ಸ್ವಾಗತಾರ್ಹ. ಕಳೆದ ೪ ವರ್ಷಗಳಲ್ಲಿ ನಮ್ಮ ಭಾಗದಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ಕಳೆದ ೧೫ ವರ್ಷಗಳಿಗೆ ಹೋಲಿಸಿದರೆ ಇದು ದಾಖಲೆಯ ಕಡಿಮೆ ಮಳೆ! ಈ ಸಂದರ್ಭದಲ್ಲಿ ಯಾವುದೇ ಮಳೆ ಕೊಯ್ಲು ವಿಧಾನ ಹೇಳಲು ಹೋದರೂ ಆಹೆಟ್ಟಿಯ ಜನ ‘ಮೊದಲು ಕುಡಿಯಲು ಸ್ವಚ್ಛ ನೀರು ಕೊಟ್ಟು ಆ ಮೇಲೆ ಮಾತನಾಡಿ’ ಎನ್ನುವ ಧೋರಣೆ ಹೊಂದಿದ್ದಾರೆ. ನೀವು ಕೇಳಿದಂತೆ ಆ ಹಸಿರು ಮರಗಿಡಗಳು ಸುಮಾರು ೫೦ ವರ್ಷ ವಯಸ್ಸಿನವು. ಅವು ಭೂಮಿಯ ಮೇಲ್ಮೈ ಮೇಲಿನ ನೀರನ್ನು ಅಷ್ಟಾಗಿ ಬಳಸಲಾರವು. ಅಂತರ್ಜಲಕ್ಕೆ ಅವು ಬಾಯಿಹಾಕಿ ಬದುಕಿದಂತವು. ಹಾಗೆಂದು ಇಲ್ಲಿ ೪ ಕೊಳವೆ ಬಾವಿ ಸಹ ಕೊರೆಯಿಸಿ ನೋಡಲಾಗಿದೆ. ೧ ಕೊಳವೆ ಬಾವಿ ಬಿಟ್ಟರೆ ಉಳಿದ ೩ ಗಡಸು ನೀರು (ಸೌಳು) ಕುಡಿಯಲು ಉಪಯೋಗಿಸಲು ಬಾರದ ಸ್ಥಿತಿಯಲ್ಲಿವೆ. ಸುಮಾರು ೪೫೦ ಅಡಿ ಆಳದ ವರೆಗೆ ಇವುಗಳನ್ನು ಕೊರೆಯಲಾಗಿದೆ.
ತಮ್ಮ ಪ್ರತಿಕ್ರಿಯೆಗೆ ಧನ್ಯವಾದ.
ಹರ್ಷವರ್ಧನ ಶೀಲವಂತ
ನನ್ನ ದಾಹವೆಲ್ಲ ಇಂಗಿ ಹೋಗಿದೆ, ಅಹೆಟ್ಟಿಯ ಕೃಷಿ ಹೊಂಡಗಳಂತೆ.
ಶರ್ಮ
ಆತ್ಮೀಯ ಶರ್ಮಾ ಅವರೆ,
ನಿಜಕ್ಕೂ ನೀವು ಅಂತ:ಕರುಣಿಗಳು. ನಾವು ಅವರನ್ನು ಭೇಟಿ ಮಾಡಿದಾಗ ನಮ್ಮ ದಾಹವೂ ಸಹ ಹೀಗೆಯೇ ಇಂಗಿ ಹೋಗಿತ್ತು. ಪಾಪ ಆ ಹೆಣ್ಣುಮಕ್ಕಳ ಪರಿಸ್ಥಿತಿ ನೋಡಿ ಅಸಾಧ್ಯ ಕೋಪ ಬಂದಿತ್ತು ನಮ್ಮವರ ಮೇಲೆ. ತಮ್ಮ ನೈತಿಕ ಬೆಂಬಲ ನಮಗೆ ಸ್ಮರಣೀಯ.
ಧನ್ಯವಾದಗಳು.
ಹರ್ಷವರ್ಧನ ಶೀಲವಂತ.
Ispite of reading this article in the air conditioned comforts of my office, i broke into a cold sweat. hope your reporting help the people of ahetti.
There surely must be a way out....
What is Sri Padre ji's take on this situation? if they get a decent rainfall they too can try rainwater harvesting alwaa?
ಸು.ಶ್ರೀ.ಮಾಲತಿಯವರೇ,
ನಿಜಕ್ಕೂ ತಮ್ಮ ಅನುಭವ ಇತರರ ಅನುಭವದಂತೆ ಸಹಜವಾಗಿದೆ. ತಾವು ಹೇಳಿದಂತೆ ಪರಿಹಾರಕ್ಕೆ ದಾರಿಗಳು ಇವೆ. ಆದರೆ ನಮ್ಮ ಅಧಿಕಾರಸ್ಥ ಮಹನೀಯರ ಧೋರಣೆ ‘ಎಅವರಿಬಡಿ ಲವ್ಸ್ ಅ ಗುಡ್ ಡ್ರಾಟ್’ ಎನ್ನುವಂತಿದೆ. ಬಹುಶ: ಈ ವಿಷಯ ಶ್ರೀ ಪಡ್ರೆ ಅವರಿಗೆ ಹೊಸತಲ್ಲ. ಅವರ ಗಮನಕ್ಕೆ ನಮ್ಮ ಸಂಪಾದಕರು ತರಲಿದ್ದಾರೆ. ಅವರ ಸೂಕ್ತ ಸಲಹೆ, ಸೂಚನೆ ಹಾಗು ಮಾರ್ಗದರ್ಶನದ ಅನ್ವಯ ಆಹೆಟ್ಟಿಗೆ ಸ್ವಚ್ಛ ಕುಡಿಯುವ ನೀರು ಒದಗಿಸುವ ಛಲ ನಮ್ಮದು. ನಿಮ್ಮ ಕಳಕಳಿ ನಮ್ಮ ಶಕ್ತಿಯನ್ನು ಹೆಚ್ಚಿಸಿದೆ.
ಧನ್ಯವಾದಗಳು.
ಹರ್ಷವರ್ಧನ ಶೀಲವಂತ.
ನೀರಿಗಾಗಿ ಜನ ಪಡುತ್ತಿರುವ ಬವಣೆ ತಪ್ಪಬೇಕು.
ಆತ್ಮೀಯ ಅಶೋಕ್,
ನಿಮ್ಮ ಹಾರೈಕೆಯಂತೆ ಆಗಲಿ. ನಾವೆಲ್ಲ ‘ಪತ್ರಕರ್ತರು’ ಖಾಲಿ ಉಳಿದರೂ ಪರವಾಗಿಲ್ಲ.
ಧನ್ಯವಾದಗಳು.
ಹರ್ಷವರ್ಧನ್ ಶೀಲವಂತ
ಲೇಖನ ಓದಿ ನಮ್ಮನೆ ಕಥೆಯನ್ನೇ ಬೆರಗಿನಿಂದ ಕೇಳಿದ ಅನುಭವ. ನಮ್ಮೂರೂ(ಬಿಜಾಪುರ) ಈ ನೀರಿನ ಬವಣೆಯನ್ನು ಅನುಭವಿಸುತ್ತಿರುವಂಥದ್ದೇ. ನಮ್ಮೂರಲ್ಲಿ ಬೇಸಿಗೆಯಲ್ಲಿ ೮-೧೦ ದಿನಕ್ಕೊಮ್ಮೆ ನೀರು ಬಿಡುತ್ತಾರೆ(ನಲ್ಲಿ). ಆಹಾ! ಆ ನೀರನ್ನು ನೀರಿನ ಅಭಾವ ಅಂದರೇನು ಅಂತ ಗೊತ್ತಿರದ ಜನರೇನಾದರು ನೋಡಿದರೆ(ಕುಡಿಯುವುದು ದೂರದ ಮಾತು)ಬಸ್ಸಿಗೂ ಕಾಯದೇ ಹಾಗೆಯೆ ಓಡಿ ತಮ್ಮೂರಿಗೆ ಮರಳಿಯಾರು!! ಅಂಥಾ ಕೊಳಕು(ಹುಳ ಹುಪ್ಪಡಿ ಇರುವ) ನೀರಾದರು ಬಂದರೆ ಸಾಕು ಬಳಸಲಾದರೂ ಆಗುತ್ತದೆ ಅಂತ ನಾವೆಲ್ಲ ಕಾಯುತ್ತಿರುತ್ತೇವೆ.ತಮಾಷೆ ಏನು ಗೊತ್ತಾ? ಈ ನೀರಿನ ಅಭಾವಕ್ಕೆ ಪಕ್ಕಾದ ಬಿಜಾಪುರಿಗರು ಅಪ್ಪಿ ತಪ್ಪಿ ಒಂದಿಷ್ಟು ದಿನ ತಪ್ಪದೆ ದಿನಾಲೂ ನೀರು ಬರತೊಡಗಿದರೆ(ಅಲ್ಲಿ ೨-೩ ದಿನಕ್ಕೊಮ್ಮೆ ನೀರು ಬಿಡುವುದು ಸಂಪ್ರದಾಯವಾಗಿ ಹೋಗಿದೆ) ಏನು ಮಾಡುವುದು ಎಂದು ತಿಳಿಯದೆ ಕಂಗಾಲಾಗುತ್ತಾರೆ!!
ಈ ಬವಣೆಗೆ ಪರಿಹಾರ ಇಲ್ಲವೆ?
ಸರಕಾರದ(ಅದು ಯಾವುದೇ ಪಕ್ಷದ್ದಾಗಿರಲಿ) ಬಗ್ಗೆ ಮಾತನಾಡಲೂ ರೇಜಿಗೆಯಾಗುತ್ತಿದೆ ಕ್ಷಮಿಸಿ.
ಸು.ಶ್ರೀ.ಜಯಲಕ್ಷ್ಮಿ ಪಾಟೀಲ್ ಅವರೆ,
ತಾವು ಪ್ರತಿಕ್ರಿಯಿಸಿ ನಮ್ಮ ಬೆನ್ನುತಟ್ಟಿದ್ದೀರಿ. ತಮ್ಮ ಅನುಭವ ಪ್ರಸ್ತಾಪಿಸಿ ಓದುಗರಿಗೆ ನಮ್ಮ ಮಾತು ಸತ್ಯವಾದದ್ದು ಎಂದು ಮನವರಿಕೆ ಮಾಡಿಸುವಲ್ಲಿ ಉಪಕರಿಸಿದ್ದೀರಿ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಹರ್ಷವರ್ಧನ್ ಶೀಲವಂತ
It is shame on humanity. Unfortunately, before blaming the governance and the politicians of the region, a part of my blame is to the people of the region. Actually, the people want to ive like that way. Or else digging a well would be the least effort they could do, let alone revolting against the system.
It is a fashion in india to blambe the local administation or the goverhment for the small pot hole in front of our home, than we make an effort to fill it ourself. Look at the potholes on every roads in every towns and cities of the the state. Nobody wants to take up the job for various reasons and we want to blame the government.
It is another matter that, the local government and the state governement is actually living dead. Politicians merry with their own agenda and who wants to attend to your water shortage problem.
Sorry villages. You earned your situation. Next time please vote for the same person and let your son/daughter suffer the same situation that you are sufferring now. Because you have earned it.
Sorry again.
what you said is absolutely true. I come from this part of the Karnataka. And people are happy they way things are. No one will go and do something collectively say " rain harvesting " and anything that would clean up the whole mess.
All they want is government to do something. And if they dont know how these corrupt govts work then shame on them for not trying to improve things for their own good.
We can debate on this for days but never come to any conclusion.
People must act.
Anand
ಆತ್ಮೀಯ ಆನಂದ್,
ನಿಮ್ಮ ಅಭಿಪ್ರಾಯ ಸರಿ. ಆದರೆ ಎಲ್ಲ ಕಡೆ ಒಂದೇ ವಿಧಾನ ಸುಸ್ಥಿರವಾಗಲು ಸಾಧ್ಯವಿಲ್ಲ. ಸ್ಥಳೀಯ ಜನರ ಅನುಭವ ಹಾಗು ಅಲ್ಲಿನ ನೆಲ ಮೂಲಜ್ನಾನ ನಮ್ಮ ಅರಿವಿಗೆ ಬರಬಹುದು. ಈ ಕೆಲಸ ಇಡೀ ಗ್ರಾಮದ ಕೆಲಸ ಎಂದು ಜನ ಒಮ್ಮತದಿಂದ ಒಗ್ಗೂಡಿ ಪ್ರಯತ್ನಿಸಿದರೆ ಜಿಲ್ಲಾಡಳಿತ ತಾನಾಗಿ ಎಚ್ಚೆತ್ತು ಅನಿವಾರ್ಯವಾಗಿ ಕಾರ್ಯಮಾಡಲು ಅಣಿಯಾಗುತ್ತದೆ. ಪ್ರಾರಂಭ ಮಾತ್ರ ನೀವು ಹೇಳಿದಂತೆ ಆಹೆಟ್ಟಿಯವರೇ..ಆಹೆಟ್ಟಿಯಿಂದ ಮಾಡಿದರೆ..
ಪ್ರತಿಕ್ರಿಯೆಗೆ ಧನ್ಯವಾದ.
ಹರ್ಷವರ್ಧನ್ ಶೀಲವಂತ.
ಆತ್ಮೀಯ ಎಚ್.ಎಸ್.ಭಟ್ ಅವರೆ,
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಆಹೆಟ್ಟಿ ಗ್ರಾಮದಲ್ಲಿ ಕೊರೆಸಲಾದ (೪೫೦-೫೦೦ ಫೂಟ್ ವರೆಗೆ) ೪ ಕೊಳವೆ ಬಾವಿಗಳಲ್ಲಿ ೧ ಸಿಹಿ ನೀರಿನದು (ಸದ್ಯ ಇಂಗಿದೆ) ಹಾಗು ೩ ಗಡಸು ನೀರಿನವುಗಳು (ಸೌಳು.) ಈ ಭಾಗದಲ್ಲಿ ಬಾವಿ ತೆರೆದಾಗ ‘ಫ್ಲೋರೈಡ್’ ಪ್ರಮಾಣ ಒಪ್ಪಿಕೊಳ್ಳಬಹುದಾದ ಪ್ರಮಾಣಕ್ಕಿಂತ ಹೆಚ್ಚಿದೆ. ಹಾಗಾಗಿ ಆ ನೀರು ಕುಡಿಯಲು ಬಳಸುವಂತಿಲ್ಲ. ಸಾದ್ಯವಾಗುವುದಾದರೆ, ಆಹೆಟ್ಟಿಯ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ೨ ವರ್ಷಗಳ ಕೆಳಗೆ ಧರಾಶಾಯಿಯಾಗಿ ಬಿದ್ದಿರುವ ಬೃಹತ್ ನೀರಿನ ಟ್ಯಾಂಕ್ ಕೆಡವಿ (ಗುತ್ತಿಗೆದಾರನ ಮೇಲೆ ಕಾನೂನಾತ್ಮಕ ಕ್ರಮ ಅವಶ್ಯ ಜರುಗಿಸಬೇಕು), ಬೇರೆ ನಿರ್ಮಿಸಿ ಮಲಪ್ರಭಾ ನದಿಯ ನೀರನ್ನು ಟ್ಯಾಂಕ್ ಗೆ ಸಾಗಿಸಿ ವಾರದಲ್ಲಿ ೩ ಬಾರಿ ನಿಗದಿತ ವೇಳೆಯಲ್ಲಿ ಬಿಡುವಂತಾದರೆ ಸಾಕು.
ತಾವು ಹೇಳಿದಂತೆ ನಾವೇ ಎಲ್ಲ ಮುಂದಾಗಿ ಮಾಡುವುದಾದರೆ ‘ಇಅರೆಲ್ಲ’ ಯಾವ ಪುರುಷಾರ್ಥಕ್ಕೆ ಬೇಕು? ನಾವ್ಯಾಕೆ ಕಾಲಕಾಲಕ್ಕೆ ಟ್ಯಾಕ್ಸ್ ಕಟ್ಟಿ ಅಭಿವೃದ್ಧಿ ನಿರೀಕ್ಷಿಸಬೇಕು? ಕಲಿತವರಿಂದಲೇ (ಅಕ್ಷರಸ್ಥ ಮಹನೀಯರು) ಕಲಿಯದವರ (ಶಿಕ್ಷಣಸ್ಥರು) ಶೋಷಣೆ ಹೊಸದಲ್ಲ ನೋಡಿ!
ಕುಡಿಯುವ ಶುದ್ಧ ನೀರು ಪ್ರಜೆಗಳ ಹಕ್ಕಾಗಬೇಕು. ಇದನ್ನು ಸಾಧಿಸುವದು ಜನತೆಯ ಕೈಯಲ್ಲಿ ಇದೆ. ಜನತೆ ತಮ್ಮ ಅಧಿಕಾರವನ್ನು ಉಪಯೋಗಿಸದೆ, ಕೀಳು ರಾಜಕೀಯ ಮಾಡುತ್ತ, ಕೀಳು ರಾಜಕೀಯ ಮಾಡುವ ತಮ್ಮ ಪ್ರತಿನಿಧಿಗಳನ್ನು ಚುನಾವಣಿಯಲ್ಲಿ ಗೆಲ್ಲಿಸುತ್ತ ಇರುವ ವರೆಗೆ ಈ ಪರಿಸ್ಥಿತಿ ಮುಂದುವರಿಯುವದು. ಈ ಕುರಿತು ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಎಚ್ಚರಿಸುವದು ಆಯಾ ಹಳ್ಳಿಗಳ ಜನತೆಯ ಕರ್ತವ್ಯ. ಇದಕ್ಕೆ ಸುದ್ದಿ ಮಾಧ್ಯಮಗಳು ಬೆಂಬಲ ನೀಡಬಹುದು.
ಹೊಸ ಕಾಮೆಂಟ್ ಸೇರಿಸಿ