ನೀರ ದನಿ

ನೀರಿನ ಬಳಕೆ, ಸಮಸ್ಯೆಗಳು ಮುಂತಾದವುಗಳ ಸುತ್ತ ಒಂದು ವಿಶಿಷ್ಟವಾದ ಚಲನಚಿತ್ರೋತ್ಸವ ನಮ್ಮ ಬೆಂಗಳೂರಿನಲ್ಲಿ ಇನ್ನು ಕೆಲವೇ ಘಂಟೆಗಳಲ್ಲಿ ಪ್ರಾರಂಭವಾಗಲಿದೆ.
ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಚಲನಚಿತ್ರೋತ್ಸವ ನಡೆಯುವ ದಿನಗಳು : ಶನಿವಾರ ೧೩ ರಿಂದ ೧೮ ಸೆಪ್ಟೆಂಬರ್ ೨೦೦೮ (ಒಟ್ಟು ಐದು ದಿನ)
ಸಮಯ: ಬೆಳಿಗ್ಗೆ ಹತ್ತರಿಂದ ರಾತ್ರಿ ಒಂಬತ್ತು.

ಸ್ಥಳ:
ಜ್ಞಾನ ಜ್ಯೋತಿ ಆಡಿಟೋರಿಯಮ್
ಸೆಂಟ್ರಲ್ ಕಾಲೇಜು,
ಮೈಸೂರು ಬ್ಯಾಂಕ್ ಸರ್ಕಲ್,
ಬೆಂಗಳೂರು - ೫೬೦೦೦೧

ಪ್ರವೇಶ ಉಚಿತ.

ಗ್ಲೋಬಲ್ ವಾರ್ಮಿಂಗ್, ಜಗತ್ತಿನಾದ್ಯಂತ ನೀರಿನ ಬಳಕೆ, ತೊಂದರೆಗಳು, ಅಣೆಕಟ್ಟುಗಳು, ನೆರೆ, ತಾಪಮಾನದ ಬದಲಾವಣೆ ಮುಂತಾದ ಪ್ರಮುಖ ವಿಷಯಗಳನ್ನು ದೃಶ್ಯಮಾಧ್ಯಮದ ಮೂಲಕ ಮುಟ್ಟುವ, ಮುಟ್ಟಿಸುವ ಪ್ರಯತ್ನ ಈ ಕಾರ್ಯಕ್ರಮ.
(ಅರ್ಘ್ಯಂ, ಬೆಂಗಳೂರು ಫಿಲ್ಮ್ ಸೊಸೈಟಿ, ಸ್ವರಾಜ್, Goethe-Institut/Max Mueller Bhavan ಹಾಗೂ ಇನ್ನೂ ಹಲವು ಹಲವು ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಮೂಡಿಬರಲಿದೆ).

ಹೊಸ ಕಾಮೆಂಟ್ ಸೇರಿಸಿ

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
2 + 3 =
Solve this simple math problem and enter the result. E.g. for 1+3, enter 4.