ಜಲಸಿರಿ 2010 - ನೀರಿನ ವಿಚಾರಗಳ ಅಪರೂಪದ ಕ್ಯಾಲೆಂಡರ್

ಜಲಸಿರಿ 2010ರ ಕ್ಯಾಲೆಂಡರ್ ತುಮಕೂರಿನ ಧಾನ್ಯ ಸಂಸ್ಥೆಯು ಅರ್ಘ್ಯಂ ಸಹಯೋಗದಲ್ಲಿ ಜಲ ಸಂರಕ್ಷಣೆ ವಿಚಾರಗಳಿಗೆ
ಸಂಬಂಧಿಸಿದ ವಿಶಿಷ್ಟ ಕ್ಯಾಲೆಂಡರ್ ಹೊರತಂದಿದೆ. ಎಲ್ಲರ ನಿತ್ಯ ಸಂಗಾತಿಯಾದ ಕ್ಯಾಲೆಂಡರ್ ಮೂಲಕ ನೀರೆಚ್ಚರ ಮೂಡಿಸುವುದು ಇದರ ಉದ್ದೇಶ. ನಾಲ್ಕು ವರ್ಣಗಳಲ್ಲಿ ಚಿತ್ರಸಹಿತ ಮುದ್ರಣಗೊಂಡಿರುವ ಕ್ಯಾಲೆಂಡರ‍್ನ ಪ್ರತಿಯೊಂದು ಪುಟಗಳೂ ಆಕರ್ಷಕವಾಗಿದೆ. ಪ್ರತಿಯೊಂದು ಪುಟದ ಮುಂಭಾಗದಲ್ಲಿ ಚಾವಣಿ ನೀರು ಸಂಗ್ರಹ, ನೆಲ-ಜಲ ಸಂರಕ್ಷಣಾ ವಿಧಾನಗಳು, ಜಲಮಾಲಿನ್ಯ ಮತ್ತು ಅದರ ಅಪಾಯಗಳು, ಬರ ನಿರೋಧಕ ಬೆಳೆಗಳು ಮತ್ತು ಪಾರಂಪರಿಕ ಜಲಮೂಲಗಳ ಬಗ್ಗೆ ಚಿತ್ರಸಹಿತ ಮಾಹಿತಿ ಇದೆ. ಮತ್ತು ಪುಟದ ಕೆಳಭಾಗದಲ್ಲಿ ಪ್ರಸಿದ್ಧ ವ್ಯಕ್ತಿಗಳು ನೀರು ನಿರ್ವಹಣೆ ಬಗ್ಗೆ ಹೇಳಿರುವ ಅರ್ಥಪೂರ್ಣ ವಾಕ್ಯಗಳಿವೆ. ಹಾಗೆಯೇ ಪ್ರತಿ ಪುಟದ ಹಿಂಭಾಗದಲ್ಲಿ ಕಾಲಕ್ಕನುಗುಣವಾಗಿ ನೀರು ನಿರ್ವಹಣೆಯ ವಿವರಣೆಗಳಿವೆ.
ದಿನಾಂಕ, ಹಬ್ಬ-ಹರಿದಿನಗಳ ಜೊತೆಗೆ ನೀರಪಾಠವನ್ನೂ ಹೇಳುವ ಈ ವಿಶಿಷ್ಟ ಕ್ಯಾಲೆಂಡರ್ ಎಲ್ಲರ ಮನೆ-ಮನೆಗಳಲ್ಲಿ ಇರಲೇಬೇಕಾದ ಸಂಗಾತಿ. ಆಸಕ್ತರು ಹೆಚ್ಚಿನ ಮಾಹಿತಿ ಮತ್ತು ಪ್ರತಿಗಳಿಗಾಗಿ ಧಾನ್ಯ ಸಂಸ್ಥೆ, 'ತೆನೆ' ಮೊದಲನೆ ಮಹಡಿ, ೩ನೇ ಮುಖ್ಯ ರಸ್ತೆ,
ಸದಾಶಿವನಗರ, ತುಮಕೂರು - 572 101 ವಿಳಾಸ ಅಥವಾ 94806 90601 ಮತ್ತು 9611354395 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ.
AttachmentSize
Jalasiri 2010 calendar.zip14.46 MB

Post new comment

The content of this field is kept private and will not be shown publicly.