"ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"
"ತಮ್ಮ..ಅದನೇನ್ ನೋಡ್ತಿ..ನಮ್ಮನೇನ್ ಕೇಳ್ತಿ..? ಒಂದ ಮಾತಿನ್ಯಾಗ ಹೇಳ್ಯಾ..?
- ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

ಆಹೆಟ್ಟಿ ಗ್ರಾಮದ ಕಮಲಮ್ಮನ ಮಾತುಗಳಿವು. ಕೇಳಿದ ನನಗೂ, ಗೆಳೆಯ ಛಾಯಾಪತ್ರಕರ್ತ ಕೇದಾರನಾಥ್ ಅವರಿಗೂ ಕರುಳು ಕಿತ್ತು ಬಂದಂತಹ ಅನುಭವ.
ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕಟ್ಟಕಡೆಯ ಹಳ್ಳಿ ಆಹೆಟ್ಟಿ (ಆಯಟ್ಟಿ). ಮೂರು ಸಾವಿರ ಜನಸಂಖ್ಯೆ. ಹದಿನೆಂಟುನೂರರಷ್ಟು ‘ಪ್ರೌಢ’ ಮತದಾರರನ್ನು ಹೊಂದಿರುವ ಗ್ರಾಮ. ಧಾರವಾಡ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ, ತೊಟ್ಟು ನೀರಿಗೂ ದೈನೇಸಿಯಾಗಿರುವ ಬಾಯಾರಿದ ಹಳ್ಳಿ. ಇಲ್ಲಿನ ಗ್ರಾಮಸ್ಥರ ದಾಹ ತೀರಿಸಿಕೊಳ್ಳುವ ಪರಿ ಶೋಚನೀಯ. ನಾಗರಿಕ ಸಮಾಜ ಮಾನವೀಯತೆಯ ನೆಲೆಯಲ್ಲಿ ಒಮ್ಮೆ ನಿಂತು ಯೋಚಿಸಬೇಕಾದಷ್ಟು ಗಂಭೀರ ಸ್ಥಿತಿ ಇಲ್ಲಿದೆ.
ಆಹೆಟ್ಟಿ ಗ್ರಾಮದ ಹೆಣ್ಣು ಮಕ್ಕಳು, ಗಂಡಸರು ತಮ್ಮ ಚಿಕ್ಕ ಮಕ್ಕಳೊಂದಿಗೆ ನೀರು ಹೊರುವುದನ್ನು ನಿತ್ಯ ಕಾಯಕ ಮಾಡಿಕೊಂಡಿದ್ದಾರೆ. ನಿತ್ಯ ೪-೬ ಕಿಲೋ ಮೀಟರ್ ದೂರ ಕ್ರಮಿಸಿ ಕುಡಿಯಲು ಕಲುಷಿತ ನೀರು ಒಗ್ಗೂಡಿಸುವುದೇ ಹರಸಾಹಸದ ಕೆಲಸ. ಗ್ರಾಮದ ಪಕ್ಕದಲ್ಲಿ ಹರಿದಿರುವ ‘ತುಪರಿ ಹಳ್ಳ’ ದಲ್ಲಿ ‘ಒರ್ತಿ’ ತೋಡಿ ಕಪ್ಪಾದ ನೀರನ್ನು ಪ್ಲಾಸ್ಟಿಕ್ ಬಿಂದಿಗೆಗಳಲ್ಲಿ ತಾಸುಗಟ್ಟಲೇ ತುಂಬಿಸುವುದು ಅವರಿಗೆ ಅನಿವಾರ್ಯ. ಹೊತ್ತುಕೊಂಡು, ಇಲ್ಲವೇ ಸೈಕಲ್, ಎತ್ತಿನ ಬಂಡಿ, ಕೈಗಾಡಿ, ಟ್ರ್ಯಾಕ್ಟರ್ ಹೀಗೆ ನೂರೊಂದು ರೀತಿಯಲ್ಲಿ ಬಣ್ಣದ ಪ್ಲಾಸ್ಟಿಕ್ ಕೊಡಗಳಲ್ಲಿ ಕಲುಷಿತ ನೀರು ‘ಕುಡಿಯಲು’ ಹೊತ್ತೊಯ್ಯದೇ ಉಪಾಯವಿಲ್ಲ.
ಈ ತುಪರಿಹಳ್ಳದಲ್ಲಿ ೮ ತಿಂಗಳು ಸಣ್ಣ ಗಟಾರಿನ ಗಾತ್ರದಲ್ಲಿ ಹರಿಯುವ ನೀರಿನ ಪರಿ ವರ್ಣಿಸಲು ನನ್ನಲ್ಲಿ ಶಬ್ದಗಳ ಕೊರತೆ ಕಾಡೀತು ಎಂಬ ಭಯವಿದೆ. ಉಪ್ಪಿನ ಬೆಟಗೇರಿ, ಇನಾಮಹೊಂಗಲ, ಹಾರೋ ಬೆಳವಡಿ ಹಾಗು ಶಿರೂರಗಳ ಮೂಲಕ ಹಾಯ್ದು ಬರುವ ಈ ಹಳ್ಳ, ಆಯಾ ಊರುಗಳ ಗಟಾರು ಮಲೀನವನ್ನು ಸಹ ಹೊತ್ತು ಆಹೆಟ್ಟಿಗೆ ಪೂರೈಸುತ್ತದೆ. ಇಂತಹ ಗಟಾರು ನೀರಿನ ಕೆರೆಯಲ್ಲಿ ಅಲ್ಲಲ್ಲಿ ‘ಒರ್ತಿ’ ಹೊಂಡಗಳನ್ನು ತೆರೆದು, ಮೂಗು ಮುಚ್ಚಿಕೊಂಡು ಜನ ನೀರನ್ನು ಬಿಂದಿಗೆಗಳಿಗೆ ಹಣಿಸಿಕೊಳ್ಳುತ್ತಾರೆ. ಹಾಗೆಯೇ, ಮೂಗು ಮುಚ್ಚಿಕೊಂಡು ಮನೆ ಮಂದಿಯೆಲ್ಲ ಕುಡಿಯುತ್ತಾರೆ!
ಕೆಲವರಿಗೆ ಈ ಕೆಲಸ ಮನಸ್ಸಿಗೆ ಹಿಡಿಸುತ್ತಿಲ್ಲ. ಅವರೆಲ್ಲ ೧ ಕಿಲೋ ಮೀಟರ್ ದೂರದ ಧೂಪದವರ ಕೆರಿ (ಇದು ಒಂದರ್ಥದಲ್ಲಿ ಖಾಸಗಿ ಕೃಷಿ ಹೊಂಡ. ಹೊಲವನ್ನು ತಂಪಾಗಿಡಲು, ಕೃಷಿ ಕಾಯಕಕ್ಕಾಗಿ ತೆರೆಯಲಾದ ಹೊಂಡ. ಕಪ್ಪು ಜೇಡಿ ಮಣ್ಣು- ಮಳೆಯಿಂದ ಕೂಡಲೇ ಕೆಸರಾಗುತ್ತದೆ. ಒಂದೇ ತಿಂಗಳಲ್ಲಿ ನೀರು ಇಂಗಿ ಈ ಕೃಷಿ ಹೊಂಡ ಬತ್ತಿ ನಿಲ್ಲುತ್ತದೆ!) ನಂತರ ೨ ಕಿಲೋ ಮೀಟರ್ ದೂರದ ಶಿರೂರು, ಅಥವಾ ೫ ಕಿಲೋ ಮೀಟರ್ ದೂರದ ಹಾರೋ ಬೆಳವಡಿ (೧೦೦ ಬಿಂದಿಗೆ ನೀರಿಗೆ ೨೫ ರುಪಾಯಿ ಇಲ್ಲಿನ ಗ್ರಾಮ ಪಂಚಾಯ್ತಿಗೆ ಪಾವತಿಸಿದರೆ ಮಾತ್ರ ಕೊಳವೆ ಬಾವಿ ನೀರು ಹಿಡಿಯಲು ಪರವಾನಿಗೆ! ಹಾಗಂತ ಠರಾಯಿಸಲಾಗಿದೆ.) ತೆರಳಿ ನೀರು ತರಬೇಕು.
ಗ್ರಾಮದ ಮುಂದೆ ಪರ್ಯಾಯವಾಗಿ ಆಹೆಟ್ಟಿ ಪಂಚಾಯಿತಿ ಸಾಕಷ್ಟು ದ್ರಾವಿಡ ಪ್ರಾಣಾಯಾಮ ಮಾಡಿ, ಹಣ ಮಂಜೂರು ಮಾಡಿಸಿಕೊಂಡು, ೩ ರಿಂದ ೪ ಲಕ್ಷ ರುಪಾಯಿ ವ್ಯಯಿಸಿ (ಸುಮಾರು ೫೦ ಸಾವಿರ ರುಪಾಯಿ ಯೋಗ್ಯ ಕಾಮಗಾರಿ ನಡೆದಿದೆ ಎನ್ನಬಹುದು.) ‘ಪಂಚಾಯಿತಿ ಕೆರೆ’ ನಿರ್ಮಿಸಿದೆ. ಆದರೆ ಅದು ‘ಕೃಷಿ ಹೊಂಡ’ ಹೋಲುತ್ತದೆ! ಆದರೆ ಆ ನೀರು ಸಹ ಪಾಚಿ ಗಟ್ಟಿ, ಹಸಿರಾಗಿದೆ. ಅದು ಮಳೆ ಬಿದ್ದಾಗ ನಿಂತ ನೀರು. ಹರಿಯುವ ನೀರಲ್ಲ. ರೋಗಗಳ ತವರು ಮನೆ ಎನ್ನಲೇಬೇಕು. ಸಾಲದ್ದಕ್ಕೆ ಇಲ್ಲಿ ಜನ ಬಯಲನ್ನೇ ಶೌಚಾಲಯ ಮಾಡಿಕೊಂಡಿದ್ದಾರೆ. ಸಮೀಪದ ಕಾವಲಿಯಿಂದ ಹರಿದ ನೀರು ಸಹ ಈ ಕೆರೆ ಹೊಂಡ ಸೇರುತ್ತದೆ. ಕೆರೆಗೆ ಕಾವಲಿಲ್ಲ. ದನ-ಕರುಗಳು ಸಹ ಈಜಾಡಿ, ನೀರು ಕುಡಿದು ಮುಂದೆ ಸಾಗುತ್ತವೆ! ಆ ನೀರನ್ನೇ ಜನ ಬಣ್ಣದ ಪ್ಲಾಸ್ಟಿಕ್ ಬಿಂದಿಗೆಗಳಲ್ಲಿ ತುಂಬಿಕೊಂಡು ಕುಡಿಯಲು, ಬಳಸಲು ಮನೆಗಳಿಗೆ ಒಯ್ಯುತ್ತಾರೆ.
ಇನ್ನೊಂದು ಕತೆ ಕೇಳಿ. ವರ್ಷದ ೩-೪ ತಿಂಗಳು ಕೃಷಿ ಕಾಯಕಕ್ಕೆ ಮಲಪ್ರಭಾ ಬಲದಂಡೆ ಕಾಲುವೆಯಲ್ಲಿ ನೀರು ಹರಿದು ಬರುತ್ತದೆ. ಆ ಕಾಲುವೆಯ ನೀರು ದನ-ಕರುಗಳಿಗೆ, ಬಟ್ಟೆ ಒಗೆಯಲು, ಸ್ನಾನ ಮಾಡಲು, ಭಾಂಡೆ ತಿಕ್ಕಲು..ಹೀಗೆ ಕೊನೆಗೆ ಕುಡಿಯಲು ಸಹ ಬಳಕೆಯಾಗುತ್ತದೆ. ಈ ನಾಲ್ಕು ತಿಂಗಳು ಮಾತ್ರ ಆಹೆಟ್ಟಿಗೆ ಸುಭೀಕ್ಷಾ ಕಾಲ ಎನ್ನಲು ಅಡ್ಡಿ ಇಲ್ಲ. ಇನ್ನು ಉಳಿದಂತೆ ಗ್ರಾಮಕ್ಕೆ ಮಲಪ್ರಭಾ ಕುಡಿಯುವ ನೀರಿನ ನಳದ ಯೋಜನೆ ಅನುಷ್ಠಾನ ಗೊಂಡಿದೆ. ಹನಿ..ಹನಿ ಒಸರುವ ಈ ನಳದ ಮುಂದೆ ನೂರಾರು ಕೊಡಗಳ ಪಾಳಿ ಹೃದಯ ಹಿಂಡುತ್ತದೆ. ಚಿಕ್ಕ ಮಕ್ಕಳು ಬಿಸಿಲು ಸಹ ಲೆಕ್ಕಿಸದೇ ಉರಿಯಲ್ಲಿ ಕುಳಿತು ಪಾಳಿ ಕಾಯುವ ಪರಿ ಕಣ್ಣಲ್ಲಿ ನೀರು ತರಿಸುತ್ತದೆ. ಒಮ್ಮೊಮ್ಮೆ ನೀರು ಪಾಳಿಯ ಪ್ರಕಾರ ತುಂಬುವಾಗ ಭಿನ್ನಾಭಿಪ್ರಾಯ ಭುಗಿಲೆದ್ದು ಕೈಕೈ ಮೇಲಾಯಿಸಿ, ವ್ಯಾಜ್ಯಗಳು ನವಲಗುಂದದ ಪೊಲೀಸ್ ಸ್ಟೇಷನ್ ಕಟ್ಟಿ ಹತ್ತಿ, ಪ್ರಕರಣಗಳಾಗಿ ನ್ಯಾಯಾಲಯ ಮೆಟ್ಟಿಲು ಸಹ ಏರುವಲ್ಲಿ ಇಲ್ಲಿನ ಜನ ಹಿಂದೆ ಬಿದ್ದಿಲ್ಲ. ಅದು ಅವರಿಗೆ ಬದುಕಿನ ಪ್ರಶ್ನೆ.
ಇಲ್ಲಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ಶಿರೂರ್ ಗ್ರಾಮದಲ್ಲಿ ‘ವಾಲ್ವ್’ ಕೂಡಿಸಲಾಗಿದ್ದು, ನಳ ಬಿಡುವವ ಬೆಳಿಗ್ಗೆ ೯ರ ನಂತರ ನೀರು ಬಿಟ್ಟು ಸಂಜೆ ೬ ಗಂಟೆಯ ಒಳಗೆ ಬಂದ್ ಮಾಡುತ್ತಾನೆ! ಅದು ವಾರದಲ್ಲಿ ೩ ದಿನ! ಈ ಸಮಯದಲ್ಲಿ ಕೃಷಿ ಕಾಯಕದ ರೈತಾಪಿ ಜನ ಹೊಲಗಳಿಗೆ ತೆರಳುವುದು ಸಾಮಾನ್ಯ. ಯುವಕರೆಲ್ಲ ಸಮೀಪದ ಊರುಗಳಿಗೆ ಫ್ಯಾಕ್ಟರಿ ಕೆಲಸಗಳಿಗೆ ಹೋಗುತ್ತಾರೆ. ಇನ್ನು ಉಳಿದವರು ವಯೋವೃದ್ಧರು. ಹಾಗಾಗಿ ಶಾಲೆ ತಪ್ಪಿಸಿ ನೀರು ಹಿಡಿಯುವುದು ಮಕ್ಕಳಿಗೆ ಇಲ್ಲಿ ಶಿಕ್ಷೆ. ಅದು ಬಿಟ್ಟಾಗ ಎರಡು ಕೊಡ ನೀರು ಸಿಕ್ಕರೆ ಪುಣ್ಯ.
ಶಿರೂರಿನಲ್ಲಿ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಇದೆ. ಈ ಆವರಣದಲ್ಲಿರುವ ನೀರಿನ ಬೃಹತ್ ಟ್ಯಾಂಕ್ ನೆಲಕ್ಕುರುಳಿ ೨ ವರ್ಷಗಳೇ ಗತಿಸಿವೆ. "ಈ ಟ್ಯಾಂಕ್ ಕೆಡವಿ..ಬ್ಯಾರೆ ಮತ್ತೊಂದು ನೀರಿನ ಟ್ಯಾಂಕ್ ಕಟ್ಟಿಕೊಟ್ರೂ ಸಾಕು ನಾವು ಮಕ್ಕಳು-ಮರಿಗಳನ್ನ್ ಕಟ್ಟಗೊಂಡು ನೆಮ್ಮದಿಯಿಂದ ಬದುಕಬಹುದು" ಎನ್ನುತ್ತಾರೆ ಗ್ರಾಮದ ಬಶೀರ್ ಸಾಬ್ ಅಲೀಸಾಬ್ ನದಾಫ್.
"ಶಾಲಾ ಆವರಣದಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಅಡಿಯಲ್ಲಿ ೨೦೦೨-೦೩ ಹಾಗು ೨೦೦೪-೦೫ನೇ ಸಾಲಿನಲ್ಲಿ ಎರೆಡೆರೆಡು ಬಾರಿ ಹತ್ತು ಸಾವಿರ ಖರ್ಚಿಸಿ ಎರಡು ಕುಡಿಯುವ ನೀರಿನ ಟ್ಯಾಂಕ್ ಗಳನ್ನು ನಿರ್ಮಿಸಲಾಗಿದೆ. ಆದರೆ ನೀರಿಲ್ಲ. ನಳಗಳು ಸಹ ಮಾಯವಾಗಿವೆ! ಬಿಸಿಯೂಟ ಯೋಜನೆಯ ಅಡಿಯಲ್ಲಿ ಮಧ್ಯಾನ್ಹ ಊಟ ಮಾಡುವ ಮಕ್ಕಳು ತಾಟು, ಕೈ, ಮುಸುರಿಯ ಬಾಯಿ ಯಾವುದನ್ನೂ ತೊಳೆಯದೇ ಹಾಗೆಯೇ ಇದ್ದು, ಶಾಲೆ ಬಿಡುವ ವರೆಗೆ ಕಾಯುತ್ತಾರೆ. ನಂತರ ಮನೆಗೆ ಹೋಗಿ ತುಪರಿಹಳ್ಳದ ನೀರಿನಲ್ಲಿಯೇ ಮತ್ತೆ ಎಲ್ಲ!" ಎಂದು ವಿಷಾದದಿಂದ ಹೇಳುತ್ತಾರೆ ಆಹೆಟ್ಟಿಯ ಚಂದ್ರು ಶಿಲೋಡಿ.
ಚಿತ್ರಗಳು: ಕೇದಾರನಾಥ್, ಜೆ ಜಿ ರಾಜ್
- 1004 reads
Email this page
Printer-friendly version
ಲೇಖಕರು
ಇತ್ತೀಚಿನ ಬ್ಲಾಗ್ ಬರಹಗಳು
ಇತ್ತೀಚಿನ ಪ್ರತಿಕ್ರಿಯೆ
- Re: ವೃಷಭಾವತಿ ಎಂಬ ನದಿ ...
1 week 4 days ago - Re: ವೃಷಭಾವತಿ ಎಂಬ ನದಿ ...
1 week 6 days ago - Re: ವೃಷಭಾವತಿ ಎಂಬ ನದಿ ...
2 weeks 1 day ago - Re: ವೃಷಭಾವತಿ ಎಂಬ ನದಿ ...
2 weeks 1 day ago - Re: ವೃಷಭಾವತಿ ಎಂಬ ನದಿ ...
2 weeks 1 day ago - Re: ವೃಷಭಾವತಿ ಎಂಬ ನದಿ ...
2 weeks 1 day ago - Re: ಕೃಷಿಹೊಂಡಗಳಿಗೆ ...
2 weeks 6 days ago - Re: ಮಳೆ ಬಂದರೆ ...
3 weeks 11 hours ago - Re: ಮಳೆ ನೀರು ಸಂಗ್ರಹಕ್ಕೆ ...
3 weeks 1 day ago - Re: ಅಘನಾಶಿನಿ
3 weeks 5 days ago
| Subscribe to IWP Kannada list |
| Visit this group |










lEkhana baredu maahiti koTTavarige DhanyavaadagaLu. It is very disappointing to read this,
It is always true "satya yaavaaglU kaTuvaagiratte". I don't know What our administrators are doing ? What about Public health safety in these places?
some non profit organizations have to take initiative 7 fix the problem.
_Dr. Meena Subbarao.
Dear Dr.Meena Subbarao,
Thank you for your patient reading and posting a comment to boost the morale of this writer. Really it is unbelievable. As far as the administration is concerned instead of finding solutions they have brought more technical/ administrative problems.
And the local government it is more of a crirical problem and less of any solution. Especially the media persons like me, in association with some socially concerned NGO's want to bring the ground realities to the kind notice of higher ups. We want to become voice for the unheard. We have genuine resons to fight for. But the thing is local people (male members) are happy with the things the way as they are.
Only the women, children and age old people are being victimised in AHETTI Village. The first and foremost thing is people like you, who have real concerns towards rural India must help us to conduct some health and sanitation awareness programs on regular base atleast for sometime. The constraint is human resource and funds. Because I am interested in influencing policy makers through such articles and not in becoming an activist.
Thank you Madam.
Harshavardhan Sheelavant
Asst. Professor, IMCR, HUBLI.
ಸರಿಯಾದ ಸಮಯಕ್ಕೆ ನೀರು ಮತ್ತು ಕೂೞು ಸಿಗುತ್ತಿರುವುದಱಿಂದ ಇಂತಹ ಸಮಸ್ಯೆಯೊಂದಱ ಬಗ್ಗೆ ಯೋಚಿಸದಷ್ಟು ನಿಷ್ಕರುಣಿ ನಾನಾದೆನೇನೋ ಎನಿಸುತ್ತಿದೆ.
ಆತ್ಮೀಯ ಅನಂತಕೃಷ್ಣ,
ಹಾಗೇನಿಲ್ಲ. ನಾವು ಇನ್ನೊಬ್ಬರ ಪರಿಸ್ಥಿತಿಯ ಕುರಿತು ಅನುಕಂಪಪಡುವುದು, ಕೈಲಾದಷ್ಟು ಮಟ್ಟಿಗೆ ಸಹಾಯ ಮಾಡುವುದು ಮಾನವೀಯತೆಯ ಲಕ್ಷಣ. ಹಾಗೆಯೇ, ನಮಗೆ ಲಭ್ಯವಿರುವ ವಸ್ತುಗಳನ್ನು, ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಸಲು ಅವರ ಪರಿಸ್ಥಿತಿ ಪಾಠ. ‘ಇರುವ ಭಾಗ್ಯವ ನೆನೆದು, ಬಾರೆನೆಂಬುದನ್ನು ಬಿಡು; ಹರುಷಕ್ಕಿದು ದಾರಿ’ -ಡಿ.ವಿ.ಜಿ. ಹೇಳಿಲ್ಲವೇ?
Hrudaya Vidraavaka ! namma shaasakarige, mantrigalige, M.P.galige kannu,hrudaya,kivi.. I rIti yaava sparsha mattu sookshma angagaLa korate ide!. aadare, ivarannu maatra baidu prayOjanavilla ! - dinanithya ishtu kasta paduva I jana chunaavaNe samayadalli kevala duddigaagi mata chalaayisutaare. naagarIka baduku,kaanUnu ivugala parichaya namma janagalige 21nE shatamaanadallU aagabEkide. sva-gaurava,samghatanaatmaka chaluvali-chatuvatikegalinda siguva yashassina prabhaava,parinaama namma janarige tilidilla. adara bagge hecchu kaalagi vahisuva agatya ide.
ಆತ್ಮೀಯ ಗುಂಡಣ್ಣ ಅವರೆ,
ನಿಮ್ಮ ಅನಿಸಿಕೆಗಳು ಮೌಲ್ಯಯುತವಾದವು. ನಮ್ಮ ಆಹೆಟ್ಟಿ ಗ್ರಾಮದ ಪಿತೃಗಳು ಹೇಗಿದ್ದಾರೆ ಎಂದರೆ..ಗೌರವಾದರಗಳಿಂದ ಮೆರೆದಾಡಿ, ಅಹಂಕಾರ ಮಮಕಾರಗಳಿಂದ ಹಾರಾಡಿ, ತನ್ನ ಬಗ್ಗೆ/ ತಮ್ಮವರ ಬಗ್ಗೆ ಯಥಾವತ್ತಾಗಿ ಏನನ್ನೂ ತಿಳಿಯದೇ ಸಾವನ್ನಪ್ಪಿ ಈ ಲೋಕವನ್ನೇ ತ್ಯಜಿಸುವ ಮನುಷ್ಯನ ಸ್ಥಿತಿ ಅದೆಷ್ಟು ಶೋಚನೀಯವೋ ಅದಕ್ಕೂ ಒಂದು ಹೆಜ್ಜೆ ಮುಂದಿದ್ದಾರೆ!
ಇನ್ನು ಸ್ಥಳೀಯ ಸಮುದಾಯದ ಸಹಭಾಗಿತ್ವ ಸಹಕಾರ ಇಲ್ಲದೇ ಈ ಜ್ವಲಂತ ಸಮಸ್ಯೆಗಳಿಗೆ ಹೊರಗಿನವರಾಗಿ (ಅಧಿಕಾರವಿಲ್ಲದ, ಕೇವಲ ನೈಜ ಕಾಳಜಿ ಇರುವ) ನಾವು ಪರಿಹಾರ ಸೂಚಿಸುವುದು ಅಪಥ್ಯವೆನಿಸಬಹುದು. ನಿರ್ಲಕ್ಷಕ್ಕೆ ಒಳಗಾಗಬಹುದು. ಹಾಗಾಗಿ ಇಲಾಖೆಗಳ ಮುತುವರ್ಜಿಯಲ್ಲಿ ನಾವು ಕಾರ್ಯಮಾಡಬಹುದು. ಅಲ್ಲಿನ ಶಾಲೆಯ ಶಿಕ್ಷಕರು ಈ ಕಾರ್ಯದಲ್ಲಿ ಕೈ ಜೋಡಿಸಿದರೆ ನಾವು ಯಶಸ್ವಿಯಾಗಬಲ್ಲೆವು.
ತಮಗೆ ಧನ್ಯವಾದ.
ತಮ್ಮವ, ಹರ್ಷವರ್ಧನ ಶೀಲವಂತ
ಇನ್ನೂ ಇಂತಹ ಸಮಸ್ಯೆ ನಮ್ಮ ಸುತ್ತಮುತ್ತ ಇವೆಯೆಂದರೆ ತುಂಬ ಕಷ್ಟ.. ಈ ಹಳ್ಳಿಯ ನೀರಿನ ವ್ಯಥೆ ಮನ ಕಲಕುವಂತಿದೆ...
ಸಕಾಲಿಕ ಬರಹಕ್ಕೆ ನನ್ನಿ.
ಇದು ಪುಣ್ಯಭೂಮಿಯ ಕಣ್ಣೀರಿನ ಕಥೆ. ಓದಿ ವ್ಯಥೆಯಾಯಿತು. ಇದಕ್ಕಾಗಿ ನಾವು ಏನಾದರೂ ಮಾಡಲು ಸಾಧ್ಯವಿದೆಯೇ? (ಸರ್ಕಾರವನ್ನು ಹೊರತುಪಡಿಸಿ) ಯೋಚಿಸೋಣ.... ನಾನು ನಿಮ್ಮೊಂದಿಗಿದ್ದೇನೆ. ನಾವು ಅವರ ವ್ಯಥೆಯ ಕಥೆಯನ್ನು ದೂರಮಾಡಲು ನಾವೇನು ಮಾಡುತ್ತೇವೆ ಎಂಬುದೇ ನನಗೆ ಚಿಂತೆಯನ್ನುಂಟುಮಾಡುತ್ತಿದೆ.
Naavenu maadabahudu yendu yochisi kaarya niratharaaguvudu olleyadu. Hege? shaala aavaranadalli 2 tankgalu ive aadare neerilla; hathiradinda yaaraadaroo shudha kudiyuva neeru sarabaraaju maaduva javaabdaari hothukondare, adakke aaguva kharchannu naavella kailaadashtu chandaa kottu aaa dusthithiyalliruva halli mandige jeevakke bekaadashtu olleya neerannu odagisuva prayathna maadabahudu. Idara bagge nimma patrikeyu mundaalathva vahisi, yaarannadaroo aaa oorina vidyavantharannu guruthisi javaabdaari vahisabahudallave? Karchannu naavu neravaagi neeru sarabaraaju maaduvarige needabahudu.
Ide neerannu bottle-galalli thumbi, baree votigaagi janagala kaalige beeluva raaja kaaranigalige mathu yaavaaagaloo yenjalu kaasigaagi kai odduva $#@$ adhikaarigalige ravaanisi, Vidhana Soudhada Legislators Home mathu Assembly canteengalalli avarugalu kudiyuva neerina jothe serisi kodabahudu.
oooof, odi thumba bejarayithu. yentha duravaste! navella antha dinagalannu eevarege kandilla (especially nanu). hagagi avara dukka artha agalikkilla. adare, adannu dina anubhavisuvavara gathiyo? devare!
-vikas negiloni
ಅಷ್ಟು ನೀರು ಅಲ್ಲಿ ಹರಿಯುತ್ತಿದೆಯೆಂದರೆ ಅಲ್ಲಿ ಮಳೆ ಬಂದಿರಲೇ ಬಹುದೆಂದು ನನ್ನ ಅನಿಸಿಕೆ. ಇಲ್ಲಿ ನಗರಗಳಲ್ಲಿ ಹಣ ಹೆಚ್ಚಾಗಿರುವುದರಿಂದ, ಅದನ್ನು ಉಪಯೋಗಿಸಿ ಕ್ಯಾನ್‍ಗಳಲ್ಲಿ, ಟ್ಯಾಂಕ್‍ಗಳಲ್ಲಿ ತರಿಸಿಕೊಳ್ಳಬಹುದು. ಅವರು ಯಾವುದೇ ರೀತಿಯ ಮಳೆ ನೀರು ಸಂಗ್ರಹಣೆಗೆ ಮುಂದಾಗುವುದಿಲ್ಲ. ಕನಿಷ್ಠ ಕಡು ಕಷ್ಟವಿರುವ ಜನರಾದರೂ ಈ ನರಸತ್ತ ರಾಜಕಾರಣಿಗಳನ್ನು ನಂಬಿಕೊಳ್ಳದೇ, ಮಳೆನೀರು ಸಂಗ್ರಹಣೆಗೆ ಮುಂದಾಗಬೇಕು. ಮಳೆಗಾಲವೆಲ್ಲ ಸಿಗುವ ಎಲ್ಲಾ ಮಳೆ ನೀರನ್ನು ವರ್ಷವೆಲ್ಲ ಉಪಯೋಗಿಸಬಹುದು. ಆರೋಗ್ಯವನ್ನೂ- ಜೀವವನ್ನೂ ಕಾಪಾಡಿಕೊಳ್ಳಬಹುದು.
ಇವು ತಿಂದು ಹೆಚ್ಚಾದವರ ಸಲಹೆಗಳೆಂದು ಅಂದುಕೊಳ್ಳಬಾರದು. ಸರ್ಕಾರ ಸಹಾಯಕ್ಕೆ ಮುಂದಾಗುವುದಾದರೆ ಬೋರ್‍ವೆಲ್‍ಗಳಿಗಿಂತ ಹೆಚ್ಚಾಗಿ ಮಳೆನೀರು ಸಂಗ್ರಹಣೆಯ ಕೆಲಸಕ್ಕೆ ಮುಂದಾಗಲಿ... ಇನ್ನು ಅಂತರ್ಜಲವೆಂಬುದು ಏನೂ ಉಳಿದಿಲ್ಲ. ಅಲ್ಲಿರುವುದು ನೆಲದ ರಕ್ತ ಮಾತ್ರ...
neevu kalisiro salahe muttinathaddu, deshada abhivrudhi nammindale ennuva politicians mathu development oriented NGOs ennuva duddigagi seve ennuva jannake idu thiliyuvudillave.
Post new comment