ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ನಿಟ್ಟೆ ವಿದ್ಯಾಸಂಸ್ಥೆಯ ಕ್ಯಾಂಪಸ್ಸಿನಲ್ಲಿ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ.ಇಂಜಿನಿಯರಿಂಗ್ ಕಾಲೇಜಿನಲ್ಲೇ ಎರಡೂವರೆ ಸಾವಿರ ವಿದ್ಯಾರ್ಥಿಗಳಿದ್ದಾರೆ.ಕಾಲೇಜಿನ ಹಾಸ್ಟೆಲೂ ಕಡಿಮೆಯೆಂದರೂ ಐನೂರು ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಹೊಂದಿದೆ.ಅಲ್ಲದೆ ಕ್ಯಾಂಪಸ್ಸಿನಲ್ಲಿ ನಳನಳಿಸುವ ಹಸಿರುವನವಿದೆ.ಈ ದೊಡ್ಡ ಶಿಕ್ಷಣ ಸಮುಚ್ಚಯದ ನೀರಿನ ಅಗತ್ಯ ದಿನವೊಂದಕ್ಕೆ ಹೆಚ್ಚುಕಡಿಮೆ ಎರಡೂವರೆ ಲಕ್ಷ ಲೀಟರ್. ನೀರಿನ ಈ ಅಗತ್ಯಗಳನ್ನು ಪೂರೈಸಲು ಕೊಳವೆ ಬಾವಿಯನ್ನೆ ಅವಲಂಬಿಸಲಾಗಿದೆ.
ಕೆಲವು ವರ್ಷಗಳ ಹಿಂದೆ ಕ್ಯಾಂಪಸ್ಸಿನಲ್ಲಿ ನೀರಿನ ಕೊರತೆ ತಲೆದೋರಿತು. ಕಾರ್ಕಳದ ಹೊಳೆಯಿಂದ ನೀರನ್ನು ಟ್ಯಾಂಕರ್ ಮೂಲಕ ತರಿಸುವ ಪರಿಸ್ಥಿತಿ ಬಂದಾಗ ಕಾಲೇಜಿನ ಆಡಳಿತ ನೀರಿನ ಕೊರತೆ ಹೋಗಲಾಡಿಸಲು ಯೋಚಿಸಿದ್ದು ಸಹಜ.ಕೆಟ್ಟಿದ್ದ ಕೆಲವು ಕೊಳವೆ ಬಾವಿಗಳನ್ನು ನೀರಿಂಗಿಸಲು ಬಳಸಲಾಯಿತು. ಜತೆಗೆ ಟೆರೇಸಿನಲ್ಲಿ ಬಿದ್ದ ನೀರನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಲಾಯಿತು. ಈ ನೀರನ್ನು ಟ್ಯಾಂಕಿಗೆ ಸೇರಿಸಲು ಅವಕಾಶ ಒದಗಿಸುವ ರಚನೆಗಳನ್ನು ಮಾಡಲಾಯಿತು. ಎತ್ತರ ತಗ್ಗು ಇರುವ ಕ್ಯಾಂಪಸ್ಸಿನಲ್ಲಿ ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ಸಂಗ್ರಹಿಸಲು ಅಲ್ಲಲ್ಲಿ ಇಂಗು ಗುಂಡಿಗಳನ್ನು ಮಾಡಲಾಗಿದೆ.ಇದರಿಂದ ನೀರು ಭೂಮಿಯೊಳಗೆ ಬಸಿಯುತ್ತದೆ. ಬೇಸಗೆಯಲ್ಲಿ ಬೀಳುವ ಮಳೆ ಅಥವ ಅಕಾಲದ ಮಳೆಯು ಬಹು ಮಟ್ಟಿಗೆ ಭೂಮಿಯಲ್ಲಿ ಇಂಗಲು ಈ ಗುಂಡಿಗಳು ನೆರವಾಗುತ್ತವೆ.ಕರಾವಳಿಯ ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಯಥೇಚ್ಛ ಮಳೆ ಬೀಳುವುದರಿಂದ,ಮಳೆಗಾಲದಲ್ಲಿ ನೀರು ಹರಿದು ಹೋಗದೆ ವಿಧಿಯಿಲ್ಲವೆನ್ನಿ.

ಕ್ಯಾಂಪಸ್ಸಿನ ಒಂದು ಕೊನೆಯಲ್ಲಿ ತಗ್ಗು ಹೊಂಡವಿದ್ದು,ಇಲ್ಲಿಗೆ ಕ್ಯಾಂಪಸ್ಸಿನ ಹಲವೆಡೆಯಿಂದ ಹರಿದು ಹೋಗುವ ನೀರು ಬರುವಂತೆ ಕಾಲುವೆಗಳ ರಚನೆಯಾಗಿದೆ. ಈ ಹೊಂಡಕ್ಕೆ ಕಟ್ಟ ಕಟ್ಟಿ,ಇದನ್ನು ಕೆರೆಯಂತೆ ಮಾಡಲಾಗಿದೆ. ಇಲ್ಲಿ ಸಂಗ್ರಹವಾದ ನೀರು ಬಸಿದು ಹೋಗಿ,ಭೂಜಲ ಮಟ್ಟವನ್ನು ಏರಿಸುತ್ತದೆ.ಈ ಕೆರೆಯ ನೀರನ್ನೂ ಬಳಸಬಹುದಾದರೂ,ಇಲ್ಲಿ ಹಾಗೆ ಮಾಡುತ್ತಿಲ್ಲ. ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಾತ್ರಾ ಈ ಕೆರೆ ಬಳಕೆಯಾಗುತ್ತಿದೆ. ಸಮೀಪದಲ್ಲಿ ಇರುವ ಬಾವಿಯ ನೀರಿನ ಮಟ್ಟವನ್ನು ಕಾಪಿಡಲೂ ಈ ಕೆರೆ ಸಹಾಯ ಮಾಡುತ್ತದೆ. ಈ ಬೇಸಗೆಯಲ್ಲಂತೂ ಮಾರ್ಚಿನಲ್ಲಿ ಮಳೆಯಾಗಿ, ಈ ರಚನೆಗಳು ನೀರಿಂಗಿಸಲು ಬಹಳ ನೆರವಾದುವು. ಮೇಯಲ್ಲೂ ಕ್ಯಾಂಪಸ್ಸಿನ ನೀರಿನ ಅವಶ್ಯಕತೆಯನ್ನು ಪೂರೈಸಲು ತೊಂದರೆಯಾಗಲಿಲ್ಲ. ಟ್ಯಾಂಕರ್ ನೀರಿನ ಬಳಕೆ ಈಗ ಅಗತ್ಯವಿಲ್ಲವಾಗಿದೆ.
ನೀರಿನ ಮಟ್ಟವನ್ನು ಕಾಯಲು ನೆರವಾಗುವ ಈ ರಚನೆಗಳು ಹೆಚ್ಚೇನೂ ದುಬಾರಿಯೇನೂ ಅಲ್ಲ. ಇಂಗುಗುಂಡಿಗಳನ್ನು ತುಂಬಿಸಲು ಕಲ್ಲು,ಹೊಯ್ಗೆ,ಇದ್ದಿಲು,ಜಲ್ಲಿ ಕಲ್ಲು ಇತ್ಯಾದಿಗಳನ್ನು ಬಳಸಲಾಗಿದೆ. ಇದ್ದಿಲಿನ ಅವಶ್ಯಕತೆಯೂ ಇಲ್ಲ. ಇದ್ದದ್ದರಲ್ಲಿ "ಕಟ್ಟ"ದ ರಚನೆಯೇ ದುಬಾರಿ.ನಾಲ್ಕೈದು ಲಕ್ಷ ರುಪಾಯಿ ಖರ್ಚು ಬಂದಿದೆ.
- 784 reads
Email this page
Printer-friendly version
ಲೇಖಕರು
ಇತ್ತೀಚಿನ ಬ್ಲಾಗ್ ಬರಹಗಳು
ಇತ್ತೀಚಿನ ಪ್ರತಿಕ್ರಿಯೆ
- Re: ವೃಷಭಾವತಿ ಎಂಬ ನದಿ ...
1 week 4 days ago - Re: ವೃಷಭಾವತಿ ಎಂಬ ನದಿ ...
1 week 6 days ago - Re: ವೃಷಭಾವತಿ ಎಂಬ ನದಿ ...
2 weeks 1 day ago - Re: ವೃಷಭಾವತಿ ಎಂಬ ನದಿ ...
2 weeks 1 day ago - Re: ವೃಷಭಾವತಿ ಎಂಬ ನದಿ ...
2 weeks 1 day ago - Re: ವೃಷಭಾವತಿ ಎಂಬ ನದಿ ...
2 weeks 1 day ago - Re: ಕೃಷಿಹೊಂಡಗಳಿಗೆ ...
2 weeks 6 days ago - Re: ಮಳೆ ಬಂದರೆ ...
3 weeks 9 hours ago - Re: ಮಳೆ ನೀರು ಸಂಗ್ರಹಕ್ಕೆ ...
3 weeks 1 day ago - Re: ಅಘನಾಶಿನಿ
3 weeks 5 days ago
| Subscribe to IWP Kannada list |
| Visit this group |










Post new comment