ನದಿ ಪಕ್ಕದಲ್ಲೇ ನೀರಡಿಕೆ
ಹರಿವ ನದಿ ಪಕ್ಕ ಕೂತು ಬಾಯಾರಿಕೆಯಿಂದ ಚಡಪಡಿಸುವ ಸ್ಥಿತಿ ಊಹಿಸಬಲ್ಲಿರಾ?
ಅಂಥ ಪರಿಸ್ಥಿತಿಯಲ್ಲಿದೆ ಮಣಿಪುರ ರಾಜ್ಯದ ರಾಜಧಾನಿ ಇಂಫಾಲ್. ಇಲ್ಲಿ ಪ್ರತಿ ವಾರ್ಷಿಕ ಮಳೆ ಪ್ರಮಾಣ ೧೪೭೬.೫ ಮಿಮೀ. ಮೇ ತಿಂಗಳಿಂದ ಅಕ್ಟೋಬರ್‌ವರೆಗೆ, ಅಂದರೆ ಸತತ ಆರು ತಿಂಗಳುಗಳ ಇಲ್ಲಿ ಮಳೆಗಾಲ. ಮುಂಗಾರು ಮೋಡಗಳು ಮೊದಲು ತಲುಪುವುದು ದೇಶದ ಈಶಾನ್ಯ ಭಾಗದಲ್ಲಿರುವ ಈ ರಾಜ್ಯಕ್ಕೇ.
ಆದರೆ, ಮಳೆ ಬಂದಷ್ಟೇ ವೇಗವಾಗಿ ಹರಿದುಹೋಗುತ್ತದೆ. ಬೆಟ್ಟಪ್ರದೇಶಗಳಿಂದ ತುಂಬಿದ ಮಣಿಪುರದಲ್ಲಿ ಮಳೆ ನೀರು ಸಂಗ್ರಹಿಸುವ ವ್ಯವಸ್ಥೆ ಅಷ್ಟಕ್ಕಷ್ಟೇ. ಪ್ರಗತಿಯ ಭರಾಟೆಯಲ್ಲಿ ಈ ಮೂಲತತ್ವ ಮರೆಯಾಗಿದೆ.
ಹಾಗೆ ನೋಡಿದರೆ ಮಣಿಪುರದಲ್ಲಿ ನೀರು ಸಂಗ್ರಹಿಸಲು ಸಾಕಷ್ಟು ಅವಕಾಶಗಳಿವೆ. ಕೆಲವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ ಕೂಡ. ಇಂಫಾಲ್, ಇರಿಲ್, ನಂಬುಲ್, ಚಾಕ್ಪಿ, ಥೌಬಾಲ್ ಹಾಗೂ ಕುಂಗಾ ಹೆಸರಿನ ಪ್ರಮುಖ ನದಿಗಳನ್ನು ಹೊಂದಿರುವ ರಾಜ್ಯದಲ್ಲಿ ನೀರಿನ ಹರಿವು ಚೆನ್ನಾಗಿದೆ. ಬೆಟ್ಟದ ಪ್ರದೇಶಗಳಿಂದ ಮೆಕ್ಕಲುಮಣ್ಣನ್ನು ಹೊತ್ತು ತರುವ ನದಿಗಳು, ಫಲವತ್ತಾದ ನದಿ ಕಣಿವೆಗಳನ್ನು ನಿರ್ಮಿಸಿವೆ.
ಹಾಗಾದರೆ, ಮಣಿಪುರ ಸಮೃದ್ಧವಾಗಿರಬೇಕಿತ್ತಲ್ಲ?
ಇಲ್ಲ ಎನ್ನುವುದೇ ಮುಖ್ಯ ದುರಂತ. ಸುಮಾರು ೨೨,೩೨೭ ಚದರ ಕಿ.ಮೀ ವ್ಯಾಪ್ತಿಯ ಪುಟ್ಟ ರಾಜ್ಯ ಮಣಿಪುರ. ೨೦೦೧ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆ ಕೇವಲ ೨೨ ಲಕ್ಷ. ಇಷ್ಟು ಕಡಿಮೆ ಜನಸಂಖ್ಯೆ ಇರುವ ರಾಜ್ಯದಲ್ಲಿ ಮಳೆ ಏರುಪೇರಾದರೆ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂದರೆ, ವಾರ್ಷಿಕ ೧೪೭೬.೫ ಮಿಮೀ ಮಳೆ ಬಂದರೂ ಅದು ಜನರ ಪಾಲಿಗೆ ದಕ್ಕುತ್ತಿಲ್ಲ.
ಇಡೀ ರಾಜ್ಯದಲ್ಲಿ ಮಳೆ ಪ್ರಮಾಣ ಬಹುತೇಕ ಒಂದೇ ತೆರನಾಗಿದ್ದರೂ ಅದರ ಸದ್ಬಳಕೆ ಆಗುತ್ತಿಲ್ಲ. ಹರಿವ ನೀರು ರಭಸದಿಂದ ಬೆಟ್ಟವಿಳಿದು ನದಿ ಸೇರುತ್ತದೆ. ಅಲ್ಲಿಂದ ಸೀದಾ ಚಿಕ್ಕಪುಟ್ಟ ಅಣೆಕಟ್ಟುಗಳನ್ನು ತುಂಬಿಕೊಂಡು ಹರಿದು ಬಂಗಾಳಕೊಲ್ಲಿಯತ್ತ ಧಾವಿಸುತ್ತದೆ. ಮಳೆ ನೀರನ್ನು ಅಣೆಕಟ್ಟೆಗಿಂತ ಮುಂಚೆಯೇ ಅಲ್ಲಲ್ಲಿ ತಕ್ಕಮಟ್ಟಿಗೆ ಸಂಗ್ರಹಿಸಿಡುವ ವ್ಯವಸ್ಥೆ ಬೆಳೆದಿಲ್ಲ. ಕೊಳಾಯಿ ನೀರನ್ನು ನೆಚ್ಚಿಕೊಂಡ ಜನ ಮಳೆ ನೀರು ಸಂಗ್ರಹದತ್ತ ಗಮನ ಹರಿಸುತ್ತಿಲ್ಲ. ರಾಜ್ಯ ಸರ್ಕಾರಕ್ಕೂ ಇತ್ತ ಗಮನ ಹರಿದಿಲ್ಲ. ಯಾವುದೋ ವರ್ಷ ಮಳೆ ಪ್ರಮಾಣ ಕಡಿಮೆಯಾದಾಗ ನೀರಿಗಾಗಿ ಹಾಹಾಕಾರವಾಗುತ್ತದೆ. ಆಗೆಲ್ಲ ಮಳೆ ನೀರು ಸಂಗ್ರಹಿಸುವ ಮಾತು ಕೇಳುತ್ತದೆ. ಮುಂದೆ ಭರ್ಜರಿ ಮಳೆ ಶುರುವಾಗುತ್ತಲೇ ಎಲ್ಲವೂ ಮರೆತುಹೋಗುತ್ತದೆ.
ನೀಲಿಬಣ್ಣದ ಪರ್ವತ ಶ್ರೇಣಿಗಳ ನಡುವೆ ಇರುವ ಮಣಿಪುರ ನಿಸರ್ಗ ರಮಣೀಯತೆಯ ಅದ್ಭುತ ಪ್ರದೇಶ. ಹಾಗೆಂದೇ ಪಂಡಿತ್ ಜವಹರಲಾಲ್ ನೆಹರೂ ಮಣಿಪುರವನ್ನು ‘ಭಾರತದ ಆಭರಣ ಎಂದು ಬಣ್ಣಿಸಿದ್ದರು. ಆದರೆ, ಇಂಥ ಪ್ರದೇಶದಲ್ಲಿಯೂ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸತೊಡಗಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಕರಾವಳಿ, ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶಗಳ ಪರಿಸ್ಥಿತಿಯೂ ಹೀಗೇ ಆಗಿದೆಯಲ್ಲವೆ?
ಅತ್ಯಂತ ಕಡಿಮೆ ಮಳೆ ಬೀಳುವ ರಾಜಸ್ತಾನದಲ್ಲಿ ಉಂಟಾಗದ ನೀರಿನ ಸಮಸ್ಯೆ ಅತ್ಯಧಿಕ ಮಳೆ ಬೀಳುವ ಪ್ರದೇಶಗಳನ್ನು ಕಾಡತೊಡಗಿದೆ. ನಾವೇ ಮಾಡಿದ ತಪ್ಪಿದು. ಇದನ್ನು ಸರಿಪಡಿಸಬೇಕಾದವರೂ ನಾವೇ. ಮಳೆ ನೀರು ಸಂಗ್ರಹವೊಂದೇ ಈ ಸಮಸ್ಯೆಗೆ ಪರಿಹಾರ.
- ಚಾಮರಾಜ ಸವಡಿ
- 976 reads
Email this page
Printer-friendly version
ಲೇಖಕರು
ಹೆಸರು
ಚಾಮರಾಜ ಸವಡಿ
ಪರಿಚಯ
ವೃತ್ತಿಯಿಂದ ಪತ್ರಕರ್ತ. ಓದುವುದು ಮತ್ತು ಬರೆಯುವುದು ಅಂದ್ರೆ ಇಷ್ಟ.
http://chamaraj.net
http://chamarajsavadi.blogspot.com
http://sampada.net/blog/chamaraj
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: This is very nice in
2 weeks 5 days ago - Re: ಇಲ್ಲಿ ‘ಕೊಳಚೆ ನೀರು ...
3 weeks 4 days ago - Re: ‘ಇರುವೆ’; ಅಂತರ್ಜಲ ...
12 weeks 2 days ago - Re: ನಮ್ಮ ಮನೆಯ ತಾರಸಿ ಮೇಲೆ ...
12 weeks 6 days ago - Re: ‘ಕುಡಿಯಲು ಬಿಲ್ಕುಲ್ ...
15 weeks 2 days ago - Re: ಧಾರವಾಡದ ನೆಲ ನುಂಗಿ; ...
16 weeks 4 days ago - Re: ದೇಸಿ ತಂತ್ರಜ್ಞಾನದಿಂದ ...
18 weeks 1 hour ago - Re: ದೇಸಿ ತಂತ್ರಜ್ಞಾನದಿಂದ ...
18 weeks 3 days ago - Re: ಧಾರವಾಡದ ಮೂಕಾಂಬಿಕಾ ...
22 weeks 6 days ago - Re: ಮಳೆ ಎಂದರೆ ಬಾಲ್ಯದ ...
23 weeks 6 days ago
| Subscribe to IWP Kannada list |
| Visit this group |











ಮಳೆ ನೀರಿನ ಸಂಗ್ರಹಣೆ ಮಣಿಪುರದಲ್ಲಿ ಇಲ್ಲವೆಂದಿಲ್ಲ. ಅಲ್ಲಿ ಜನ, ಮನೆಗಳ ಎದುರು ದೊಡ್ಡ ದೊಡ್ಡ ಕೊಳಗಳನ್ನು ನಿರ್ಮಿಸಿಕೊಂಡಿದ್ದಾರೆ. ಅದನ್ನು ಪಶುಗಳಿಗೆ ಬಳಸುತ್ತಾರೆ. ಮಣಿಪುರದ ಇನ್ನೊದು ವೈಶಿಷ್ಟ್ಯ ಎಂದರೆ loktak ಕೆರೆ. ಅದರ ಬಗ್ಗೆ ಫೋಟೋ ಸಮೇತ ಬಹಳ ಬೇಗ ಪೋಸ್ಟ್ ಮಾಡುತ್ತೇನೆ. ಆದರೆ ಮಳೆ ನೀರಿನ ಸದ್ವಿನಿಯೋಗ ಎಲ್ಲಿಯೂ ಆಗುತ್ತಿಲ್ಲ ಎಂಬುದು ಸತ್ಯ.
Post new comment