ಕಪ್ಪೆಯು ತಾನಿರುವ ನೀರನ್ನೆಂದೂ ಮಲಿನಗೊಳಿಸುವುದಿಲ್ಲ (ಸಂಪಾದಕೀಯ)
ಇಂದಿನ ನೀರಿನ ಕೊರತೆಗೆ ಬಹು ಮುಖ್ಯ ಕಾರಣ ನಮ್ಮ ನೀರು ನಿರ್ವಹಣೆಯಲ್ಲಿನ ವೈಫಲ್ಯ. ವರದಿಯೊಂದರ ಪ್ರಕಾರ ಮುಂದಿನ ೨೦ ವರ್ಷಗಳಲ್ಲಿ ಏಷ್ಯಾದ ಬಹುತೇಕ ನದಿಗಳ ನೀರು ಕಲ್ಮಶಗೊಳ್ಳುತ್ತದೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಅದೇನೂ ಉತ್ಪ್ರೇಕ್ಷೆಯಲ್ಲ ಎನಿಸುತ್ತದೆ. ನಾವು ನಮ್ಮ ಜಲಮೂಲಗಳನ್ನು ಹಾಳು ಮಾಡುತ್ತಿರುವ ಪರಿಯನ್ನು ಗಮನಿಸಿದರೆ ನಮಗಾರಿಗೂ ನೀರಿನ ಅಮೂಲ್ಯತೆಯ ಬಗ್ಗೆ ಕಿಂಚಿತ್ತೂ ಅರಿವಿಲ್ಲದಿರುವುದು ಢಾಳಾಗಿ ಗೋಚರಿಸುತ್ತದೆ. ನಮ್ಮೆಲ್ಲಾ ತ್ಯಾಜ್ಯಗಳನ್ನು ಸುರಿಯಲು ನಮಗೆ ಕಾಣುವ ಏಕೈಕ ಸ್ಥಳಗಳೆಂದರೆ ನದಿಗಳು, ಕೆರೆಗಳು, ಬಾವಿಗಳು ಅಥವಾ ಇನ್ನಿತರೆ ಜಲಮೂಲಗಳು.
ಈ ವಿಷಯದಲ್ಲಿ ನಗರಗಳ ಪಾಲು ಬಹುದೊಡ್ಡದು. ಅವರಿಗೆ ಶುದ್ಧವಾದ ನದಿ ನೀರು ಬೇಕು. ಅದು ಎಷ್ಟು ದೂರವಿದ್ದರೂ ಸರಿ ತರಿಸುತ್ತಾರೆ, ಮನಸೋ ಇಚ್ಚೆ ಬಳಸುತ್ತಾರೆ. ಆದರೆ ತಮ್ಮೆಲ್ಲಾ ಕಲ್ಮಶಗಳನ್ನು ನದಿ, ಕೆರೆಗಳಿಗೆ ತುಂಬಿಸಿ ಗ್ರಾಮೀಣ ಪ್ರದೇಶಗಳಿಗೆ ರವಾನಿಸುತ್ತಾರೆ. ಬೆಂಗಳೂರಿನ ಉದಾಹರಣೆಯನ್ನೇ ನೋಡಿ. ಅವರಿಗೆ ಕಾರು ತೊಳೆಯಲೂ ಸಹ ಕಾವೇರಿ ನೀರೇ ಬೇಕು, ಆದರೆ ಅವರ ಕಲ್ಮಶದ ಕರ್ಮವನ್ನು ಅನುಭವಿಸುವವರು ನಗರದ ಸುತ್ತ-ಮುತ್ತಲ ದೊಡ್ಡಬಳ್ಳಾಪುರ, ನೆಲಮಂಗಲ, ಕನಕಪುರ ಇತ್ಯಾದಿ ಗ್ರಾಮೀಣ ಕೃಷಿ ಪ್ರದೇಶಗಳು.
ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ, ಉದ್ಯಾನಗಳ ನಗರ ಮುಂತಾದ ವಿಶೇಷಗಳೆಲ್ಲಾ ಅಲ್ಲಿನ ವೃಷಭಾವತಿ ನದಿಯ ದುರವಸ್ಥೆಯನ್ನು ನೋಡಿದರೆ ಶುದ್ಧ ಸುಳ್ಳು ಎನಿಸುತ್ತದೆ. ಇವರ ಕೊಳಕುತನದ ಫಲಾನುಭವಿಗಳು ಬಿಡದಿ, ಬೈರಮಂಗಲ ಸುತ್ತ-ಮುತ್ತಲ ಹಳ್ಳಿಗರು. ಇದರ ಆಸು-ಪಾಸು ಯಾರೂ ವಿಷಮುಕ್ತವಾಗಿ ಬದುಕುವಂತೆಯೇ ಇಲ್ಲ. ಅಲ್ಲಿನ ಗಾಳಿ, ನೀರು, ಮಣ್ಣು ಮತ್ತು ಒಟ್ಟಾರೆ ವಾತಾವರಣವೇ ಕಲುಷಿತ.
ಈ ಕುರಿತು ಅಭಿವೃದ್ಧಿ ಬರಹಗಾರರಾದ ಕೆ.ರೇಖಾ ಸಂಪತ್‌ರವರು ಗಮನ ಸೆಳೆಯುವ ಲೇಖನವೊಂದನ್ನು ಈ ಸಂಚಿಕೆಗೆ ಬರೆದಿದ್ದಾರೆ. ಲೇಖನಕ್ಕಾಗಿ ಅವರು ಇಡೀ ನದಿ ಪಾತ್ರದಲ್ಲಿ ಓಡಾಡಿ ಮಾಹಿತಿ ಸಂಗ್ರಹಿಸಿದ್ದಾರೆ, ರೈತರು ಮತ್ತು ವೈದ್ಯರನ್ನು ಸಂದರ್ಶಿಸಿದ್ದಾರೆ. ಅವರ ಅಣ್ಣ ಮತ್ತು ಪತಿಯನ್ನೂ ಸಹ ಇದರಲ್ಲಿ ತೊಡಗಿ ಪರಿಪೂರ್ಣ ಲೇಖನ ಬರೆಯಲು ಶ್ರಮ ಹಾಕಿದ್ದಾರೆ. ಪತ್ರಿಕೋದ್ಯಮದಲ್ಲಿ ಅವರ ಶ್ರದ್ಧೆ, ತನ್ಮಯತೆ ಪ್ರಶಂಸನೀಯ.
* * *
ನಗರಗಳನ್ನು ಬಿಟ್ಟರೆ ನೀರಿನ ಮಲಿನತೆಗೆ ಬಹುದೊಡ್ಡ ಕೊಡುಗೆ ಕಾರ್ಖಾನೆಗಳದ್ದು. ಘನ ತ್ಯಾಜ್ಯ ನಿರ್ವಹಣೆಯ ಕಾನೂನುಗಳನ್ನೆಲ್ಲಾ ಗಾಳಿಗೆ ತೂರಿರುವ ಇವುಗಳಿಗೆ ಕನಿಷ್ಠ ಸಾಮಾಜಿಕ ಜವಾಬ್ದಾರಿಯೇ ಇಲ್ಲ. ತಮ್ಮ ಕಾರ್ಖಾನೆಯ ವ್ಯಾಪ್ತಿಯಲ್ಲೇ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕಾದ ಇವರು ಅದನ್ನು ಡೀಲರ್‌ಗಳಿಗೆ ಮಾರುತ್ತಾರೆ. ಹಣದಾಸೆಯ ದೂರ್ತ ಡೀಲರ್ ಇದನ್ನು ಮತ್ತಾರಿಗೋ ಕೊಟ್ಟು ಕೈತೊಳೆದುಕೊಳ್ಳುತ್ತಾನೆ. ಅದನ್ನು ಪಡೆಯುವವ ಪುಡಿಗಾಸಿಗಾಗಿ ಅದನ್ನು ಸಿಕ್ಕ-ಸಿಕ್ಕಲ್ಲಿ ಸುರಿಯುತ್ತಾನೆ. ಅದರಿಂದಾಗುವ ಹಾನಿಯ ಕಿಂಚಿತ್ ಅರಿವೂ ಈ ಮೂರ್ಖರಿಗಿರುವುದಿಲ್ಲ. ಇದ್ದರೂ ಅದಕ್ಕೆ ತಲೆಕೆಡಿಸಿಕೊಳ್ಳುವ ಮಂದಿ ಇವರಲ್ಲ.
ಇದಕ್ಕೆ ಅತ್ಯುತ್ತಮ ಉದಾಹರಣೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಯಾದಗೆರೆ. ಬೇಜವಾಬ್ದಾರಿ ಕಾರ್ಖಾನೆಗಳು ತಂದೊಡ್ಡುವ ಅಪಾಯದ ಬಗ್ಗೆ ಒಂದು ಚಿತ್ರಣ ಅಲ್ಲಿ ಲಭ್ಯ. ಇಲ್ಲಿನ ಕೃಷಿಕರೊಬ್ಬರ ಜಮೀನಿನಲ್ಲಿ ರಾತ್ರೋ ರಾತ್ರಿ ಲೋಡುಗಟ್ಟಲೆ ಕಾರ್ಖಾನೆ ತ್ಯಾಜ್ಯವನ್ನು ತಂದು ಸುರಿದ ಪರಿಣಾಮ ಅಲ್ಲಿನ ಇಬ್ಬರು ರೈತರ ಕೊಳವೆ ಬಾವಿ ನೀರು ವಿಷಮಯವಾಗಿದೆ. ೨೦೦೩ರಲ್ಲಿ ಹಿಂದೆ ಅಲ್ಲಿನ ತಿಮ್ಮಪ್ಪ ಎಂಬುವರ ಹೊಲದಲ್ಲಿ ಐದಾರು ದೊಡ್ಡ ದೊಡ್ಡ ಗುಂಡಿಗಳನ್ನು ತೋಡಿ ಅವುಗಳಲ್ಲಿ ಕಾರ್ಖಾನೆ ತ್ಯಾಜ್ಯ ತುಂಬಲಾಗಿತ್ತು. ಪಾಂಡಿಚೇರಿ, ಮಾಹಾರಾಷ್ಟ್ರ, ತಮಿಳುನಾಡು ಮುಂತಾದ ರಾಜ್ಯಗಳಿಂದ ವಿಷಕಾರಿ ತ್ಯಾಜ್ಯವನ್ನು ಗುತ್ತಿಗೆಗೆ ಪಡೆದು, ನಮ್ಮ ರೈತರಿಗೆ ಚಿಕ್ಕಾಸು ನೀಡಿ, ಅವರ ಹೊಲದಲ್ಲಿ ತುಂಬುವ ಜಾಲದ ಕೆಲಸ ಇದು.
ಹೀಗೆ ತ್ಯಾಜ್ಯ ಸುರಿದ ಪರಿಣಾಮ ಪಕ್ಕದಲ್ಲಿರುವ ನರಸಪ್ಪ ಮತ್ತು ನರಸಿಂಹಮೂರ್ತಿಯವರ ಹೊಲದ ಕೊಳವೆ ಬಾವಿಯ ನೀರು ವಿಷಮಯವಾಗಿ ಅವರ ಬದುಕು ನೆಲಕಚ್ಚಿದೆ. ಹೊಂಡಗಳಲ್ಲಿರುವ ತ್ಯಾಜ್ಯ ಹೊರತೆಗೆಯದ ಹೊರತು ಪರಿಸ್ಥಿತಿ ಸುಧಾರಿಸದು. ಹೊರತೆಗೆದರೂ ಕೂಡ ಕೊಳವೆ ಬಾವಿಯ ನೀರು ತಿಳಿಯಾಗಲು ಇನ್ನೂ ಅನೇಕ ವರ್ಷ ಬೇಕು. ಇದೇ ರೀತಿಯ ಇನ್ನೊಂದು ಪ್ರಕರಣ ಚಾಮರಾಜನಗರ ಜಿಲ್ಲೆಯಲ್ಲಿ ಪತ್ತೆಯಾಗಿದೆ.
ಕೈಗಾರಿಕೆಗಳು, ಗುತ್ತಿಗೆ ಕೃಷಿ, ವಿಶೇಷ ಆರ್ಥಿಕ ವಲಯಗಳು ಬೆಳೆಯುತ್ತಿರುವ ಪರಿಯನ್ನು ನೋಡಿದರೆ ನಮ್ಮ ನೀರು, ಮಣ್ಣು ಮತ್ತು ಅದನ್ನು ನಂಬಿಕೊಂಡ ಕೃಷಿಕನಿಗೆ ಉಳಿಗಾಲವಿಲ್ಲ ಎನಿಸುತ್ತದೆ.
ಮಲ್ಲಿಕಾರ್ಜುನ ಹೊಸಪಾಳ್ಯ
- 998 reads
Email this page
Printer-friendly version
ಲೇಖಕರು
ಹೆಸರು
ಧಾನ್ಯ ಸಂಸ್ಥೆ
ಪರಿಚಯ
ಜಲಸಿರಿ ಪತ್ರಿಕೆ ಕುರಿತು ನಾಲ್ಕು ಮಾತು
ಮಾನವ ಮತ್ತು ಪರಿಸರ ಅಭಿವೃದ್ಧಿಯನ್ನು ಮುಖ್ಯ ದ್ಯೇಯವನ್ನಾಗಿಟ್ಟುಕೊಂಡು ಕೆಲಸ ನಿರ್ವಹಿಸುತ್ತಿರುವ ತುಮಕೂರಿನ ‘ದಾನ್ಯ’ ಸಂಸ್ಥೆಯು ಪ್ರಕಟಿಸುತ್ತಿರುವ ತ್ರೈಮಾಸಿಕ ಪತ್ರಿಕೆ “ಜಲಸಿರಿ ನೀರ ನೆಮ್ಮದಿಗಾಗಿ”. ನೀರಿನ ಸುದ್ದಿಗಳಿಗಾಗಿಯೇ ಮೀಸಲಾದ ಈ ಪತ್ರಿಕೆ ೨೦೦೫ರ ಆಗಸ್ಟ್ ನಿಂದ ಪ್ರಕಟಗೊಳ್ಳುತ್ತಿದೆ. ನೀರಿನ ವಿವಿಧ ಆಯಾಮಗಳ ಬಗ್ಗೆ ಸುದ್ದಿ ಪ್ರಕಟಿಸುವ ಮೂಲಕ ಜನಸಾಮಾನ್ಯರಲ್ಲಿ ಜಲ ಸಾಕ್ಷರತೆ ಮೂಡಿಸುವುದು. ಇದರ ಧ್ಯೇಯ.
ಪ್ರಸ್ತುತ ಪರಿಸ್ಥಿತಿಯಲ್ಲಿ ನೀರು ಬಹು ಚರ್ಚಿತ ವಿಷಯ. ಬಳಕೆ ಯೋಗ್ಯ ನೀರಿನ ಲಭ್ಯತೆ ಕಡಿಮೆಯಾಗುತ್ತಿರುವುದು, ನೀರಿನ ವ್ಯಾಪಾರೀಕರಣ, ಖಾಸಗೀಕರಣ ಶುರುವಾಗಿರುವ ಈ ಹಂತದಲ್ಲಿ ನೀರಿನ ಸುದ್ದಿಗಳಿಗೇ ಮೀಸಲಾದ ಪತ್ರಿಕೆಯೊಂದರ ಅಗತ್ಯವಿದೆ ಎಂಬ ಆಶಯದಿಂದ ಸಮಾನಾಸಕ್ತ ಗೆಳೆಯರ ಉಸ್ತುವಾರಿಯಲ್ಲಿ ಪತ್ರಿಕೆ ಪ್ರಕಟಗೊಳ್ಳುತ್ತಿದೆ.
ನೀರಿನ ಸಮಸ್ಯೆಗಳಿಗೆ ಪರಿಹಾರವಾಗಬಲ್ಲ ಚಿಕ್ಕ-ಚಿಕ್ಕ ಪ್ರಯತ್ನಗಳು, ಸಮುದಾಯದ ಮಟ್ಟದಲ್ಲಿ ನಡೆದಿರುವ ಯಶೋಗಾಥೆಗಳನ್ನು ಪ್ರಕಟಿಸುವುದು. ಸರಳ ಮತ್ತು ಸುಲಭ ಜಲ ಸಂರಕ್ಷಣಾ ಪದ್ಧತಿಗಳನ್ನು ಪರಿಚಯಿಸುವುದು. ನೀರಿನ ಸಂರಕ್ಷಣೆ ಹಾಗೂ ಬಳಕೆ ಕುರಿತಾದ ಪಾರಂಪರಿಕ ಜ್ಞಾನದ ಪ್ರಕಟಣೆ ಹಾಗೂ ದಾಖಲಾತಿ. ನೀರುಳಿತಾಯ, ನೀರಿನ ಮರುಬಳಕೆ, ಮಳೆನೀರು ಸಂಗ್ರಹ, ಚಾವಣಿ ನೀರು ಸಂಗ್ರಹ, ಪರಿಸರ ಪೂರಕ ನೈರ್ಮಲ್ಯ ಇತ್ಯಾದಿಗಳ ಬಗ್ಗೆ ಸರಳ ಉಪಾಯಗಳನ್ನು ಪರಿಚಯಿಸುವುದು ಹಾಗೂ ಈ ನಿಟ್ಟಿನಲ್ಲಿ ಯಶಸ್ವಿಯಾದವರ ಬಗ್ಗೆ ಮಾಹಿತಿ ನೀಡುವುದು ಪತ್ರಿಕೆಯ ಆದ್ಯತೆ.
ಪ್ರತಿ ಸಂಚಿಕೆಯನ್ನು ಆಯಾ ಕಾಲದ ಮಳೆ ನಕ್ಷತ್ರಗಳ ಆಧಾರದಲ್ಲಿ ಗುರುತಿಸಲಾಗುತ್ತಿದೆ. ನಮ್ಮ ಗ್ರಾಮೀಣ ಜನತೆಯ ಬದುಕು, ದುಡಿಮೆಗಳೆಲ್ಲಕ್ಕೂ ಮಳೆ ನಕ್ಷತ್ರಗಳೇ ಮೂಲವಾಗಿರುವುದರಿಂದ ಇದು ಸೂಕ್ತ ಎನಿಸುತ್ತದೆ. ‘ಸಂಪುಟ’ ಎಂಬುದಕ್ಕೆ ಬದಲಾಗಿ ‘ವರ್ಷ’ ಎಂದು ಬಳಸಲಾಗುತ್ತಿದೆ. ಜನರ ಆಡು ಮಾತನ್ನೇ ಸಾದ್ಯವಾದಷ್ಟು ಬಳಸಬೇಕೆನ್ನುವುದು ಇದರ ಉದ್ದೇಶ. ಸ್ವಂತ ಅನುಭವದ ಹಾಗೂ ಕೃಷಿಕರ ಬರಹಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನೆಲ-ಜಲ ಉಳಿವಿಗೆ ಜನಾಂದೋಲನ ರೂಪಿಸುತ್ತಿರುವ ಹಿರಿಯರಾದ ‘ಶ್ರೀ’ ಪಡ್ರೆಯವರು ಆರಂಭದಿಂದಲೂ ಪತ್ರಿಕೆಯ ಆಶಯಗಳಿಗೆ ಬೆಂಬಲ ಸೂಚಿಸುತ್ತಿದ್ದಾರೆ. ನೀರು ಮತ್ತು ನೀರ ಬಳಕೆಗೆ ಸಂಬಂಧಪಟ್ಟಂತೆ ಬಳಕೆಯಾಗುವ ಪದ/ಶಬ್ದಗಳನ್ನು ಪರಿಚಯಿಸುವ ‘ನೀರ ಪದ’ ಅಂಕಣವನ್ನು ಪ್ರಾರಂಭಿಸಲಾಗಿದೆ.
ನೀರುಳಿತಾಯ, ನೀರಿನ ಸಮರ್ಥ ನಿರ್ವಹಣೆಯ ಬಗ್ಗೆ ಓದುಗರಲ್ಲಿ ಅರಿವು ಮೂಡಿಸಿ ಅವರ ಮನೋಭಾವದಲ್ಲಿ ಬದಲಾವಣೆಯನ್ನುಂಟು ಮಾಡಲು ಪತ್ರಿಕೆ ಆಶಿಸುತ್ತದೆ.
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: This is very nice in
2 weeks 4 days ago - Re: ಇಲ್ಲಿ ‘ಕೊಳಚೆ ನೀರು ...
3 weeks 4 days ago - Re: ‘ಇರುವೆ’; ಅಂತರ್ಜಲ ...
12 weeks 2 days ago - Re: ನಮ್ಮ ಮನೆಯ ತಾರಸಿ ಮೇಲೆ ...
12 weeks 5 days ago - Re: ‘ಕುಡಿಯಲು ಬಿಲ್ಕುಲ್ ...
15 weeks 2 days ago - Re: ಧಾರವಾಡದ ನೆಲ ನುಂಗಿ; ...
16 weeks 4 days ago - Re: ದೇಸಿ ತಂತ್ರಜ್ಞಾನದಿಂದ ...
17 weeks 6 days ago - Re: ದೇಸಿ ತಂತ್ರಜ್ಞಾನದಿಂದ ...
18 weeks 3 days ago - Re: ಧಾರವಾಡದ ಮೂಕಾಂಬಿಕಾ ...
22 weeks 6 days ago - Re: ಮಳೆ ಎಂದರೆ ಬಾಲ್ಯದ ...
23 weeks 5 days ago
| Subscribe to IWP Kannada list |
| Visit this group |

.preview.jpg)








Post new comment