ಗಂಗೆ ಅಂತರ್ಧಾನಳಾದಾಳೇ... !?


ಒಲೆ ಹತ್ತಿ ಉರಿದಡೆ ನಿಲಲುಬಹುದು, ಧರೆ ಹತ್ತಿ ಉರಿದೊಡೆ ನಿಲಬಹುದೇ,ಪ್ರೊ. ಜಿ ಡಿ ಅಗರ್ವಾಲ್

ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ,

ತಾಯ ಮೊಲೆವಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ತಂದೆ ಕೂಡಲಸಂಗಮದೇವ?

--ಈ ವಿಪರ್ಯಾಸಗಳ ಸರಣಿಗೆ ಮತ್ತೊಂದು ಸೇರ್ಪಡೆ ಗಂಗೆ ಅಂತರ್ದಾನವಾದೊಡೆ...?!

--ಇದು ಯಾವುದೋ ಪುರಾಣದಲ್ಲಿನ ಪ್ರಸ್ತಾಪ ಅಲ್ಲ. ಗಂಗೆ ಪಾತ್ರ ಬಯಲಾದೀತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಹೌದು, ಗಂಗೆಯ ಮಡಿಲಲ್ಲಿ ಕೈಗೆತ್ತಿಕೊಂಡಿರುವ ಜಲ ವಿದ್ಯುತ್ ಯೋಜನೆ ಹಾಗೂ ಆಣೆಕಟ್ಟುಗಳಿಂದಾಗಿ 50 ಕಿಮೀಗೂ ಹೆಚ್ಚು ದೂರ ಗಂಗೆ ಗುಪ್ತಗಾಮಿನಿಯಾಗಿ ಹೋಗುವ ಆತಂಕ ಪರಿಸರ ಪ್ರಿಯರಲ್ಲಿ ಮಡುಗಟ್ಟಿದೆ.

ಇಂಥದೊಂದು ಆತಂಕವನ್ನು ಹೊರ ಹಾಕಿರುವ ಪ್ರೊ|ಜಿ.ಡಿ. ಅಗರ್ ವಾಲ್ ಸಾಮಾನ್ಯ ವ್ಯಕ್ತಿಯಲ್ಲ. ಇವರು ಖ್ಯಾತ ಪರಿಸರ ವಿಜ್ಞಾನಿ, ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರದಲ್ಲಿ ಡೀನ್ ಆಗಿದ್ದವರು. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಥಮ ಸದಸ್ಯ ಕಾರ್ಯದರ್ಶಿಯಾಗಿದ್ದವರು.

ಗಂಗೋತ್ರಿಯ ಹಿಮಗಡ್ಡೆಗಳು ಹಾಗೂ ಉತ್ತರಕಾಶಿ ನಡುವೆ ಆರು ಜಲ ವಿದ್ಯುತ್ ಯೋಜನೆಗಳಿಂದಾಗಿ ಸುಮಾರು 50 ಕಿಮೀಗಳಷ್ಟು ಉದ್ದ ಗಂಗಾ ನದಿ ಬತ್ತಿ ಹೋಗಬಹುದು ಎಂಬ ಆತಂಕ ಅವರದ್ದು. ಅವರಷ್ಟೇ ಅಲ್ಲ, ಅವರಂತೆಯೇ ಯೋಚಿಸುವ ಸಾವಿರಾರು ಜನರದ್ದು.

ಈ ಯೋಜನೆಗಳನ್ನು ಪ್ರತಿಭಟಿಸಿ ಅಗರ್ ವಾಲ್ ಅವರು ಇದೇ ಜೂನ್ 13ರಿಂದ ಆಮರಣಾಂತ ಉಪವಾಸ ಆರಂಭಿಸಿದ್ದಾರೆ. ಇದು ಹತ್ತನೇ ದಿನ. ಗಂಗೆಯ ಒಡಲಿಗೆ ನೀರು ತಂದು, ಹರಿವು ಹೆಚ್ಚಲು ಕಾರಣವಾಗುವ ಭಾಗೀರಥಿ ಹಾಗೂ ಭಿಲಂಗಣ ನದಿಗಳು ಈಗಾಗಲೇ ಒಣಗುತ್ತಿವೆ. ಗಂಗೆಯ ಹರಿವಿಗೆ ಅವುಗಳ ಕೊಡುಗೆ ನಗಣ್ಯವಾಗುತ್ತಿದೆ. ಮಾತ್ರವಲ್ಲ, ಗಂಗೆಯ ಒಡಲು ಸೇರುವ ಸಾವಿರಾರು ತೊರೆಗಳ ಒರತೆ ಬತ್ತುತ್ತಿದೆ.

ಭಾಗೀರತಿ ನದಿಯು ಚಛಾಮ್ ಎಂಬಲ್ಲಿ 8 ಕಿಮೀ (ಧಿರಾಸು ಜಲಾಶಯದಿಂದ 12 ಕಿಮೀ ಕೆಳ ಹರಿವಿನಲ್ಲಿ) ಉದ್ದದಷ್ಟು ಒಣಗಿರುವುದನ್ನು ಈ ವರ್ಷದ ಗೂಗಲ್ ಅರ್ಥ್ ಚಿತ್ರಗಳು ಬೆಳಕಿಗೆ ತಂದಿವೆ.

ಈ ಆತಂಕಕಾರಿ ಬೆಳವಣಿಗೆಗೆ ಕಾರಣ ಮನೇರಿ ಭಾಲಿ ಎರಡನೇ ಹಂತದ ಯೋಜನೆ ಇದೇ ಜನವರಿಯಿಂದ ಆರಂಭವಾಗಿದ್ದು. ಮನೇರಿ ಭಾಲಿ ಒಂದನೇ ಹಂತ, ಭೈರೋನ್ ಘಾಟಿ ಒಂದು ಮತ್ತು ಎರಡನೇ ಹಂತ ಹಾಗೂ ಲೋಹರಿನಾಗ್ ಪಾಲ ಮತ್ತು ಪಾಲಿ ಮನೇರಿ ಜಲ ವಿದ್ಯುತ್ ಯೋಜನೆಗಳೇ ಕಾರಣ ಎಂಬು ಪ್ರೊ| ಅಗರವಾಲ್ ಅಂಬೋಣ.

ಮನೇರಿ ಬಾಲಿ ಒಂದೇ ಹಂತವು 1988ರಲ್ಲಿ ಕಾರ್ಯರಂಭಗೊಂಡರೂ, ಈವರೆಗೂ ತನ್ನ ಸಂಪೂರ್ಣ ಸಾಮರ್ಥ್ಯದಷ್ಟು ವಿದ್ಯುತ್ ಉತ್ಪಾದಿಸಿಲ್ಲ. ಮಳೆಗಾಲದಲ್ಲಿ ನೀರಿನ ಪ್ರವಾಹದೊಂದಿಗೆ ಬರುವ ಹಲವಾರು ಖನಿಜ ಹಾಗೂ ಶಿಲಾ ಕಣಗಳು ಟರ್ಬೈನಿನ ಬ್ಲೇಡುಗಳಿಗೆ ಪದೇ ಪದೇ ಹಾನಿಯುಂಟು ಮಾಡುವುದರಿಂದ ದುರಸ್ತಿಗಾಗಿ ಉತ್ಪಾದನೆ ಸ್ಥಗಿತಗೊಳಿಸಲೇಬೇಕು. ಬೇಸಿಗೆ ಕಾಲದಲ್ಲಿ ಭಾಗೀರತಿ ಹಾಗೂ ಭಿಲಂಗಣ ನದಿಗಳಲ್ಲಿನ ಬಹುತೇಕ ನೀರು ಭೂಮಿಯಲ್ಲಿಯೇ ಇಂಗಿ ಒಣಗುವುದರಿಂದ ತೆಹ್ರಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಪ್ರಮಾಣ ಕನಿಷ್ಠ ಮಟ್ಟಕ್ಕಿಂತಲೂ ಕೆಳಕ್ಕೆ ಕುಸಿಯುತ್ತದ. ಹೀಗಾಗಿ ಸಂಪೂರ್ಣ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಈ ಬೇಸಿಗೆಯಲ್ಲಿ ಮುಳುಗಡೆಯಾಗಿದ್ದ ತೆಹ್ರಿ ಪಟ್ಟಣವೂ ಕಾಣಿಸುತ್ತಿತ್ತು ಎಂಬುದು ಸ್ಥಳೀಕರ ಅಂಬೋಣ. ಹೌದು, ಅಬಿವೃದ್ಧಿ, ಯೋಜನೆಗಳ ಹೆಸರಿನಲ್ಲಿ ಪರಿಸರದೊಂದಿಗೆ ನಡೆಯುತ್ತಿರುವ ಈ ಆಟ ಎಷ್ಟು ಕಾಲ ನಡೆಯಲು ಸಾಧ್ಯ...? ಪ್ರಕೃತಿ ಮುನಿಸನ್ನು ಎದುರಿಸಲು ಹುಲು ಮಾನವನಿಗೆ ಸಾಧ್ಯವಾ ಎಂಬುದು ಪ್ರಜ್ಞಾವಂತರ ಪ್ರಶ್ನೆ.

ಮಳೆಗಾಲದಲ್ಲಿ ಭಾರೀ ಮಳೆಯ ನೀರಿನಿಂದ, ಬೇಸಿಗೆಯಲ್ಲಿ ಕರಗಿದ ಹಿಮಗಡ್ಡೆಗಳ ನೀರಿನಿಂದ ಸದಾ ಪ್ರವಹಿಸುತ್ತಲೇ ಇರುವ ನದಿ ಎಂದು ಎಂದೋ ಓದಿದ್ದ ನೆನಪಿಗೆ, ತಿಳಿವಳಿಕೆಗೆ ತಿದ್ದುಪಡಿ ತರಬೇಕಾಗಿದೆ. ನೆನಪಿನ ಭಾವ ಕೋಶಗಳಲ್ಲಾದರೂ ಗಂಗೆ ಪ್ರವಹಿಸುತ್ತಲೇ ಇರುತ್ತದೆ ನಿಜ. ಆದರೆ, ನದಿ ಬರೀ ನೆನಪಾಗಿಯೇ ಉಳಿದು ಬಿಟ್ಟರೆ....

(ಫೋಟೋ ಕೃಪೆ, Photo courtesy: http://watercommunity.blogspot.com)

ಈ ಆತಂಕ ಇಂದು ನಿನ್ನೆಯದಲ್ಲ. ದಶಕಗಳಿಂದಲೇ ಜನಗಮನಿಸುತ್ತಿದ್ದಾರೆ. ಗಂಗಾನದಿಪಾತ್ರದಲ್ಲಿ ಹಿಮಪಾತ ಮೊದಲಿಗಿಂತ ಕಡಿಮೆಯಾಗಿರುವುದು. ಸ್ವಲ್ಪ ವರ್ಷಗಳ ಹಿಂದೆ ಯಮುನೆ ಬತ್ತಿಹೋಗಿದ್ದನ್ನು ಜನ ಗಮನಿಸಿದ್ದಾರೆ. ಇದಕ್ಕೆ ಕಾರಣ ಗಂಗಾಯಮುನಾನದಿ ಹರಿಯುವ ದಾರಿಯುದ್ದಕ್ಕೂ ಕಾಡು ಕಡಿಮೆಯಾಗಿರುವುದು. ಹಾಗೆಯೇ ಜೀವವೈವಿಧ್ಯತೆಯೂ ಕಾಣದಿರುವುದು. ಇವೆಲ್ಲಾ ಇದಕ್ಕೆ ದಾರಿ ಮಾಡಿಕೊಟ್ಟಿದೆ. ಆದ್ದಱಿಂದ ಕಾಡು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಈ ರೀತಿ ದುರಾಸೆಯಿಂದ ನಾವು ಎಲ್ಲಿಂದ ಎಲ್ಲಿಗೆ ಹೊರಟಿದ್ದೇವೆ ಎಂಬುದಾಗಿ ಯೊಚನೆ ಮಾಡಿದರೆ, ನಮಗೆ ಸಿಗುವುದು ವಿನಾಶದ ಅಂಚು. ನಮ್ಮ ಬೇಕುಗಳಿಗೆ ನಾವು ಪ್ರಕೃತಿಯನ್ನು ಹಾಳು ಮಾಡುತ್ತಿದ್ದೇವೆ..ಇವತ್ತು ಇಂತಹ ಅಹಿತಕಾರಿ ಯೋಜನೆಗಳನ್ನು ತಡೆಯದಿದ್ದರೆ ನಾಳೆ ಗಂಗಾ ಯಮುನೆಯರನ್ನು ನಕಾಶೆಯಲ್ಲಿ ನೋಡಬೇಕಾಗುತ್ತದೆ.
ಕಾಡುಗಳು ನಶಿಸಿ ಹೋಗುತ್ತಿವೆ. ಅತಿಯಾದ ಕಾಂಕ್ರೀಟು ಕಾಡು ಬೆಳೆಯುತ್ತಿದೆ. ನಮ್ಮ ದೇಶದಲ್ಲಿ ಕುಡಿಯುವ ನೀರು ಎಂದೂ ಮಾರಾಟದ ವಸ್ತುವಾಗಿರಲಿಲ್ಲ ಆದರೆ ಇಂದು ಕುಡಿಯುವ ನೀರಿಗೂ ಬೆಲೆ ಮತ್ತು ತೆರ ತೆರಬೇಕು. ಿದೆಲ್ಲ ಮನುಷ್ಯ ಪ್ರಕೃತಿಯ ಮೇಲೆ ಮಾಡುತ್ತಿರು ಅತ್ಯಾಚಾರ. ಪ್ರೊ|ಜಿ.ಡಿ. ಅಗರ್ ವಾಲ್ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ..ಆದರೆ ಇಂತಹ ವಿಷಯಗಳು ಮಾತ್ರ ಮಾಧ್ಯಮಗಳಲ್ಲಿ ಮಾತ್ರ ಯಾಕೆ ಚರ್ಚೆಯಾಗುವುದಿಲ್ಲ?????

We never understan about Global warming and its effect. We should travel out of country to see how much Western countries caring the nature...
When We will adopt this good things? We will do only adopting rubbish thing..
Really feeling Bad.. God only has to Save..

"For every action there will be an equal and opposit reaction..."

100% which is unimaginable when it comes to the point of Nature.... just for 2days happiness we are not thinking about our future.... Globalization, Industrialization and Privatization are speeding the human life like a rocket as well as spoiling our Mother Earth and turning it like the Hell. We have the terrible experience with Tsunami still we are followig the stuffs which made our life hectic... We think there is long way to live with our technology and unwanted standard of living.... But the clock is Ticking.....

It is now or never..... Please spread these aswareness among people .... I am doing that. You?

It is a sad situation where the officials and the representatives of the people, who runs the Government have utterly failed to understand the feeling of the oeople as well as the nature.

The contractors and the middleman have the last say in the decision of the Government which effect the common man very badly.

B Shreepathy Rao
Bangalore

It is just horrible, some thing needs to be done immediately. We already have the example of Tungabhadra which has almost become a small NALHA in Harihar. Rain harvesting should be made compulsory for every new construction anywhere in India. Ganga! Excuse us for our environmental misdeeds.

ಈ ವಿಷಯವನ್ನು ನಾನು ಸ್ವದೇಶಿ magazineನಲ್ಲಿ ಓದಿದ್ದೆ. ಮನಸ್ಸು ಆತಂಕಗೊಂಡಿತ್ತು. ಇವತ್ತು ನಿಮ್ಮ mail ನೋಡಿದಾಗ ಮತ್ತೆ ಸಂಕಟವಾಯ್ತು ಎಷ್ಟು damage ಮಾಡಬಹುದೋ ಅಷ್ಟು damage ನಾವು ಮೊದಲೇ ಮಾಡಿ ಆಗಿದೆ. ಕಡೇಪಕ್ಷ ಗೋಮುಖ ಮತ್ತು ಉತ್ತರಕಾಶಿ ನಡುವೆಯಾದರೂ ಮಾನವನ ಕಾಟ ಇರಲಾರದು ಎಂದು ಡಾ. ಅಗರ್ವಾಲ್ ರವರು ಆಶಯ ಇಟ್ಟುಕೊಂಡಿದ್ದರು.ಹರಿದ್ವಾರದಲ್ಲೂ ಸಹಾ ನೀರು ಕಡಿಮೆ ಆಗಿದೆ. ನಮ್ಮನ್ನಾಳಲು ಬರುತ್ತಿರುವ ಪ್ರತಿ ಸರ್ಕಾರವೂ ಗಂಗಾ ಮಾತೆಯ ಮೇಲೆ ಎಸಗುತ್ತಿರುವ ಅನ್ಯಾಯಗಳು ಮತ್ತು ಅದರ ಪರಿಣಾಮಗಳು ಡಾ. ಅಗರ್ವಾಲ್ ರವರಿಗೆ ಮತ್ತು ಪರಿಸರವಾದಿಗಳಿಗೆ ತುಂಬಾ ನೋವು ಕೊಟ್ಟಿದೆ.
ನಮ್ಮ ದುರದೃಷ್ಟ ಈ issueಗಳೆಲ್ಲ ದೇಶದ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿದೆ. ಯಾವ ಪಕ್ಷವೇ ಆಳಲಿ ಎಲ್ಲರದೂ ಒಂದೇ ರೀತಿಯ ನೋಟಗಳು, ಒಂದೇ ರೀತಿಯ schemes.
ಡಾ. ಅಗರ್ವಾಲ್ ರವರ ಉಪವಾಸ ಬೇಗ ಮುಗಿಯುವಂತಾಗಲಿ, ಸರ್ಕಾರ ಮತ್ತು ಜನತೆ ಒಂದು ಒಳ್ಳೆಯ ನಿರ್ಧಾರ ತೆಗೆದು ಗಂಗೆ ಮಾತೆ ತಡೆಯಿಲ್ಲದೆ ಹರಿಯುವಂತಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.

Is there no end to the greediness of humans, when will we ever learn, it is high time some stringent measures are taken against such acts...

ಹಾಯ್,
ಜಲ ವಿದ್ಯುತ್ ಯೋಜನೆಗಳಿಂದ ನದಿ ಹೇಗೆ ಬತ್ತಿಹೋಗುತ್ತದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅಣೆಕತ್ತಿನಲ್ಲಿ ಹಿಡಿದಿಟ್ಟ ನೀರು ವಿದ್ಯುತ್ ಉತ್ಪಾದನೆಯ ನಂತರ ನದಿಯನ್ನೇ ಸೇರುತ್ತದೆ ಅಲ್ಲವೇ?

ಹೊಸ ಕಾಮೆಂಟ್ ಸೇರಿಸಿ

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
8 + 3 =
Solve this simple math problem and enter the result. E.g. for 1+3, enter 4.