ಟಾಯ್ಲೆಟ್‌ಗೆ ಫ್ಲಶ್ ಬೇಕಾ?
ಅಲ್ಲಾ ಸ್ವಾಮಿ, ಟಾಯ್ಲೆಟ್‌ಗೆ ಫ್ಲಷ್ ಜೋಡಿಸಿ ಎಷ್ಟೊಂದು ನೀರು ಪೋಲು ಮಾಡ್ತಿದ್ದೀವಲ್ಲ? ಈ ಬಗ್ಗೆ ಕೊಂಚ ಯೋಚಿಸಿ.
ಒಮ್ಮೆ ಫ್ಲಶ್ ಮಾಡಿದರೆ, ಏನಿಲ್ಲವೆಂದರೂ ಎಟಂರಿಂದ ಹತ್ತು ಲೀಟರ್ ನೀರು ವ್ಯರ್ಥವಾಗುತ್ತದೆ. ನೀವು ಒಂದಾ ಮಾಡಿದರೂ, ಎರಡು ಮಾಡಿದರೂ ವ್ಯರ್ಥವಾಗುವ ನೀರು ಇದೇ ಪ್ರಮಾಣದಲ್ಲಿರುತ್ತದೆ. ಒಂದಾ ಮಾಡಿದಾಗಲೂ ಇಷ್ಟೊಂದು ನೀರು ವ್ಯರ್ಥವಾಗಬೇಕಾ, ಯೋಚಿಸಿ?
ಒಂದಾ ಮಾಡಿದಾಗ ಸ್ವಲ್ಪ ನೀರು ಮಾತ್ರ ಸಾಕು. ಎರಡಾ ಮಾಡಿದಾಗಲೂ ಸರಳವಾಗಿ ಹರಿದುಹೋಗುವ ತಂತ್ರಜ್ಞಾನಗಳು ಇವೆ. ಆದರೆ, ಅವು ಹೇಗಿವೆ? ಅವುಗಳ ಬಳಕೆ ಎಲ್ಲೆಲ್ಲಿದೆ ಎಂಬುದು ನನಗೆ ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ದಯವಿಟ್ಟು ಹಂಚಿಕೊಳ್ಳಿ.
ನೀರನ್ನು ಖಂಡಿತ ಬಳಸಬೇಕು. ಆದರೆ, ಎಷ್ಟು ಬೇಕೋ ಅಷ್ಟೇ. ಮರುಬಳಕೆ ಸಾಧ್ಯವಾಗಿಸುವ ಎಲ್ಲ ಪ್ರಯತ್ನಗಳೂ ಜಾರಿಯಾದರೆ, ನೀರಿನ ಕೊರತೆ ಇರದು.
ದಯವಿಟ್ಟು ನಿಮ್ಮ ಸಲಹೆ, ಸೂಚನೆ ನೀಡಿ. ನೀರು ಉಳಿಸಲು, ಮರುಪೂರಣ ಮಾಡಲು ಕೈಜೋಡಿಸಿ.
- ಚಾಮರಾಜ ಸವಡಿ
- 1329 reads
Email this page
Printer-friendly version
ಲೇಖಕರು
ಹೆಸರು
ಚಾಮರಾಜ ಸವಡಿ
ಪರಿಚಯ
ವೃತ್ತಿಯಿಂದ ಪತ್ರಕರ್ತ. ಓದುವುದು ಮತ್ತು ಬರೆಯುವುದು ಅಂದ್ರೆ ಇಷ್ಟ.
http://chamaraj.net
http://chamarajsavadi.blogspot.com
http://sampada.net/blog/chamaraj
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: ಬ್ಯಾಂಕ್ ಅಧಿಕಾರಿ ...
3 weeks 8 hours ago - Re: ಬ್ಯಾಂಕ್ ಅಧಿಕಾರಿ ...
6 weeks 5 days ago - Re: ವೃಷಭಾವತಿ ಎಂಬ ನದಿ ...
6 weeks 5 days ago - Re: ಟಾಯ್ಲೆಟ್‌ಗೆ ಫ್ಲಶ್ ...
23 weeks 2 days ago - Re: ಅಕ್ಷಯನಗರ ಕೆರೆಗೆ ...
23 weeks 2 days ago - Re: ವೃಷಭಾವತಿ ಎಂಬ ನದಿ ...
38 weeks 3 days ago - Re: ವೃಷಭಾವತಿ ಎಂಬ ನದಿ ...
38 weeks 5 days ago - Re: ವೃಷಭಾವತಿ ಎಂಬ ನದಿ ...
38 weeks 6 days ago - Re: ವೃಷಭಾವತಿ ಎಂಬ ನದಿ ...
38 weeks 6 days ago - Re: ವೃಷಭಾವತಿ ಎಂಬ ನದಿ ...
39 weeks 12 hours ago
| Subscribe to IWP Kannada list |
| Visit this group |










ಈಗೆಲ್ಲಾ dual flush tank ಗಳು ಬಂದಿವೆ - ಅವುಗಳನ್ನು ಅಳವಡಿಸಿದಲ್ಲಿ, ಬೇರೆ ಬೇರೆ ಪ್ರಮಾಣದಲ್ಲಿ ನೀರನ್ನು flush ಮಾಡಲು ಬಳಸಬಹುದು. ಇನ್ನೊಂದು ಮಾಡಬಹುದಾದ ಸುಲಭ ಉಪಾಯ ಎಂದರೆ, flush tank ನ ಒಳಗೆ ನೀರು ತುಂಬಲು ಇರುವ ಜಾಗ ಕಮ್ಮಿ ಮಾಡುವುದು - ನೀರು ತುಂಬಿಸಿ ಒಂದು ಲೀಟರ್ ಬಾಟಲಿಯನ್ನು tank ಒಳಗೆ ಇಡಿ, ಕಲ್ಲು ಅಥವಾ ಇಟ್ಟಿಗೆ ಕೂಡ ಆ ಕೆಲಸ ಮಾಡಬಲ್ಲದು. ಆದರೆ plastic flush tank ಕಲ್ಲಿನ ಭಾರ ತಡೆಯದೆ ಇರಬಹುದು - ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ತುಂಬಿಸಿ ಫ್ಲಶ್ ಟ್ಯಾಂಕ್ ನ ಒಳಗೆ ಇಡಿ - ಪ್ಲಾಸ್ಟಿಕ್ ಬಾಟಲ್ ನ ಒಳ್ಳೆ ರೀತಿಯಲ್ಲಿ ಉಪಯೋಗಿಸಿದ ಹಾಗು ಆಗುತ್ತೆ, ನೀರೂ ಉಳಿಯುತ್ತೆ
http://www.wikihow.com/Convert-Any-Toilet-to-a-Low-Flush-Toilet
ದ್ವಿ ಉದ್ದೇಶದ ಫ್ಲಶ್‌ಗಳು ಉತ್ತಮ. ಇಂಥ ಸುಲಭ ಮಾದರಿಗಳು ಹೆಚ್ಚೆಚ್ಚು ಬಳಕೆಯಾಗಬೇಕಿದೆ. ಫ್ಲಶ್‌ನ ಟ್ಯಾಂಕ್‌ನ ಒಳಗಿನ ಜಾಗ ಕಡಿಮೆ ಮಾಡುವುದೂ ಉತ್ತಮ ಉಪಾಯ. ಈ ಕುರಿತ ಮಾದರಿಗಳು ಲಭ್ಯವಿದ್ದರೆ ವಿವರ ನೀಡಲು ಸಾಧ್ಯವೆ ಶಾರದಾಪ್ರಸಾದ್?
- ಚಾಮರಾಜ ಸವಡಿ
http://chamarajsavadi.blogspot.com
eega recycling unit kooda bandide..dinabalakege upayogisida nirannu recycle maadi adannu flush ge maatra marubalake maduwante pipe connection maadiruttare..idar ati dodda unit annu infosys campus nalli nodabahudu..eegantu ella dodda dodda appartment galalli idannu alawadisiruttare..
ಉತ್ತಮ ಉಪಾಯ ಅಕ್ಷತಾ. ಈ ಮಾದರಿಯ ರೇಖಾಚಿತ್ರ ಸಿಗುತ್ತದಾ? ಈ ಕುರಿತ ಹೆಚ್ಚಿನ ಮಾಹಿತಿ ಸಿಗುತ್ತದಾ?
- ಚಾಮರಾಜ ಸವಡಿ
http://chamarajsavadi.blogspot.com
ಹೌದು. ಕುಡಿಯುವುದಕ್ಕೆ ಮತ್ತು ಅಡಿಗೆಗೆ ಬೇಕಾಗಿರುವ ನೀರು ನಮ್ಮ ಒಟ್ಟು ಅಗತ್ಯದ ಶೇಕಡಾ ೧೦% ಮಾತ್ರ. ಹಾಗಾಗಿ, ಅಕ್ಷತ ರವರು ತಿಳಿಸಿದಂತೆ, ಎಲ್ಲ ಹೊಸ ಕಟ್ಟಡಗಳು, ಬಟ್ಟೆ ಒಗೆದ ನೀರನ್ನು ಸರಿಯಾದ ಪ್ಲುಮ್ಬಿಂಗ್ ಮೂಲಕ reuse ಮಾಡಿದರೆ, ಸುಮಾರು ೫೦% ರಷ್ಟು ನೀರನ್ನು ಉಳಿಸಬಹುದು. ಹಳೆಯ ಕಟ್ಟಡಗಳಿಗೆ ಈ ರೀತಿಯ ಏರ್ಪಾಡು ಸ್ವಲ್ಪ ಕಷ್ಟ.
ಬಹುಶಃ ಪ್ಲಂಬಿಂಗ್ ಕೊಂಚ ಬದಲಾಯಿಸಿದರೆ, ಬಳಕೆಯಾದ ನೀರನ್ನು ಮರುಬಳಕೆ ಮಾಡಲು ಸಾಧ್ಯವಾಗಬಹುದು. ಇಂಥ ಹಲವು ಉದಾಹರಣೆಗಳನ್ನು ಹುಡುಕುತ್ತಿದ್ದೇನೆ. ಸಿಕ್ಕರೆ ಇಲ್ಲಿ ಸೇರಿಸುವೆ.
- ಚಾಮರಾಜ ಸವಡಿ
http://chamarajsavadi.blogspot.com
ಇನ್ನು ಮುಂದೆ ನ್ಯಾನೋ ಮಟೀರಿಯಲ್ಸ್ ಇರುವ ಕಕ್ಕಸುಗಳು ಬರಲಿವೆ.. ಅವಕ್ಕೆ ನೀರೇ ಬೇಡ.. !!
ಅಂದ್ರೆ ಕೆಮಿಕಲ್ ಟಾಯ್ಲೆಟ್ ತಾನೆ? ಅದರ ಖರ್ಚಿನ ಬಗ್ಗೆ ಅನುಮಾನಗಳಿವೆ. ತುಂಬ ಜನ ಅದನ್ನು ಇಷ್ಟಪಡಲಿಕ್ಕಿಲ್ಲ. ಅದಕ್ಕಿಂತ ಮರುಬಳಕೆ ಮಾಡುವ ವ್ಯವಸ್ಥೆಯೇ ಸೂಕ್ತ ಅನಿಸುತ್ತದೆ.
- ಚಾಮರಾಜ ಸವಡಿ
http://chamarajsavadi.blogspot.com
Another way to save water is to install toilets like the ones in planes. They almost use about a glass of water. But it may not be economically viable. Thats just another option.
Post new comment