ನೀರಿನ ಬಳಕೆ

ತಪ್ಪಲಿನಲ್ಲಿ ದೊರಕುವ ನೀರಿನ ಹೆಚ್ಚಿನ ಭಾಗವು ಕೃಷಿಗಾಗಿ ಬಳಸಲಾಗುತ್ತಿದೆ. ನದಿಯ ನೀರಿನ 90% ಭಾಗವನ್ನು ನೀರಾವರಿಗಾಗಿ ಬಳಸಲಾಗುತ್ತಿದೆ. ನದಿಯ ನೀರನ್ನು, ಕೃಷಿಗಾಗಿ ಕ್ರಿ.ಶ. 2ನೆಯ ಶತಮಾನದಿಂದಲೂ ಬಳಸಲಾಗಿದೆ. ನೀರಾವರಿಗಾಗಿ ನೀರನ್ನು ಬಾವಿ, ಕೊಳವೆಬಾವಿ, ನಾಲೆ, ಟ್ಯಾಂಕ್ ಹಾಗೂ ಲಿಫ್ಟ್ ಗಳ ಮೂಲಕ ಹಾಯಿಸಲಾಗುತ್ತದೆ.


ನೀರಾವರಿ:

ಮೂಲ: ಆರ್ಥಿಕ ಮತ್ತು ಸಂಖ್ಯಾಸಂಗ್ರಹಣ ಇಲಾಖೆ (2003-04)

ಕರ್ನಾಟಕಕ್ಕೆ ಸೇರುವ ತಪ್ಪಲಿನ ಬಹಳಷ್ಟು ಜಿಲ್ಲೆಗಳು ಬಾವಿ ನೀರಾವರಿಯ ಲಾಭವನ್ನು ಪಡೆದಿವೆ. ಮೈಸೂರು, ಚಾಮರಾಜನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ 12,000 ಹೆಕ್ಟೇರ್ ಗಳಿಗಿಂತ ಹೆಚ್ಚಿನ ಪ್ರದೇಶವು ನೀರಾವರಿ ಯೋಜನೆಯಡಿ ಬರುತ್ತದೆ. ತಮಿಳುನಾಡಿನ ನಾಮಕ್ಕಲ್ ಹಾಗೂ ಧರ್ಮಪುರಿಯ ಬಹಳಷ್ಟು ಪ್ರದೇಶವೂ ಕೂಡ ಬಾವಿಗಳಿಂದ ನೀರಾವರಿಯ ಲಾಭವನ್ನು ಪಡೆದಿವೆ.



ಮೂಲ: ಆರ್ಥಿಕ ಮತ್ತು ಸಂಖ್ಯಾಸಂಗ್ರಹಣ ಇಲಾಖೆ (2003-04)

ತಪ್ಪಲಿನ ಅನೇಕ ಜಿಲ್ಲೆಗಳಲ್ಲಿ 3354 ಹೆಕ್ಟೇರ್ ಗಿಂತ ಹೆಚ್ಚಿನ ಕೃಷಿಯೂಗ್ಯ ಭೂಮಿಗೆ, ನೀರಾವರಿಯು ಕೊಳವೆಬಾವಿಗಳ ಮೂಲಕ ಆಗುತ್ತದೆ. ಕೊಯಂಬ್ಬತ್ತೂರು, ನಾಮಕ್ಕಲ್, ತುಮಕೂರು, ಈರೋಡ್ ಗಳಂತಹ ಜಿಲ್ಲೆಗಳಲ್ಲಿ, ಕೊಳವೆಬಾವಿಗಳ ನೀರಾವರಿಯಡಿ ಬರುವ ಭೂಮಿಯ ವಿಸ್ತಾರ 24,000 ಹೆಕ್ಟೇರ್ ಆಗಿದೆ.



ಮೂಲ: ಆರ್ಥಿಕ ಮತ್ತು ಸಂಖ್ಯಾಸಂಗ್ರಹಣ ಇಲಾಖೆ (2003-04)

ಮಂಡ್ಯ, ಮೈಸೂರು ಹಾಗೂ ತಂಜಾವೂರು ಜಿಲ್ಲೆಗಳಲ್ಲಿ ತಲಾ 60,000 ಹೆಕ್ಟೇರ್ ಕೃಷಿ ಯೋಗ್ಯ ಭೂಮಿಯು ನಾಲೆಗಳ ಮೂಲಕ ನೀರನ್ನು ಪಡೆಯುತ್ತದೆ.



ಮೂಲ: ಆರ್ಥಿಕ ಮತ್ತು ಸಂಖ್ಯಾಸಂಗ್ರಹಣ ಇಲಾಖೆ (2003-04)

ಟ್ಯಾಂಕ್ ನೀರಾವರಿ ವಿಧಾನದ ಮೂಲಕ, ತುಮಕೂರು, ಕಡಲೂರು ಹಾಗೂ ತಂಜಾವೂರು ಜಿಲ್ಲೆಗಳ 28,000 ಹೆಕ್ಟೇರ್ ಗಿಂತ ಹೆಚ್ಚಿನ ಭೂಪ್ರದೇಶದಲ್ಲಿ ಉಳುಮೆ ನಡೆಯುತ್ತದೆ. ತಪ್ಪಲಿನ ಉದ್ದಗಲಕ್ಕೂ ಹಲವಾರು ಜಿಲ್ಲೆಗಳಲ್ಲಿ 5,000 ಹೆಕ್ಟೇರ್ ಗಿಂತ ಹೆಚ್ಚಿನ ಭೂಪ್ರದೇಶಕ್ಕೆ ನೀರಾವರಿ ವ್ಯವಸ್ಥೆ ಎತ್ತು ನೀರಾವರಿಯ ಟ್ಯಾಂಕ್ ಗಳ ಮೂಲಕ ನಡೆಯುತ್ತದೆ.



ಮೂಲ: ಆರ್ಥಿಕ ಮತ್ತು ಸಂಖ್ಯಾಸಂಗ್ರಹಣ ಇಲಾಖೆ (2003-04)

ಎತ್ತು ನೀರಾವರಿ ವ್ಯವಸ್ಥೆಯ (lift irrigation) ಪಾಲನೆಯನ್ನು, ತಪ್ಪಲಿನ ಧರ್ಮಪುರಿ, ಚಾಮರಾಜನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಾಡಲಾಗುತ್ತಿದೆ. ಈ ಜಿಲ್ಲೆಗಳಲ್ಲಿ 500ಕ್ಕೂ ಹೆಚ್ಚಿನ ಭೂಪ್ರದೇಶದ ನೀರಾವರಿಯು ಎತ್ತು ನೀರಾವರಿಯ ಮೂಲಕ ನಡೆಯುತ್ತದೆ.


ಮೂಲ: ಆರ್ಥಿಕ ಮತ್ತು ಸಂಖ್ಯಾಸಂಗ್ರಹಣ ಇಲಾಖೆ (2003-04)